SBI e-Mudra ಸಾಲಕ್ಕೆ ಅರ್ಜಿ ಹಾಕುವುದು ಹೇಗೆ? ವಿವರ ತಿಳಿಯಿರಿ

ದೇಶದಲ್ಲಿ ಸಣ್ಣ ಉದ್ದಿಮೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಂಎಸ್‌ಎಂಇ, ಸ್ವಂತ ಉದ್ಯೋಗಿಗಳಿಗೆ ಮುದ್ರಾ (ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ) ಯೋಜನೆ ಹಮ್ಮಿಕೊಂಡಿದೆ. ಈ ಮುದ್ರಾ ಸ್ಕೀಮ್‌ನ ಅಡಿಯಲ್ಲಿ ವಿವಿಧ ಬ್ಯಾಂಕು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲಗಳನ್ನು ಒದಗಿಸುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಅರ್ಹರಿಗೆ ೧೦ ಲಕ್ಷ ರೂವರೆಗೂ ಸಾಲ ನೀಡುತ್ತದೆ.

ಎಸ್‌ಬಿಐನ ಇ-ಮುದ್ರಾ ಸಾಲಗಳು ಆನ್‌ಲೈನ್‌ನಲ್ಲೇ ಲಭ್ಯ ಇದ್ದು ೫ ವರ್ಷಗಳವರೆಗೆ ಸಾಲದ ಕಂತುಗಳನ್ನು ಕಟ್ಟುವ ಅವಕಾಶ ನೀಡಲಾಗುತ್ತದೆ. ನಿಮ್ಮ ಉದ್ದಿಮೆ ಬೆಳೆಸಲು ಅಗತ್ಯವಾದ ವೆಚ್ಚಕ್ಕೆ ಈ ಸಾಲವನ್ನು ಬಳಸಬಹುದು.

ಮ್ಯಾನುಫ್ಯಾಕ್ಚರಿಂಗ್ (ಉತ್ಪಾದನೆ), ಸರ್ವಿಸ್ ಮತ್ತು ಟ್ರೇಡಿಂಗ್ ಕ್ಷೇತ್ರದಲ್ಲಿ ಉದ್ದಿಮೆ ನಡೆಸುವ ವ್ಯಕ್ತಿಗಳು, ಮತ್ತು ಸಣ್ಣ ಸಂಸ್ಥೆಗಳು ಇ ಮುದ್ರಾ ಯೋಜನೆ ಅಡಿ ಸಾಲಗಳನ್ನು ಪಡೆಬಹುದು. ಎಸ್‌ಬಿಐನಲ್ಲಿ ಮುದ್ರಾ ಲೋನ್ ಪಡೆಯಬೇಕೆಂದರೆ ಆ ಬ್ಯಾಂಕ್‌ನಲ್ಲಿ ಎಸ್‌ಬಿ ಅಥವಾ ಕರೆಂಟ್ ಅಕೌಂಟ್ ಹೊಂದಿರಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇ-ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

 ಯಾರು ಅರ್ಹರು?

ಯಾರು ಅರ್ಹರು?

* ಅರ್ಜಿದಾರರು ಉತ್ಪಾದನೆ ಅಥವಾ ಸೇವಾ ಮೊದಲಾದ ಕೃಷಿಯೇತರ ಕ್ಷೇತ್ರದಲ್ಲಿ ಉದ್ದಿಮೆ ಹೊಂದಿರಬೇಕು ಅಥವಾ ಸ್ವಂತ ಉದ್ಯೋಗ ಮಾಡುತ್ತಿರಬೇಕು.
* ಒಂದೇ ಸ್ಥಳದಲ್ಲಿ ಕನಿಷ್ಠ ೨ ವರ್ಷವಾದರೂ ನೆಲಸಿರಬೇಕು.

ಎಸ್‌ಬಿಐನಂತಹ ಕಮರ್ಷಿಯಲ್ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮುದ್ರಾ ಯೋಜನೆಯಲ್ಲಿ ಸಾಲಗಳನ್ನು ವಿತರಿಸುತ್ತವೆ. ಮಹಿಳಾ ಉದ್ಯಮಶೀಲತೆ ಯೋಜನೆ ಮೂಲಕವೂ ಸಾಲ ಪಡೆಯಬಹುದು.

 

 ದಾಖಲೆಗಳು ಏನು ಬೇಕು?

ದಾಖಲೆಗಳು ಏನು ಬೇಕು?

* ಅರ್ಜಿ ನಮೂನೆ ಮತ್ತು ಪಾಸ್‌ಪೋರ್ಟ್ ಗಾತ್ರ ಫೋಟೋಗಳು
* ಕೆವೈಸಿಗಾಗಿ ಪಾಸ್‌ಪೋರ್ಟ್, ವೋಟರ್ ಐಡಿ ಕಾರ್ಡ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್ ದಾಖಲೆಗಳನ್ನು ಹೊಂದಿರಬೇಕು.
* ಎಸ್‌ಬಿಐನ ಸೇವಿಂಗ್ಸ್ ಬ್ಯಾಂಕ್ ಖಾತೆ ಮತ್ತು ಚಾಲ್ತಿ ಖಾತೆಯ ನಂಬರ್ ಇರಬೇಕು
* ನಿಮ್ಮ ವ್ಯವಹಾರದ ವ್ಯಾಲಿಡೇಶನ್ (ಹೆಸರು, ವಿಳಾಸ ಮತ್ತು ಆರಂಭ ದಿನಾಂಕ)
* ಬ್ಯಾಂಕ್‌ ಖಾತೆಗೆ ಜೋಡಿತವಾಗಿರುವ ನಿಮ್ಮ ಆಧಾರ್ ನಂಬರ್
* ನಿಮ್ಮ ಸಮುದಾಯದ ವಿವರ (ಎಸ್‌ಸಿ / ಎಸ್‌ಟಿ / ಒಬಿಸಿ / ಅಲ್ಪಸಂಖ್ಯಾತ / ಜನರಲ್ ಹೀಗೆ ಯಾವ ಕೆಟಗರಿ ಎಂಬ ವಿವರ)
* ಜಿಎಸ್‌ಟಿಎನ್ ಮತ್ತು ಉದ್ಯೋಗ್ ಆಧಾರ್ ಬೇಕು
* ನಿಮ್ಮ ವ್ಯವಹಾರದ ನೊಂದಣಿ ವಿವರ ಇರಬೇಕು. ನಿಮ್ಮ ಉದ್ದಿಮೆಯ ಅಸ್ತಿತ್ವಕ್ಕೆ ಸಾಕ್ಷಿಯಾಗಿ ದಾಖಲೆ ಇರಬೇಕು.

 ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಎಸ್‌ಬಿಐನ ಇ-ಮುದ್ರಾ ಯೋಜನೆಯಲ್ಲಿ ೧೦ ಲಕ್ಷ ರೂ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಈ ಕೆಳಗಿನ ವಿಧಾನ ಅನುಸರಿಸಬಹುದು.
* ನೀವು ಎಸ್‌ಬಿಐನಲ್ಲಿ ಖಾತೆ ಹೊಂದಿಲ್ಲದಿದ್ದರೆ ಮೊದಲು ಅಕೌಂಟ್ ಓಪನ್ ಮಾಡಿ.
* ನಂತರ ಎಸ್‌ಬಿಐನ ಇ-ಮುದ್ರಾ ಪೋರ್ಟಲ್‌ಗೆ ಭೇಟಿ ಕೊಡಿ.
* ಅದರಲ್ಲಿ ಪ್ರಧಾನ್ ಮಂತ್ರಿ ಮುದ್ರಾ ಯೋಜನೆಯ ಅಪ್ಲಿಕೇಶನ್ ಫಾರ್ಮ್ ಆಯ್ಕೆ ಮಾಡಿದೆ. ಅದರ ಲಿಂಕ್ ಇಲ್ಲಿದೆ:
* ನಂತರ 'ಪ್ರೊಸೀಡ್' ಬಟನ್ ಕ್ಲಿಕ್ ಮಾಡಿ
* ಇ-ಕೆವೈಸಿ ಭರ್ತಿ ಮಾಡಿ. ಒಟಿಪಿ ಮೂಲಕ ಇ-ಸೈನ್ ಪೂರ್ಣಗೊಳಿಸಿ. ಆಧಾರ್ ಕಾರ್ಡ್ ಇತ್ಯಾದಿ ವಿವರ ತುಂಬಿಸಿ.
* ದಾಖಲೆ ಸಲ್ಲಿಸುವಿಕೆ ಇತ್ಯಾದಿ ಪೂರ್ಣಗೊಂಡ ಬಳಿಕ ನಿಮಗೆ ಲೋನ್ ಅಪ್ರೂವಲ್ ಆಗಿರುವ ಮೆಸೇಜ್ ಬರುತ್ತದೆ.
* ಈ ಎಸ್ಸೆಮ್ಮೆಸ್ ಮೆಸಜೇಜ್ ಬಂದು ೩೦ ದಿನದೊಳಗೆ ನೀವು ಮತ್ತೆ ಇ-ಮುದ್ರಾ ಪೋರ್ಟಲ್‌ಗೆ ಹೋಗಿ ಬಾಕಿ ಇರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+