For Quick Alerts
ALLOW NOTIFICATIONS  
For Daily Alerts

ಪಿಎಫ್‌ ಅಲರ್ಟ್: ಬ್ಯಾಂಕ್‌ ಖಾತೆ, ಪಿಎಫ್‌ ಸಂಖ್ಯೆ ಬಳಸಿ ಪಿಪಿಒ ಪಡೆಯುವುದು ಹೇಗೆ?

|

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪಿಂಚಣಿದಾರರಿಗೆ ಮಾಹಿತಿಯೊಂದನ್ನು ನೀಡಿದೆ. ಪಿಂಚಣಿದಾರರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಭವಿಷ್ಯ ನಿಧಿ (ಪಿಎಫ್‌) ಸಂಖ್ಯೆಯನ್ನು ಬಳಸಿಕೊಂಡು ಪಿಂಚಣಿ ಪಾವತಿ ಆದೇಶ (ಪಿಪಿಒ) ಸಂಖ್ಯೆಯನ್ನು ಪಡೆಯಬಹುದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.

ಪಿಂಚಣಿ ಪಾವತಿ ಆದೇಶ (ಪಿಪಿಒ) ಸಂಖ್ಯೆಯು ವಿಶೇಷ ಹನ್ನೆರಡು ಅಂಕಿಗಳ ಸಂಖ್ಯೆಯಾಗಿದೆ. ಇದು ಪಿಂಚಣಿದಾರರು ಪಿಂಚಣಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿಯಿಂದ (ಸಿಪಿಎಒ) ನಮ್ಮ ಖಾತೆಯ ಬಗ್ಗೆ ಯಾವುದೇ ಮಾಹಿತಿ ಪಡೆಯಲು ಪಿಪಿಒ ಸಂಖ್ಯೆಯು ಅಗತ್ಯವಾಗಿದೆ.

ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಮನೆಯಿಂದಲೇ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?ಅಡೆತಡೆಯಿಲ್ಲದೆ ಪಿಂಚಣಿ ಪಡೆಯಲು ಮನೆಯಿಂದಲೇ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?

ಒಂದು ವೇಳೆ ಪಿಂಚಣಿದಾರರು PPO ಸಂಖ್ಯೆಯನ್ನು ಮರೆತಿದ್ದರೆ, ತಮ್ಮ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್‌) ಗೆ ಲಿಂಕ್‌ ಮಾಡಲಾದ ತನ್ನ ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ಬಳಸಿಕೊಂಡು ಅಥವಾ ಪಿಎಫ್‌ ಸಂಖ್ಯೆಯನ್ನು ಬಳಸಿಕೊಂಡು ಪಿಂಚಣಿ ಪಾವತಿ ಆದೇಶ (ಪಿಪಿಒ) ಸಂಖ್ಯೆಯನ್ನು ಪಡೆಯಬಹುದಾಗಿದೆ. ಹಾಗಾದರೆ ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಭವಿಷ್ಯ ನಿಧಿ (ಪಿಎಫ್‌) ಸಂಖ್ಯೆಯನ್ನು ಬಳಸಿಕೊಂಡು ಪಿಂಚಣಿ ಪಾವತಿ ಆದೇಶ (ಪಿಪಿಒ) ಸಂಖ್ಯೆಯನ್ನು ಪಡೆಯುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.

 ಬ್ಯಾಂಕ್‌ ಖಾತೆ, ಪಿಎಫ್‌ ಸಂಖ್ಯೆ ಬಳಸಿ ಪಿಪಿಒ ಪಡೆಯುವುದು ಹೇಗೆ?

ಬ್ಯಾಂಕ್‌ ಖಾತೆ, ಪಿಎಫ್‌ ಸಂಖ್ಯೆ ಬಳಸಿ ಪಿಪಿಒ ಪಡೆಯುವುದು ಹೇಗೆ?

ಪಿಂಚಣಿದಾರರು PPO ಸಂಖ್ಯೆಯನ್ನು ಮರೆತಿದ್ದರೆ, ತಮ್ಮ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್‌) ಗೆ ಲಿಂಕ್‌ ಮಾಡಲಾದ ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ಬಳಸಿಕೊಂಡು ಅಥವಾ ಪಿಎಫ್‌ ಸಂಖ್ಯೆಯನ್ನು ಬಳಸಿಕೊಂಡು ಪಿಪಿಒ ಪಡೆಯಬಹುದು ಎಂದು ಇಪಿಎಫ್‌ಒ ತಿಳಿಸಿದೆ. ಹಾಗೆಯೇ ಹಂತಗಳನ್ನು ವಿವರಿಸಿದೆ.

ಆನ್‌ಲೈನ್‌ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?ಆನ್‌ಲೈನ್‌ ಮೂಲಕ ಜೀವನ ಪ್ರಮಾಣ ಪತ್ರ ಪಡೆಯುವುದು ಹೇಗೆ?

* ಮೊದಲು www.epfindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
* ವೆಬ್‌ಸೈಟ್‌ನ ಎಡ ಬದಿಯಲ್ಲಿ ಇರುವ Pensioners Portal ಮೇಲೆ ಕ್ಲಿಕ್‌ ಮಾಡಿ. ಇದು ಪಿಂಚಣಿದಾರರಿಗೆ ಇರುವ ಪ್ರತ್ಯೇಕ ಪೋರ್ಟಲ್‌ ಆಗಿದ್ದು, ವಿವಿಧ ಸೇವೆಗಳನ್ನು ಪೂರೈಸುತ್ತದೆ. ಜೀವನ ಪ್ರಮಾಣ ಪತ್ರ ವಿಚಾರಣೆ, ನಿಮ್ಮ ಪಿಪಿಒ ಸಂಖ್ಯೆ, ಪಿಪಿಒ ವಿಚಾರಣೆ ಅಥವಾ ಪಾವತಿ ವಿಚಾರಣೆ ಮತ್ತು ನಿಮ್ಮ ಪಿಂಚಣಿ ಸ್ಥಿತಿಯನ್ನು ತಿಳಿಯ ಬಹುದು.
* Know your PPO No ಮೇಲೆ ಕ್ಲಿಕ್‌ ಮಾಡಿ
* ನಂತರ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್‌) ಗೆ ಲಿಂಕ್‌ ಮಾಡಲಾದ ಬ್ಯಾಂಕ್‌ ಖಾತೆಯ ಸಂಖ್ಯೆಯನ್ನು ಅಥವಾ ನಿಮ್ಮ ಸದಸ್ಯ ಗುರುತಿನ ಸಂಖ್ಯೆ ಅಥವಾ ಸದಸ್ಯ ಸಂಖ್ಯೆಯನ್ನು ನಮೂದಿಸುವಂತೆ ವೆಬ್‌ಸೈಟ್‌ ಕೇಳಲಿದೆ
* ಈ ಮಾಹಿತಿಯನ್ನು ನಮೂದಿಸಿದ ಬಳಿಕ ನಿಮಗೆ ಪಿಪಿಒ ಸಂಖ್ಯೆ ಮತ್ತು ಇತರ ವಿವರಗಳು ಲಭ್ಯವಾಗಲಿದೆ

ಉದ್ಯೋಗಿಗಳ ಪಿಂಚಣಿ ಯೋಜನೆ 1995 (ಇಪಿಎಸ್) ಇಪಿಎಫ್‌ಒ ನೀಡುವ ಯೋಜನೆಗಳಲ್ಲಿ ಒಂದಾಗಿದೆ. ನಿವೃತ್ತಿ ಹೊಂದಿದವರಿಗೆ, ಅಂಗವೈಕಲ್ಯ ಹೊಂದಿದವರಿಗೆ, ವಿಧವೆಯರಿಗೆ ಹಾಗೂ ಮಕ್ಕಳಿಗೆ ಮಾಸಿಕ ಪಿಂಚಣಿಯನ್ನು ಇದರಲ್ಲಿ ನೀಡಲಾಗುತ್ತದೆ.

ನಿವೃತ್ತಿಯ ನಂತರ, ನೌಕರರು ಪಿಂಚಣಿ ಪಡೆಯಲು ಪಿಪಿಒ ಸಂಖ್ಯೆ ಬಹಳ ಮುಖ್ಯವಾಗಿದೆ. ಪಿಪಿಒ ಸಂಖ್ಯೆ 12 ಅಂಕೆಗಳ ಸಂಖ್ಯೆಯಾಗಿದೆ. ಇದು ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿಗೆ ಯಾವುದೇ ಸಂವಹನಕ್ಕಾಗಿ ಅತ್ಯಗತ್ಯ. ಪಿಪಿಒ ಸಂಖ್ಯೆಯನ್ನು ಪಿಂಚಣಿದಾರರ ಪಾಸ್‌ಬುಕ್‌ನಲ್ಲಿ ನಮೂದಿಸುವ ಅಗತ್ಯವಿದೆ. ಪಿಪಿಒ ಸಂಖ್ಯೆ ಪ್ರತಿ ಹಂತದಲ್ಲಿಯೂ ಮುಖ್ಯ. ಪಿಂಚಣಿದಾರನು ತನ್ನ ಖಾತೆಯನ್ನು ಬ್ಯಾಂಕಿನ ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಲು ಬಯಸಿದರೆ ಪಿಪಿಒ ಸಂಖ್ಯೆ ಅಗತ್ಯವಿದೆ. ಈಗ ನೌಕರರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪೋರ್ಟಲ್‌ನಿಂದ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಪಿಎಫ್ ಸಂಖ್ಯೆ ಅಥವಾ ನೋಂದಾಯಿತ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿದ ನಂತರ ಪಿಪಿಒ ಸಂಖ್ಯೆ ಲಭ್ಯವಿರುತ್ತದೆ.

English summary

How To Get Pension Payment Order Using Bank Account, EPF Numbers, Explained in kannada

How To Get Pension Payment Order Using Bank Account, EPF Numbers, Explained in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X