For Quick Alerts
ALLOW NOTIFICATIONS  
For Daily Alerts

ನೆಟ್ ಬ್ಯಾಂಕಿಂಗ್ ಮೂಲಕ ಎಚ್‌ಡಿಎಫ್‌ಸಿ CIF ಸಂಖ್ಯೆ ಪಡೆಯುವುದು ಹೇಗೆ?

|

ಗ್ರಾಹಕರ ಮಾಹಿತಿ ದಾಖಲೆ ((CIF) ಎಂಬುದು 11-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು, ಪ್ರತಿ ಗ್ರಾಹಕರಿಗೆ ಬ್ಯಾಂಕ್ ನೀಡುತ್ತದೆ. ಅದು KYC ವಿವರಗಳು, ಬ್ಯಾಂಕ್ ವಿವರಗಳು ಮತ್ತು ಹೆಸರು, ಜನ್ಮ ದಿನಾಂಕ, ವಯಸ್ಸು, ಇತ್ಯಾದಿಗಳಂತಹ ಇತರ ವೈಯಕ್ತಿಕ ವಿವರಗಳನ್ನು ಒಳಗೊಂಡಿರುತ್ತದೆ.

ಗ್ರಾಹಕರ ಅಸ್ತಿತ್ವದಲ್ಲಿರುವ ಖಾತೆಗಳು ಮತ್ತು ಸಂಬಂಧಿತ ವಿವರಗಳನ್ನು ಪ್ರತಿನಿಧಿಸಲು ಹಣಕಾಸು ಸಂಸ್ಥೆಗಳಲ್ಲಿ CIF ಗಳನ್ನು ಬಳಸಲಾಗುತ್ತದೆ. ಗ್ರಾಹಕರ ಮಾಹಿತಿ ದಾಖಲೆ (CIF) ಸಂಖ್ಯೆಗಳನ್ನು ಸಾಮಾನ್ಯವಾಗಿ ಬ್ಯಾಂಕ್‌ನ ಪಾಸ್‌ಬುಕ್ ಅಥವಾ ಚೆಕ್‌ಬುಕ್‌ನಲ್ಲಿ ಕಾಣಬಹುದು.

ಭಾರತದಲ್ಲಿ ಸತತ 10ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐಭಾರತದಲ್ಲಿ ಸತತ 10ನೇ ಬಾರಿ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ನಿಮ್ಮ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಖಾತೆಯನ್ನು ಬಳಸಿಕೊಂಡು ನೀವು ಇದನ್ನು ಪರಿಶೀಲಿಸಬಹುದು. ಆದರೆ ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಗ್ರಾಹಕರಾಗಿದ್ದರೆ ಮತ್ತು ನಿಮ್ಮ CIF ಸಂಖ್ಯೆಯನ್ನು ಕಂಡುಹಿಡಿಯಲು ಬಯಸಿದರೆ ಕೆಲವು ವಿಧಾನಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದರೆ ಹೇಗೆ ಎಚ್‌ಡಿಎಫ್‌ಸಿ CIF ಸಂಖ್ಯೆ ಪಡೆಯುವುದು ಹೇಗೆ?, ಯಾವ ಹಂತಗಳನ್ನು ಪಾಲನೆ ಮಾಡಬೇಕು ಎಂದು ತಿಳಿಯಲು ಮುಂದೆ ಓದಿ....

 ಫೆಬ್ರವರಿ 2022 ರಲ್ಲಿ ಯಾವೆಲ್ಲಾ ಐಪಿಒಗಳು ಬರಲಿದೆ? ಫೆಬ್ರವರಿ 2022 ರಲ್ಲಿ ಯಾವೆಲ್ಲಾ ಐಪಿಒಗಳು ಬರಲಿದೆ?

 ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ CIF ಸಂಖ್ಯೆ ಪಡೆಯುವುದು ಹೇಗೆ?

ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ CIF ಸಂಖ್ಯೆ ಪಡೆಯುವುದು ಹೇಗೆ?

ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬ ಗ್ರಾಹಕನಿಗೆ ಗ್ರಾಹಕ ಐಡಿ ನೀಡಲಾಗುತ್ತದೆ. ಇದು ಯುನಿಕ್‌ ಐಡೆಂಟಿಫಿಕೇಶನ್‌ ಸಂಖ್ಯೆ ಆಗಿದೆ. ವ್ಯಕ್ತಿಗಳಲ್ಲದ ಸಂದರ್ಭದಲ್ಲಿ ಅಂದರೆ ಕಂಪನಿಗಳು, ಟ್ರಸ್ಟ್‌ಗಳು, HUF ಗಳು, ಇತ್ಯಾದಿಗಳ ಖಾತೆಗಳು ಆಗಿದ್ದರೆ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಮಾಡಲು ವ್ಯಕ್ತಿಯ ಗ್ರಾಹಕ ID ಅಗತ್ಯವಿದೆ. ಹಂತಗಳನ್ನು ಈ ಕೆಳಗೆ ವಿವರಿಸಲಾಗಿದೆ.

* https://netbanking.hdfcbank.com/netbanking/ ಗೆ ಭೇಟಿ ನೀಡಿ
* 'Forgot Customer ID' ಮೇಲೆ ಕ್ಲಿಕ್ ಮಾಡಿ
* ಈಗ ದೇಶದ ಕೋಡ್‌ನೊಂದಿಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ,
* ಹುಟ್ಟಿದ ದಿನಾಂಕ/ಪ್ಯಾನ್‌ ವಿವರಗಳು ಮತ್ತು ಭದ್ರತಾ ಕೋಡ್ ಹಾಕಿ
* ಈಗ ಮುಂದುವರೆಯಲು 'Continue' ಕ್ಲಿಕ್ ಮಾಡಿ
* ಮುಂದಿನ ಪುಟದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒಟಿಪಿ ಹಾಕಿ
* ಮುಂದುವರಿಯಲು 'Continue' ಕ್ಲಿಕ್ ಮಾಡಿ, ಈಗ ನಿಮ್ಮ ಕಸ್ಟಮರ್‌ ಐಡಿ ಕಾಣಲಿದೆ
* ನೀವು ಈಗ ಗ್ರಾಹಕ ಐಡಿಯನ್ನು ಬಳಸಿಕೊಂಡು ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಮಾಡಬಹುದು

 ಎಚ್‌ಡಿಎಫ್‌ಸಿ ಗ್ರಾಹಕರೇ, ಇಲ್ಲಿ ಗಮನಿಸಿ

ಎಚ್‌ಡಿಎಫ್‌ಸಿ ಗ್ರಾಹಕರೇ, ಇಲ್ಲಿ ಗಮನಿಸಿ

ಗ್ರಾಹಕ ಐಡಿ ವಿವರಗಳನ್ನು ಪಡೆಯಲು ಎನ್‌ಆರ್‌ಐ ಅಥವಾ ಎನ್‌ಆರ್‌ಇ ಗ್ರಾಹಕರು ತಮ್ಮ ಜನ್ಮ ದಿನಾಂಕವನ್ನು ಬಳಸಬಹುದು. ನೀವು ಸಂಸ್ಥೆ, ಕಂಪನಿ, ಟ್ರಸ್ಟ್ ಅಥವಾ ಇತರ ವೈಯಕ್ತಿಕವಲ್ಲದ ಘಟಕದ ಅಧಿಕೃತ ಸದಸ್ಯರಾಗಿದ್ದರೆ, ನಿಮ್ಮ ಘಟಕದ ಪ್ಯಾನ್‌ ವಿವರಗಳನ್ನು ಬಳಸಿಕೊಂಡು ನೀವು ಕಸ್ಟಮರ್‌ ಐಡಿಯನ್ನು ಪಡೆಯಬಹುದು. ನೀವು ಹಿಂದೂ ಅವಿಭಜಿತ ಕುಟುಂಬನ ಕರ್ತ ಆಗಿದ್ದರೆ, ನಿಮ್ಮ ಹಿಂದೂ ಅವಿಭಜಿತ ಕುಟುಂಬದ (HUF) ಪ್ಯಾನ್ ವಿವರಗಳನ್ನು ಬಳಸಿಕೊಂಡು ನೀವು ಕಸ್ಟಮರ್‌ ಐಟಿಯನ್ನು ಪಡೆಯಬಹುದು. ಎಚ್‌ಡಿಎಫ್‌ಸಿ ಪ್ರಕಾರ ಒಂದೇ ವಿವರಗಳೊಂದಿಗೆ ಬಹು ಕಸ್ಟಮರ್‌ ಐಡಿಗಳಿದ್ದರೆ CIF ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಪ್ರದರ್ಶಿಸಲಾಗುವುದಿಲ್ಲ.

 ಮೊಬೈಲ್ ಬ್ಯಾಂಕಿಂಗ್ ಮೂಲಕ CIF ಸಂಖ್ಯೆ ಪಡೆಯುವುದು ಹೇಗೆ?

ಮೊಬೈಲ್ ಬ್ಯಾಂಕಿಂಗ್ ಮೂಲಕ CIF ಸಂಖ್ಯೆ ಪಡೆಯುವುದು ಹೇಗೆ?

HDFC ಯ ಮೊಬೈಲ್ ಬ್ಯಾಂಕಿಂಗ್ ಖಾತೆಯನ್ನು ಹೊಂದಿರುವ ಗ್ರಾಹಕರು, ಕಸ್ಟಮರ್‌ ಐಡಿ ವಿವರಗಳನ್ನು ಆನ್‌ಲೈನ್‌ನಲ್ಲಿ ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಸಬಹುದು.

* ಎಚ್‌ಡಿಎಫ್‌ಸಿ ಬ್ಯಾಂಕ್ ಮೊಬೈಲ್ ಅಪ್ಲಿಕೇಶನ್ ತೆರೆಯಿರಿ
* ಅಗತ್ಯವಿರುವ ರುಜುವಾತುಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ
* ಈಗ ಮುಖಪುಟದ ಮೇಲಿನ ಎಡಭಾಗದಲ್ಲಿರುವ ಮೆನು ಐಕಾನ್ ಮೇಲೆ ಟ್ಯಾಪ್ ಮಾಡಿ
* 'Your Profile' ವಿಭಾಗದಲ್ಲಿ ಟ್ಯಾಪ್ ಮಾಡಿ
* ಡ್ರಾಪ್-ಡೌನ್ ಪಟ್ಟಿಯಿಂದ, 'Personal Profile'
* 'Personal Profile' ವಿಭಾಗದಲ್ಲಿ, ನಿಮ್ಮ ಕಸ್ಟಮರ್‌ ಐಡಿ ಕಾಣಿಸಲಿದೆ

 ಆಫ್‌ಲೈನಲ್ಲಿ CIF ಸಂಖ್ಯೆ ಪಡೆಯುವುದು ಹೇಗೆ?

ಆಫ್‌ಲೈನಲ್ಲಿ CIF ಸಂಖ್ಯೆ ಪಡೆಯುವುದು ಹೇಗೆ?

HDFC ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರು ಪಾಸ್‌ಬುಕ್ ಅಥವಾ ಚೆಕ್ ಬುಕ್ ಅನ್ನು ಪರಿಶೀಲಿಸುವ ಮೂಲಕ CIF ಸಂಖ್ಯೆಯನ್ನು ಪಡೆಯಬಹುದು. ಗ್ರಾಹಕರು ತಮ್ಮ ಖಾತೆಯ ಸ್ಟೇಟ್‌ಮೆಂಟ್ ಸ್ಲಿಪ್‌ನ ಮೇಲ್ಭಾಗದಲ್ಲಿ ತಮ್ಮ ಗ್ರಾಹಕ ಐಡಿಯನ್ನು ಪಡೆಯಬಹುದು. ಗ್ರಾಹಕರು ತಮ್ಮ ಪಾಸ್‌ಬುಕ್‌ನ ಮೊದಲ ಪುಟದಲ್ಲಿ ತಮ್ಮ ಕಸ್ಟಮರ್‌ ಐಡಿ ವಿವರಗಳನ್ನು ಕಾಣಬಹುದು. ಗ್ರಾಹಕರು ತಮ್ಮ ಚೆಕ್ ಬುಕ್‌ನ ಮೊದಲ ಪುಟದಲ್ಲಿ ತಮ್ಮ CIF ಸಂಖ್ಯೆಯನ್ನು ಕಾಣಬಹುದು. ಆನ್‌ಲೈನ್ ಬ್ಯಾಂಕಿಂಗ್ ಮೂಲಕ ನಿಮ್ಮ ಗ್ರಾಹಕ ಐಡಿಯನ್ನು ಹುಡುಕಲು ನೀವು ವಿಫಲರಾದರೆ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ನಗರದಲ್ಲಿರುವ ಫೋನ್‌ಬ್ಯಾಂಕಿಂಗ್ ಸಂಖ್ಯೆಗೆ ನೀವು ಕರೆ ಮಾಡಬಹುದು. ಹೆಚ್ಚಿನ ವಿವರಗಳಿಗಾಗಿ, ನೀವು https://v1.hdfcbank.com/personal/find-your-nearest/find-phone-banking ಗೆ ಭೇಟಿ ನೀಡಬಹುದು.

English summary

How To Get Your CIF Number of HDFC Bank Through Net Banking?, Explained in Kannada

How To Get Your CIF Number of HDFC Bank Through Net Banking?, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X