For Quick Alerts
ALLOW NOTIFICATIONS  
For Daily Alerts

How to link Aadhaar to DigiLocker : ಡಿಜಿಲಾಕರ್ ಜೊತೆ ಆಧಾರ್ ಲಿಂಕ್ ಮಾಡುವುದು ಹೇಗೆ?

|

ಡಿಜಿಲಾಕರ್ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದ್ದು, ಇದನ್ನು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ಅಡಿಯಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಪರಿಚಯಿಸಿದೆ. ಇದು ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಒಂದು ಭಾಗವಾಗಿದೆ.

 

ಕಾಗದಗಳ ಅಥವಾ ಭೌತಿಕ ದಾಖಲೆಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಡಿಜಿಲಾಕರ್ ಅನ್ನು ಪ್ರಾರಂಭ ಮಾಡಲಾಗಿದೆ. ಡಿಜಿಲಾಕರ್ ಎಲೆಕ್ಟ್ರಾನಿಕ್ ದಾಖಲೆಗಳ ಸಂಗ್ರಹಣೆಯನ್ನು ಮಾಡುತ್ತದೆ. ಆದರೆ ತಮ್ಮ ಡಿಜಿಲಾಕರ್ ಖಾತೆಯನ್ನು ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿದ ತಕ್ಷಣ ಜನರಿಗೆ ಲಭ್ಯವಾಗುವಂತೆ ಮಾಡಲು ಡಿಜಿಲಾಕರ್ ಯುಐಡಿಎಐ (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ನೊಂದಿಗೆ ಸಹಯೋಗ ಹೊಂದಿದೆ.

ಆಧಾರ್‌ನಲ್ಲಿ ಲಿಂಕ್‌ ಮಾಡಿದ ಮೊಬೈಲ್‌ ಸಂಖ್ಯೆ ಹೀಗೆ ಬದಲಾಯಿಸಿಕೊಳ್ಳಿ..

ಡಿಜಿಟಲ್ ಆಧಾರ್ ಕಾರ್ಡ್ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇದನ್ನು ಯಾವುದೇ ಸಂಸ್ಥೆ ಅಥವಾ ಸಂಸ್ಥೆಯೊಂದಿಗೆ ವಿದ್ಯುನ್ಮಾನವಾಗಿ ಹಂಚಿಕೊಳ್ಳಬಹುದು, ಮುದ್ರಣಗಳು ಅಥವಾ ಫೋಟೊಕಾಪಿಗಳ ಅಗತ್ಯವನ್ನು ತೆಗೆದುಹಾಕಬಹುದು. ಹಾಗಾದರೆ ಈ ಡಿಜಿಲಾಕರ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ...

 ಡಿಜಿಲಾಕರ್ ಜೊತೆ ಆಧಾರ್ ಲಿಂಕ್ ಮಾಡುವುದು ಹೇಗೆ?

ಡಿಜಿಲಾಕರ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಡಿಜಿಲಾಕರ್ ಜೊತೆಗೆ ಆಧಾರ್ ಲಿಂಕ್ ಮಾಡುವುದು ಸುಲಭವಾಗಿದೆ. ನಿಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ನಿಮ್ಮ ಬಳಿ ಇದ್ದರೆ, ಡಿಜಿಲಾಕರ್ ಜೊತೆಗೆ ನಿಮ್ಮ ಆಧಾರ್ ಅನ್ನು ನೀವು ಸುಲಭವಾಗಿ ಲಿಂಕ್ ಮಾಡಬಹುದು. ಡಿಜಿಲಾಕರ್‌ನೊಂದಿಗೆ ನಿಮ್ಮ ಆಧಾರ್ ಅನ್ನು ಹೇಗೆ ಲಿಂಕ್ ಮಾಡಬಹುದು ಎಂಬ ಆರು ಹಂತಗಳು ಇಲ್ಲಿದೆ...

ಹಂತ 1: ನಿಮ್ಮ ಪಾಸ್‌ವರ್ಡ್, ಮೊದಲಾದವು ಬಳಸಿಕೊಂಡು ನಿಮ್ಮ ಡಿಜಿಲಾಕರ್ ಖಾತೆಗೆ ಲಾಗ್ ಇನ್ ಮಾಡಿ.
ಹಂತ 2: ಲಾಗ್ ಇನ್ ಮಾಡಿದ ಬಳಿಕ ಡ್ಯಾಶ್‌ಬೋರ್ಡ್‌ನಲ್ಲಿ ಆಯ್ಕೆಯ ಲಿಂಕ್ ಅನ್ನು ನೀವು ಕಾಣಬಹುದು, ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿಲು ಇರುತ್ತದೆ
ಹಂತ 3: ನಿಮ್ಮ ಆಧಾರ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ ಮತ್ತು ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಪುಟದಲ್ಲಿ ಲಿಂಕ್ ನೌ ಎಂದು ಹೇಳುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 5: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ
ಹಂತ 6: ಈಗ 'Verify' ಆಯ್ಕೆಯ ಮೇಲೆ ಕ್ಲಿಕ್ ಮಾಡಿ

 

ಕೇಂದ್ರ ಬಜೆಟ್‌ಗೂ ಮುನ್ನ ವೈಯಕ್ತಿಕ ಹಣಕಾಸು ನಿರ್ವಹಣೆ ಹೀಗೆ ಮಾಡಿ..

ಗಮನಿಸಿ: ನಿಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯು ನಿಮ್ಮಲ್ಲಿ ಇಲ್ಲದಿದ್ದರೆ, ಅಥವಾ ನಿಮ್ಮ ಸಂಖ್ಯೆಯನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ. ನಿಮ್ಮ ಆಧಾರ್ ಅನ್ನು ಡಿಜಿಲಾಕರ್‌ನೊಂದಿಗೆ ಲಿಂಕ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

English summary

How To Link Aadhaar Card With Digilocker In 6-Easy Steps, Here Explained in Kannada

How To Link Aadhaar Card With Digilocker In 6-Easy Steps, Here Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X