For Quick Alerts
ALLOW NOTIFICATIONS  
For Daily Alerts

ಆಧಾರ್ ಬಯೋಮೆಟ್ರಿಕ್ಸ್ ಲಾಕ್, ಅನ್ಲಾಕ್ ಮಾಡುವುದು ಹೇಗೆ?

|

ಭದ್ರತೆಯನ್ನು ಬಲಪಡಿಸುವ ಮತ್ತು ಆಧಾರ್ ಕಾರ್ಡ್ ಹೊಂದಿರುವವರಿಗೆ ನಿಯಂತ್ರಣವನ್ನು ಒದಗಿಸುವ ಪ್ರಯತ್ನವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಮಾಡಿದೆ. ಅದಕ್ಕಾಗಿ 12 ಅಂಕಿಗಳ ಗುರುತಿನ ಚೀಟಿಯನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡುವ ಅವಕಾಶವನ್ನು ನೀಡಿದೆ.

ವೈಯಕ್ತಿಕ ಡೇಟಾದ ಸುರಕ್ಷತೆ ಮತ್ತು ಗೌಪ್ಯತೆ ಅಪಾಯದಲ್ಲಿದೆ ಎಂದು ನೀವು ಭಾವಿಸಿದಾಗ, ಆಧಾರ್ ಬಯೋಮೆಟ್ರಿಕ್ಸ್ ಅನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ನೀವು ಲಾಕ್ ಮತ್ತು ಅನ್ಲಾಕ್ ಮಾಡಲು ಆಯ್ಕೆ ಮಾಡಬಹುದು.

 ಆಧಾರ್‌ನಲ್ಲಿ ಲಿಂಕ್‌ ಮಾಡಿದ ಮೊಬೈಲ್‌ ಸಂಖ್ಯೆ ಹೀಗೆ ಬದಲಾಯಿಸಿಕೊಳ್ಳಿ.. ಆಧಾರ್‌ನಲ್ಲಿ ಲಿಂಕ್‌ ಮಾಡಿದ ಮೊಬೈಲ್‌ ಸಂಖ್ಯೆ ಹೀಗೆ ಬದಲಾಯಿಸಿಕೊಳ್ಳಿ..

ಯಾವುದೇ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್‌ಗಳನ್ನು ಲಾಕ್ ಮಾಡಲು ಅಧಿಕಾರ ನೀಡುವ ಸೇವೆಯನ್ನು ಬಳಸಲು ಅನುಮತಿಸಲಾಗಿದೆ. ಲಾಕ್ ಮಾಡಲಾದ ಬಯೋಮೆಟ್ರಿಕ್ಸ್ ಆಧಾರ್ ಹೊಂದಿರುವವರು ತಮ್ಮ ಬಯೋಮೆಟ್ರಿಕ್‌ಗಳನ್ನು (ಬೆರಳಚ್ಚುಗಳು/ಐರಿಸ್) ದೃಢೀಕರಣಕ್ಕಾಗಿ ಬಳಸಲು ಸಾಧ್ಯವಾಗುವುದಿಲ್ಲ ಎಂದು ಖಚಿತಪಡಿಸುತ್ತದೆ.

 ಆಧಾರ್ ಬಯೋಮೆಟ್ರಿಕ್ಸ್ ಲಾಕ್, ಅನ್ಲಾಕ್ ಮಾಡುವುದು ಹೇಗೆ?

"ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡಿದ ನಂತರ, ಬಯೋಮೆಟ್ರಿಕ್ಸ್ ಲಾಕ್ ಆಗಿರುವುದನ್ನು ಎರರ್ ಕೋಡ್ '330' ದೃಡಪಡಿಸುತ್ತದೆ. ಬಯೋಮೆಟ್ರಿಕ್ ವಿಧಾನ (ಫಿಂಗರ್‌ಪ್ರಿಂಟ್/ಐರಿಸ್) ಬಳಸಿಕೊಂಡು ಯಾವುದೇ ಸೇವೆ ತೆರೆಯಲು ಹೋದಾಗ ಲಾಕ್‌ ಆಗಿರುವುದು ತಿಳಿಯಲಿದೆ," ಎಂದು ಯುಐಡಿಎಐ ಹೇಳಿದೆ.

 ಉಚಿತ ಗ್ಯಾಸ್ ಸಿಲಿಂಡರ್ ಬೇಕೆ? ಇಲ್ಲಿ ಓದಿ...ಹೀಗೆ ಮಾಡಿ ಉಚಿತ ಗ್ಯಾಸ್ ಸಿಲಿಂಡರ್ ಬೇಕೆ? ಇಲ್ಲಿ ಓದಿ...ಹೀಗೆ ಮಾಡಿ

ನಿಮ್ಮ ಆಧಾರ್‌ನಲ್ಲಿರುವ ಫಿಂಗರ್‌ಪ್ರಿಂಟ್ ಮತ್ತು ಐರಿಸ್ ಡೇಟಾವನ್ನು ಲಾಕ್‌ ಮಾಡಬಹುದಾಗಿದೆ. ಒಮ್ಮೆ ಬಯೋಮೆಟ್ರಿಕ್ ಲಾಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದರೆ, ಆಧಾರ್ ಹೊಂದಿರುವವರು ಆಯ್ಕೆ ಮಾಡುವವರೆಗೆ ಅವರ ಬಯೋಮೆಟ್ರಿಕ್ ಲಾಕ್ ಆಗಿರುತ್ತದೆ. ಅದಕ್ಕಾಗಿ ಅನ್ಲಾಕ್ ಮಾಡಿ ಅಥವಾ ಲಾಕ್‌ ಸಿಸ್ಟಮ್ ಅನ್ನು ನಿಷ್ಕ್ರಿಯಗೊಳಿಸಿ ಎಂಬ ಆಯ್ಕೆಯನ್ನು ಮಾಡಬಹುದು. ಹಾಗಾದರೆ ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮತ್ತು ಅನ್ಲಾಕ್ ಮಾಡುವುದು ಹೇಗೆ ಎಂಬುವುದನ್ನು ತಿಳಿಯಲು ಮುಂದೆ ಓದಿ...

ಆಧಾರ್ ಬಯೋಮೆಟ್ರಿಕ್ಸ್ ಲಾಕ್, ಅನ್ಲಾಕ್ ಮಾಡುವುದು ಹೇಗೆ?

* ಯುಐಡಿಎಐ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ
* My Aadhaar ಗೆ ಹೋಗಿ, ಆಧಾರ್ ಸೇವೆಗಳನ್ನು (Aadhaar Services) ಆಯ್ಕೆಮಾಡಿ
* ಲಾಕ್/ಅನ್‌ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಮಾಡಿ
* "Lock Enable" ಆಯ್ಕೆಮಾಡಿ
* ಮುಂದಿನ ವೆಬ್‌ಪುಟದಲ್ಲಿ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ
* ಕ್ಯಾಪ್ಚಾ ಕೋಡ್‌ ನಮೂದಿಸಿ
* Send OTP ಮೇಲೆ ಕ್ಲಿಕ್ ಮಾಡಿ, ಅದನ್ನು ನಮೂದಿಸಿ
* ಬಯೋಮೆಟ್ರಿಕ್ ಡೇಟಾವನ್ನು ಲಾಕ್ ಮಾಡಲು/ಅನ್‌ಲಾಕ್ ಮಾಡಲು ಆಯ್ಕೆಯನ್ನು ಆರಿಸಿ

ಈ ಸೇವೆಯನ್ನು ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆ ಅತ್ಯಗತ್ಯ ಎಂಬುದನ್ನು ನೀವು ಗಮನಿಸಬೇಕು. ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ನೋಂದಾಯಿಸದಿದ್ದರೆ, ನೀವು ಹತ್ತಿರದ ದಾಖಲಾತಿ ಕೇಂದ್ರ/ಮೊಬೈಲ್ ಅಪ್‌ಡೇಟ್ ಎಂಡ್ ಪಾಯಿಂಟ್‌ಗೆ ಭೇಟಿ ನೀಡಬಹುದು. ನಿಮ್ಮ ಫೋನ್ ಸಂಖ್ಯೆಯನ್ನು ನವೀಕರಿಸಬಹುದು.

English summary

How to lock and unlock Aadhaar Biometrics to prevent misuse; Details in Kannada

How to lock and unlock Aadhaar Biometrics to prevent misuse; Details in Kannada.
Story first published: Thursday, May 12, 2022, 14:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X