For Quick Alerts
ALLOW NOTIFICATIONS  
For Daily Alerts

ಗೂಗಲ್‌ಪೇ, ಫೋನ್‌ಪೇ, ಇಂಟರ್‌ನೆಟ್ ಇಲ್ಲದೆ ಯುಪಿಐ ಪಾವತಿ ಹೀಗೆ ಮಾಡಿ..

|

ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಅಥವಾ ಯುಪಿಐ ಎಂಬುವುದು ದೇಶದಲ್ಲಿ ಪ್ರಸ್ತುತ ಹೆಚ್ಚಾಗಿ ಬಳಕೆ ಮಾಡಲಾಗುತ್ತಿರುವ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಾಗಿದೆ. ಇದನ್ನು 2016ರಲ್ಲಿ ಎನ್‌ಪಿಸಿಐ ಜಾರಿಗೆ ತಂದಿದೆ. ಭಾರತದಲ್ಲಿ ಯುಪಿಐ ನಿಧಾನವಾಗಿ ಪ್ರಮುಖ ವಹಿವಾಟು ವಿಧಾನವಾಗಿ ಮಾರ್ಪಡುತ್ತಿದೆ. ಪ್ರಮುಖವಾಗಿ ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದಲ್ಲಿ ಯುಪಿಐ ಪಾವತಿ ವಿಧಾನವು ಮುನ್ನೆಲೆಗೆ ಬಂದಿತು.

 

ನಗದು ರಹಿತ ವಹಿವಾಟಿಗೆ ಕೋವಿಡ್ ಸಂದರ್ಭದಲ್ಲಿ ಅಧಿಕ ಆದ್ಯತೆ ನೀಡಲಾಯಿತು. ಯುಪಿಐ ಪಾವತಿ ವಿಧಾನ ಜಾರಿಯಾದ ಬಳಿಕ ಹಲವಾರು ಟೆಕ್ ದೈತ್ಯಗಳು ಬಳಕೆದಾರರಿಗೆ ಯುಪಿಐ ಅನ್ನು ಸುಲಭವಾಗಿ ಬಳಕೆ ಮಾಡಲು ಸಾಧ್ಯವಾಗಲು ಕಾರ್ಯನಿರ್ವಹಣೆ ಮಾಡಿದೆ. ಈ ಪೇಮೆಂಟ್ ವಿಧಾನಕ್ಕೆ ಇಂಟರ್‌ನೆಟ್ ಬಹುಮುಖ್ಯವಾಗಿದೆ ಎಂಬ ನಂಬಿಕೆ ಹಲವಾರು ಮಂದಿಯಲ್ಲಿ ಇದೆ. ಆದರೆ ಇಂಟರ್‌ನೆಟ್ ಇಲ್ಲದೆ, ಯುಪಿಐ ಆಪ್‌ಗಳು ಇಲ್ಲದೆಯೇ ನಾವು ಯುಪಿಐ ವಹಿವಾಟು ನಡೆಸಲು ಸಾಧ್ಯವಾಗಲಿದೆ.

ಯುಪಿಐ ಪೇಮೆಂಟ್ ಡಿಕ್ಲೈನ್ ತಡೆಯುವುದು ಹೇಗೆ?

ನಾವು ಇಂಟರ್‌ನೆಟ್ ಇಲ್ಲದೆ ಯುಪಿಐ ಪಿನ್ ಹಾಗೂ ಯುಪಿಐ ಐಡಿಯನ್ನು ಬಳಕೆ ಮಾಡಿ ಹಣವನ್ನು ವರ್ಗಾವಣೆ ಮಾಡಿಕೊಳ್ಳಬಹುದು. ನಾವು ಮೊಬೈಲ್ ನಂಬರ್ ಅಥವಾ ವರ್ಚುವಲ್ ಪೇಮೆಂಟ್ ಅಡ್ರೆಸ್ ಮೂಲಕ ಈ ಯುಪಿಐ ಪಾವತಿಯನ್ನು ಮಾಡಿಕೊಳ್ಳಬಹುದು. ಹಾಗಾದರೆ ನಾವು ಇಂಟರ್‌ನೆಟ್, ಫೋನ್‌ಪೇ, ಗೂಗಲ್‌ಪೇ ಮೊದಲಾದ ಆಪ್‌ಗಳು ಇಲ್ಲದೆ ಯುಪಿಐ ಪಾವತಿಯನ್ನು ಮಾಡುವುದು ಹೇಗೆ ಎಂಬುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ.....

 ಆರ್‌ಬಿಐನಿಂದ UPI 123Pay ಆರಂಭ

ಆರ್‌ಬಿಐನಿಂದ UPI 123Pay ಆರಂಭ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಾಗೂ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಯುಪಿಐ 123Pay ಯೋಜನೆಯನ್ನು ಜಾರಿಗೆ ತಂದಿದೆ. ಪ್ರಮುಖವಾಗಿ ಫೀಚರ್ ಫೋನ್‌ಗಳನ್ನು ಬಳಕೆ ಮಾಡುತ್ತಿರುವ 40 ಕೋಟಿ ಜನರಿಗೆ ಇಂಟರ್‌ನೆಟ್ ಇಲ್ಲದೆಯೇ ಪೇಮೆಂಟ್ ಮಾಡಲು ಸಾಧ್ಯವಾಗುವಂತೆ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಹೊಸ ಫೀಚರ್ UPI 123Pay ಮೂಲಕ ಜನರು ಇಂಟರ್‌ನೆಟ್ ಇಲ್ಲದೆ ಶೀಘ್ರವಾಗಿಯೇ ಪೇಮೆಂಟ್ ಅನ್ನು ಮಾಡಲು ಸಾಧ್ಯವಾಗಲಿದೆ.

 ಬೇರೆ ಬೇರೆ ವಿಧಾನದಲ್ಲಿ ಪಾವತಿ

ಬೇರೆ ಬೇರೆ ವಿಧಾನದಲ್ಲಿ ಪಾವತಿ

ನಾವು ಈ ತಂತ್ರಜ್ಞಾನ, ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು ಬೇರೆ ಬೇರೆ ರೀತಿಯಲ್ಲಿ ಹಣಕಾಸು ವಹಿವಾಟನ್ನು ನಡೆಸಲು ಸಾಧ್ಯವಾಗಲಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಧಿಕೃತ ವೆಬ್‌ಸೈಟ್ ಪ್ರಕಾರ ನಾವು ಐವಿಆರ್ ಬಳಕೆ ಮಾಡಿಕೊಂಡು, ಫೀಚರ್ ಮೊಬೈಲ್‌ನಲ್ಲಿ ಆಪ್‌ ಇನ್‌ಸ್ಟಾಲ್ ಮಾಡುವ ಮೂಲಕ, ಮಿಸ್ಡ್‌ ಕಾಲ್ ಮೂಲಕ ಅಥವಾ ಸೌಂಡ್ ಬೇಸ್ಡ್‌ ಪೇಮೆಂಟ್ ಮೂಲಕ ನಾವು ಹಣಕಾವು ವಹಿವಾಟನ್ನು ನಡೆಸಲು ಸಾಧ್ಯವಾಗಲಿದೆ.

 123Pay ಮೂಲಕ ಏನೆಲ್ಲಾ ಮಾಡಲು ಸಾಧ್ಯ?
 

123Pay ಮೂಲಕ ಏನೆಲ್ಲಾ ಮಾಡಲು ಸಾಧ್ಯ?

ನಾವು 123Pay ಮೂಲಕ ಕಾರಿನ ಫಾಸ್ಟ್‌ ಟ್ಯಾಗ್ ಹಾಗೂ ಇತರೆ ಬಿಲ್‌ಗಳನ್ನು ಪಾವತಿ ಮಾಡಲು ಸಾಧ್ಯವಾಗಲಿದೆ. ನಾವು ರಿಜಿಸ್ಟಾರ್ ಆದ ಮೊಬೈಲ್ ಫೋನ್ ಸಂಖ್ಯೆಯ ಮೂಲಕ ಈ ವಿಧಾನವನ್ನು ಸುಲಭವಾಗಿ ಬಳಕೆ ಮಾಡಲು ಸಾಧ್ಯ. ನಮ್ಮ ಮೊಬೈಲ್ ಸಂಖ್ಯೆ ಬಳಸಿಕೊಂಡು ನಾವು ನಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಪರಿಶೀಲನೆ ಮಾಡಲು ಕೂಡಾ ಸಾಧ್ಯವಾಗಲಿದೆ. ದಿನದ 24 ಗಂಟೆಗಳ ಕಾಲ ಹಾಟ್‌ಲೈನ್ ಸಂಖ್ಯೆಯನ್ನು ಎನ್‌ಪಿಸಿಐ ಆರಂಭ ಮಾಡಿದೆ. ಈ ಮೂಲಕ ಬಳಕೆದಾರರು ಸುಲಭವಾಗಿ ಡಿಜಿಟಲ್ ಪೇಮೆಂಟ್ ಪರಿಶೀಲನೆ ಮಾಡಬಹುದು. www.digisaathi.info ಮೂಲಕ, 14431 ಅಥವಾ1800 891 3333 ಕರೆ ಮಾಡುವ ಮೂಲಕ ನಾವು ಯಾವುದೇ ಮಾಹಿತಿಯನ್ನು ಪಡೆಯಬಹುದಾಗಿದೆ.

 ಇಂಟರ್‌ನೆಟ್ ಇಲ್ಲದೆಯೇ ಯುಪಿಐ ವಹಿವಾಟು ಮಾಡುವುದು ಹೇಗೆ?

ಇಂಟರ್‌ನೆಟ್ ಇಲ್ಲದೆಯೇ ಯುಪಿಐ ವಹಿವಾಟು ಮಾಡುವುದು ಹೇಗೆ?

ನಾವು ಇಂಟರ್‌ನೆಟ್ ಇಲ್ಲದೆ ಯುಪಿಐ ವಹಿವಾಟು ಮಾಡಲು ಕೆಲವೇ ಕೆಲವು ಹಂತಗಳನ್ನು ಪಾಲನೆ ಮಾಡಬೇಕಾಗುತ್ತದೆ. ಐವಿಆರ್ ಮೂಲಕ ಮಾತ್ರ UPI 123Pay ವ್ಯವಸ್ಥೆ ಬಳಕೆ ಸಾಧ್ಯ. ಆದ್ದರಿಂದ ಐವಿಆರ್ ಅತೀ ಮುಖ್ಯವಾಗಿದೆ. ಯುಪಿಐ ಪಿನ್ ಅನ್ನು ರಚನೆ ಮಾಡುವ ಮುನ್ನ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಬೇಕಾಗುತ್ತದೆ.

ಹಂತ 1: 08045163666 ಫೋನ್ ನಂಬರ್‌ಗೆ ಡಯಲ್ ಮಾಡಿ
ಹಂತ 2: ನೀವು ಯಾವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಕೇಳಲಾಗುತ್ತದೆ. ಅದನ್ನು ಆಯ್ಕೆ ಮಾಡಿಕೊಳ್ಳಿ
ಹಂತ 3: ಹಣ ವರ್ಗಾವಣೆ ಮಾಡಲು ನಂತರ 1 ಅನ್ನು ಒತ್ತಿರಿ
ಹಂತ 4: ಬಳಿಕ ನೀವು ಬ್ಯಾಂಕ್ ಆಯ್ಕೆ ಮಾಡಬೇಕಾಗುತ್ತದೆ. ಅದನ್ನು ಆಯ್ಕೆ ಮಾಡಿಕೊಳ್ಳಿ
ಹಂತ 5: ಮತ್ತೆ ಸಂಖ್ಯೆ 1 ಅನ್ನು ಪ್ರೆಸ್ ಮಾಡಬೇಕಾಗುತ್ತದೆ.
ಹಂತ 6: ವಹಿವಾಟು ಪೂರ್ಣ ಮಾಡಲು ಮತ್ತೆ 1 ಅನ್ನು ಪ್ರೆಸ್ ಮಾಡಿ
ಹಂತ 7: ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ವಿವರ ಪರಿಶೀಲನೆ ಮಾಡಿ
ಹಂತ 8: ಮೊತ್ತ ಹಾಗೂ ಯುಪಿಐ ಪಿನ್ ಅನ್ನು ನಮೂದಿಸಿದರೆ ವಹಿವಾಟು ಸಂಪೂರ್ಣವಾಗಲಿದೆ.

 

English summary

How to Make UPI Payment Without Apps or an Active Internet Connection, Steps Here

How to make UPI payment without GooglePay, Paytm, PhonePe or an active internet connection. Explained steps here in kannada, read on.
Story first published: Friday, August 12, 2022, 14:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X