For Quick Alerts
ALLOW NOTIFICATIONS  
For Daily Alerts

ಅಪ್ರಾಪ್ತರ ಹೆಸರಲ್ಲಿ ಡಿಮ್ಯಾಟ್ ಖಾತೆ ತೆರೆಯುವುದು ಹೇಗೆ?

|

ಅಪ್ರಾಪ್ತ ವಯಸ್ಕರ ಹೆಸರಲ್ಲಿ ಡಿಮ್ಯಾಟ್ ಖಾತೆ ತೆರೆಯುವುದು ಹೇಗೆ? ಹೀಗೊಂದು ಪ್ರಶ್ನೆ ನಿಮ್ಮಲ್ಲಿದ್ದರೆ ಇಲ್ಲಿದೆ ಉತ್ತರ. ಷೇರು, ಡಿಬೆಂಚರ್ಸ್ ಹಾಗೂ ಮ್ಯೂಚ್ಯುವಲ್ ಫಂಡ್ ಗಳಲ್ಲಿ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಹೆಸರಲ್ಲಿ ಹೂಡಿಕೆ ಮಾಡಬೇಕು ಅಂತಿದ್ದರೆ ಅದಕ್ಕೆ ಡಿಮ್ಯಾಟ್ ಖಾತೆ ಕಡ್ಡಾಯವಾಗಿ ಬೇಕೇ ಬೇಕು. ಅಂಥ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ಇಂತಿದೆ.

ಅಪ್ರಾಪ್ತ ವಯಸ್ಕರ ಪರವಾಗಿ ಪೋಷಕರು ಖಾತೆ ತೆರೆಯಬಹುದು. ಪೋಷಕರಾಗಿ ತಂದೆ ಅಥವಾ ತಾಯಿ ಆಗಿರಬಹುದು. ಅಥವಾ ನ್ಯಾಯಾಲಯದಿಂದ ನೇಮಿಸಲಾದ ಪೋಷಕರಾದರೂ ಆಗಿರಬಹುದು. ಮಾಮೂಲಿಯಾಗಿ ಡಿಮ್ಯಾಟ್ ಖಾತೆ ಹೇಗೆ ತೆರೆಯಲಾಗುತ್ತದೋ ಅದೇ ರೀತಿಯಲ್ಲಿ ಅಪ್ರಾಪ್ತ ವಯಸ್ಕರ ಹೆಸರಿನಲ್ಲೂ ಖಾತೆ ತೆರೆಯಬೇಕಾಗುತ್ತದೆ.

ವಿಳಾಸ ಹಾಗೂ ಗುರುತು ಖಾತ್ರಿಗೆ ಪೋಷಕರು ಹಾಗೂ ಅಪ್ರಾಪ್ತ ವಯಸ್ಕರು ಇಬ್ಬರದೂ ದಾಖಲೆ ನೀಡಬೇಕಾಗುತ್ತದೆ. KYC (Know Your Customer) ನಿಯಮಾವಳಿಗಳಿಗೆ ಇದು ಕಡ್ಡಾಯ. ಎಲ್ಲ ದಾಖಲೆಗೂ ಪೋಷಕರು ಸಹಿ ಹಾಕಬೇಕು. ಅಪ್ರಾಪ್ತ ವಯಸ್ಕರ ವಯಸ್ಸಿನ ಖಾತ್ರಿಗೆ ದಾಖಲೆ ಸಲ್ಲಿಸಬೇಕು. ಪೋಷಕರು ಹಾಗೂ ಖಾತೆ ಯಾರ ಹೆಸರಲ್ಲಿ ತೆರೆಯಬೇಕೋ ಇಬ್ಬರದೂ ಪ್ಯಾನ್ ಕಾರ್ಡ್ ಸಲ್ಲಿಸಬೇಕು.

ಅಪ್ರಾಪ್ತರ ಹೆಸರಲ್ಲಿ ಡಿಮ್ಯಾಟ್ ಖಾತೆ ತೆರೆಯುವುದು ಹೇಗೆ?

ಅಪ್ರಾಪ್ತ ವಯಸ್ಕರ ಹೆಸರಲ್ಲಿ ತೆರೆಯುವ ಡಿಮ್ಯಾಟ್ ಅಕೌಂಟ್ ಗೆ ಜಂಟಿ ಖಾತೆದಾರರು ಇರಲು ಸಾಧ್ಯವಿಲ್ಲ. ಡೆಲಿವರ್ ಆಧಾರದಲ್ಲಿ ಸೆಕ್ಯೂರಿಟೀಸ್ ಇಟ್ಟುಕೊಳ್ಳಬಹುದು. ಈಕ್ವಿಟಿಯ ಇಂಟ್ರಾಡೇ ವ್ಯವಹಾರ, ಈಕ್ವಿಟಿ ಡೆರಿವೇಟಿವ್ಸ್ ಮತ್ತು ಕರೆನ್ಸಿ ಡೆರಿವೇಟಿವ್ ಟ್ರೇಡಿಂಗ್ ಮಾಡಲು ಸಾಧ್ಯವಿಲ್ಲ.

ಒಂದು ವೇಳೆ ಪೋಷಕರು ಸಾವನ್ನಪ್ಪಿದಲ್ಲಿ ಡೆತ್ ಸರ್ಟಿಫಿಕೇಟ್ ನೋಟರಿ ಪ್ರತಿಯನ್ನು ಸಲ್ಲಿಸಬೇಕು. ಹೊಸದಾಗಿ ಪೋಷಕರ ಸ್ಥಾನಕ್ಕೆ ಒಬ್ಬರು ನೇಮಕವಾಗಿ, ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವ ತನಕ ಅಪ್ರಾಪ್ತ ವಯಸ್ಕರ ಹೆಸರಲ್ಲಿ ಇರುವ ಡಿಮ್ಯಾಟ್ ಖಾತೆಯ ಮೂಲಕ ವ್ಯವಹಾರ ಸಾಧ್ಯವಿಲ್ಲ.

ಖಾತೆದಾರರು ಪ್ರಾಪ್ತ ವಯಸ್ಕರಾದ ನಂತರ ಹೊಸ ಕೆವೈಸಿ ಮತ್ತು ಖಾತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಪೋಷಕರ ಮಾಹಿತಿಯನ್ನು ಡಿಮ್ಯಾಟ್ ಖಾತೆಯಿಂದ ತೆಗೆಯಲಾಗುತ್ತದೆ. ಒಂದು ವೇಳೆ ಈಗಿರುವ ಖಾತೆಯಲ್ಲಿ ಅಪ್ರಾಪ್ತ ವಯಸ್ಕರ ಎಂಬುದು ಇದ್ದರೆ, ಡಿಮ್ಯಾಟ್ ಖಾತೆಯನ್ನು ರದ್ದು ಮಾಡಿ, ಹೊಸದಾಗಿ ಖಾತೆ ತೆರೆಯಬೇಕಾಗುತ್ತದೆ. ಹಳೆ ಖಾತೆಯಲ್ಲಿ ಇರುವ ಸೆಕ್ಯೂರಿಟೀಸ್ ಅನ್ನು ಹೊಸ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

English summary

How To Open Demat Account In Minor Name?

Here is the procedure and know how to open demat account in minor name?
Story first published: Tuesday, December 10, 2019, 17:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X