For Quick Alerts
ALLOW NOTIFICATIONS  
For Daily Alerts

ಪೇಟಿಎಂ ಮೂಲಕ ಎಲ್‌ಐಸಿ ಪ್ರೀಮಿಯಂ ಪಾವತಿ ಮಾಡುವುದು ಹೇಗೆ?

|

ಬಹುತೇಕ ಜನರು ನಿವೃತ್ತಿಯ ಅವಧಿಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ದೇಶದ ಅತಿದೊಡ್ಡ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನಿಮಗಾಗಿ ಉತ್ತಮ ಯೋಜನೆಯನ್ನು ಹೊಂದಿದೆ. ಭಾರತೀಯ ಜೀವ ವಿಮಾ ನಿಗಮದಲ್ಲಿ(ಎಲ್‌ಐಸಿ), ಜನರು ತಮ್ಮ ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಪಾಲಿಸಿಯನ್ನು ಪಡೆಯುತ್ತಾರೆ.

ಎಲ್‌ಐಸಿ : ಒಂದೇ ಬಾರಿ ಪಾವತಿಸಿ, 51,650 ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?ಎಲ್‌ಐಸಿ : ಒಂದೇ ಬಾರಿ ಪಾವತಿಸಿ, 51,650 ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?

ಈ ಪಾಲಿಸಿ ಮೂಲಕ ಭವಿಷ್ಯದಲ್ಲಿ ತನ್ನ ಕುಟುಂಬಕ್ಕೆ ಆಸರೆಯಾಗುವುದು ಇದರ ಪ್ರಮುಖ ಉದ್ದೇಶವಾಗಿರುತ್ತದೆ. ಎಲ್‌ಐಸಿಯಲ್ಲಿ ಹಲವು ಯೋಜನೆಗಳಿವೆ ಇದರಲ್ಲಿ ವಿವಿಧ ಪ್ರಯೋಜನಗಳನ್ನು ಸಹ ಪಡೆಯಬಹುದಾಗಿದೆ. ಇನ್ನು ನೀವು ಪ್ರತಿ ತಿಂಗಳು, ಮೂರು ತಿಂಗಳಿಗೊಮ್ಮೆ , ಆರು ತಿಂಗಳು, ವಾರ್ಷಿಕವಾಗಿ ಪ್ರೀಮಿಯಂ ಪಾವತಿ ಮಾಡಬಹುದು. ನಿಮಗೆ ಅನುಕೂಲವಾದ ಆಯ್ಕೆ ನಿಮ್ಮದಾಗಿರುತ್ತದೆ.

ಮೊದಲು ಎಲ್‌ಐಸಿಯ ಕಂತನ್ನು ಅಂದರೆ ಪ್ರೀಮಿಯಂ ಅನ್ನು ಏಜೆಂಟ್ ಮೂಲಕ ಅಥವಾ ಕಚೇರಿಗೆ ಭೇಟಿ ನೀಡುವ ಮೂಲಕ ಮಾತ್ರ ಪಾವತಿಸಬಹುದಾಗಿತ್ತು, ಆದರೆ ಈಗ ಅದನ್ನು ಆನ್‌ಲೈನ್‌ನಲ್ಲಿ ಕೂಡ ಪಾವತಿಸಬಹುದು. ಅಲ್ಲದೆ, ಇದು Paytm, Google Pay ಮತ್ತು PhonePe ಮೂಲಕ ಇನ್ನಷ್ಟು ಸುಲಭವಾಗಿದೆ.

ಪೇಟಿಎಂ ಮೂಲಕ ಎಲ್‌ಐಸಿ ಪ್ರೀಮಿಯಂ ಪಾವತಿ ಮಾಡುವುದು ಹೇಗೆ?

ಸದ್ಯ ಪೇಟಿಎಂ ಮೂಲಕ ಎಲ್‌ಐಸಿ ಪ್ರೀಮಿಯಂ ಅನ್ನು ನೀವು ಹೇಗೆ ಪಾವತಿಸಬಹುದು ಎಂದು ಈ ಕೆಳಗೆ ತಿಳಿದುಕೊಳ್ಳಿ.

ಪೇಟಿಎಂ ಮೂಲಕ ಎಲ್ಐಸಿ ಪ್ರೀಮಿಯಂ ಪಾವತಿ ಮಾಡುವುದು ಹೇಗೆ?

ಪೇಟಿಎಂ ಮೂಲಕ ಎಲ್‌ಐಸಿಯನ್ನು ಆನ್‌ಲೈನ್‌ನಲ್ಲಿ ಪಾವತಿಸಲು, ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಬಳಿಕವಷ್ಟೇ ನಿಮ್ಮ ಎಲ್‌ಐಸಿ ಕಂತನ್ನು ಆನ್‌ಲೈನ್‌ನಲ್ಲಿ ಪಾವತಿಸಲಾಗುತ್ತದೆ. ನೀವು ಎಲ್‌ಐಸಿ ಕೇಂದ್ರಕ್ಕೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ನಿಮ್ಮ Paytm ಆ್ಯಪ್‌ ಮೂಲಕವೇ ನೀವು LIC ಪ್ರೀಮಿಯಂ ಅನ್ನು ಪಾವತಿಸಬಹುದು.

ಹಂತ 1- ಮೊದಲು ನೀವು ನಿಮ್ಮ ಫೋನ್‌ನಲ್ಲಿ ಪೇಟಿಎಂ ಆ್ಯಪ್‌ ಅನ್ನು ತೆರೆಯಿರಿ

ಹಂತ 2- ಇದರ ನಂತರ ನೀವು ಆ್ಯಪ್‌ನಲ್ಲಿನ ಸರ್ಚ್ ಬಾಕ್ಸ್‌ನಲ್ಲಿ ಎಲ್‌ಐಸಿ ಎಂದು ಟೈಪ್ ಮಾಡುವ ಮೂಲಕ ಹುಡುಕಬೇಕು.

ಹಂತ 3- ನಂತರದಲ್ಲಿ ನೀವು ಪಾಲಿಸಿ ಸಂಖ್ಯೆಯನ್ನು ನಮೂದಿಸಬೇಕು.

ಹಂತ 4- ಇದರ ನಂತರ ಪಾಲಿಸಿ ಸಂಖ್ಯೆ, ಪಾಲಿಸಿದಾರರ ಹೆಸರು, ಪ್ರೀಮಿಯಂ ಪಾವತಿಸುವ ದಿನಾಂಕ, ಕಂತಿನ ಮೊತ್ತ ಮತ್ತು ಪ್ರೀಮಿಯಂ ಮೊತ್ತದಂತಹ ನಿಮ್ಮ ಪಾಲಿಸಿ ವಿವರಗಳು ಗೋಚರಿಸುತ್ತವೆ.

ಹಂತ 5- ನಿಮಗೆ ಬೇಕಾದರೆ, ವಿಶೇಷ ಕ್ಯಾಶ್‌ಬ್ಯಾಕ್ ಮತ್ತು ಕೊಡುಗೆಗಳಿಗಾಗಿ ನಿಮ್ಮ ಆಯ್ಕೆಯ ವಿಮಾ ಕೊಡುಗೆ ಮತ್ತು ಪ್ರೋಮೋ ಕೋಡ್ ಅನ್ನು ಆಯ್ಕೆ ಮಾಡಿ ಮತ್ತು ನಂತರ ಪಾವತಿಗೆ ಮುಂದುವರಿಯಿರಿ.

ಎಲ್‌ಐಸಿ: ಈ ಯೋಜನೆ ಮೂಲಕ 1 ಕೋಟಿ ರೂಪಾಯಿ ಲಾಭ ಪಡೆಯಿರಿ ಎಲ್‌ಐಸಿ: ಈ ಯೋಜನೆ ಮೂಲಕ 1 ಕೋಟಿ ರೂಪಾಯಿ ಲಾಭ ಪಡೆಯಿರಿ

ಹಂತ 6- ಇದರ ನಂತರ ನೀವು ನಿಮ್ಮ ಆಯ್ಕೆಯ ಪಾವತಿ ವಿಧಾನವನ್ನು ಆರಿಸಬೇಕಾಗುತ್ತದೆ. ಇದರಲ್ಲಿ, ನೀವು ಡೆಬಿಟ್ / ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ವಾಲೆಟ್ ಅನ್ನು ಆಯ್ಕೆ ಮಾಡಬಹುದು.

ಹಂತ 7- ನಂತರದಲ್ಲಿ ನೀವು ಪಾವತಿಗೆ ಮುಂದುವರಿಯಿರಿ(payment continue) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ನೀವು ಯಶಸ್ವಿಯಾಗಿ ಹಣ ಪಾವತಿ ಮಾಡಿದ ಬಳಿಕ, ಪೇಟಿಎಂ ನಿಮ್ಮ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಗೆ ಸಂದೇಶವನ್ನು ಕಳುಹಿಸುತ್ತದೆ. ಅಲ್ಲದೆ, ಪಾವತಿ ಯಶಸ್ವಿಯಾದ ನಂತರ, ನಿಮ್ಮ ಪಾವತಿ ಸ್ಲಿಪ್ ಅನ್ನು ಸಹ ನೀವು ಡೌನ್‌ಲೋಡ್ ಮಾಡಬಹುದು.

English summary

How To Pay LIC Premium Through Paytm UPI App

Here the details of how you can pay LIC Premium Through Paytm
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X