For Quick Alerts
ALLOW NOTIFICATIONS  
For Daily Alerts

ಕಾರಿನ ವಿಮೆ ನವೀಕರಿಸೋದು ಹೇಗೆ?, ನೀವು ಮಾಡಬೇಕಿರೋದು ಇಷ್ಟೇ..

By ಶಾರ್ವರಿ
|

ನೀವು ವಾಹನವನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ಅಥವಾ ಈಗಾಗಲೇ ಖರೀದಿಸಿದ್ದೀರಾ? ಹಾಗಿದ್ದರೆ ವಿಮಾ ಯೋಜನೆಯನ್ನು ತಿಳಿದುಕೊಳ್ಳುವುದು ಅವಶ್ಯಕ. ಯಾವುದೇ ರೀತಿಯ ಅಪಘಾತ, ಕಳ್ಳತನಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಇದು ನಿಮಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ವಾಹನ ವಿಮಾ ಪಾಲಿಸಿಯನ್ನು ಖರೀದಿಸುವಾಗ ಅನೇಕ ಬಾರಿ ವಿಮೆ ಪಡೆಯುವುದು ತಿರಸ್ಕೃತಗೊಳ್ಳುತ್ತದೆ. ಹಾಗಾಗಿ ನಿಗದಿತ ಪಾಲಿಸಿ ತಿಳಿಯುವಾಗ ಷರತ್ತುಗಳು ಮತ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಗೊತ್ತಿಲ್ಲದಿದ್ದರೆ, ಬಾರಿ ಅನಾಹುತಗಳನ್ನು ಎದುರಿಸಬೇಕಾಗುತ್ತದೆ.

ಹೌದು.. ದೇಶದ ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿಯಾಗಿರುವಂತೆಯೇ ನಾನಾ ಕಂಪೆನಿಗಳು ಹಲವು ರೀತಿಯ ಕಾರು ವಿಮಾ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ. ಇದರಿಂದಾಗಿ ಕಾರು ಖರೀದಿ ಸಂದರ್ಭದಲ್ಲಿ ಯಾವ ವಿಮೆ ಚೆನ್ನಾಗಿದೆ ಎಂಬುದರ ಕುರಿತು ಗ್ರಾಹಕ ಯೋಚಿಸಬೇಕಾಗುತ್ತದೆ. ಉತ್ಪನ್ನಗಳ ಮಾರಾಟಕ್ಕಾಗಿ ಕಂಪೆನಿಗಳು ಪೈಪೋಟಿಯಲ್ಲಿ ತೊಡಗಿದ್ದು, ಇದೀಗ ಗ್ರಾಹಕರಿಗಾಗಿ ಉಚಿತ ವಿಮಾ ಸೌಲಭ್ಯ ನೀಡುವುದಕ್ಕೂ ಮುಂದಾಗಿವೆ. ಆದ್ದರಿಂದ, ಮೋಟಾರು ವಾಹನ ಕಾಯ್ದೆಯ ಪ್ರಕಾರ, ದೇಶದಲ್ಲಿ ಕನಿಷ್ಠ 3ನೇ ವ್ಯಕ್ತಿಯು ವಿಮೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.

 ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 30 ನಿಮಿಷಗಳ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಪ್ರಾರಂಭ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 30 ನಿಮಿಷಗಳ 'ಎಕ್ಸ್‌ಪ್ರೆಸ್ ಕಾರ್ ಲೋನ್ಸ್' ಪ್ರಾರಂಭ

ಸಹಜವಾಗಿ ಕಾರುಗಳಿಗೆ ವಿಮಾ ಯೋಜನೆಗಳು ಒಂದು ವರ್ಷದ ಅವಧಿಗೆ ಸೀಮಿತವಿರುತ್ತವೆ. ಆದರೆ, ಇತ್ತೀಚೆಗೆ ಬಹುವರ್ಷದ ವಿಮಾ ಯೋಜನೆಯನ್ನು ಪಡೆಯಲು ಸಾಧ್ಯವಿದೆ. ನಾವು ಮಾಡಿಸುವ ಯೋಜನೆಯು, ಆ ಅವಧಿಯಲ್ಲಿ ಉಂಟಾಗುವ ಕ್ಲೈಮ್‌ಗಳಿಗೆ (ವಿಮೆ ಪಡೆಯುವುದು) ಮಾತ್ರ ಮರುಪಾವತಿ ಪಡೆಯಬಹುದು. ಕೆಲವೊಮ್ಮೆ ವಿಮೆ ಕಳೆದುಹೋಗಿರಬಹುದು ಅಥವಾ ನೀವು ನವೀಕರಿಸುವುದನ್ನು ಮರೆತಿರಬಹುದು. ಇದ್ಯಾವುದು ಪರಿಣನೆಗೆ ಬರುವುದಿಲ್ಲ. ಈ ಯೋಜನೆಯನ್ನು ನಿಗದಿತ ದಿನಾಂಕದಲ್ಲಿ ನವೀಕರಿಸದೇ ಇದ್ದರೆ, ನಿಷ್ಕ್ರಿಯಗೊಳ್ಳುತ್ತದೆ. ಈ ಅವಧಿಯಲ್ಲಿ ಯಾವುದೇ ಹಾನಿಗಳಾದರೂ ಅದರ ನಷ್ಟವನ್ನು ನೀವೆ ಭರಿಸಬೇಕಾಗುತ್ತದೆ.

ನಿಗದಿತ ಅವಧಿಯಲ್ಲಿ ನವೀಕರಿಸಿದರೆ, ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇಲ್ಲದಿದ್ದರೆ, ಹೊಸ ಕಾರು ಖರೀದಿಸಿದಾಗ ಮಾಡಿಸಿಕೊಳ್ಳುವ ರೀತಿಯೇ ಹೊಸ ವಿಮಾ ಯೋಜನೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕಾಗಿಯೇ ಆನ್‌ಲೈನ್‌ನಲ್ಲೂ ವಿಮೆ ಯೋಜನೆಗಳನ್ನು ಖರೀದಿಸುವ ಅವಕಾಶ ನೀಡಲಾಗಿದೆ. ಚಿಂತಿಸಬೇಡಿ, ಅದಕ್ಕಾಗಿಯೇ ಹಲವು ಹಂತದ ಪ್ರಯೋಜನಗಳನ್ನು ಪಡೆಯುವ ವಿಧಾನವನ್ನು ನಾವು ತಿಳಿಸಿಕೊಡುತ್ತೇವೆ.

 ನೀವು ಮಾಡಬೇಕಿರುವುದು ಇಷ್ಟೇ..

ನೀವು ಮಾಡಬೇಕಿರುವುದು ಇಷ್ಟೇ..

1. ನಿಮ್ಮ ಕಾರಿನ ವಿಮೆ ಅವಧಿ ಮುಗಿದಿದೆ ಎಂದು ತಿಳಿದ ಕೂಡಲೇ, ವಿಮೆ ಏಜೆಂಟ್‌ ಅಥವಾ ಪ್ರೊವೈಡರ್‌ಗಳನ್ನು (ಕಾರು ಕಂಪೆನಿದಾರರು) ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ.

2. ವಿಮೆಯ ರಕ್ಷಣೆಯಿಲ್ಲದೇ ನಿಮ್ಮ ಕಾರನ್ನು ಓಡಿಸಬೇಡಿ. ಇದರಿಂದ ಕಾನೂನು ಬಾಹಿರ ಆಗುವುದಿಲ್ಲ. ಆದರೆ, ನಿಮ್ಮಿಂದ 3ನೇ ವ್ಯಕ್ತಿಗೆ ಅಪಘಾತವಾದ ಸಂದರ್ಭದಲ್ಲಿ ವಿಮೆ ಇಲ್ಲದಿದ್ದರೆ, ಹಾನಿಯನ್ನು ನೀವೆ ಪಾವತಿಸಬೇಕಾಗುತ್ತದೆ.

3. ದೀರ್ಘಾವದಿಯ ನವೀಕರಣವನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಕಾರು ಮಾರಾಟ ಕಂಪೆನಿಯನ್ನು ಸಂಪರ್ಕಿಸಿ ಅಥವಾ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವುದನ್ನು ನವೀಕರಿಸಲು ಅವಕಾಶ ಮಾಡಿಕೊಳ್ಳಿ.

4. ನವೀಕರಣದ ಸಂದರ್ಭದಲ್ಲಿ ನಿಮ್ಮ ಕಾರಿಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಮತ್ತು ಪ್ರಯೋಜನಗಳನ್ನು ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು.

5. ಒಂದು ವೇಳೆ ನಿಮ್ಮ ವಿಮಾ ಪಾಲಿಸಿ ಅವಧಿ ಮುಗಿದಿದ್ದರೆ, ವಿಮೆದಾರರು ನಿಮ್ಮ ವಾಹನ ಸಮೀಕ್ಷೆ ಮಾಡಲು ಸಮಯ ನಿಗದಿಗೊಳಿಸುತ್ತಾರೆ.

6. ನಿಮ್ಮ ಪ್ರತಿನಿಧಿ ನಿಮ್ಮ ಕಾರಿಗೆ ವಿಮೆ ಅರ್ಹತೆಯನ್ನು ನಿರ್ಧರಿಸುವ ಮುನ್ನ, ಅದಕ್ಕೆ ಉಂಟಾಗಿರುವ ಹಾನಿಗಳನ್ನು ಪರಿಶೀಲಿಸುತ್ತಾರೆ. ತಪಾಸಣೆ ವೇಳೆ ದೊಡ್ಡಮಟ್ಟದಲ್ಲಿ ಅಥವಾ ಮುಖ್ಯವಾದ ಭಾಗಗಳಲ್ಲಿ ಹಾನಿಯಾಗಿರುವುದು ಕಂಡು ಬಂದರೆ, ವಿಮೆ ಪಾಲಿಸಿಗೆ ಆಯ್ಕೆ ಮಾಡುವುದು ಕಷ್ಟವಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಮರುಪಾವತಿ ಪಡೆಯುವಾಗ ಶುಲ್ಕ ವಿಧಿಸಬಹದು ಅಥವಾ ಕಡಿತಗೊಳಿಸಲೂಬಹುದು. ಅಥವಾ ಸಮೀಕ್ಷೆ ಮಾಡುವ ಪ್ರತಿನಿಧಿಯೇ ಪೂರ್ವ ನಿರ್ಧರಿತ ಕಡಿತಗೊಳಿಸುವಿಕೆಯನ್ನು ಹೊಂದಿಸಬಹುದು.

7. ಕಾರು ತಪಾಸಣೆ ಅಥವಾ ಸಮೀಕ್ಷೆ ಪೂರ್ಣಗೊಂಡ ನಂತರ, ನೀವು ಹೊಸ ಕಾರು ವಿಮೆ ಯೋಜನೆಯನ್ನು ಖರೀದಿಸಬಹುದು. ತಪಾಸಣೆಯು ದೀರ್ಘಾವಧಿಯವರೆಗೆ ಮಾನ್ಯವಾಗಿಲ್ಲದ ಕಾರಣ ತಪಾಸಣೆ ಮಾಡಿದ ತಕ್ಷಣ ನೀವು ಹೊಸ ಕಾರಿನ ಪಾಲಿಸಿಯನ್ನು ಖರೀದಿಸಬೇಕಾಗುತ್ತದೆ.

8. ಕೆಲ ವಿಮಾ ಕಂಪನಿಗಳು ಸ್ವಯಂ ತಪಾಸಣೆಯ ಅನುಕೂಲಗಳನ್ನು ನೀಡುತ್ತವೆ. ಏಕೆಂದರೆ ಸಮೀಕ್ಷಾ ಪ್ರತಿನಿಧಿಯು ಕಾರನ್ನು ಭೌತಿಕವಾಗಿ ಪರೀಕ್ಷಿಸಲು ಕಾಯದೇ ತಕ್ಷಣ ಪಾಲಿಸಿಯನ್ನು ನವೀಕರಿಸಬಹುದು.

9. ಹಲವಾರು ವಿಮಾ ಕಂಪನಿಗಳು ಆನ್‌ಲೈನ್‌ನಲ್ಲೇ ಅವಧಿ ಮೀರಿದ ಪಾಲಿಸಿಗಳನ್ನು ನವೀಕರಿಸುವ ಉತ್ತಮ ಆಯ್ಕೆಗಳನ್ನು ನೀಡುತ್ತವೆ. ಏಕೆಂದರೆ ಇದರ ಸಂಪೂರ್ಣ ಕಾರ್ಯ ವಿಧಾನವನ್ನು ಕೆಲವೇ ಗಂಟೆಗಳಲ್ಲಿ ಪೂರ್ಣಗೊಳಿಸಬಬಹದು. ಒಂದು ವೇಳೆ ನೀವು ಬೇರೆ ಕಂಪೆನಿಯಿಂದ ಹೊಸ ಪಾಲಿಸಿ ಖರೀದಿಸಲು ಬಯಸಿದರೆ, ಲಭ್ಯವಿರುವ ಮತ್ತು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಹೋಲಿಕೆ ಮಾಡಬಹುದು.

 ನವೀಕರಿಸುವುದು ಹೇಗೆ?

ನವೀಕರಿಸುವುದು ಹೇಗೆ?

ಕಂಪೆನಿಯ ವೆಬ್‌ಸೈಟ್‌ ಪ್ರವೇಶಿಸಿ, ಸ್ವಯಂ ತಪಾಸಣೆ ಆಯ್ಕೆ ತೆರೆಯುತ್ತದೆ. ಈ ಆಯ್ಕೆಯನ್ನು ಪೂರ್ಣಗೊಳಿಸಿದ ಬಳಿಕ, ಪೋರ್ಟಲ್‌ ಮೂಲಕ ಕಾರಿನ ಚಿತ್ರ ಹಾಗೂ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಲು ಕೇಳುತ್ತದೆ. ಅಪ್‌ಲೋಡ್‌ ಮಾಡಿದ ಬಳಿಕ ಅನುಮೋದನೆ ಮೇಲೆ ಕ್ಲಿಕ್‌ ಮಾಡಬೇಕು. ಅನುಮೋದನೆ ಕೋರಿದ ಬಳಿಕ, ಪಾಲಿಸಿಯನ್ನು ನವೀಕರಿಸುವ ಪಾವತಿಯನ್ನು ಆನ್‌ಲೈನ್‌ನಲ್ಲೇ ಮುಂದುವರಿಸಬೇಕು. ಪಾವತಿ ಪೂರ್ಣಗೊಂಡ ಬಳಿಕ ವಿಮಾದಾರರು ದೃಢೀಕರಣವನ್ನು ಕಳುಹಿಸುತ್ತಾರೆ.

 ವಿಮೆ ಪಾಲಿಸಿ ನವೀಕರಿಸಲು ಬೇಕಿರುವ ದಾಖಲೆಗಳು

ವಿಮೆ ಪಾಲಿಸಿ ನವೀಕರಿಸಲು ಬೇಕಿರುವ ದಾಖಲೆಗಳು

1. ವಾಹನ ನೋಂದಣಿ ಪ್ರಮಾಣಪತ್ರ (ಆರ್‌ಸಿ)
2. ಅವಧಿ ಮೀರಿದ ಕಾರು ವಿಮಾ ಪಾಲಿಸಿಯ ಪ್ರತಿ
3. ವಿಮೆ ಮಾಡಿದ ಕಾರಿಗೆ ಸಂಬಂಧಿಸಿದ ಆರ್‌ಟಿಒ ವಿಳಾಸ
4. ಕಾರಿನ ಮಾದರಿ ಸಂಖ್ಯೆ, ಕಾರಿನ ಮುಕ್ತಾಯ ಅವಧಿ, ಮೊದಲ ನೋಂದಣಿ ದಿನಾಂಕ, ನೋಂದಣಿಯ ಸ್ಥಳ, ವಿಮಾದಾರರ ಹೆಸರು ಇತ್ಯಾದಿ ವಿವರಗಳು.

 ಅವಧಿ ಮೀರಿದ ಪಾಲಿಸಿಯಿಂದಾಗುವ ಅನಾನುಕೂಲಗಳು

ಅವಧಿ ಮೀರಿದ ಪಾಲಿಸಿಯಿಂದಾಗುವ ಅನಾನುಕೂಲಗಳು

• ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳು ಕಾರು ವಿಮಾ ಪಾಲಿಸಿಯನ್ನು ಕಾನೂನುಬದ್ಧವಾಗಿ ಹೊಂದಿರಬೇಕು. ಒಂದು ವೇಳೆ ನಿಗದಿತ ದಿನಾಂಕದ ಒಳಗೆ ವಿಮೆ ನವೀಕರಿಸದೇ ಇದ್ದರೆ, ವಿಮೆ ಅವಧಿ ಅಮಾನ್ಯವಾಗುತ್ತದೆ. ಅವಧಿ ಮುಗಿದ ವಿಮೆಯೊಂದಿಗೆ ಕಾರು ಚಾಲನೆ ಮಾಡುವುದರಿಂದ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ.

• ಪಾಲಿಸಿ ಕಳೆದು ಹೋಗಿದ್ದಲ್ಲಿ, ಕಾರು ಅಪಘಾತಕ್ಕೀಡಾದ ಸಂದರ್ಭಗಳಲ್ಲಿ ನೀವು ಎಲ್ಲ ನಷ್ಟವನ್ನು ಭರಿಸಬೇಕಾಗುತ್ತದೆ. ವಿಮೆದಾರರು ಇದಕ್ಕೆ ಹೊಣೆಯಾಗಿರುವುದಿಲ್ಲ. ನಿಮ್ಮಿಂದ ಹಾನಿಗೊಳಗಾದ ವ್ಯಕ್ತಿಗೂ ನೀವೆ ನಷ್ಟ ಪಾವತಿಸಬೇಕಾಗುತ್ತದೆ.

• ನಿಮ್ಮ ʻನೋ ಕ್ಲೈಮ್ ಬೋನಸ್' ಅಂದರೆ ವಿಮಾ ಪೂರೈಕೆದಾರರನ್ನು ಅವಲಂಬಿಸಿ ಶೇ.5 ರಿಂದ ಶೇ.50ರ ವರೆಗೆ ನೀಡುವ ರಿಯಾಯಿತಿ. ಅದನ್ನು ನೀವು ಕಳೆದುಕೊಳ್ಳುತ್ತೀರಿ. ಕಾರು ವಿಮೆ ನವೀಕರಣ ಸಮಯದಲ್ಲಿ ನೀವು ಈ ಸೌಲಭ್ಯ ಹೊಂದಿರುತ್ತೀರಿ. ವಿಮಾದಾರರು ಬದಲಾದಲ್ಲಿ ಅದನ್ನು ವರ್ಗಾಯಿಸಬಹುದು. ಈ 'ನೋ ಕ್ಲೇಮ್ ಬೋನಸ್' ಪಡೆಯಲು, ಸಮಯಕ್ಕೆ ಸರಿಯಾಗಿ ನವೀಕರಿಸುವುದು ಮುಖ್ಯವಾಗಿದೆ. ಇದು ಸಮಗ್ರ ಕಾರು ವಿಮಾ ಪಾಲಿಸಿಯಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಒಂದು ವೇಳೆ ವಿಮೆ ಅಮಾನ್ಯಗೊಂಡು 3 ತಿಂಗಳ ಅವಧಿ ಮೀರಿದ್ದರೆ ಈ ಸೌಲಭ್ಯ ಸಿಗುವುದಿಲ್ಲ.

• ನಿಮ್ಮ ಅವಧಿ ಮೀರಿದ ಕಾರು ವಿಮಾ ಪಾಲಿಸಿಯನ್ನು ನೀವು ನವೀಕರಿಸಿದಾಗ, ನೀವು ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ʻನೋ ಕ್ಲೈಮ್ ಬೋನಸ್' ನೊಂದಿಗೆ ನವೀಕರಣದ ಸಮಯದಲ್ಲಿ ಅನ್ವಯಿಸಬಹುದಾದ ಇತರ ಸಂಭವನೀಯ ರಿಯಾಯಿತಿಗಳನ್ನು ಸಹ ನೀವು ಕಳೆದುಕೊಳ್ಳುತ್ತೀರಿ. ಆದ್ದರಿಂದ ಕಾರು ವಿಮಾ ಪಾಲಿಸಿಯ ಸಕಾಲಿಕ ನವೀಕರಣವು ಭವಿಷ್ಯದಲ್ಲಿ ಬಹಳಷ್ಟು ಕಾನೂನು ತೊಂದರೆಗಳು ಹಾಗೂ ಆರ್ಥಿಕ ತೊಂದರೆಗಳನ್ನು ತಪ್ಪಿಸಬಹುದು. ಹಾಗಾಗಿ ಪ್ರತಿಯೊಬ್ಬರು ಸಕಾಲಕ್ಕೆ ವಿಮೆ ಪಾಲಿಸಿಯನ್ನು ಮಾಡಿಸಿಕೊಳ್ಳಬೇಕು.

English summary

How to Renew Car Insurance Online? Here's a Steps in Kannada

How to Renew Car Insurance? Here's a Steps in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X