For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದೀರಾ? ಕ್ರಿಪ್ಟೋ ಆಸ್ತಿ ಸುರಕ್ಷಿತವಾಗಿ ಸಂಗ್ರಹಿಸಿಡುವುದು ಹೇಗೆ?

|

ಬೆಂಗಳೂರು, ಅಕ್ಟೋಬರ್ 19: ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದು ಇತ್ತೀಚೆಗೆ ಭಾರಿ ಜನಪ್ರಿಯವಾಗುತ್ತಿದೆ. ಹೂಡಿಕೆದಾರರು ಹಾಗೂ ಟ್ರೇಡರ್ಸ್ ಎರಡೂ ವಲಯಗಳಲ್ಲಿ ಈ ಕ್ರಿಪ್ಟೋ ಸಂಚಲನ ಮೂಡಿಸಿದೆ. ಆದರೆ ಹೀಗೆ ಕ್ರಿಪ್ಟೋಗಳಲ್ಲಿ ಹೂಡಿಕೆ ಮಾಡಿದವರು ಒಂದು ವಿಚಿತ್ರ ಸಮಸ್ಯೆಯನ್ನು ಎದುರಿಸಬೇಕಾಗುವುದನ್ನು ನಾವು ನೋಡುತ್ತೇವೆ. ಕ್ರಿಪ್ಟೋಗಳನ್ನು ಖರೀದಿಸಿದ ನಂತರ ಅವನ್ನು ಸುರಕ್ಷಿತವಾಗಿ ಹಾಗೂ ಬೇಕೆಂದಾಗ ಸಿಗುವ ಹಾಗೆ ಎಲ್ಲಿ ಸಂಗ್ರಹಿಸಿ ಇಡುವುದು ಎಂಬುದು ತಿಳಿಯದೆ ಅನೇಕರು ಗೊಂದಲಕ್ಕೀಡಾಗುತ್ತಾರೆ.

ಕೆಲ ವರ್ಷಗಳ ಹಿಂದೆ ಕ್ರಿಪ್ಟೋಗಳನ್ನು ಖರೀದಿಸಿದ ಕೋಟ್ಯಂತರ ಹೂಡಿಕೆದಾರರು ಅವನ್ನು ಎಲ್ಲಿ ಇಟ್ಟಿದ್ದೇವೆ ಎಂಬುದನ್ನು ಮರೆತು ಕಂಗಾಲಾಗಿದ್ದಾರೆ ಎಂದರೆ ನೀವು ನಂಬಲೇಬೇಕು. ಸದ್ಯ ಚಾಲ್ತಿಯಲ್ಲಿರುವ ಬಿಟ್ ಕಾಯಿನ್‌ಗಳ ಪೈಕಿ ಶೇ 20 ರಷ್ಟು ಕಾಯಿನ್‌ಗಳು ಒಂದೋ ಕಳೆದು ಹೋಗಿವೆ ಅಥವಾ ಯಾವುದೋ ಡಿಜಿಟಲ್ ವ್ಯಾಲೆಟ್ ಗಳಲ್ಲಿ ಸಿಕ್ಕಿಹಾಕಿಕೊಂಡಿವೆ ಎಂದರೆ ಈ ವಿಷಯದ ಗಂಭೀರತೆ ನಿಮಗೆ ಅರ್ಥವಾಗಿರಬಹುದು.

ಬಿಟ್ ಕಾಯಿನ್ ಬಗ್ಗೆ ನಿಮಗೆ ಗೊತ್ತಿರಬೇಕಾದ 14 ಸಂಗತಿಗಳುಬಿಟ್ ಕಾಯಿನ್ ಬಗ್ಗೆ ನಿಮಗೆ ಗೊತ್ತಿರಬೇಕಾದ 14 ಸಂಗತಿಗಳು

ನೀವು ಸುರಕ್ಷಿತವಾಗಿ ಇಟ್ಟುಕೊಂಡರೆ ಮಾತ್ರ ನಿಮ್ಮ ಕ್ರಿಪ್ಟೋ ಕರೆನ್ಸಿಗಳು ಸುರಕ್ಷಿತವಾಗಿರುತ್ತವೆ ಎಂಬುದು ಗೊತ್ತಿರಲಿ. ಹೀಗಾಗಿ ಹೂಡಿಕೆದಾರರು ಕ್ರಿಪ್ಟೋ ಕರೆನ್ಸಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಬಗ್ಗೆ ನಿಖರವಾದ ಮಾಹಿತಿ ಪಡೆಯುವುದು ಅತ್ಯಗತ್ಯ ಎನ್ನುತ್ತಾರೆ ಈ ಕ್ಷೇತ್ರದ ಹೂಡಿಕೆ ತಜ್ಞರು.

 ಕ್ರಿಪ್ಟೋ ವ್ಯಾಲೆಟ್ ಎಂದರೇನು?

ಕ್ರಿಪ್ಟೋ ವ್ಯಾಲೆಟ್ ಎಂದರೇನು?

ಕ್ರಿಪ್ಟೋ ವ್ಯಾಲೆಟ್ ಇದೊಂದು ವರ್ಚುವಲ್ ವ್ಯಾಲೆಟ್ ಆಗಿದ್ದು, ಈ ಕೆಳಗಿನ ಕಾರ್ಯಗಳನ್ನು ಮಾಡುತ್ತದೆ.

-ಕ್ರಿಪ್ಟೋ ಕರೆನ್ಸಿಗಳನ್ನು ಸುರಕ್ಷಿತವಾಗಿ ಕಳುಹಿಸಲು ಮತ್ತು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.
-ನಿಮ್ಮ ಪಬ್ಲಿಕ್ ಹಾಗೂ ಪ್ರೈವೇಟ್ ಕೀ ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ.
-ನಿಮ್ಮ ಬ್ಯಾಲೆನ್ಸ್ ಮೇಲೆ ನಿಗಾ ಇಡುತ್ತದೆ.

ರಹಸ್ಯ ಕೀಲಿ ಅಥವಾ ಸೀಕ್ರೆಟ್ ಕೀ ಗಳು ಬಿಟ್‌ಕಾಯಿನ್‌ಗಳ ಒಡೆತನವನ್ನು ಸಾಬೀತುಪಡಿಸುವ ಏಕೈಕ ಸಾಧನವಾಗಿವೆ. ಯಾವುದೇ ಒಂದು ಪ್ರೈವೇಟ್ ಕೀ 256-ಬಿಟ್ ಸಂಖ್ಯೆಯಾಗಿದ್ದು, ಇದನ್ನು ಒಂದಕ್ಕಿಂತ ಹೆಚ್ಚು ರೂಪದಲ್ಲಿ ಬಳಸಬಹುದು. ಹೆಕ್ಸಾಡೆಸಿಮಲ್ ರೂಪದಲ್ಲಿರುವ ಪ್ರೈವೇಟ್ ಕೀ ಒಂದರ ಉದಾಹರಣೆ ಇಲ್ಲಿದೆ ನೋಡಿ:

ಹೆಕ್ಸಾಡೆಸಿಮಲ್‌ನಲ್ಲಿ 256 ಬಿಟ್ಸ್ ಎಂದರೆ 32 ಬೈಟ್‌ಗಳಾಗಿರುತ್ತದೆ ಅಥವಾ 0 ಯಿಂದ 9 ಅಥವಾ A ದಿಂದ F ವರೆಗೆ 64 ಅಕ್ಷರಗಳನ್ನು ಹೊಂದಿರುತ್ತದೆ.

ಅದು ಹೀಗಿರಬಹುದು: E9873D79C6D87DC0FB6A5778633389F4453213303DA61F20BD67FC233AA3326

 ಕ್ರಿಪ್ಟೋ ವ್ಯಾಲೆಟ್ ಏಕೆ ಅಗತ್ಯ?

ಕ್ರಿಪ್ಟೋ ವ್ಯಾಲೆಟ್ ಏಕೆ ಅಗತ್ಯ?

ವ್ಯಾಲೆಟ್ ಇಲ್ಲದೆ ನೀವು ಕ್ರಿಪ್ಟೋ ಕರೆನ್ಸಿಯನ್ನು ಮಾರಾಟ ಮಾಡಲು, ವರ್ಗಾವಣೆ ಮಾಡಲು ಅಥವಾ ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ಕ್ರಿಪ್ಟೋ ವ್ಯಾಲೆಟ್ ಬೇಕೇ ಬೇಕು.

ಕ್ರಿಪ್ಟೋ ವ್ಯಾಲೆಟ್ ಮತ್ತು ಪೇಮೆಂಟ್ ವ್ಯಾಲೆಟ್ ಮಧ್ಯೆ ವ್ಯತ್ಯಾಸವೇನು?
ಕ್ರಿಪ್ಟೋ ವ್ಯಾಲೆಟ್ ಒಂದು ವಿಶಿಷ್ಟ ಕೆಲಸಕ್ಕಾಗಿಯೇ ಇರುವ ವ್ಯಾಲೆಟ್ ಆಗಿದೆ.

-ಇದು ಕ್ರಿಪ್ಟೋ ಕರೆನ್ಸಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ.
-BTC, ETH, NFT ಮತ್ತು ಟೋಕನ್‌ಗಳನ್ನು ಇಟ್ಟುಕೊಳ್ಳುತ್ತದೆ. ಇವನ್ನು ಸಂಗ್ರಹಿಸುವುದು ಒಂದು ರೀತಿಯ ಕಲೆಯೂ ಹೌದು.
- ಗಡಿಯಾಚೆಯ ಪಾವತಿಗಳನ್ನು ಸಾಧ್ಯವಾಗಿಸುತ್ತದೆ.
- ವ್ಯವಹಾರಗಳು ಹುಸಿ ಅನಾಮಧೇಯವಾಗಿರುತ್ತವೆ.

ಕ್ರಿಪ್ಟೋಟೆಕ್ ಉದ್ಯಮದಿಂದ 184 ಬಿಲಿಯನ್ ಡಾಲರ್ ಮೌಲ್ಯವರ್ಧನೆಕ್ರಿಪ್ಟೋಟೆಕ್ ಉದ್ಯಮದಿಂದ 184 ಬಿಲಿಯನ್ ಡಾಲರ್ ಮೌಲ್ಯವರ್ಧನೆ

 ಪೇಮೆಂಟ್ ವ್ಯಾಲೆಟ್‌ಗಳು (ಪೇಟಿಎಂ, ಯುಪಿಐ)

ಪೇಮೆಂಟ್ ವ್ಯಾಲೆಟ್‌ಗಳು (ಪೇಟಿಎಂ, ಯುಪಿಐ)

- ಕೇವಲ ಒಂದು ವಿಧದ ಅಧಿಕೃತ ಕರೆನ್ಸಿಯನ್ನು ಹೊಂದಿರುತ್ತದೆ. (ಭಾರತೀಯ ರೂಪಾಯಿ)
- ಗಡಿಗಳಾಚೆಗೆ(Cross Border) ಪಾವತಿ ಮಾಡುವುದು ಕಷ್ಟಕರ. (ಈ ವ್ಯವಸ್ಥೆ ಇನ್ನಷ್ಟೇ ಜಾರಿಯಾಗಬೇಕಿದೆ.)
- ಈ ಎಲ್ಲ ವ್ಯವಹಾರಗಳ ಮೇಲೆ ಸರ್ಕಾರ ನಿಗಾ ಇಟ್ಟಿರುತ್ತದೆ.
- ಎದುರು ಪಾರ್ಟಿಗೆ ವೈಯಕ್ತಿಕ ಮಾಹಿತಿಗಳು ಹಂಚಿಕೊಳ್ಳಲ್ಪಡುತ್ತವೆ.

 ಕ್ರಿಪ್ಟೋ ವ್ಯಾಲೆಟ್ ಎಲ್ಲಿ ಸಿಗುತ್ತದೆ?

ಕ್ರಿಪ್ಟೋ ವ್ಯಾಲೆಟ್ ಎಲ್ಲಿ ಸಿಗುತ್ತದೆ?

ನೀವು ಹಲವಾರು ವಿಧಾನಗಳಲ್ಲಿ ಕ್ರಿಪ್ಟೋ ವ್ಯಾಲೆಟ್ ಒಂದನ್ನು ಪಡೆಯಬಹುದು. ಕ್ರಿಪ್ಟೋ ಎಕ್ಸಚೇಂಜ್‌ಗಳಿಂದ ಹಿಡಿದು ಹಾರ್ಡವೇರ್ ವ್ಯಾಲೆಟ್‌ಗಳು ಮತ್ತು ಕೋಲ್ಡ್ ವ್ಯಾಲೆಟ್‌ಗಳನ್ನು ಪಡೆಯಬಹುದು. ನಿಮ್ಮ ಕ್ರಿಪ್ಟೋ ಕರೆನ್ಸಿಯನ್ನು ವಿಭಿನ್ನ ಸಾಧನಗಳಲ್ಲಿ ಸಂಗ್ರಹಿಸಿ ಇಡಬಹುದು.

 ಪೇಪರ್ ವ್ಯಾಲೆಟ್ಸ್

ಪೇಪರ್ ವ್ಯಾಲೆಟ್ಸ್

ನಿಮ್ಮ ಪ್ರೈವೇಟ್ ಕೀಗಳನ್ನು ನಿಯಂತ್ರಿಸಲು, ನೀವು ಪೇಪರ್ ವ್ಯಾಲೆಟ್‌ಗಳಲ್ಲಿ ಇವನ್ನು ಸಂಗ್ರಹಿಸಬಹುದು. ಇವನ್ನು ಕೋಲ್ಡ್ ವ್ಯಾಲೆಟ್ ಎಂದೂ ಕರೆಯಲಾಗುತ್ತದೆ. ಸಾಫ್ಟವೇರ್‌ನಿಂದ ರಚನೆಯಾದ, ಡಿಜಿಟಲ್ ಫೈಲ್ಸ್ ಹಾಗೂ ರಿಯಲ್ ಫಿಸಿಕಲ್ ಪೇಪರ್ ವ್ಯಾಲೆಟ್ಸ್ ಹೀಗೆ ಹಲವಾರು ಬಗೆಯ ಪೇಪರ್ ವ್ಯಾಲೆಟ್‌ಗಳಿವೆ. ಇವುಗಳ ಹಲವಾರು ಪ್ರತಿಗಳನ್ನು ತಯಾರಿಸಿ ವಿಭಿನ್ನ ಸ್ಥಳಗಳಲ್ಲಿ ಸಂಗ್ರಹಿಸಿಡಬಹುದು.

 ಸಾಫ್ಟವೇರ್ ವ್ಯಾಲೆಟ್ ಮತ್ತು ಸೆಂಟ್ರಲೈಸ್ಡ್ ವ್ಯಾಲೆಟ್‌ಗಳು

ಸಾಫ್ಟವೇರ್ ವ್ಯಾಲೆಟ್ ಮತ್ತು ಸೆಂಟ್ರಲೈಸ್ಡ್ ವ್ಯಾಲೆಟ್‌ಗಳು

ಸಾಫ್ಟವೇರ್ ವ್ಯಾಲೆಟ್‌ಗಳು ನಿಮ್ಮ ಕ್ರಿಪ್ಟೋ ಕರೆನ್ಸಿಯನ್ನು ಸಂಗ್ರಹಿಸಿ ಇಡುವ ಅತ್ಯಾಧುನಿಕ ಸಾಧನವಾಗಿವೆ. ನಿಮ್ಮ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಹೀಗೆ ಯಾವುದೇ ಸಾಧನದಿಂದಾದರೂ ನೀವು ಇವನ್ನು ಬಳಸಬಹುದು. ಸೆಂಟ್ರಲೈಸ್ಡ್ ವ್ಯಾಲೆಟ್‌ಗಳನ್ನು ಎಕ್ಸಚೇಂಜ್ ವ್ಯಾಲೆಟ್‌ಗಳೆಂದಲೂ ಕರೆಯಲಾಗುತ್ತದೆ. ಪ್ರತಿಯೊಂದು ಕ್ರಿಪ್ಟೋ ಕರೆನ್ಸಿ ಎಕ್ಸಚೇಂಜ್ ತನ್ನದೆಯಾದ ವಿಶಿಷ್ಟ ವ್ಯಾಲೆಟ್ ವ್ಯವಸ್ಥೆ ಹೊಂದಿದ್ದು, ನೀವಿದರಲ್ಲಿ ನಿಮ್ಮ ಕ್ರಿಪ್ಟೋ ವನ್ನು ಸುರಕ್ಷಿತವಾಗಿ ಸಂಗ್ರಹಿಸಿ ಇಡಬಹುದು.

 ಸೆಂಟ್ರಲೈಸ್ಡ್ ವ್ಯಾಲೆಟ್‌ಗಳ ಅನುಕೂಲತೆಗಳು

ಸೆಂಟ್ರಲೈಸ್ಡ್ ವ್ಯಾಲೆಟ್‌ಗಳ ಅನುಕೂಲತೆಗಳು

ಬಳಕೆದಾರ ಸ್ನೇಹಿ:
- ವೆಬ್ ಅಥವಾ ಡೆಸ್ಕ್‌ಟಾಪ್ ಆಪ್ ಮೂಲಕ ಸುಲಭವಾಗಿ ಬಳಸಬಹುದಾದ ಯೂಸರ್ ಇಂಟರ್ಫೇಸ್.
- ಯಾವುದೇ ಸಮಯದಲ್ಲಾದರೂ ಕೈಗೆ ಸಿಗುತ್ತವೆ.

ನಂಬಲರ್ಹ:
-ಕ್ರಿಪ್ಟೋ ಕರೆನ್ಸಿಗಳು ಅತ್ಯಾಧುನಿಕ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿವೆ.
- ಹೆಚ್ಚುವರಿ ಸುರಕ್ಷತಾ ಮಟ್ಟ, ವಿಶ್ವಾಸಾರ್ಹವಾಗಿದ್ದು, ವ್ಯವಹಾರ ಮತ್ತು ಟ್ರೇಡಿಂಗ್ ಮಾಡುವಾಗ ಯಾವತ್ತೂ ಕುಸಿಯದ ವ್ಯವಸ್ಥೆಯನ್ನು ಇವು ಹೊಂದಿವೆ.

- ಪ್ರತಿಯೊಂದು ಅಪ್ ಗ್ರೇಡ್ ಅಥವಾ ಅಪ್ಡೇಟ್ ಅನ್ನು ಎಕ್ಸಚೆಂಜ್ ಗಳೇ ನಿರ್ವಹಿಸುತ್ತವೆ.

ಕಡಿಮೆ ನಿರ್ವಹಣಾ ಖರ್ಚು
- ಇವುಗಳ ವಹಿವಾಟು ಶುಲ್ಕಗಳು ಬಹುತೇಕ ನಗಣ್ಯವಾಗಿವೆ.

 

 ಹಾರ್ಡವೇರ್ ವ್ಯಾಲೆಟ್‌ಗಳು

ಹಾರ್ಡವೇರ್ ವ್ಯಾಲೆಟ್‌ಗಳು

ಹಾರ್ಡವೇರ್ ವ್ಯಾಲೆಟ್‌ಗಳು ಕ್ರಿಪ್ಟೋ ಕರೆನ್ಸಿಗಳನ್ನು ಸಂಗ್ರಹಿಸುವ ಮತ್ತೊಂದು ಜನಪ್ರಿಯ ವಿಧಾನವಾಗಿದೆ. ಇವು ಭೌತಿಕ ಸಾಧನಗಳಾಗಿದ್ದು, ವಹಿವಾಟು ನಡೆಸುವ ಅಗತ್ಯವಿದ್ದಾಗ ಇವನ್ನು ಕಂಪ್ಯೂಟರಿಗೆ ಕನೆಕ್ಟ್ ಮಾಡಿ ಬಳಸಬಹುದಾಗಿದೆ. ಆದರೆ ಅಧಿಕೃತ ತಯಾರಕರಿಂದ ತಯಾರಾದ ಸಾಧನಗಳನ್ನು ಮಾತ್ರ ಬಳಸುವುದು ಸೂಕ್ತ.

 ನಿಮ್ಮ ಕ್ರಿಪ್ಟೋ ಆಸ್ತಿಗಳನ್ನು ಸಂರಕ್ಷಿಸುವುದು ಹೇಗೆ?

ನಿಮ್ಮ ಕ್ರಿಪ್ಟೋ ಆಸ್ತಿಗಳನ್ನು ಸಂರಕ್ಷಿಸುವುದು ಹೇಗೆ?

ನೀವು ಅಥವಾ ನಿಮ್ಮ ಕಂಪನಿಯು ಕ್ರಿಪ್ಟೋ ವಹಿವಾಟುಗಳನ್ನು ನಡೆಸುತ್ತಿದ್ದರೆ ಅವುಗಳ ಸುರಕ್ಷತೆಯ ಬಗ್ಗೆ ನೀವು ಗಂಭೀರವಾಗಿರುವುದು ಅಗತ್ಯ.

ಒಂದು ವೇಳೆ ನೀವು ದೊಡ್ಡ ಮೊತ್ತದ ಕ್ರಿಪ್ಟೋ ವಹಿವಾಟುಗಳನ್ನು ನಡೆಸುತ್ತಿದ್ದರೆ, ನಿಮ್ಮ ಪ್ರೈವೇಟ್ ಕೀ ಗಳು ನಿಮಗೆ ಸಿಗುವಂತೆ ಅವನ್ನು ವ್ಯಾಲೆಟ್‌ಗಳಲ್ಲಿ ಸಂಗ್ರಹಿಸಿ ಇಡಬೇಕು.

ಹ್ಯಾಕಿಂಗ್ ಪ್ರಯತ್ನಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದರಿಂದ ನೀವು ನಿಮ್ಮ ಕ್ರಿಪ್ಟೋ ಆಸ್ತಿಗಳನ್ನು ಒಂದಕ್ಕಿಂತ ಹೆಚ್ಚು ವ್ಯಾಲೆಟ್‌ಗಳಲ್ಲಿ ಸಂಗ್ರಹಿಸುವುದು ಸೂಕ್ತ.

ನಿಮ್ಮ ವ್ಯಾಲೆಟ್ ಅನ್ನು ಎನ್‌ಕ್ರಿಪ್ಟ್ ಮಾಡುವುದು ಸುರಕ್ಷಿತವಾಗಿರುತ್ತದೆ. ಹೀಗೆ ಮಾಡಿದರೆ ನಿಮಗೆ ಗೊತ್ತಿಲ್ಲದೆ ಬೇರೊಬ್ಬರು ನಿಮ್ಮ ಹಣವನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

ಆಫ್ಲೈನ್ ವ್ಯಾಲೆಟ್‌ಗಳನ್ನು ಬಳಸುತ್ತಿದ್ದರೆ ಅವುಗಳ ಸಾಫ್ಟವೇರ್‌ಗಳು ಯಾವಾಗಲೂ ಅಪ್ಡೇಟ್ ಆಗಿರುವಂತೆ ನಿಗಾ ವಹಿಸಬೇಕು.

ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದು ಹಾಗೂ ಅವನ್ನು ಸಂಗ್ರಹಿಸುವುದು ನಿಮ್ಮ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಕ್ರಿಪ್ಟೋ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿರುವುದರಿಂದ ಪ್ರತಿಯೊಂದು ಹಂತದಲ್ಲಿಯೂ ನೀವು ಹೊಸದೇನನ್ನಾದರೂ ಕಲಿಯುತ್ತಲೇ ಇರುತ್ತೀರಿ.

English summary

How to safeguard Crypto Assets? How to store cryptocurrencies safely?

How to securely store your Crypto Assets? Here is step by step guide in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X