For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ನಲ್ಲಿ SB A/C ವರ್ಗಾಯಿಸುವುದು ಹೇಗೆ?

|

ನೀವು ಇತ್ತೀಚೆಗಷ್ಟೇ ಒಂದು ಪ್ರದೇಶದಿಂದ ಮತ್ತೊಂದು ಕಡೆ ಸ್ಥಳಾಂತರಗೊಂಡಿದ್ರೆ ಹೊಸ ಬ್ಯಾಂಕ್‌ ಖಾತೆ ತೆರೆಯುವ ಬದಲು, ಹಳೆಯ ಬ್ಯಾಂಕ್‌ ಖಾತೆಯನ್ನೇ ಮತ್ತೊಂದು ಶಾಖೆಗೆ ಹೇಗೆ ವರ್ಗಾಯಿಸುವುದು ಎಂದು ನೋಡುತ್ತಿರಬಹುದು. ವಾಸ್ತವವಾಗಿ ನಿಮ್ಮ ನಿವಾಸದ ಬಳಿ ಇರುವ ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆದು ಕನಿಷ್ಟ ಬ್ಯಾಲೆನ್ಸ್ ನಿರ್ವಹಣೆ, ಹೊಸ ಖಾತೆಯಲ್ಲಿ KYC ವಿಧಾನ ಮುಂತಾದ ಔಪಚಾರಿಕ ವಿಧಾನಗಳನ್ನು ಪೂರೈಸುವ ಬದಲು, ಬ್ಯಾಂಕ್ ಖಾತೆಯನ್ನು ವರ್ಗಾಯಿಸುವುದು ಜಾಣತನ.

ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸುವುದು ತುಂಬಾ ಸುಲಭವಾಗಿದೆ. ಲ್ಯಾಪ್‌ಟಾಪ್, ಮೊಬೈಲ್‌ ಮೂಲಕವೇ ನಿಮ್ಮ ಉಳಿತಾಯ ಖಾತೆಯನ್ನ ಮತ್ತೊಂದು ಶಾಖೆಗೆ ವರ್ಗಾಯಿಸಬಹುದು. ಅಂತೆಯೇ SBI ಉಳಿತಾಯ ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾಯಿಸಲು ಬ್ಯಾಂಕ್‌ಗೆ ಹೋಗಿ ಅರ್ಜಿ ಹಿಡಿದು ಸಾಲುಗಟ್ಟಿ ನಿಲ್ಲಬೇಕಾಗಿಲ್ಲ . ಬದಲಿಗೆ ಈ ಕೆಳಗಿನ ವಿಧಾನ ಪಾಲಿಸಿದರೆ ಸಾಕು ನಿಮ್ಮ SBI ಉಳಿತಾಯ ಖಾತೆಯನ್ನು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಬಹುದು.

www.onlinesbi.com ಗೆ ಭೇಟಿ ನೀಡಿ

www.onlinesbi.com ಗೆ ಭೇಟಿ ನೀಡಿ

SBI ಉಳಿತಾಯ ಖಾತೆಯನ್ನು ವರ್ಗಾಯಿಸಲು ಮೊದಲು www.onlinesbi.com ಗೆ ಭೇಟಿ ನೀಡಿ. ಮುಖ್ಯ ಪೇಜ್‌ನಲ್ಲೇ 'Personal Banking' ವಿಭಾಗದಲ್ಲಿ User Name ಮತ್ತು Password ಹಾಕಿ ಲಾಗಿನ್ ಆಗಿ. ಒಂದು ವೇಳೆ ನೆಟ್ ಬ್ಯಾಂಕಿಂಗ್ ಆ್ಯಕ್ಟಿವೇಟ್ ಆಗಿರದಿದ್ದರೆ 'New User/Registration' ಆಯ್ಕೆ ಗೆ ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಿ

ಲಾಗಿನ್ ಆದ ಬಳಿಕ ಏನು ಮಾಡಬೇಕು?

ಲಾಗಿನ್ ಆದ ಬಳಿಕ ಏನು ಮಾಡಬೇಕು?

'Personal Banking' ವಿಭಾಗದಲ್ಲಿ ಲಾಗಿನ್ ಆದ ಬಳಿಕ ಪೇಜ್ ಮೇಲ್ಬಾಗದಲ್ಲಿ 'E-Service' ಆಯ್ಕೆ ಕಂಡು ಬರುತ್ತದೆ. ಅದರಲ್ಲಿ ' Transfer of saving account' ಆಯ್ಕೆಯನ್ನು ಕ್ಲಿಕ್ ಮಾಡಿ, ಬಳಿಕ ಎಸ್‌ಬಿಐನಲ್ಲಿ ಯಾವ ಖಾತೆಯನ್ನು ವರ್ಗಾವಣೆ ಮಾಡಬೇಕು ಎಂದು ಆಯ್ಕೆ ಮಾಡಿ. ಒಂದು ವೇಳೆ ಒಂದೇ ಉಳಿತಾಯ ಇದ್ದರೆ ಅದು ಪೂರ್ವನಿಯೋಜಿತವಾಗಿ ಆಯ್ಕೆ ಮಾಡಲಾಗುತ್ತದೆ.

ಬ್ಯಾಂಕ್ ಶಾಖೆಯ Code ತಿಳಿದಿರಬೇಕು

ಬ್ಯಾಂಕ್ ಶಾಖೆಯ Code ತಿಳಿದಿರಬೇಕು

ನಿಮ್ಮ ಖಾತೆಯನ್ನು ವರ್ಗಾಯಿಸುವಾಗ, ನೀವು ಯಾವ ಶಾಖೆಗೆ ವರ್ಗಾಯಿಸುತ್ತಿರೋ ಆ ಬ್ಯಾಂಕಿನ Code (ಸಂಕೇತ) ತಿಳಿದಿರಬೇಕು. 'Transfer of saving account' ಆಯ್ಕೆಯಲ್ಲಿ ನೀವು ನಿಮ್ಮ 'Account' ಆಯ್ಕೆ ಮಾಡಿದ ಬಳಿಕ ವರ್ಗಾವಣೆಯಾಗುವ ಶಾಖೆಯ code ಅಪಡೇಟ್ ಮಾಡಬೇಕು. ಬಳಿಕ ಬ್ಯಾಂಕಿನ ವಿಳಾಸವು ಅಪ್‌ಡೇಟ್ ಆಗುತ್ತದೆ. ಆ ಮೂಲಕ ಸರಿಯಾಗಿದೆಯೇ ಎಂದು ಪರೀಕ್ಷಿಸಿ. ಬಳಿಕ ನಿಯಮಗಳು ಮತ್ತು ಷರತ್ತುಗಳನ್ನು ಓದಿ ನಂತರ Submit ಆಯ್ಕೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಖಾತೆಯ ವರ್ಗಾವಣೆ ಮಾಹಿತಿ ಸ್ಕ್ರೀನ್ ನಲ್ಲಿ ತೋರಿಸುತ್ತದೆ. ಎಲ್ಲವೂ ಸರಿಯಾಗಿದೆಯೇ ಎಂದು ಪರೀಕ್ಷಿಸಿದ ಬಳಿಕ Confirm ಆಯ್ಕೆ ಕ್ಲಿಕ್ ಮಾಡಿ.

ರಿಜಿಸ್ಟರ್ ಆದ ಮೊಬೈಲ್‌ನಿಂದ OTP ದೃಢೀಕರಿಸಿ

ರಿಜಿಸ್ಟರ್ ಆದ ಮೊಬೈಲ್‌ನಿಂದ OTP ದೃಢೀಕರಿಸಿ

Confirm ಆಯ್ಕೆ ಕ್ಲಿಕ್ ಮಾಡಿದ ಬಳಿಕ ನಿಮ್ಮ ಉಳಿತಾಯ ಖಾತೆಗೆ ಲಿಂಕ್ ಆಗಿರುವ ಮೊಬೈಲ್‌ಗೆ OTP ಸಂದೇಶ ಬರುತ್ತದೆ. Confirm ಬಳಿ ಖಾಲಿ ಇರುವ ಜಾಗದಲ್ಲಿ OTP ಸಂದೇಶ ಉಲ್ಲೇಖಿಸಿ, ಬಳಿಕ Confirm ಕ್ಲಿಕ್ ಮಾಡಿ. ನಂತರ ನಿಮ್ಮ ಖಾತೆ ವರ್ಗಾವಣೆ ವಿನಂತಿಯನ್ನು ಯಶಸ್ವಿಯಾಗಿ ನೋಂದಾಯಿಸಲಾಗಿದೆ ಎಂಬ ಸಂದೇಶವನ್ನು ಸ್ಕ್ರೀನ್ ನಲ್ಲಿ ತೋರಿಸುತ್ತದೆ.

ಎಷ್ಟು ದಿನಗಳಲ್ಲಿ ಖಾತೆ ವರ್ಗಾವಣೆ ಆಗುತ್ತದೆ?

ಎಷ್ಟು ದಿನಗಳಲ್ಲಿ ಖಾತೆ ವರ್ಗಾವಣೆ ಆಗುತ್ತದೆ?

ರಜಾ ದಿನಗಳನ್ನು ಹೊರತುಪಡಿಸಿ 3 ರಿಂದ 4 ಬ್ಯಾಂಕ್ ವ್ಯವಹಾರ ದಿನಗಳಲ್ಲಿ ನಿಮ್ಮ ಉಳಿತಾಯ ಖಾತೆಯು ಮತ್ತೊಂದು ಶಾಖೆಗೆ ವರ್ಗಾವಣೆ ಆಗುತ್ತದೆ. ಮತ್ತು ನೆಟ್ ಬ್ಯಾಂಕಿಂಗ್ ಪೇಜ್‌ನಲ್ಲಿ 'History' ಆಯ್ಕೆಯಲ್ಲಿ ವರ್ಗಾವಣೆಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

English summary

How To Transfer SBI Savings Account To Another Branch Through Online

These are the steps to follow To transfer sbi saving account to antoher branch through online
Story first published: Sunday, November 10, 2019, 14:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X