For Quick Alerts
ALLOW NOTIFICATIONS  
For Daily Alerts

ಆಧಾರ್‌ ಕಾರ್ಡ್‌ಗೆ ನಿಮ್ಮ ಫೋಟೋ ಅಪ್‌ಡೇಟ್ ಮಾಡುವುದು ಹೇಗೆ?

|

ದೇಶದಲ್ಲಿ ಪ್ರಮುಖ ದಾಖಲೆಗಳ ಪೈಕಿ ಆಧಾರ್ ಕಾರ್ಡ್ ಕೂಡಾ ಒಂದಾಗಿದೆ. ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡುವ ಈ 12 ಡಿಜಿಟ್ ಅಂಕಿಗಳ ದಾಖಲೆಯೇ ಆಧಾರ್ ಕಾರ್ಡ್ ಆಗಿದ್ದು, ಹುಟ್ಟಿನಿಂದ ಸಾವಿನವರೆಗೂ ಅತೀ ಪ್ರಮುಖ ದಾಖಲೆ ಇದಾಗಿದೆ. ಭಾರತ ಸರ್ಕಾರ ಈ ಕಾರ್ಡ್ ಅನ್ನು ಜಾರಿಗೆ ತಂದಿದೆ.

 

ನಾವು ಸರ್ಕಾರದ ಯಾವುದೇ ಯೋಜನೆಗಳ ಫಲವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ. ಹಾಗೆಯೇ ನಾವು ಶಾಲೆ, ಕಾಲೇಜುಗಳಿಗೆ ಸೇರ್ಪಡೆಯಾಗುವ ಫಾರ್ಮ್ ಅನ್ನು ಭರ್ತಿ ಮಾಡುವ ಸಂದರ್ಭದಲ್ಲಿಯೂ ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕಾಗಿದೆ. ಇನ್ನು ಬೇರೆ ಬ್ಯಾಂಕ್, ತೆರಿಗೆ, ಇತರೆ ಯಾವುದೇ ಕಾರ್ಯಗಳಿಗೂ ಆಧಾರ್ ಕಾರ್ಡ್ ಎಂಬುವುದು ಪ್ರಮುಖ ದಾಖಲೆಯಾಗಿ ಮಾರ್ಪಟ್ಟಿದೆ.

 

ಉಮಂಗ್ ಆಪ್‌ನಲ್ಲಿ 4 ಆಧಾರ್ ಸೇವೆ ಲಭ್ಯ, ಏನಿದು?ಉಮಂಗ್ ಆಪ್‌ನಲ್ಲಿ 4 ಆಧಾರ್ ಸೇವೆ ಲಭ್ಯ, ಏನಿದು?

ನಮ್ಮ ಆಧಾರ್ ಕಾರ್ಡ್ ಸಂಖ್ಯೆಯು ನಮ್ಮ ಸಾವಿನವರೆಗೂ ಬದಲಾವಣೆ ಆಗಲ್ಲ. ಆದರೆ ಆಧಾರ್ ಕಾರ್ಡ್‌ನಲ್ಲಿನ ಫೋಟೋವನ್ನು ನಾವು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿದೆ. ನಮ್ಮ ಮಾಹಿತಿಯನ್ನು ನಾವು ಕಾಲಕ್ಕೆ ತಕ್ಕುದಾಗಿ ಅಪ್‌ಡೇಟ್ ಮಾಡಲು ಕೂಡಾ ಸಾಧ್ಯವಿದೆ. ನಾವು ನಮ್ಮ ಮನೆಯ ಲೋಕೇಷನ್, ಮೊಬೈಲ್ ಸಂಖ್ಯೆ, ಫೋಟೋವನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಆಧಾರ್‌ ಕಾರ್ಡ್‌ಗೆ ನಿಮ್ಮ ಫೋಟೋ ಅಪ್‌ಡೇಟ್ ಮಾಡುವುದು ಹೇಗೆ?

ನಾವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆಧಾರ್‌ ಕಾರ್ಡ್‌ನಲ್ಲಿನ ನಮ್ಮ ಫೋಟೋವನ್ನು ಅಪ್‌ಡೇಟ್ ಮಾಡಲು ವಿಶಿಷ್ಟ ಗುರುತಿನ ಪ್ರಾಧಿಕಾರವು ನಮಗೆ ಅವಕಾಶ ನೀಡುತ್ತದೆ. ನಾವು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಕೂಡಾ ಈ ಕಾರ್ಯವನ್ನು ಮಾಡಬಹುದಾಗಿದೆ. ಆನ್‌ಲೈನ್‌ನಲ್ಲಿ ಕೂಡಾ ಆಧಾರ್‌ನಲ್ಲಿನ ನಮ್ಮ ಫೋಟೋವನ್ನು ಅಪ್‌ಡೇಟ್ ಅಥವಾ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿದೆ. ನಾವು ಹೇಗೆ ಆನ್‌ಲೈನ್‌ ಮೂಲಕ ಛಾಯಾಚಿತ್ರ ಬದಲಾವಣೆ ಮಾಡುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ. ಮುಂದೆ ಓದಿ....

ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್‌ ಮಾಡುವುದು ಹೇಗೆ?ಆಧಾರ್ ಕಾರ್ಡ್ ಬಳಸಿ ಬ್ಯಾಂಕ್ ಬ್ಯಾಲೆನ್ಸ್ ಚೆಕ್‌ ಮಾಡುವುದು ಹೇಗೆ?

ಆಧಾರ್ ಫೋಟೋ ಹೀಗೆ ಬದಲಾಯಿಸಿ

ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ
ಹಂತ 2: Aadhaar enrollment form ಅನ್ನು ಸರ್ಚ್ ಮಾಡಿ ಅದನ್ನು ಡೌನ್‌ಲೋಡ್ ಮಾಡಿ
ಹಂತ 3: ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಅದನ್ನು ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ಕೇಂದ್ರಕ್ಕೆ ಸಲ್ಲಿಕೆ ಮಾಡಿ
ಹಂತ 4: ಆಧಾರ್ ಕಾರ್ಡ್ ಯಾರದ್ದೋ ಅವರು ಹಾಜರಿರಬೇಕು. ಅವರ ಬಯೋಮೆಟ್ರಿಕ್ ಮಾಹಿತಿ ಪರಿಶೀಲನೆ ಮಾಡಲಾಗುತ್ತದೆ
ಹಂತ 5: ನಿಮ್ಮ ಹೊಸ ಫೋಟೋವನ್ನು ತೆಗೆಯಲಾಗುತ್ತದೆ.
ಹಂತ 6: ಇದಕ್ಕಾಗಿ ನಿಮಗೆ 100 ರೂಪಾಯಿ + ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ
ಹಂತ 7: ನಿಮ್ಮ ದೃಢೀಕರಣ ಪತ್ರವನ್ನು ನೀಡಲಾಗುತ್ತದೆ. ಇದರಲ್ಲಿ ಅಪ್‌ಡೇಟ್ ರಿಕ್ವೆಸ್ಟ್ ಸಂಖ್ಯೆ (ಯುಆರ್‌ಎನ್) ಇರುತ್ತದೆ

ನೀವು ಈ ಯುಆರ್‌ಎನ್ ಬಳಕೆ ಮಾಡಿಕೊಂಡು ಆಧಾರ್ ಅಪ್‌ಡೇಟ್ ಸ್ಟೇಟಸ್ ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲನೆ ಮಾಡಲು ಸಾಧ್ಯವಾಗಲಿದೆ. ಆಧಾರ್ ಫೋಟೋ ಅಪ್‌ಡೇಟ್ ಸುಮಾರು 90 ದಿನಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಈ ಪ್ರಕ್ರಿಯೆ ಪೂರ್ಣವಾದ ಬಳಿಕ ನೀವು ಅಧಿಕೃತ ವೆಬ್‌ಸೈಟ್‌ನಿಂದ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

English summary

How to Update Photo on Aadhaar Card, Steps Here in Kannada

The Aadhaar Card is a mandatory identity card for all Indian citizens. Here's a steps you should follow to update the photo on your Aadhaar Card.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X