For Quick Alerts
ALLOW NOTIFICATIONS  
For Daily Alerts

ಎಸ್‌ಬಿಐನ ಒಟಿಪಿ ಆಧಾರಿತ ಎಟಿಎಂ ಕ್ಯಾಷ್ ವಿತ್‌ಡ್ರಾ ಹೇಗೆ ಮಾಡುವುದು?

|

ಎಟಿಎಂಗಳಲ್ಲಿ ಅನಧಿಕೃತ ವಹಿವಾಟಿನಿಂದ ಗ್ರಾಹಕರನ್ನು ರಕ್ಷಿಸಲು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಬ್ಯಾಂಕಿನ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಆಧಾರಿತ ವಿತ್‌ಡ್ರಾ ಸೌಲಭ್ಯವನ್ನು ಎಸ್‌ಬಿಐ ಈಗ ಆರಂಭ ಮಾಡಿದೆ.

ಎಟಿಎಂ ವಹಿವಾಟುಗಳನ್ನು ಮಾಡುವಾಗ, ಎಟಿಎಂಗಳಿಂದ ರೂ 10,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡುವ ವ್ಯಕ್ತಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಕಳುಹಿಸುತ್ತದೆ. ಎಟಿಎಂ ಕೌಂಟರ್‌ಗಳಲ್ಲಿ ಸುರಕ್ಷಿತವಾಗಿರಲು ಬಳಕೆದಾರರು ಬ್ಯಾಂಕ್‌ನ ಒಟಿಪಿ ಆಧಾರಿತ ಕ್ಯಾಷ್ ವಿತ್‌ಡ್ರಾ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಬಹುದು.

 ಎಸ್‌ಬಿಐ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್‌ ವ್ಯತ್ಯಯ: ಏನೇನು ಸಮಸ್ಯೆ? ಎಸ್‌ಬಿಐ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ಡಿಜಿಟಲ್‌ ವ್ಯತ್ಯಯ: ಏನೇನು ಸಮಸ್ಯೆ?

ಎಸ್‌ಬಿಐನ ಒಟಿಪಿ ಆಧಾರಿತ ಕ್ಯಾಷ್ ವಿತ್ ಡ್ರಾ ಸೌಲಭ್ಯವನ್ನು ಜನವರಿ 1, 2020 ರಿಂದ ಆರಂಭ ಮಾಡಲಾಗಿದೆ. "ಎಸ್‌ಬಿಐ ಎಟಿಎಂ ವಹಿವಾಟುಗಳಿಗಾಗಿ ನಮ್ಮ ಒಟಿಪಿ ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ವಂಚನೆ-ತಡೆಗಟ್ಟುವಿಕೆ ಲಸಿಕೆಯಾಗಿದೆ. ನಿಮ್ಮನ್ನು ವಂಚನೆಯಿಂದ ಸುರಕ್ಷಿತವಾಗಿರಿಸುವುದು ನಮ್ಮ ಮೊದಲ ಗುರಿಯಾಗಿದೆ," ಎಂದು ಎಸ್‌ಬಿಐ ಟ್ವೀಟ್ ಮಾಡಿದೆ. ಹಾಗಾದರೆ ಈ ಸೌಲಭ್ಯವನ್ನು ಬಳಸುವುದು ಹೇಗೆ ಎಂದು ತಿಳಿಯೋಣ ಮುಂದೆ ಓದಿ....

 ಎಸ್‌ಬಿಐನ ಒಟಿಪಿ ಆಧಾರಿತ ಎಟಿಎಂ ಕ್ಯಾಷ್ ವಿತ್‌ಡ್ರಾ ಹೇಗೆ?

ಎಸ್‌ಬಿಐನ ಒಟಿಪಿ ಆಧಾರಿತ ಎಟಿಎಂ ಕ್ಯಾಷ್ ವಿತ್‌ಡ್ರಾ ಹೇಗೆ?

* ಎಸ್‌ಬಿಐನ ಎಟಿಎಂನಿಂದ ಹಣವನ್ನು ಹಿಂಪಡೆಯಲು ಒಟಿಪಿ ಅಗತ್ಯ

* ಹಣ ವಿತ್‌ಡ್ರಾ ವೇಳೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ

* ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ನಾಲ್ಕು-ಅಂಕಿಯ ಸಂಖ್ಯೆಯಾಗಿದ್ದು ಅದು ಒಂದೇ ವಹಿವಾಟಿಗೆ ಮಾತ್ರ ಬಳಕೆ ಸಾಧ್ಯ

* ಎಟಿಎಂ ಪರದೆಯಲ್ಲಿ ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿದ ನಂತರ ಒಟಿಪಿ ಪರದೆಯು ಕಾಣಿಸಿಕೊಳ್ಳುತ್ತದೆ

 ಎಸ್‌ಬಿಐ ಅಲರ್ಟ್: ಈ ಕಾರ್ಯ ಮಾಡದಿದ್ದರೆ ನಿಮ್ಮ ಬ್ಯಾಂಕಿಂಗ್‌ ಸೇವೆ ಸ್ಥಗಿತ! ಎಸ್‌ಬಿಐ ಅಲರ್ಟ್: ಈ ಕಾರ್ಯ ಮಾಡದಿದ್ದರೆ ನಿಮ್ಮ ಬ್ಯಾಂಕಿಂಗ್‌ ಸೇವೆ ಸ್ಥಗಿತ!

* ಹಣವನ್ನು ಸ್ವೀಕರಿಸಲು, ನೀವು ಈಗ ಈ ಪರದೆಯ ಮೇಲೆ ನಿಮ್ಮ ಬ್ಯಾಂಕ್-ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ ಅನ್ನು ನಮೂದಿಸಬೇಕು

* ಇಲ್ಲಿಗೆ ಎಲ್ಲಾ ಹಂತಗಳು ಸಂಪೂರ್ಣವಾಗಿ ನಿಮಗೆ ಹಣ ಲಭ್ಯವಾಗಲಿದೆ

ಈ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸಿನ ವಂಚನೆಯನ್ನು ಕಡಿಮೆ ಮಾಡುವ ಸಲುವಾಗಿ ಯುಪಿಐ ನೆಟ್‌ವರ್ಕ್ ಬಳಸುವ ಎಲ್ಲಾ ಎಟಿಎಂಗಳಿಗೆ ಕಾರ್ಡ್‌ರಹಿತ ವಹಿವಾಟುಗಳನ್ನು ಪ್ರಸ್ತಾಪಿಸಿದ್ದಾರೆ.

 ಎಸ್‌ಬಿಐನ ಒಟಿಪಿ ಆಧಾರಿತ ಎಟಿಎಂ ಕ್ಯಾಷ್ ವಿತ್‌ಡ್ರಾ ಹೇಗೆ?

"ಎಲ್ಲಾ ಬ್ಯಾಂಕ್‌ಗಳು ಮತ್ತು ಎಟಿಎಂ ನೆಟ್‌ವರ್ಕ್‌ಗಳಲ್ಲಿ ಕಾರ್ಡ್‌ರಹಿತ ನಗದು ಹಿಂಪಡೆಯುವಿಕೆಯನ್ನು ಸಕ್ರಿಯ ಮಾಡಬೇಕು. ಯುಪಿಐ ಅನ್ನು ಬಳಸಲು ನಾವು ಸೂಚನೆ ನೀಡುತ್ತೇವೆ," ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಪ್ರಸ್ತುತ, ಎಟಿಎಂಗಳ ಮೂಲಕ ಕಾರ್ಡ್-ರಹಿತ ವಿತ್ ಡ್ರಾ ಸೌಲಭ್ಯವು ಕೆಲವೇ ಬ್ಯಾಂಕ್‌ಗಳಿಗೆ ಸೀಮಿತವಾಗಿದೆ. ಆದರೆ ಯುಪಿಐ ಬಳಸಿಕೊಂಡು ಎಲ್ಲಾ ಬ್ಯಾಂಕ್‌ಗಳು ಮತ್ತು ಎಟಿಎಂ ನೆಟ್‌ವರ್ಕ್‌ಗಳಿಗೆ ಸೌಲಭ್ಯವನ್ನು ವಿಸ್ತರಿಸಲು ಆರ್‌ಬಿಐ ಯೋಜಿಸುತ್ತಿದೆ.

English summary

How to Use SBI’s OTP-based ATM Cash Withdrawal Facility, Here’s Explained Steps in Kannada

Bank Customers Alert: How to Use SBI’s OTP-based ATM Cash Withdrawal Facility , Here’s Explained Steps in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X