For Quick Alerts
ALLOW NOTIFICATIONS  
For Daily Alerts

ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣ ತೆಗೆಯುವುದು ಹೇಗೆ?

|

ನಗದು ರಹಿತ ಖರೀದಿಗಳನ್ನು ಮಾಡಲು ವಿಶ್ವದಾದ್ಯಂತ ವಿವಿಧ ಡಿಜಿಟಲ್ ಪಾವತಿ ವಿಧಾನವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ನಾವು ಖರೀದಿ ಮಾಡಿದಾಗ ಆನ್‌ಲೈನ್ ಮೂಲಕವೇ ನಗದು ರಹಿತವಾಗಿ ಪಾವತಿ ಮಾಡಬಹುದಾಗಿದೆ. ಈಗ ನೀವು ಎಟಿಎಂ ಕಾರ್ಡ್ ಇಲ್ಲದೆಯೇ ಎಟಿಎಂ ಮಿಷನ್‌ನಿಂದ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.

ಎನ್‌ಸಿಆರ್ ಕಾರ್ಪೊರೇಷನ್ ಯುಪಿಐ ಪ್ಲಾಟ್‌ಫಾರ್ಮ್‌ಗಳಲ್ಲಿ ಇರುವ ಮೊದಲ ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ವಿತ್‌ಡ್ರಾವಲ್ (ಐಸಿಸಿಡಬ್ಲ್ಯು) ಅನ್ನು ಪರಿಚಯಿಸಿದೆ. ಇದು ಬಳಕೆದಾರರು ಎಟಿಎಂ ಕಾರ್ಡ್ ಇಲ್ಲದೆಯೇ ಹಣವನ್ನು ಹಿಂದಕ್ಕೆ ಪಡೆಯಲು ಸಹಾಯಕವಾಗಿದೆ. ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ.

ಎಸ್‌ಬಿಐನ ಒಟಿಪಿ ಆಧಾರಿತ ಎಟಿಎಂ ಕ್ಯಾಷ್ ವಿತ್‌ಡ್ರಾ ಹೇಗೆ ಮಾಡುವುದು?ಎಸ್‌ಬಿಐನ ಒಟಿಪಿ ಆಧಾರಿತ ಎಟಿಎಂ ಕ್ಯಾಷ್ ವಿತ್‌ಡ್ರಾ ಹೇಗೆ ಮಾಡುವುದು?

ಯುಪಿಐ ಅಪ್ಲಿಕೇಶನ್‌ಗಳು ಗೂಗಲ್‌ ಪೇ, ಫೋನ್‌ ಪೇ, ಪೇಟಿಎಂ ಹಾಗೂ ಲಭ್ಯವಿರುವ ಇತರ ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತವೆ. ಈ ಸೌಲಭ್ಯವು ಬಳಕೆದಾರರಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಕೊಂಡೊಯ್ಯದೆಯೇ ನಗದು ಹಿಂಪಡೆಯಲು ಸಹಾಯ ಮಾಡುತ್ತದೆ.

ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣ ತೆಗೆಯುವುದು ಹೇಗೆ?

ಕಾರ್ಡ್‌ಗಳನ್ನು ಮರೆಯುವುದು, ಕಳೆದುಕೊಳ್ಳುವುದು ಅಥವಾ ಕಾರ್ಡ್ ಹಳೆಯದಾಗುವುದು, ತುಂಡಾದಂತಹ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಈ ವಿಧಾನವಾಗಿದೆ. ನೀವು ಎಟಿಎಂ ಕಾರ್ಡ್ ಇಲ್ಲದೆಯೇ ಯುಪಿಐ ಸೇವೆಯೊಂದಿಗೆ ಹಣವನ್ನು ಪಡೆಯಬೇಕಾದರೆ ಜಿಪೇ, ಫೋನ್‌ಪೇ, ಅಮೆಜಾನ್ ಪೇ, ಪೇಟಿಎಂನಂತಹ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್‌ಗಳನ್ನು ಹೊಂದಿರಬೇಕು, ಇಂಟರ್‌ನೆಟ್ ಸಂಪರ್ಕವೂ ಕೂಡಾ ಇರಬೇಕು. ಹಾಗಾದರೆ ನೀವು ಯುಪಿಐ ಬಳಸಿ ಹೇಗೆ ಹಣ ವಿತ್‌ಡ್ರಾ ಮಾಡುವುದು ಎಂದು ತಿಳಿಯಲು ಮುಂದೆ ಓದಿ..

ಯುಪಿಐ ಪಾವತಿ ವಿಧಾನ ಬಳಿಕ ಎಟಿಎಂನಿಂದ ಹಣ ಪಡೆಯುವುದು ಹೇಗೆ?

ಹಂತ 1: ಯಾವುದೇ ಎಟಿಎಂಗೆ ಭೇಟಿ ನೀಡಿ, ನಗದು ವಿತ್‌ಡ್ರಾ ಆಯ್ಕೆಯನ್ನು ಆರಿಸಿ
ಹಂತ 2: ಎಟಿಎಂ ಯಂತ್ರದ ಪರದೆಯಲ್ಲಿ ಯುಪಿಐ ಎಂಬುವುದನ್ನು ಆಯ್ಕೆ ಮಾಡಿ
ಹಂತ 3: ನಂತರ, ಎಟಿಎಂ ಪರದೆಯ ಮೇಲೆ QR ಕೋಡ್ ಕಾಣಲಿದೆ
ಹಂತ 4: ಮೊಬೈಲ್‌ನಲ್ಲಿ ಯಾವುದೇ ಯುಪಿಐ ಆಧಾರಿತ ಪಾವತಿ ಆಪ್ ತೆರೆದು QR ಕೋಡ್ ಸ್ಕ್ಯಾನ್ ಮಾಡಿ
ಹಂತ 5: ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ರೂ 5,000 ಮಿತಿಯೊಳಗೆ ಅಗತ್ಯವಿರುವ ಮೊತ್ತವನ್ನು ಹಿಂಪಡೆಯಬಹುದು
ಹಂತ 6: 'Hit Proceed' ಬಟನ್ ಕ್ಲಿಕ್ ಮಾಡುವ ಮೂಲಕ ಹಣವನ್ನು ಹಿಂಪಡೆಯಲು ಯುಪಿಐ ಪಿನ್ ಅನ್ನು ನಮೂದಿಸಿ ಇಲ್ಲಿಗೆ ಎಲ್ಲ ಪ್ರಕ್ರಿಯೆ ಪೂರ್ಣವಾಗಲಿದೆ

English summary

How to withdraw money from ATM using UPI based payment methods

How to withdraw money from ATM using Google Pay, Paytm and other UPI based payment methods.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X