For Quick Alerts
ALLOW NOTIFICATIONS  
For Daily Alerts

ಇಪಿಎಫ್‌ ಖಾತೆಯಿಂದ 2 ಬಾರಿ ಹಣ ಹಿಂಪಡೆಯುವುದು ಹೇಗೆ?: ಇಲ್ಲಿದೆ ಹಂತಗಳು

|

ಕೊರೊನಾ ವೈರಸ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಜನರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ), ಈ ವರ್ಷದ ಆರಂಭದಲ್ಲಿ, ಚಂದಾದಾರರಿಗೆ ತಮ್ಮ ಖಾತೆಗಳಿಂದ ದುಪ್ಪಟ್ಟು ಹಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ. ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಏರಿಕೆ ನಡುವೆ ಸರ್ಕಾರಗಳು ನಿರ್ಬಂಧಗಳನ್ನು ಹೇರಿದೆ. ಈ ಹಿನ್ನೆಲೆಯಿಂದಾಗಿ ನೂರಾರು ಜನರು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

 

ಪ್ರಸ್ತುತ, ಭಾರತವು ಸಾಂಕ್ರಾಮಿಕ ರೋಗದ ಮೂರನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿದೆ. ಪ್ರತಿದಿನ ದೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ವರದಿ ಆಗುತ್ತಿದೆ. ಈ ನಡುವೆ ಇಪಿಎಫ್‌ಒ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಹೌದು, ಪಿಎಫ್‌ ಖಾತೆದಾರರು ಇಪಿಎಫ್‌ಒನ ಆನ್‌ಲೈನ್‌ ಪೋರ್ಟಲ್ ಬಳಸಿ ಹಣವನ್ನು ಹಿಂಪಡೆಯಬಹುದು. ಅದಕ್ಕಿಂತ ಮುಖ್ಯವಾದುದೆಂದರೆ ಕೆಲವೇ ಗಂಟೆಗಳಲ್ಲಿ ಹಣ ವರ್ಗಾವಣೆ ಆಗಲಿದೆ.

ಹಣ ಬೇಕಾಗಿದೆಯೇ? ಪಿಎಫ್ ಖಾತೆಯಿಂದ 1 ಲಕ್ಷ ರೂ. ಪಡೆಯಬಹುದು!, ಇಲ್ಲಿದೆ ವಿಧಾನ

ಕೊರೊನಾ ವೈರಸ್‌ ಸೋಂಕು ಆರ್ಥಿಕತೆಯ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. ಈ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರಿಗೆ ನೌಕರರ ಭವಿಷ್ಯ ನಿಧಿಯು ತನ್ನ ಸದಸ್ಯರಿಗೆ ವೈದ್ಯಕೀಯ ಮುಂಗಡ ಹಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ. ಸದಸ್ಯರು ಆಸ್ಪತ್ರೆಗೆ ಸೇರಿಸುವುದು ಸೇರಿದಂತೆ ವೈದ್ಯಕೀಯ ತುರ್ತುಸ್ಥಿತಿಗಾಗಿ ಮುಂಗಡವಾಗಿ 1 ಲಕ್ಷ ರೂಪಾಯಿಯನ್ನು ಪಡೆಯಬಹುದು. ಯಾವುದೇ ದಾಖಲೆಗಳು ನೀಡದೆಯೇ ಇದನ್ನು ಮಾಡಬಹುದು ಎಂದು ಸುತ್ತೋಲೆಯು ಹೇಳಿದೆ.

 ಇಪಿಎಫ್‌ ಖಾತೆಯಿಂದ 2 ಬಾರಿ ಹಣ ಹಿಂಪಡೆಯುವುದು ಹೇಗೆ?

"ಉದ್ಯೋಗಿಗಳ ಕುಟುಂಬದ ಸದಸ್ಯರು ಕೋವಿಡ್‌ ಕಾರಣದಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಆಸ್ಪತ್ರೆಯ ಖರ್ಚು ನಿರ್ವಹಣೆ ಮಾಡಲು ಸಾಧ್ಯವಾಗದಿದ್ದಾಗ ಆಸ್ಪತ್ರೆಯಲ್ಲಿ ಅಂತಹ ಗಂಭೀರ ಒಳರೋಗಿಗಳ ಚಿಕಿತ್ಸೆಗಾಗಿ ಮುಂಗಡ ಸೌಲಭ್ಯವನ್ನು ಸುಲಭ ಮಾಡುವ ಅವಶ್ಯಕತೆ ಇದೆ. ಕೆಲವೊಮ್ಮೆ ಉದ್ಯೋಗಿಗೆ ಸಂಬಂಧಿಸಿದ ರೋಗಿಗಳು ಐಸಿಯುನಲ್ಲಿರಬಹುದು. ಆದ್ದರಿಂದಾಗಿ ಈ ಕೋವಿಡ್ ಸೇರಿದಂತೆ ಗಂಭೀರವಾದ ಮಾರಣಾಂತಿಕ ಅನಾರೋಗ್ಯದ ಕಾರಣ ತುರ್ತು ಆಸ್ಪತ್ರೆಗೆ ವೈದ್ಯಕೀಯ ಮುಂಗಡವನ್ನು ನೀಡಲು ಈ ಕೆಳಗಿನ ವಿಧಾನವನ್ನು ಅಳವಡಿಸಿಕೊಳ್ಳಬಹುದು," ಎಂದು ಸುತ್ತೋಲೆ ಹೇಳಿದೆ.

 

ಈಗ ಜನರಿಗೆ ಎರಡು ಬಾರಿ ಪಿಎಫ್‌ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಇದಕ್ಕಾಗಿ ನೀವು ಮೊದಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKY) ಯೋಜನೆಯ ಅಡಿಯಲ್ಲಿ ಖಾತೆ ಹೊಂದಿರಬೇಕಾಗಿದೆ. ಹಾಗಾದರೆ ಪಿಎಫ್‌ ಖಾತೆಯಿಂದ ಎರಡು ಬಾರಿ ಹಣವನ್ನು ಹಿಂದಕ್ಕೆ ಪಡೆಯುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ..

ಪಿಎಫ್‌ ಖಾತೆಯಿಂದ ಎರಡು ಬಾರಿ ಹಣ ಹಿಂಪಡೆಯುವುದು ಹೇಗೆ?

* ಸದಸ್ಯರ ಇ-ಸೇವಾ ಪೋರ್ಟಲ್‌ https://unifiedportal-mem.epfindia.gov.in/memberinterface/
* ನಿಮ್ಮ ಯುಎಎನ್‌ ಮತ್ತು ಪಾಸ್‌ವರ್ಡ್ ಬಳಸಿ ಪಿಎಫ್‌ ಖಾತೆಗೆ ಲಾಗ್ ಇನ್ ಮಾಡಿ
* ಪರಿಶೀಲನೆಗಾಗಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
* Online Services ವಿಭಾಗಕ್ಕೆ ಹೋಗಿ
* ನಿಮಗೆ ಬೇಕಾದುದ್ದನ್ನು ಆಯ್ಕೆ ಮಾಡಿ (ಫಾರ್ಮ್-31, 19, 10C ಮತ್ತು 10D)
* ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ. ಇವುಗಳಲ್ಲಿ ನಿಮ್ಮ ಆಧಾರ್ ಸಂಖ್ಯೆಯ ಹೆಸರು, ಹುಟ್ಟಿದ ದಿನಾಂಕ ಮತ್ತು ಆಧಾರ್‌ನ ಕೊನೆಯ ನಾಲ್ಕು ಅಂಕೆಗಳು ಸೇರಿವೆ.
* ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಭರ್ತಿ ಮಾಡಿ ಮತ್ತು verify ಮೇಲೆ ಕ್ಲಿಕ್‌ ಮಾಡಿ
* Certificate of Undertaking ಅನ್ನು ಹಂಚಿಕೊಳ್ಳಿ
* PF Advance (Form 31) ಅನ್ನು ಕ್ಲಿಕ್‌ ಮಾಡಿ
* Outbreak of pandemic (COVID-19) ಅನ್ನು ಆಯ್ಕೆ ಮಾಡಿ
* ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿ
* ರದ್ದುಪಡಿಸಿದ ಚೆಕ್ ಮತ್ತು ವಿಳಾಸ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ
* ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ
* ಕೊನೆಗೆ Submit ಮೇಲೆ ಕ್ಲಿಕ್‌ ಮಾಡಿದರೆ ಎಲ್ಲಾ ಪ್ರಕ್ರಿಯೆ ಪೂರ್ಣವಾಗಲಿದೆ.

English summary

How to withdraw money twice from EPF account? Step by Step Guide in Kannada

How to Withdraw Money Twice From Your Provident Fund Account; Here is the step by step guide in kannada. Read on.
Story first published: Monday, January 17, 2022, 17:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X