For Quick Alerts
ALLOW NOTIFICATIONS  
For Daily Alerts

ನೀವು ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಿ ಮುಗಿಸಲು ಹೀಗೆ ಮಾಡಿ!

|

ಕೆಲವು ಜನರು ಕೆಲಸವನ್ನು ಅತ್ಯಂತ ಸ್ಮಾರ್ಟ್‌ ಆಗಿ ಮಾಡಿ ಮುಗಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಉಳಿದ ಸಮಯದಲ್ಲಿ ತುಂಬಾ ಆರಾಮಾಗಿ ಇರುವಂತೆ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ವಾರಕ್ಕೆ 10 ಅಥವಾ 20 ಗಂಟೆಗಳ ಹೆಚ್ಚು ಕೆಲಸ ಮಾಡುವ ಜನರಿಗಿಂತ ಹೆಚ್ಚಿನದನ್ನು ಮಾಡುತ್ತಾರೆ.

ನಿಮ್ಮ ಸುತ್ತ ಮುತ್ತಲಲ್ಲೇ ಈ ರೀತಿಯ ಜನರನ್ನು ನೋಡಿರುತ್ತೀರಿ. ನೀವು ಮಾಡುವ ಕೆಲಸವನ್ನೇ ಅವರು ಕೆಲವೇ ಸಮಯದಲ್ಲಿ ಮಾಡಿ ಮುಗಿಸಿಬಿಡುತ್ತಾರೆ. ಆದರೆ ಅದೇ ಕೆಲಸವನ್ನು ನೀವು ಮಾಡಲು ಹೆಚ್ಚು ಹೊತ್ತು ತೆಗೆದುಕೊಳ್ಳಬಹುದು.

ಸ್ಟ್ಯಾನ್‌ಫೋರ್ಡ್‌ನ ಹೊಸ ಅಧ್ಯಯನದ ಪ್ರಕಾರ ಕೆಲಸದ ವಾರವು 50 ಗಂಟೆಗಳ ಮೀರಿದಾಗ ಪ್ರತಿ ಗಂಟೆಗೆ ಉತ್ಪಾದಕತೆಯು ತೀವ್ರವಾಗಿ ಕುಸಿಯುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಅದರಲ್ಲೂ 55 ಗಂಟೆಗಳ ನಂತರ ಉತ್ಪಾದಕತೆಯು ತುಂಬಾ ಕಡಿಮೆಯಾಗುತ್ತದೆ ಮತ್ತು ಇನ್ನು ಮುಂದೆ ಕೆಲಸ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅದು ಸರಿ, ವಾರಕ್ಕೆ 70 ಗಂಟೆಗಳ (ಅಥವಾ ಹೆಚ್ಚಿನ) ಕೆಲಸ ಮಾಡುವ ಜನರು 55 ಗಂಟೆಗಳ ಕಾಲ ಕೆಲಸ ಮಾಡುವ ಜನರಷ್ಟೇ ಮೊತ್ತವನ್ನು ಪಡೆಯುತ್ತಾರೆ.

ಹಾಗಿದ್ದರೆ ಕಡಿಮೆ ಸಮಯವನ್ನು ಬಳಸಿಕೊಂಡು ಹೆಚ್ಚು ಕೆಲಸ ಪೂರೈಸಲು ದಿನನಿತ್ಯ ಹೇಗೆ ಸಮಯವನ್ನು ಮ್ಯಾನೇಜ್ ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿ.

1.  ಸಂಪರ್ಕ ಕಡಿತಗೊಳಿಸುವುದು

1. ಸಂಪರ್ಕ ಕಡಿತಗೊಳಿಸುವುದು

ವಾರಾಂತ್ಯದಲ್ಲಿ ಸಂಪರ್ಕವನ್ನು ಕಡಿತಗೊಳಿಸುವುದು ಪ್ರಮುಖವಾದ ತಂತ್ರವಾಗಿದೆ. ಏಕೆಂದರೆ ಸೋಮವಾರದಿಂದ ಶುಕ್ರವಾರ ಅಥವಾ ಶನಿವಾರದವರೆಗೂ ನೀವು ಕಠಿಣ ಪರಿಶ್ರಮದಿಂದ ಕೆಲಸ ಮಾಡಿರುತ್ತೀರಿ. ಆದರೆ ಈ ರಜಾ ದಿನದಲ್ಲೂ ನೀವು ಕೆಲಸವನ್ನು ಬಿಡದಿದ್ದರೆ ಒಳಿತಲ್ಲ. ಅಂದರೆ ನಿಮ್ಮ ಬಿಡುವಿನ ಸಮಯದಲ್ಲೂ ಕೆಲಸದ ಇ-ಮೇಲ್‌ಗಳು ಮತ್ತು ಕರೆಗಳನ್ನು ನಿಭಾಯಿಸಲು ಸಂಪೂರ್ಣ ವಾರಾಂತ್ಯವನ್ನು(ವೀಕೆಂಡ್) ತೆಗೆದುಕೊಳ್ಳುವುದು ವಾಸ್ತವಿಕವಾಗಿ ಸರಿಯಲ್ಲ. ಇದರ ಬದಲಾಗಿ ಅಲ್ಪಾವಧಿಯ ಸಮಯವನ್ನು ಆ ಕೆಲಸಕ್ಕಾಗೆ ನಿಗದಿಪಡಿಸುವುದರಿಂದ ಹೆಚ್ಚಿನ ಲಭ್ಯತೆಯನ್ನು ತ್ಯಾಗ ಮಾಡುವುದನ್ನು ನಿವಾರಿಸುತ್ತದೆ. ಜೊತೆಗೆ ನಿಮ್ಮಲ್ಲಿನ ಒತ್ತಡವನ್ನು ನಿವಾರಿಸುತ್ತದೆ.

2. ಮನೆಗೆಲಸಗಳನ್ನು ಕಡಿಮೆ ಮಾಡಿ

2. ಮನೆಗೆಲಸಗಳನ್ನು ಕಡಿಮೆ ಮಾಡಿ

ನೀವು ವಾರಾಂತ್ಯದಲ್ಲಿ ಮನೆಗೆಲಸಗಳನ್ನು ಸ್ವಲ್ಪ ಕಡಿಮೆ ಮಾಡುವ ಅಭ್ಯಾಸ ಮಾಡಿಕೊಂಡರೆ ಉತ್ತಮ. ಏಕೆಂದರೆ ನಿಮಗೆ ಕೆಲಸ ಮತ್ತು ವಿಶ್ರಾಂತಿ ನಡುವಿನ ವ್ಯತ್ಯಾಸವೇ ಅಥವಾ ಅನುಭವವೇ ನಿಮಗೆ ತಿಳಿಯದಂತಾಗುತ್ತದೆ. ವಾರಾಂತ್ಯದಲ್ಲೂ ನೀವು ಕೆಲಸಗಳನ್ನು ನಿರ್ವಹಿಸಿದರೆ ಹೆಚ್ಚು ಕೆಲಸ ಮಾಡಿದಂತೆ ಭಾಸವಾಗುತ್ತದೆ. ಮತ್ತು ವಾರಾಂತ್ಯದಲ್ಲಿ ಹೆಚ್ಚು ಕೆಲಸ ಮಾಡಿದರೆ , ಉಳಿದ ದಿನಗಳು ಹೆಚ್ಚು ಹೊರೆಯಂತೆ ನಿಮಗೆ ಭಾಸವಾಗಬಹುದು.

ಹೀಗಾಗಿ ವಾರದಲ್ಲಿ ನಿಮ್ಮ ಕೆಲಸಗಳನ್ನು ಏನೇ ಇದ್ದರೆ ಅದನ್ನೂ ಪೂರೈಸಲು ನಿಗದಿಪಡಿಸಬೇಕು ಮತ್ತು ನಿಗದಿತ ಸಮಯದಲ್ಲಿ ನೀವು ಅವುಗಳನ್ನು ಪೂರ್ಣಗೊಳಿಸದಿದ್ದರೆ, ನೀವು ಮುಂದಿನ ವಾರಾಂತ್ಯದಲ್ಲಿ ಮುಂದುವರಿಸಿ ಆನಂತರ ಮುಗಿಸಿ.

 

ಜೀವನದಲ್ಲಿ ಸಕ್ಸಸ್ ಕಾಣಲು ಮೊದಲು ಈ 6 ವಿಚಾರಗಳನ್ನು ನಿಮ್ಮ ತಲೆಯಿಂದ ತೆಗೆದು ಹಾಕಿಜೀವನದಲ್ಲಿ ಸಕ್ಸಸ್ ಕಾಣಲು ಮೊದಲು ಈ 6 ವಿಚಾರಗಳನ್ನು ನಿಮ್ಮ ತಲೆಯಿಂದ ತೆಗೆದು ಹಾಕಿ

3. ವ್ಯಾಯಾಮ

3. ವ್ಯಾಯಾಮ

ವಾರದಲ್ಲಿ ವ್ಯಾಯಾಮ ಮಾಡಲು ಸಮಯವಿಲ್ಲವೇ? ಪ್ರತಿ ವಾರಾಂತ್ಯದಲ್ಲಿ ನಿಮಗೆ 48 ಗಂಟೆಗಳ ಸಮಯವಿರುತ್ತದೆ. ನಿಮ್ಮ ದೇಹವನ್ನು 1 ಗಂಟೆಯನ್ನಾದರೂ ಹುರಿಗೊಳಿಸಲು ಮಸಯವಿರುತ್ತದೆ. ಈ ವ್ಯಾಯಾಮವು ಹಿತವಾದ ನರಪ್ರೇಕ್ಷಕವಾದ GABA ಅನ್ನು ಬಿಡುಗಡೆ ಮಾಡುತ್ತದೆ. ಇದು ನಿಮಗೆ ಹೊಸ ಆಲೋಚನೆಗಳೊಂದಿಗೆ ಹೊರಬರಲು ಸಹಾಯ ಮಾಡುತ್ತದೆ.

ಅನೇಕ ಯಶಸ್ವಿ ಜನರಿಗೆ ಈ ವಿಚಾರಗಳನ್ನು ಕರಗತಮಾಡಿಕೊಂಡಿದ್ದಾರೆ. ಹೊಸ ಆಲೋಚನೆಗಳಿಗೆ ವ್ಯಾಯಾಮ ಕೂಡ ಉತ್ತಮ ಮಾರ್ಗವಾಗಿದೆ. ನೀವು ಓಡುತ್ತಿರಲಿ, ಸೈಕ್ಲಿಂಗ್ ಮಾಡುತ್ತಿರಲಿ ಅಥವಾ ತೋಟಗಾರಿಕೆ ಆಗಿರಲಿ, ವ್ಯಾಯಾಮವು ಆತ್ಮಾವಲೋಕನಕ್ಕೆ ಕಾರಣವಾಗುತ್ತದೆ. ವ್ಯಾಯಾಮವನ್ನು ವಾರಾಂತ್ಯದ ದಿನಚರಿಯ ಪ್ರಮುಖ ಭಾಗವಾಗಿಸಿಕೊಂಡರೆ , ಉಳಿದ ದಿನಗಳು ಉತ್ತಮವಾಗಿ ನಿಭಾಯಿಸಬಹುದು.

 

4. ಮುಂದಿನ ಕಾರ್ಯ ಏನೆಂಬುದರ ಬಗ್ಗೆ ಅರಿವಿರಲಿ

4. ಮುಂದಿನ ಕಾರ್ಯ ಏನೆಂಬುದರ ಬಗ್ಗೆ ಅರಿವಿರಲಿ

ವಾರಾಂತ್ಯವು ನಿಮಗೆ ವಿಶ್ರಾಂತಿ ಪಡೆಯಲು ಸಹಾಯವಾಗುತ್ತದೆ. ಆದರೆ ಇದೇ ವಾರಾಂತ್ಯವು ನಿಮಗೆ ಮುಂದಿನ ಒಂದು ವಾರದ ಕೆಲಸವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ನಿಮ್ಮ ಉದ್ಯಮ, ನಿಮ್ಮ ಸಂಸ್ಥೆ ಮತ್ತು ನಿಮ್ಮ ಕೆಲಸವನ್ನು ರೂಪಿಸುವ ದೊಡ್ಡ ಶಕ್ತಿಗಳನ್ನು ಆಲೋಚಿಸಲು ವಾರಾಂತ್ಯವನ್ನು ಬಳಸಿ. ಸೋಮವಾರದಿಂದ ಶುಕ್ರವಾರದವರೆಗೆ ಯಾವುದೇ ಕಾರ್ಯಗಳ ಗೊಂದಲವಿಲ್ಲದೆ, ನೀವು ಅಂದುಕೊಂಡ ವಿಷಯಗಳನ್ನು ವಿಭಿನ್ನವಾಗಿ ನೋಡಲು ಸಾಧ್ಯವಾಗುತ್ತದೆ. ಮುಂಬರುವ ವಾರದಲ್ಲಿ ನಿಮ್ಮ ವಿಧಾನವನ್ನು ಬದಲಾಯಿಸಲು ಈ ಒಳನೋಟವನ್ನು ಬಳಸಿ, ನಿಮ್ಮ ಕೆಲಸದ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಸುಧಾರಿಸಿ.

 

30ನೇ ವಯಸ್ಸಿನಲ್ಲಿ ಈ ಐದು ಹಣಕಾಸಿನ ತಪ್ಪುಗಳನ್ನು ಮಾಡದಿರಿ!30ನೇ ವಯಸ್ಸಿನಲ್ಲಿ ಈ ಐದು ಹಣಕಾಸಿನ ತಪ್ಪುಗಳನ್ನು ಮಾಡದಿರಿ!

5.ಉತ್ಸಾಹವನ್ನು ಮುಂದುವರಿಸಿ

5.ಉತ್ಸಾಹವನ್ನು ಮುಂದುವರಿಸಿ

ವಾರಾಂತ್ಯದಲ್ಲಿ ನೀವು ಆಸಕ್ತಿ ಹೊಂದಿರುವ ಯಾವುದನ್ನಾದರೂ ಅನುಸರಿಸಿದಾಗ ಏನಾಗುತ್ತದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಭಾವೋದ್ರೇಕಗಳನ್ನು ತೊಡಗಿಸಿಕೊಳ್ಳುವುದು ಒತ್ತಡದಿಂದ ಪಾರಾಗಲು ಮತ್ತು ಹೊಸ ಆಲೋಚನಾ ವಿಧಾನಗಳಿಗೆ ನಿಮ್ಮ ಮನಸ್ಸನ್ನು ತೆರೆಯಲು ಉತ್ತಮ ಮಾರ್ಗವಾಗಿದೆ. ಸಂಗೀತ ನುಡಿಸುವುದು, ಓದುವುದು, ಬರೆಯುವುದು, ಚಿತ್ರಕಲೆ ಮಾಡುವುದು ಅಥವಾ ನಿಮ್ಮ ಮಕ್ಕಳೊಂದಿಗೆ ಆಟ ಆಡುವುದು, ಮುಂಬರುವ ವಾರದಲ್ಲಿ ಭಾರಿ ಲಾಭಾಂಶವನ್ನು ಗಳಿಸುವ ವಿಭಿನ್ನ ಆಲೋಚನಾ ವಿಧಾನಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

6. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ.

6. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ.

ನೀವು ರೀಚಾರ್ಜ್ ಮಾಡಲು ಮತ್ತು ವಿಶ್ರಾಂತಿ ಪಡೆಯಲು ಬಯಸಿದರೆ ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವುದು ಅತ್ಯಗತ್ಯ. ವಾರದ ದಿನಗಳು ತುಂಬಾ ತೀವ್ರವಾಗಿದ್ದು, ಇಡೀ ವಾರ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ ವಾರಾಂತ್ಯವನ್ನು ಪ್ರತಿದಿನಂದಂತೆ ವ್ಯರ್ಥ ಮಾಡದಿರಿ. ಉದಾಹರಣೆಗೆ ನಿಮ್ಮ ಮಕ್ಕಳನ್ನು ಉದ್ಯಾನವನಕ್ಕೆ ಕರೆದೊಯ್ಯಿರಿ, ನಿಮ್ಮ ಸಂಗಾತಿಯನ್ನು ಅವನ ಅಥವಾ ಅವಳ ನೆಚ್ಚಿನ ರೆಸ್ಟೋರೆಂಟ್‌ಗೆ ಕರೆದೊಯ್ಯಿರಿ ಮತ್ತು ನಿಮ್ಮ ಪೋಷಕರನ್ನು ಭೇಟಿ ಮಾಡಿ. ಹೀಗೆ ನೀವು ಮಾಡಿದ್ದರಿಂದ ನಿಮಗೆ ಸಂತೋಷವಾಗುತ್ತದೆ. ಹಾಗೂ ಮುಂದಿನ ವಾರಗಳ ಕಾಲ ಉತ್ಸಾಹಭರಿತರಾಗಿರಬಹುದು.

40 ವಯಸ್ಸಿನೊಳಗೆ ಲೈಫ್‌ನಲ್ಲಿ ಸೆಟಲ್ ಆಗಲು ಇಷ್ಟು ಮಾಡಿ ಸಾಕು!40 ವಯಸ್ಸಿನೊಳಗೆ ಲೈಫ್‌ನಲ್ಲಿ ಸೆಟಲ್ ಆಗಲು ಇಷ್ಟು ಮಾಡಿ ಸಾಕು!

7. ಹೊಸತನ್ನು ಮಾಡಲು ಪ್ರಯತ್ನಿಸಿ

7. ಹೊಸತನ್ನು ಮಾಡಲು ಪ್ರಯತ್ನಿಸಿ

ನೀವು ಹೊಸತನ್ನು ಮಾಡಲು ಪ್ರಯತ್ನಿಸಿದರೆ ನಿಮ್ಮಲ್ಲಿ ಉತ್ಸಾಹವು ಹೆಚ್ಚಾಗುತ್ತೆ. ಅಥವಾ ನೀವು ಈ ಹಿಂದೆ ಮಾಡದ ಯಾವುದನ್ನಾದರೂ ಪ್ರಯತ್ನಿಸಿ. ಏನಾದರೂ ಒಳ್ಳೆಯದನ್ನು ನಿರೀಕ್ಷಿಸುವ ಚಟುವಟಿಕೆಯು ಆಹ್ಲಾದಕರವಾಗಿಸುವ ಮಹತ್ವದ ಭಾಗವಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಈ ರೀತಿಯಾಗಿ ಅನುಸರಿಸುವುದು ವಾರ ಪೂರ್ತಿ ನಿಮ್ಮ ಮನಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

 8. ಅದೇ ಸಮಯದಲ್ಲಿ ಎದ್ದೇಳಿ

8. ಅದೇ ಸಮಯದಲ್ಲಿ ಎದ್ದೇಳಿ

ವಾರ ಪೂರ್ತಿ ಸ್ವಲ್ಪ ಬೇಗ ಎದ್ದಿದ್ದೀನಿ ವಾರಾಂತ್ಯದಲ್ಲಿ ಹೆಚ್ಚು ಸಮಯ ಮಲಗೋಣ ಎಂದು ನಿಮ್ಮ ಮನಸ್ಸು ಎಳೆಯುವುದು ಸಾಮಾನ್ಯ. ಇದು ತಾತ್ಕಾಲಿಕವಾಗಿ ಉತ್ತಮವಾಗಿ ಭಾವಿಸಿದರೂ ಸೈಂಟಿಫಿಕ್ ಆಗಿ ಉತ್ತಮವಲ್ಲ. ನೀವು ವಾರಾಂತ್ಯದಲ್ಲಿ ದಿನನಿತ್ಯ ಮಲಗುವುದಕ್ಕಿಂತ ಹೆಚ್ಚು ಸಮಯ ಮಲಗಿದಾಗಿ ನಿಮ್ಮ ಸಿರ್ಕಾಡಿಯನ್ ಲಯವನ್ನು ಭಂಗಗೊಳಿಸುತ್ತದೆ. ನೀವು ಒಂದೇ ಸಮಯದಲ್ಲಿ ವಾರ ಪೂರ್ತಿ ಏಳಲು ಅಭ್ಯಾ ಮಾಡಿಕೊಂಡಿದ್ದರೆ ನೀವು ವಾರಾಂತ್ಯದಲ್ಲೂ ಅದೇ ಸಮಯಕ್ಕೆ ಎಚ್ಚರವಾಗುತ್ತೀರಿ. ಅದಕ್ಕಾಗಿಯೇ ಕೆಲವು ಜನರು ತಮ್ಮ ತಮ್ಮ ಅಲಾರಾಂ ಗಡಿಯಾರವು ಶಬ್ದ ಮಾಡುವ ಮುನ್ನವೇ ಎಚ್ಚರಗೊಳ್ಳುತ್ತಾರೆ .

ವಾರಾಂತ್ಯದಲ್ಲಿ ನಿಮ್ಮ ನಿಯಮಿತ ಸಮಯಗಿಂತ ಹೆಚ್ಚಿನ ಸಮಯವನ್ನು ನಿದ್ರೆಯಲ್ಲಿ ಕಳೆದಾಗ ನೀವು ಸುಸ್ತಾಗಿರುವಂತೆ ಅನ್ನಿಸುತ್ತದೆ. ಇದು ನಿಮ್ಮ ದಿನದ ರಜೆಗೆ ಅಡ್ಡಿಪಡಿಸುವುದಲ್ಲದೆ, ಸೋಮವಾರ ನಿಮ್ಮನ್ನು ಕಡಿಮೆ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಏಕೆಂದರೆ ನಿಮ್ಮ ನಿಯಮಿತ ಸಮಯದಲ್ಲಿ ಎಚ್ಚರಗೊಳ್ಳಲು ನಿಮ್ಮ ಮೆದುಳು ಸಿದ್ಧವಾಗಿರುವುದಿಲ್ಲ. ಒಂದು ವೇಳೆ ಹೆಚ್ಚು ನಿದ್ರೆ ಮಾಡಬೇಕು ಅನ್ನಿಸಿದರೆ ವೀಕೆಂಡ್‌ಗೂ ಮುನ್ನ ಬೇಗನೆ ನಿದ್ರೆ ಮಾಡಲು ಅಭ್ಯಾಸ ಮಾಡಿಕೊಳ್ಳಿ.

 

ಕೋಟ್ಯಾಧಿಪತಿಗಳು ಹೆಚ್ಚು ಹಣ ಮಾಡಲು ಅನುಸರಿಸಿದ 7 ರಹಸ್ಯ ವಿಧಾನಗಳುಕೋಟ್ಯಾಧಿಪತಿಗಳು ಹೆಚ್ಚು ಹಣ ಮಾಡಲು ಅನುಸರಿಸಿದ 7 ರಹಸ್ಯ ವಿಧಾನಗಳು

 9. ಬೆಳಗ್ಗಿನ ನಿಮ್ಮ ಸಮಯವನ್ನು ಏನು ಮಾಡಬೇಕೆಂದು ಗೊತ್ತುಪಡಿಸಿ

9. ಬೆಳಗ್ಗಿನ ನಿಮ್ಮ ಸಮಯವನ್ನು ಏನು ಮಾಡಬೇಕೆಂದು ಗೊತ್ತುಪಡಿಸಿ

ವಾರಾಂತ್ಯದಲ್ಲಿ ನಿಮಗೆ ಸಮಯ ಸಿಗುವುದು ಕಷ್ಟ, ವಿಶೇಷವಾಗಿ ನೀವು ಕುಟುಂಬವನ್ನು ಹೊಂದಿದ್ದರೆ. ಯಾರೇ ಆದರೂ ಬೆಳಗ್ಗೆ ಯಾವುದಾದರೂ ಒಂದು ವಿಷಯದ ಬಗ್ಗೆ ಆಸಕ್ತಿ ಹೊಂದಿರುವ ಚಟುವಟಿಕೆಯಲ್ಲಿ ತೊಡಗಿಸಿಇಕೊಂಡೆ ಉತ್ತಮ ಇದು ಮನಸ್ಸಿಗೆ ಸಂತೋಷ ಮತ್ತು ಸ್ವಚ್ಛತೆಯಲ್ಲಿ ಭಾರೀ ಲಾಭಾಂಶವನ್ನು ನೀಡುತ್ತದೆ.

ವಾರದ ದಿನಗಳಲ್ಲಿ ನೀವು ನಿದ್ರೆ ಮಾಡುವ ಅದೇ ಸಮಯದಲ್ಲಿ ಎಚ್ಚರಗೊಳ್ಳುವಂತೆ ನಿಮ್ಮನ್ನು ಒತ್ತಾಯಿಸುವ ಮೂಲಕ ನಿಮ್ಮ ಸಿರ್ಕಾಡಿಯನ್ ಲಯವನ್ನು ಪರಿಪೂರ್ಣಗೊಳಿಸಲು ಇದು ಒಂದು ಉತ್ತಮ ಮಾರ್ಗವಾಗಿದೆ. ವೈಜ್ಞಾನಿವಾಗಿ ನೀವು ಎಚ್ಚರವಾದ ಎರಡರಿಂದ -ನಾಲ್ಕು ಗಂಟೆಗಳ ನಂತರ ನಿಮ್ಮ ಮನಸ್ಸು ಗರಿಷ್ಠ ಕಾರ್ಯಕ್ಷಮತೆಯನ್ನು ಸಾಧಿಸುತ್ತದೆ, ಆದ್ದರಿಂದ ದೈಹಿಕವಾಗಿ ಏನಾದರೂ ಮಾಡಲು ಬೇಗನೆ ಎದ್ದೇಳಿ, ತದನಂತರ ನಿಮ್ಮ ಮನಸ್ಸು ಉತ್ತುಂಗದಲ್ಲಿರುವಾಗ ಕುಳಿತು ಮಾನಸಿಕ ವಿಷಯದಲ್ಲಿ ತೊಡಗಿಸಿಕೊಳ್ಳಿ.

 

10. ಮುಂಬರುವ ವಾರಕ್ಕೆ ತಯಾರಿ.

10. ಮುಂಬರುವ ವಾರಕ್ಕೆ ತಯಾರಿ.

ನಿಮ್ಮ ಮುಂಬರುವ ವಾರವನ್ನು ಯೋಜಿಸಲು ಕೆಲವು ಕ್ಷಣಗಳನ್ನು ಕಳೆಯಲು ವಾರಾಂತ್ಯವು ಉತ್ತಮ ಸಮಯ. 30 ನಿಮಿಷಗಳ ಯೋಜನೆಯು ಉತ್ಪಾದಕತೆಯಲ್ಲಿ ಗಮನಾರ್ಹ ಲಾಭವನ್ನು ನೀಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ನೀವು ಯೋಜನೆಯೊಂದಿಗೆ ಹೋದಾಗ ವಾರವು ಹೆಚ್ಚು ಸುಲಭವೆಂದು ನಿಮಗೆ ಅನ್ನಿಸಬಹುದು. ಹೀಗೆ ಈ ಎಲ್ಲಾ ಹತ್ತು ಅಂಶಗಳನ್ನು ಒಟ್ಟಾಗಿಸಿ ಅಭ್ಯಾಸ ಮಾಡಿಕೊಂಡರೆ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಗಮನಾರ್ಹ ಲಾಭವನ್ನು ಪಡೆಯಬಹುದು. ಮತ್ತು ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದು.

 

20 ರಿಂದ 30ರ ವಯಸ್ಸಿನಲ್ಲೇ ಶ್ರೀಮಂತರಾಗಲು 7 ಸೂತ್ರಗಳು20 ರಿಂದ 30ರ ವಯಸ್ಸಿನಲ್ಲೇ ಶ್ರೀಮಂತರಾಗಲು 7 ಸೂತ್ರಗಳು

Read more about: worker management profit ಲಾಭ
English summary

How To Work Like Smart People And Get More Done

This article explain how smart people work less and get more done.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X