For Quick Alerts
ALLOW NOTIFICATIONS  
For Daily Alerts

ಈ ಕಾರ್ಯ ಮಾಡಿ ಪ್ಯಾನ್‌ ಕಾರ್ಡ್‌ನ 10,000 ರೂ. ದಂಡ ತಪ್ಪಿಸಿಕೊಳ್ಳಿ

|

ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಪ್ರಮುಖ ಮಾಹಿತಿ ಇಲ್ಲಿದೆ. ನೀವು ಈ ಪ್ರಮುಖ ಕಾರ್ಯವನ್ನು ಮಾಡದಿದ್ದರೆ ಬರೋಬ್ಬರಿ ಹತ್ತು ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಪ್ಯಾನ್‌ ಕಾರ್ಡ್ ಹೊಂದಿರುವವರು ಮಾರ್ಚ್ 31, 2022 ರೊಳಗೆ ತಮ್ಮ ಶಾಶ್ವತ ಖಾತೆ ಸಂಖ್ಯೆಯನ್ನು (PAN) ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕಾಗಿದೆ. ಈ ಗಡುವಿನ ಮೊದಲು ನೀವು ನಿಮ್ಮ ಪ್ಯಾನ್‌ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಂತರ ನಿಮ್ಮ ಪ್ಯಾನ್‌ ಕಾರ್ಡ್ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ.

ಗಡುವಿನ ನಂತರ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ನೀವು ರೂ 1,000 ಪಾವತಿಸಬೇಕಾಗುತ್ತದೆ. ಇದಲ್ಲದೆ, ವ್ಯಕ್ತಿಯು ಮ್ಯೂಚುವಲ್ ಫಂಡ್‌ಗಳು, ಸ್ಟಾಕ್‌ಗಳು, ಓಪನ್ ಬ್ಯಾಂಕ್ ಖಾತೆಗಳು ಮತ್ತು ಪ್ಯಾನ್ ಕಾರ್ಡ್ ಅನ್ನು ಪ್ರಸ್ತುತಪಡಿಸಲು ಅಗತ್ಯವಿರುವ ಇತರವುಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವರಿಗೆ ಹತ್ತು ಸಾವಿರ ರೂಪಾಯಿ ದಂಡ ಬೀಳುವ ಸಾಧ್ಯತೆ ಇದೆ.

ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?ಎಲ್‌ಐಸಿ ಪಾಲಿಸಿಗೆ ಪ್ಯಾನ್‌ ಲಿಂಕ್‌ ಮಾಡುವುದು ಹೇಗೆ?

ಈ ಪ್ಯಾನ್ ಕಾರ್ಡ್ ಹೊಂದಿರುವವರು 10,000 ರೂ ದಂಡ: ನೀವು ಪ್ಯಾನ್ ಕಾರ್ಡ್ ಅನ್ನು ಹೊಂದಿದ್ದರೆ, ಆ ಪ್ಯಾನ್‌ ಕಾರ್ಡ್ ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 272N ಅಡಿಯಲ್ಲಿ ಮಾನ್ಯವಾಗಿಲ್ಲದಿದ್ದರೆ, ಆ ಪ್ಯಾನ್‌ ಕಾರ್ಡ್ ಹೊಂದಿರುವ ವ್ಯಕ್ತಿಯ ಮೇಲೆ ಅಂದರೆ ನಿಮ್ಮ ಮೇಲೆ ರೂ 10,000 ದಂಡವನ್ನು ವಿಧಿಸುವ ಸಾಧ್ಯತೆಗಳು ಇದೆ. ಹಾಗಾದರೆ ನೀವು ಕೊನೆಯ ದಿನಾಂಕ ಮಾರ್ಚ್ 31, 2022 ರೊಳಗೆ ಪ್ಯಾನ್‌ಗೆ ಆಧಾರ್‌ ಅನ್ನು ಈಗಲೇ ಲಿಂಕ್‌ ಮಾಡಿಕೊಳ್ಳಿ.. ಹೇಗೆ ಲಿಂಕ್‌ ಮಾಡುವುದು ಇಲ್ಲಿದೆ ಮುಂದೆ ಓದಿ...

ಪ್ಯಾನ್‌ ಕಾರ್ಡ್‌ನ ಈ ಕಾರ್ಯ ಮಾಡದಿದ್ದರೆ 10,000 ರೂ. ದಂಡ

ಆನ್‌ಲೈನ್‌ನಲ್ಲಿ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಹೇಗೆ?

* ಮೊದಲು ಆದಾಯ ತೆರಿಗೆ ವೆಬ್‌ಸೈಟ್‌ಗೆ ಹೋಗಿ
* ಆಧಾರ್ ಕಾರ್ಡ್‌ನಲ್ಲಿ ನೀಡಿರುವ ಹೆಸರು, ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ
* ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ವರ್ಷವನ್ನು ಮಾತ್ರ ನೀಡಿದರೆ ಚೌಕದಲ್ಲಿ ಗುರುತಿಸಿ
* ಈಗ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
* ಬಳಿಕ ಲಿಂಕ್ ಆಧಾರ್ ಬಟನ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಲಾಗುತ್ತದೆ
* ಇಲ್ಲಿಗೆ ಎಲ್ಲಾ ಪ್ರಕ್ರಿಯೆ ಪೂರ್ಣವಾಗಲಿದೆ

INCOME TAX ಪೋರ್ಟಲ್ನಲ್ಲಿ ಪ್ಯಾನ್ - ಆಧಾರ್ ಲಿಂಕ್ ಮಾಡುವುದು ಹೇಗೆ?INCOME TAX ಪೋರ್ಟಲ್ನಲ್ಲಿ ಪ್ಯಾನ್ - ಆಧಾರ್ ಲಿಂಕ್ ಮಾಡುವುದು ಹೇಗೆ?

ಎಸ್‌ಎಂಎಸ್‌ ಮೂಲಕ ಆಧಾರ್‌ಗೆ ಪ್ಯಾನ್‌ ಲಿಂಕ್‌ ಮಾಡಿ

* ನಿಮ್ಮ ಫೋನ್‌ನಲ್ಲಿ ನೀವು UIDPAN ಅನ್ನು ಟೈಪ್ ಮಾಡಬೇಕು.
* ಬಳಿಕ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ
* ನಂತರ 10 ಅಂಕಿಯ ಪ್ಯಾನ್ ಸಂಖ್ಯೆಯನ್ನು ನಮೂದಿಸಿ
* ಈಗ ಹಂತ 1 ರಲ್ಲಿ ಉಲ್ಲೇಖಿಸಲಾದ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ
* ಇಲ್ಲಿಗೆ ಪ್ಯಾನ್‌ಗೆ ಆಧಾರ್‌ ಲಿಂಕ್‌ ಪ್ರಕ್ರಿಯೆ ಪೂರ್ಣವಾಗಲಿದೆ

ಪ್ಯಾನ್‌ ನಿಷ್ಕ್ರೀಯಗೊಂಡಿದ್ದರೆ ನೀವು ಹತ್ತು ಸಾವಿರ ರೂಪಾಯಿ ದಂಡವನ್ನು ತಪ್ಪಿಸಿಕೊಳ್ಳುವುದು ಮುಖ್ಯವಾಗುತ್ತದೆ. ಅದಕ್ಕಾಗಿ ನೀವು ನಿಷ್ಕ್ರಿಯಗೊಳಿಸಲಾದ ಪ್ಯಾನ್‌ ಅನ್ನು ಸಕ್ರಿಯಗೊಳಿಸುವುದು ಹೇಗೆ ಎಂದು ತಿಳಿಯುವುದು ಮುಖ್ಯವಾಗಿದೆ. ನಿಷ್ಕ್ರಿಯವಾದ ಪ್ಯಾನ್‌ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದು. ಇದಕ್ಕಾಗಿ ನೀವು ಎಸ್‌ಎಂಎಸ್‌ ಕಳುಹಿಸಬೇಕು. ನೀವು ಮೆಸೇಜ್ ಬಾಕ್ಸ್‌ಗೆ ಹೋಗಿ ನಿಮ್ಮ ನೋಂದಾಯಿತ ಮೊಬೈಲ್‌ನಿಂದ 10 ಅಂಕಿಯ ಪ್ಯಾನ್ ಸಂಖ್ಯೆಯನ್ನು ನಮೂದಿಸಬೇಕು. ಜೊತೆಗೆ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ ಸ್ಪೇಸ್‌ ಒತ್ತಿ. ಬಳಿಕ 67678 ಅಥವಾ 56161 ಗೆ ಎಸ್‌ಎಂಎಸ್‌ ಮಾಡಿ.

English summary

How You Can Avoid a Penalty of Rs 10,000 on PAN Card, Explained Here

How You Can Avoid a Penalty of Rs 10,000 on PAN Card, Explained Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X