For Quick Alerts
ALLOW NOTIFICATIONS  
For Daily Alerts

ನಿಮ್ಮ ಸಂಸ್ಥೆ ಪಿಎಫ್ ಮೊತ್ತ ಜಮೆ ಮಾಡುತ್ತಿದೆಯೇ, ಹೀಗೆ ಚೆಕ್ ಮಾಡಿ

|

ನಮ್ಮ ನಿವೃತ್ತಿ ಜೀವನಕ್ಕಾಗಿ ಅಥವಾ ಮುಂದಿನ ಜೀವನಕ್ಕಾಗಿ ನಾವು ಉಳಿತಾಯ ಮಾಡುವ ಹಲವು ಮೂಲಗಳಲ್ಲಿ ಒಂದು ಪಿಎಫ್ ಹೂಡಿಕೆಯಾಗಿದೆ. ಇದು ಸುರಕ್ಷಿತ ಹೂಡಿಕೆಯೂ ಕೂಡಾ ಹೌದು. ಪ್ರತಿ ತಿಂಗಳ ನಮ್ಮ ಸಂಬಳದಿಂದ ಪಿಎಫ್ ಅನ್ನು ಕಡಿತ ಮಾಡಲಾಗುತ್ತದೆ. ಇದಕ್ಕೆ ನಮ್ಮ ಸಂಸ್ಥೆಯಿಂದಲೂ ಕೊಡುಗೆ ನೀಡಲಾಗುತ್ತದೆ. ಆದರೆ ನಮ್ಮ ಸಂಸ್ಥೆ ಪಿಎಫ್ ಕೊಡುಗೆ ನೀಡುತ್ತಿದೆಯೇ ಎಂದು ನಾವು ತಿಳಿಯುವುದು ಹೇಗೆ?

ಪ್ರತಿ ತಿಂಗಳು ನಮ್ಮ ವೇತನದ ಶೇಕಡ 12ರಷ್ಟು ಪಾಲು ಪಿಎಫ್‌ಗಾಗಿ ಕಡಿತವಾಗಲಿದೆ. ನಾವು ಉದ್ಯೋಗ ಮಾಡುವ ಸಂಸ್ಥೆಯೂ ಕೂಡಾ ಇಷ್ಟೇ ಮೊತ್ತವನ್ನು ಪಿಎಫ್ ಖಾತೆಗೆ ಜಮೆ ಮಾಡಲಿದೆ. ಆದರೆ ನಮ್ಮ ಪಿಎಫ್ ಮೊತ್ತವನ್ನು ನಮ್ಮ ಸಂಬಳದಿಂದ ಕಡಿತ ಮಾಡಿದ್ದರೂ ಅದನ್ನು ಪಿಎಫ್ ಖಾತೆ ಜಮೆ ಮಾಡಲಾಗುತ್ತಿದೆಯೇ ಎಂಬುವುದು ನಮಗೆ ತಿಳಿದಿದೆಯೇ? ಇದನ್ನು ನಾವು ತಿಳಿಯಲು ಸಾಧ್ಯವಿದೆ.

ಇಪಿಎಫ್‌ಒ ಪೋರ್ಟಲ್‌ನಲ್ಲಿ ಪಿಂಚಣಿ ಸ್ಟೇಟಸ್ ನೋಡುವುದು ಹೇಗೆ?ಇಪಿಎಫ್‌ಒ ಪೋರ್ಟಲ್‌ನಲ್ಲಿ ಪಿಂಚಣಿ ಸ್ಟೇಟಸ್ ನೋಡುವುದು ಹೇಗೆ?

ನಮ್ಮ ಸಂಸ್ಥೆ ನಮ್ಮ ಪಿಎಫ್ ಖಾತೆಗೆ ಹಣವನ್ನು ಜಮೆ ಮಾಡುತ್ತಿದೆಯೇ ಎಂದು ನಾವು ತಿಳಿಯುವ ನಿಟ್ಟಿನಲ್ಲಿ ಇಪಿಎಫ್‌ಒ ಚಂದಾದಾರರು ತಮ್ಮ ಖಾತೆಯನ್ನು ಪರಿಶೀಲನೆ ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಆನ್‌ಲೈನ್ ಮೂಲಕ ನಾವು ನಮ್ಮ ಇಪಿಎಫ್ ಖಾತೆಯನ್ನು ಚೆಕ್ ಮಾಡಬಹುದಾಗಿದೆ. ನಾವು ದುಡಿಯುವ ಸಂಸ್ಥೆ ನಮ್ಮ ಪಿಎಫ್ ಖಾತೆಯ ಹಣವನ್ನು ಜಮೆ ಮಾಡುತ್ತಿದೆಯೇ ಎಂದು ನಾವು ಈ ತಿಳಿಯುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

 ಪಿಎಫ್ ಮೊತ್ತ ಜಮೆಯಾಗುತ್ತಿದೆಯೇ ಚೆಕ್ ಮಾಡಿ

ಪಿಎಫ್ ಮೊತ್ತ ಜಮೆಯಾಗುತ್ತಿದೆಯೇ ಚೆಕ್ ಮಾಡಿ

ನೀವು ಇಪಿಎಫ್ ಸದಸ್ಯರಾಗಿದ್ದರೆ ನೀವು ನಿಮ್ಮ ಪಿಎಫ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆಯೇ ಎಂಬುವುದನ್ನು ಚೆಕ್ ಮಾಡಲು ಸಾಧ್ಯವಾಗಲಿದೆ. ಹಾಗೆಯೇ ನಿಮ್ಮ ಇಪಿಎಫ್ ಖಾತೆಯ ಪಾಸ್‌ಬುಕ್ ಅನ್ನು ನೀವು ಡೌನ್‌ಲೋಡ್ ಮಾಡಬಹುದು, ಪರಿಶೀಲನೆ ಮಾಡಬಹುದು. ನೀವು ಇಪಿಎಫ್ ಪೋರ್ಟಲ್ ಅಥವಾ ಉಮಾಂಗ್ ಆಫ್ ಮೂಲಕ ನಿಮ್ಮ ಪಿಎಫ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ಮಾಡಲು ಸಾಧ್ಯವಾಗಲಿದೆ. ನೀವು ಇಪಿಎಫ್ ಪಾಸ್‌ಬುಕ್ ಪರಿಶೀಲಿಸಲು e-Sewa ರಿಜಿಸ್ಟಾರ್ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಯುಎಎನ್ ಸಂಖ್ಯೆ, ಪಾಸ್‌ವರ್ಡ್, ಕ್ಯಾಪ್ಚಾ ಹಾಕಿ ಸೈನ್ ಇನ್ ಮಾಡಿಕೊಳ್ಳಬೇಕಾಗುತ್ತದೆ. https://passbook.epfindia.gov.in/MemberPassBook/Login ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಇಪಿಎಫ್ ಮಾಹಿತಿ ಪಡೆಯಬಹುದು.

ಪಿಎಫ್ ತೆರಿಗೆ ನಿಯಮ ಬದಲಾವಣೆ: ಇಲ್ಲಿದೆ 10 ಪ್ರಮುಖಾಂಶಪಿಎಫ್ ತೆರಿಗೆ ನಿಯಮ ಬದಲಾವಣೆ: ಇಲ್ಲಿದೆ 10 ಪ್ರಮುಖಾಂಶ

 ಉಮಾಂಗ್ ಆಪ್‌ನಲ್ಲಿ ಎಪಿಫ್ ಪಾಸ್‌ಬುಕ್ ಹೀಗೆ ಚೆಕ್ ಮಾಡಿ

ಉಮಾಂಗ್ ಆಪ್‌ನಲ್ಲಿ ಎಪಿಫ್ ಪಾಸ್‌ಬುಕ್ ಹೀಗೆ ಚೆಕ್ ಮಾಡಿ

ನೀವು ಉಮಾಂಗ್ ಆಪ್ ಮೂಲಕವು ನಿಮ್ಮ ಇಪಿಎಫ್ ಸ್ಟೇಟಸ್ ಅನ್ನು ನೋಡಿಕೊಳ್ಳಬಹುದು. ಇದಕ್ಕಾಗಿ ಮೊಬೈಲ್ ಸಂಖ್ಯೆ ಬಳಸಿಕೊಂಡು ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕಾಗುತ್ತದೆ. ರಿಜಿಸ್ಟ್ರೇಷನ್ ಯಶಸ್ವಿಯಾದ ಬಳಿಕ ನೀವು ಇಪಿಎಫ್ ಖಾತೆಗೆ ಯುಎಎನ್ ಹಾಗೂ ಒಟಿಪಿ ಬಳಸಿ ಲಾಗಿನ್ ಆಗಬಹುದು. ಇದರಲ್ಲಿ ನಿಮ್ಮ ಇಪಿಎಫ್ ಪಾಸ್‌ಬುಕ್ ಅನ್ನು ಕೂಡಾ ನೋಡಲು ಸಾಧ್ಯವಾಗಲಿದೆ.

 ಟ್ರಸ್ಟ್‌ ಇಪಿಎಫ್ ಖಾತೆ ಆಗಿದ್ದರೆ?

ಟ್ರಸ್ಟ್‌ ಇಪಿಎಫ್ ಖಾತೆ ಆಗಿದ್ದರೆ?

ನಿಮ್ಮ ಉದ್ಯೋಗದ ಸಂಸ್ಥೆಯ ಖಾತೆಯು ಟ್ರಸ್ಟ್‌ನೊಂದಿಗೆ ಜಂಠಿಯಾಗಿದ್ದರೆ, ನಿಮಗೆ ನಿಮ್ಮ ಪಿಎಫ್ ಸ್ಟೇಟಸ್ ನೋಡಲು ಸಾಧ್ಯವಾಗದೆ ಇರಬಹುದು. ಈ ವೇಳೆ ನೀವು ನಿಮ್ಮ ಉದ್ಯೋಗದಾತರಿಂದಲೇ ಇಪಿಎಫ್ ಮಾಹಿತಿ ಕೇಳಬೇಕಾಗುತ್ತದೆ. ಇಪಿಎಫ್ ಪಾಸ್‌ಬುಕ್ ಅನ್ನು ನೀವು ಉದ್ಯೋಗ ಮಾಡುವ ಸಂಸ್ಥೆಯಿಂದ ಪಡೆದುಕೊಳ್ಳಿ. ಹಾಗೆಯೇ ಮಾಸಿಕ ಕೊಡುಗೆಯನ್ನು ಕೂಡಾ ಪರಿಶೀಲನೆ ಮಾಡಿ.

English summary

How To Check If The Employer Is Depositing EPF Contribution in Kannada

If The Employer Is Depositing EPF Contribution, Check Here's Details, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X