For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಉಳಿತಾಯ ಮಾಡುವುದು ಹೇಗೆ?

|

ಪ್ರತಿ ವರ್ಷ ಆದಾಯ ತೆರಿಗೆಯನ್ನು ಪಾವತಿ ಮಾಡುವುದು ಕಡ್ಡಾಯವಾಗಿದೆ. ನಾವು ಪ್ರತಿ ಬಾರಿ ಆದಾಯ ತೆರಿಗೆಯನ್ನು ಪಾವತಿ ಮಾಡುವಾಗಲೂ ತೆರಿಗೆಯನ್ನು ಇನ್ನಷ್ಟು ಉಳಿತಾಯ ಮಾಡುವುದು ಹೇಗೆ ಎಂದು ನೋಡುತ್ತೇವೆ. ನಾವಿಲ್ಲಿ ಸರ್ಕಾರಿ ಯೋಜನೆಗಳ ಮೂಲಕ ತೆರಿಗೆಯನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

 

ಕೆಲವರು ಅಕ್ರಮವಾಗಿ ಆದಾಯ ತೆರಿಗೆ ಉಳಿತಾಯ ಮಾಡುತ್ತಾರೆ. ಆದರೆ ಅದು ಇಂದಲ್ಲ ನಾಳೆ ಬೆಳಕಿಗೆ ಬರುವುದು ಖಂಡಿತ. ಆದರೆ ನಾವು ಆದಾಯ ತೆರಿಗೆಯನ್ನು ಉಳಿತಾಯ ಮಾಡಲು ಸಾಧ್ಯವಾಗುವಂತಹ ದಾರಿಯನ್ನು ಸರ್ಕಾರವೇ ನಮಗೆ ನೀಡಿದೆ. ಈ ಎಲ್ಲ ವಿಧಾನವು ಸಕ್ರಮವಾಗಿದೆ ಹಾಗೂ ಎಲ್ಲ ತೆರಿಗೆ ಪಾವತಿದಾರರಿಗೆ ಲಭ್ಯವಾಗುತ್ತದೆ.

ಆದಾಯ ತೆರಿಗೆ ಕಾಯ್ದೆ 1962 ತೆರಿಗೆದಾರರು ಆದಾಯವನ್ನು ಉಳಿತಾಯ ಮಾಡಲು ಸಾಧ್ಯವಾಗುವಂತಹ ಹಲವಾರು ವಿಧಾನವನ್ನು ನೀಡಿದೆ. ಸರ್ಕಾರದ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನಾವು ತೆರಿಗೆಯನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಆ ಯೋಜನೆಗಳು ಯಾವುದು ಎಂದು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ....

 ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ

ನೀವು ಈಗಾಗಲೇ ನಿವೃತ್ತಿಯನ್ನು ಹೊಂದಿದ್ದರೆ, ಅಥವಾ ನಿವೃತ್ತಿಗಾಗಿ ಅರ್ಜಿಯ್ನನು ಸಲ್ಲಿಸಿದ್ದರೆ, ನೀವು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆಯನ್ನು ಉಳಿತಾಯ ಮಾಡಬಹುದು. ಇದು ಸುರಕ್ಷಿತ ಹೂಡಿಕೆ ಯೋಜನೆಯಾಗಿದೆ. ಇದರ ಮೂಲಕ ನಾವು ತೆರಿಗೆ ಕಡಿತವನ್ನು ಪಡೆಯಬಹುದು. ಇದು ಸರ್ಕಾರದ ಯೋಜನೆಯಾಗಿದೆ. ಹೂಡಿಕೆದಾರರು ಹೂಡಿಕೆ ಅವಧಿಯನ್ನು ಮೂರು ವರ್ಷ ಕಾಲ ವಿಸ್ತರಣೆ ಮಾಡುವ ಅವಕಾಶವಿದೆ. ಈ ಖಾತೆಯನ್ನು ತೆರೆದ ಒಂದು ವರ್ಷದ ಬಳಿಕವೇ ನೀವು ಮೆಚ್ಯೂರಿಟಿಗೂ ಮುನ್ನ ವಿತ್‌ಡ್ರಾ ಮಾಡುವ ಅವಕಾಶವನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಸ್ತುತ ಬಡ್ಡಿದರ ಶೇಕಡ 8.6 ಆಗಿದೆ. ಎರಡು ವರ್ಷಕ್ಕೂ ಮುನ್ನ ಖಾತೆಯನ್ನು ಮುಚ್ಚಿದರೆ ನೀವು ಶೇಕಡ 1.5ರಷ್ಟು ಮೊತ್ತವನ್ನು ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ವರ್ಷಕ್ಕೆ 10 ಸಾವಿರ ರೂಪಾಯಿಗಿಂತ ಅಧಿಕ ಬಡ್ಡಿದರ ಲಭ್ಯವಾದರೆ, ಬಡ್ಡಿದರದ ಮೇಲೆ ತೆರಿಗೆ ವಿಧಿಸಲಾಗುತ್ತದೆ.

 ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ನಾವು ನಿವೃತ್ತಿಯಾಗುವಾಗ ಮೊತ್ತ ಲಭ್ಯವಾಗುವ ಯೋಜನೆಯಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ನಾವು ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ನೀವು ವಾರ್ಷಿಕವಾಗಿ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಕಾಯ್ದೆಯಡಿ 50 ಸಾವಿರ ರೂಪಾಯಿವರೆಗೆ ವಿನಾಯಿತಿಯನ್ನು ಪಡೆಯಬಹುದು. ನೀವು ಸುಮಾರು 2 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

 ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
 

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)

ಪಬ್ಲಿಕ್ ಪ್ರಾವಿಂಡೆಂಟ್ ಫಂಡ್ (ಪಿಪಿಎಫ್) ಮೂಲಕವೂ ನೀವು ತೆರಿಗೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಸ್ತುತ ಪಿಪಿಎಫ್‌ ಮೇಲೆ ಶೇಕಡ 7.1ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆಯಬಹುದು. ನೀವು ಪ್ರತಿ ವರ್ಷ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಸರ್ಕಾರದ ಯೋಜನೆ ಇದಾಗಿರುವ ಕಾರಣ ನಮಗೆ ಸುರಕ್ಷತೆ ಇರುತ್ತದೆ.

 ಸುಕನ್ಯ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ)

ಸುಕನ್ಯ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ)

ಸುಕನ್ಯ ಸಮೃದ್ಧಿ ಯೋಜನೆಯಲ್ಲಿ (ಎಸ್‌ಎಸ್‌ವೈ) ಹೂಡಿಕೆ ಮಾಡುವುದರಿಂದ ನೀವು ತೆರಿಗೆಯನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಆರಂಭ ಮಾಡಿದೆ. ಈ ಹೂಡಿಕೆಯಲ್ಲಿ ನಾವು ಶೇಕಡ 7.6ರಷ್ಟು ಬಡ್ಡಿದರವನ್ನು ಪಡೆಯಬಹುದು. ನಿಮಗೆ ಕೇವಲ ಇಬ್ಬರು ಹೆಣ್ಣು ಮಕ್ಕಳು ಇದ್ದರೆ ಮಾತ್ರ ಆದಾಯ ತೆರಿಗೆಯ 80C ಕಾಯ್ದೆಯಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಆದರೆ ಸರ್ಕಾರ ಅದನ್ನು ಪರಿಷ್ಕರಣೆ ಮಾಡಿದೆ. ತಂದೆ ತಾಯಿಗೆ ಮೊದಲ ಮಗು ಹೆಣ್ಣಾಗಿದ್ದು, ಎರಡನೇ ಹೆರಿಗೆಯಲ್ಲಿ ಅವಳಿ ಜವಳಿ ಹೆಣ್ಣು ಮಕ್ಕಳು ಜನಿಸಿದರೆ ಮೂರು ಮಕ್ಕಳು ಕೂಡಾ ಈ ಯೋಜನೆಯ ಫಲಾನುಭವಿಗಳು ಆಗುತ್ತಾರೆ.

English summary

Income Tax: Government Ways to Save Income Tax in India, Know Details in Kannada

The Income Tax Act of 1962 contains numerous such measures that allow taxpayers to reduce their tax burden. Government Ways to Save Income Tax in India, Know Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X