For Quick Alerts
ALLOW NOTIFICATIONS  
For Daily Alerts

ಪಾಮ್ ಆಯಿಲ್, ಚಿನ್ನದ ಮೂಲ ಆಮದು ದರ ತಗ್ಗಿಸಿದ ಭಾರತ, ನೂತನ ಬೆಲೆ ಪರಿಶೀಲಿಸಿ

|

ಭಾರತವು ಕಚ್ಚಾ ಮತ್ತು ಸಂಸ್ಕರಿಸಿದ ತಾಳೆ ಎಣ್ಣೆ, ಕಚ್ಚಾ ಸೋಯಾ ತೈಲ ಮತ್ತು ಚಿನ್ನದ ಮೂಲ ಆಮದು ಬೆಲೆಗಳನ್ನು ಕಡಿತ ಮಾಡಿದೆ. ಈ ಬಗ್ಗೆ ಶುಕ್ರವಾರ ತಡರಾತ್ರಿ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಪರಿಷ್ಕರಣೆಯ ಬೆನ್ನಲ್ಲೆ ಭಾರತ ಈ ಕ್ರಮವನ್ನು ಕೈಗೊಂಡಿದೆ.

ಸರ್ಕಾರವು ಪ್ರತಿ ಹದಿನೈದು ದಿನಗಳಿಗೊಮ್ಮೆ ಖಾದ್ಯ ತೈಲಗಳು, ಚಿನ್ನ ಮತ್ತು ಬೆಳ್ಳಿಯ ಮೂಲ ಆಮದು ಬೆಲೆಗಳನ್ನು ಪರಿಷ್ಕರಣೆ ಮಾಡುತ್ತದೆ. ಈ ಮೂಲ ಆಮದು ದರವು ಆಮದುದಾರರು ಪಾವತಿಸಬೇಕಾದ ತೆರಿಗೆಯ ಮೊತ್ತವನ್ನು ಲೆಕ್ಕಹಾಕಲು ಬೆಲೆ ಆಗಿದೆ. ಭಾರತದಲ್ಲಿ ಚಿನ್ನ, ಖಾದ್ಯ ತೈಲಗಳ ಬೆಲೆಯ ಮೇಲೆ ಈ ಆಮದು ದರವು ಪರಿಣಾಮ ಬೀರುತ್ತದೆ. ಇನ್ನು ಇಂದು ಸದ್ಯಕ್ಕೆ ಚಿನ್ನದ ದರವು ಏರಿಕೆಯಾಗಿದೆ. ನಿನ್ನೆ ಗೋಲ್ಡ್ ರೇಟ್ ಸ್ಥಿರವಾಗಿತ್ತು. ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಏರಿಳಿತ ಕಾಣುತ್ತಿದೆ. ಇನ್ನು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಖಾದ್ಯ ತೈಲ ದರವು ಇತ್ತೀಚೆಗೆ ಜಾಗತಿಕವಾಗಿ ಕೊಂಚ ಇಳಿಕೆಯಾಗುತ್ತಿದೆ.

Gold Rate Today: ಬಂಗಾರದ ಬೆಲೆ ಸ್ಥಿರ, ಅ.2ರ ಬೆಲೆ ವಿವರ ಇಲ್ಲಿದೆGold Rate Today: ಬಂಗಾರದ ಬೆಲೆ ಸ್ಥಿರ, ಅ.2ರ ಬೆಲೆ ವಿವರ ಇಲ್ಲಿದೆ

ವಿಶ್ವದಲ್ಲಿ ಭಾರತವು ಖಾದ್ಯ ತೈಲಗಳು ಮತ್ತು ಬೆಳ್ಳಿಯ ಅತೀ ದೊಡ್ಡ ಆಮದುದಾರ ದೇಶವಾಗಿದೆ. ಚಿನ್ನದ ಆಮದು ವಿಚಾರಕ್ಕೆ ಬಂದಾಗ ಮಾತ್ರ ಭಾರತ 2ನೇ ಸ್ಥಾನದಲ್ಲಿ ನಿಲ್ಲುತ್ತದೆ. ಮೊದಲ ಸ್ಥಾನದಲ್ಲಿ ಚೀನಾ ಇದೆ. ಇನ್ನು ಭಾರತ ಆಮದು ದರವನ್ನು ಕಡಿತ ಮಾಡಿದ ಬಳಿಕ ಚಿನ್ನ, ಪಾಮ್ ಆಯಿಲ್ ಮೊದಲಾದವುಗಳು ನೂತನ ದರಪಟ್ಟಿ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಹಳೆಯ ದರ ಹಾಗೂ ಹೊಸ ದರ: ಡಾಲರ್ ಲೆಕ್ಕಾಚಾರದಲ್ಲಿ

ಹಳೆಯ ದರ ಹಾಗೂ ಹೊಸ ದರ: ಡಾಲರ್ ಲೆಕ್ಕಾಚಾರದಲ್ಲಿ

ಚಿನ್ನ ಮತ್ತು ಬೆಳ್ಳಿಯನ್ನು ಹೊರತುಪಡಿಸಿ ಎಲ್ಲಾ ಸರಕುಗಳ ಮೂಲ ಬೆಲೆಗಳು ಪ್ರತಿ ಟನ್‌ಗೆ ಡಾಲರ್ ಎಂಬ ಲೆಕ್ಕಾಚಾರದಲ್ಲಿದೆ. ಇನ್ನು ಚಿನ್ನದ ಸುಂಕವು ಪ್ರತಿ 10 ಗ್ರಾಂಗೆ ಡಾಲರ್ ಎಂಬ ಲೆಕ್ಕದಲ್ಲಿ ಹಾಗೂ ಬೆಳ್ಳಿ ಪ್ರತಿ ಕೆಜಿಗೆ ಡಾಲರ್ ಲೆಕ್ಕಾಚಾರದಲ್ಲಿ ಇದೆ.

1. ಕಚ್ಚಾ ತಾಳೆ ಎಣ್ಣೆ: ಹಳೆಯ ದರ 996 ಡಾಲರ್, ನೂತನ ದರ 937 ಡಾಲರ್
2. ಆರ್‌ಬಿಡಿ ಪಾಮ್ ಆಯಿಲ್: ಹಳೆಯ ದರ 1,019 ಡಾಲರ್, ನೂತನ ದರ 982 ಡಾಲರ್
3. ಆರ್‌ಬಿಡಿ ಪಾಮ್ ಆಯಿಲ್: ಹಳೆಯ ದರ 1,035 ಡಾಲರ್, ನೂತನ ದರ 998 ಡಾಲರ್
4. ಕಚ್ಚಾ ಸೋಯಾ ಎಣ್ಣೆ: ಹಳೆಯ ದರ 1,362 ಡಾಲರ್, ನೂತನ ದರ 1,257 ಡಾಲರ್
5. ಚಿನ್ನ: ಹಳೆಯ ದರ 549 ಡಾಲರ್, ನೂತನ ದರ 533 ಡಾಲರ್
6. ಬೆಳ್ಳಿ: ಹಳೆಯ ದರ 635 ಡಾಲರ್, ನೂತನ ದರ 608 ಡಾಲರ್

 

 ಇಂದಿನ ಚಿನ್ನ, ಬೆಳ್ಳಿ  ದರ

ಇಂದಿನ ಚಿನ್ನ, ಬೆಳ್ಳಿ ದರ

ಅಕ್ಟೋಬರ್ 3ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 350 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ 46,850 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 380 ರೂಪಾಯಿ ಹಿಗ್ಗಿದ್ದು ಪ್ರಸ್ತುತ 51,110 ರೂಪಾಯಿ ಆಗಿದೆ. ಈ ನಡುವೆ ಸಿಲ್ವರ್ ರೇಟ್ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರ 500 ರೂಪಾಯಿ ಹಿಗ್ಗಿದ್ದು ಪ್ರಸ್ತುತ 57,400 ರೂಪಾಯಿ ಆಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 3 ಬಾರಿ ಇಳಿಕೆಯಾಗಿದ್ದರೆ 4 ಬಾರಿ ಸ್ಥಿರವಾಗಿದೆ. 3 ಬಾರಿ ಹೆಚ್ಚಳವಾಗಿದೆ. ಕಳೆದ ಹತ್ತು ದಿನದಲ್ಲಿ 3 ಬಾರಿ ಬೆಳ್ಳಿ ಬೆಲೆ ಏರಿದ್ದು 4 ಬಾರಿ ಇಳಿದಿದೆ. 3 ಬಾರಿ ಸ್ಥಿರವಾಗಿದೆ.

ಭಾರತದಲ್ಲಿ ಜ್ಯುವೆಲ್ಲರಿ ಸರಣಿ ಮಳಿಗೆಗಳ ಪ್ರಮಾಣ ಶೇ.35ಕ್ಕೆ ಏರಿಕೆಭಾರತದಲ್ಲಿ ಜ್ಯುವೆಲ್ಲರಿ ಸರಣಿ ಮಳಿಗೆಗಳ ಪ್ರಮಾಣ ಶೇ.35ಕ್ಕೆ ಏರಿಕೆ

 ಫ್ಯೂಚರ್, ಸ್ಪಾಟ್ ಗೋಲ್ಡ್, ಸಿಲ್ವರ್ ದರ

ಫ್ಯೂಚರ್, ಸ್ಪಾಟ್ ಗೋಲ್ಡ್, ಸಿಲ್ವರ್ ದರ

ಸದ್ಯ ವಹಿವಾಟಿನಲ್ಲಿ ಅಂದರೆ ಅಕ್ಟೋಬರ್ 3ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 50027.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 57600.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.08ರಷ್ಟು ಇಳಿಕೆಯಾಗಿದ್ದು 1,663.05 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.78ರಷ್ಟು ಹಿಗ್ಗಿದ್ದು, 19.26 ಯುಎಸ್ ಡಾಲರ್ ಆಗಿದೆ.

English summary

India Slashes Base Import Price Of Palm oil, Gold, Here's New price

India has slashed the base import prices of crude and refined palm oil, crude soya oil and gold. Here's New price.
Story first published: Monday, October 3, 2022, 13:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X