For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ Q2 ಫಲಿತಾಂಶ: ನಿವ್ವಳ ಲಾಭ ಶೇ 11.1ರಷ್ಟು ಏರಿಕೆ

|

ಬೆಂಗಳೂರು ಮೂಲಕ ಇನ್ಫೋಸಿಸ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಅಂತ್ಯವಾಗುವ ಎರಡನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 11.1ರಷ್ಟು ಅಧಿಕ ನಿವ್ವಳ ಲಾಭ ಇನ್ಫೋಸಿಸ್‌ಗೆ ಬಂದಿದೆ. ಕಳೆದ ವರ್ಷ ಈ ತ್ರೈಮಾಸಿಕದಲ್ಲಿ 5,421 ಕೋಟಿ ರೂಪಾಯಿ ನಿವ್ವಳ ಲಾಭ ಬಂದಿದ್ದರೆ, ಈ ವರ್ಷ 6,021 ಕೋಟಿ ರೂಪಾಯಿ ನಿವ್ವಳ ಲಾಭ ಬಂದಿದೆ.

 

2021ರ ಎರಡನೇ ತ್ರೈಮಾಸಿಕದಲ್ಲಿ ಸಂಸ್ಥೆಯು ಆದಾಯ 29,602 ಕೋಟಿ ರೂಪಾಯಿ ಆಗಿತ್ತು. ಆದರೆ ಈ ವರ್ಷ ಸಂಸ್ಥೆಯ ಆದಾಯ ಶೇಕಡ 23.4ರಷ್ಟು ಹೆಚ್ಚಳವಾಗಿ 36,538 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಮೊದಲ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕದಲ್ಲಿ ಆದಾಯವು ಶೇಕಡ 12.3ರಷ್ಟು ಹೆಚ್ಚಳವಾಗಿದೆ. ಜೂನ್‌ನಲ್ಲಿ ಅಂತ್ಯವಾಗುವ ತ್ರೈಮಾಸಿಕದಲ್ಲಿ ಸಂಸ್ಥೆಯ ನಿವ್ವಳ ಆದಾಯವು 5,360 ಕೋಟಿ ರೂಪಾಯಿ ಆಗಿತ್ತು.

ಬಿಎಸ್‌ಇ ಫೈಲಿಂಗ್ ಪ್ರಕಾರ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ, ಜುಲೈ-ಸೆಪ್ಟೆಂಬರ್ Q2ನಲ್ಲಿ ಸಂಸ್ಥೆಯ ಆದಾಯವು ಶೇಕಡ 6ರಷ್ಟು ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯ 34,470 ಕೋಟಿ ರೂಪಾಯಿ ಆಗಿದ್ದು ಈ ತ್ರೈಮಾಸಿಕಕ್ಕೆ 36,538 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.

ಇನ್ಫೋಸಿಸ್ Q2 ಫಲಿತಾಂಶ: ನಿವ್ವಳ ಲಾಭ ಶೇ 11.1ರಷ್ಟು ಏರಿಕೆ

ಡಾಲರ್ ಲೆಕ್ಕಾಚಾರ ಹೀಗಿದೆ..

ಇನ್ನು ನಾವು ಇನ್ಫೋಸಿಸ್ ಸಂಸ್ಥೆಯ ಆದಾಯವನ್ನು ಡಾಲರ್ ಲೆಕ್ಕಾಚಾರದಲ್ಲಿ ನೋಡುವುದಾದರೆ, ಸಂಸ್ಥೆಯ ಆದಾಯ ಶೇಕಡ 13.9ರಷ್ಟು ಏರಿಕೆಯಾಗಿ 4,555 ಮಿಲಿಯನ್ ಡಾಲರ್‌ಗೆ ತಲುಪಿದೆ. ಕಳೆದ ವರ್ಷದಲ್ಲಿ ಇದೇ ತ್ರೈಮಾಸಿಕದ ವೇಳೆಗೆ ಸಂಸ್ಥೆಯ ಆದಾಯವುದ 3,998 ಮಿಲಿಯನ್ ಡಾಲರ್ ಆಗಿತ್ತು.

ಸಂಸ್ಥೆಯು ಗುರುವಾರವೇ ಅರ್ಧ ಹಣಕಾಸು ವರ್ಷದ ಡಿವಿಡೆಂಡ್ ಅನ್ನು ಘೋಷಣೆ ಮಾಡಿದೆ. ಪ್ರತಿ ಷೇರಿಗೆ 16.5 ರೂಪಾಯಿ ಡಿವಿಡೆಂಡ್ ಲಭ್ಯವಾಗಿದೆ. ಸಂಸ್ಥೆಯು ಅಕ್ಟೋಬರ್ 28 ಅನ್ನು ಡಿವಿಡೆಂಡ್‌ನ ರೆಕಾರ್ಡ್ ಡೇಟ್ ಹಾಗೂ ನವೆಂಬರ್ 10 ಅನ್ನು ಪೇಔಟ್ ಡೇಟ್ ಎಂದು ನಿಗದಿಪಡಿಸಿದೆ. ಇನ್ನು ಸಂಸ್ಥೆ ಗುರುವಾಗ ಷೇರು ಮರುಖರೀದಿ ಮೊತ್ತವನ್ನು 9,300 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದೆ.

 

ಸಂಸ್ಥೆಯ ಒಟ್ಟು ವೆಚ್ಚವು ಶೇಕಡ 15.2ರಷ್ಟು ಹೆಚ್ಚಾಗಿ 3,253 ಕೋಟಿಗೆ ತಲುಪಿದೆ. ಆದರೆ ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಸಂಸ್ಥೆಯ ಒಟ್ಟು ವೆಚ್ಚ 2,824 ಕೋಟಿ ರೂಪಾಯಿ ಆಗಿತ್ತು. ಪ್ರತಿ ಷೇರಿನಿಂದ ಸಂಸ್ಥೆ 14.35 ರೂಪಾಯಿ ಪಡೆಯುತ್ತಿದೆ. ಇದಕ್ಕೂ ಮುನ್ನ 12.88 ರೂಪಾಯಿ ಪಡೆಯುತ್ತಿತ್ತು.

English summary

Infosys Q2 Results: Profit Up 11.1 Percent to Rs 6,021 Crore

Infosys Q2FY23 Results: IT major Infosys on Thursday posted a consolidated net profit of Rs 6,021 crore for the September 2022 quarter, a growth of 11.1 per cent as compared with Rs 5,421 crore in the year-ago quarter.
Story first published: Thursday, October 13, 2022, 18:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X