For Quick Alerts
ALLOW NOTIFICATIONS  
For Daily Alerts

ನೆಲದಿಂದ 1.2 ಅಡಿ ಎತ್ತರದಲ್ಲಿ ತೇಲುವ ಹಾಸಿಗೆ : ಬೆಲೆ 12 ಕೋಟಿ ರುಪಾಯಿ

|

ಸಮಯ ಉರುಳಿದಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಇಂದು ಇರುವ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಬದಲಾಗಿ ಹೋಗುತ್ತೆ. ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ನೀವು ದೂರವಾಣಿ ವಿಚಾರವಾಗೇ ತೆಗೆದುಕೊಂಡರೆ ಲ್ಯಾಂಡ್‌ಲೈನ್, ಮೊಬೈಲ್ ಫೋನ್ ಆಗಿ, ಫೋನ್‌ಗಳು ಸ್ಮಾರ್ಟ್‌ ಫೋನ್ ಆಗಿ ಬದಲಾಗಿದ್ದನ್ನೇ ನೋಡಬಹುದು.

 

ಹೀಗೆ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ದಿನನಿತ್ಯ ಬಳಸುವ ವಸ್ತುಗಳು, ದೀರ್ಘಾವಧಿ ಬಾಳಿಕೆ ಬರುವ ಎಲ್ಲಾ ಉತ್ಪನ್ನಗಳು ವಿವಿಧ ಬ್ರ್ಯಾಂಡ್‌ಗಳಲ್ಲಿ ಮಾರುಕಟ್ಟೆ ಪ್ರವೇಶಿಸಿ ಗ್ರಾಹಕರನ್ನು ಆಕರ್ಷಿಸುತ್ತವೆ. ಇದರ ನಡುವೆ ದುಬಾರಿ, ಐಷಾರಾಮಿ ವಸ್ತುಗಳು ಸಹ ಮಾರುಕಟ್ಟೆಯಲ್ಲಿವೆ. ಹಣವುಳ್ಳವರು ಐಷಾರಾಮಿ ಜೀವನದ ಜೊತೆಗೆ ದುಬಾರಿ ಉತ್ಪನ್ನಗಳ ಖರೀದಿಗೆ ಮುಂದಾಗುತ್ತಾರೆ.

ಮಾರುಕಟ್ಟೆ ಪ್ರವೇಶಿಸಿದೆ ತೇಲುವ ಹಾಸಿಗೆ

ಮಾರುಕಟ್ಟೆ ಪ್ರವೇಶಿಸಿದೆ ತೇಲುವ ಹಾಸಿಗೆ

ಹೌದಾ! ಈ ವಿಷಯವನ್ನು ಮೊದಲ ಬಾರಿಗೆ ಕೇಳಿದಾಗ ನಿಮಗೆ ಆಶ್ಚರ್ಯ ಮೂಡಿರಬಹುದು. ಹೌದು ನೂತನವಾಗಿ ಮಾರುಕಟ್ಟೆ ಪ್ರವೇಶಿಸಿರುವ ಉತ್ಪನ್ನಗಳಲ್ಲಿ ಒಂದು ಈ ತೇಲುವ ಹಾಸಿಗೆ. ಗ್ರಾಹಕರ ಆಲೋಚನೆಗೂ ಮೀರಿ ಈ ಹಾಸಿಗೆಯನ್ನು ಆವಿಷ್ಕಾರ ಮಾಡಲಾಗಿದೆ.

ನೆಲದಿಂದ 1.2 ಅಡಿ ತೇಲುವ ಹಾಸಿಗೆ

ನೆಲದಿಂದ 1.2 ಅಡಿ ತೇಲುವ ಹಾಸಿಗೆ

ವಿಶ್ವದ ದುಬಾರಿ ವಸ್ತುಗಳಲ್ಲಿ ಒಂದಾದ ಈ ನೂತನ ಆವಿಷ್ಕಾರದ ಹಾಸಿಗೆಯು ನೆಲದಿಂದ 1.2 ಅಡಿ ಎತ್ತರದಲ್ಲಿರುತ್ತದೆ. ಯಾವುದೇ ಮರದ, ಕಬ್ಬಿಣದ ಸಪೋರ್ಟ್ ಇಲ್ಲದೆ ಗಾಳಿಯಲ್ಲಿ ತೇಲುತ್ತದೆ. ಏಳು ವರ್ಷದ ಅಧ್ಯಯನದ ಮೂಲಕ ಈ ಹಾಸಿಗೆಯನ್ನು ತಯಾರು ಮಾಡಲಾಗಿದೆ.

ಹಾಸಿಗೆ ಕೆಳಗೆ ಬೀಳುವುದಿಲ್ವಾ?
 

ಹಾಸಿಗೆ ಕೆಳಗೆ ಬೀಳುವುದಿಲ್ವಾ?

ಹಾಸಿಗೆಯನ್ನು ಅಮಾನತುಗೊಳಿಸುವ ಕಾಂತೀಯ ವ್ಯವಸ್ಥೆಯ ಬಳಕೆಯ ಮೂಲಕ ಈ ಅದ್ಭುತ ಸಾಧನೆಯನ್ನು ಸಾಧಿಸಲಾಗುತ್ತದೆ. ಅಂದರೆ ಮ್ಯಾಗ್ನೆಟಿಕ್ ಸಪೋರ್ಟ್ ಸಿಸ್ಟಮ್‌ ನಿಂದ ಇದನ್ನು ತಯಾರು ಮಾಡಲಾಗಿದೆ. ಹಾಸಿಗೆ ಒಂದು ದೈತ್ಯ ಆಯತಾಕಾರದ ಆಯಸ್ಕಾಂತವನ್ನು ಒಳಗೊಂಡಿದ್ದು, ಹಾಸಿಗೆಯ ನಾಲ್ಕು ಬದಿಯಲ್ಲಿ ಸುಲಭವಾಗಿ ಗೋಚರವಾಗದ ರೀತಿಯಲ್ಲಿ ಟೈ ಮಾಡಲಾಗಿದೆ.

ಹಾಸಿಗೆಯ ಚೌಕಟ್ಟು ಸರಳವಾದ ರೆಕ್ಟಿಲಿನೀಯರ್ ಬೋರ್ಡ್ ಆಗಿದೆ, ಕಪ್ಪು ಬಣ್ಣದಿಂದ ತಯಾರಿಸಲಾಗಿದ್ದು, ಅದು ಅದೃಶ್ಯ ಕಾಲುಗಳ ಮೇಲೆ ತೇಲುವಂತೆ ಗೋಚರವಾಗುತ್ತದೆ.

ಎಷ್ಟು ತೂಕ ತಡೆದುಕೊಳ್ಳಬಹುದು?

ಎಷ್ಟು ತೂಕ ತಡೆದುಕೊಳ್ಳಬಹುದು?

ಈ ಹಾಸಿಗೆ ಬಳಸಿರುವ ತಂತ್ರಜ್ಞಾನದ ಅಂದಾಜಿನಂತೆ ಸಂಪೂರ್ಣ ಒಂದು ಟನ್ ತೂಕವನ್ನು ತಡೆದುಕೊಳ್ಳಬಹುದಾಗಿದೆ. ಈ ಹಾಸಿಗೆಯನ್ನು ಅತ್ಯಂತ ಸೂಕ್ಷ್ಮವಾಗಿ ತಯಾರು ಮಾಡಲಾಗಿದ್ದು, ವಿಭಿನ್ನವಾದುದನ್ನು ಖರೀದಿ ಮಾಡಬೇಕೆನ್ನುವ ಇದನ್ನು ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ಹಾಸಿಗೆಯಿಂದ ನೀವು ಕೆಳಗೆ ಬಿದ್ದರೆ ನಾವು ಜವಾಬ್ದಾರರಲ್ಲ ಎನ್ನುತ್ತಾರೆ ಮಾರಾಟಗಾರರು.

ಈ ಹಾಸಿಗೆ ಬೆಲೆ ಬರೋಬ್ಬರಿ 12 ಕೋಟಿ ರುಪಾಯಿ

ಈ ಹಾಸಿಗೆ ಬೆಲೆ ಬರೋಬ್ಬರಿ 12 ಕೋಟಿ ರುಪಾಯಿ

ಈ ನೂತನ ಆವಿಷ್ಕಾರದ ಹಾಸಿಗೆ ಬೆಲೆಯು ಬರೋಬ್ಬರಿ 1.6 ಮಿಲಿಯನ್ ಅಮೆರಿಕನ್ ಡಾಲರ್. ಅಂದರೆ ಭಾರತದ ರುಪಾಯಿಗಳಲ್ಲಿ ಅಂದಾಜು 11 ಕೋಟಿ, 83 ಲಕ್ಷದ 95 ಸಾವಿರ ರುಪಾಯಿ

ತೇಲುವ ಹಾಸಿಗೆ ತಯಾರಿಸಿದ್ದು ಈತ

ತೇಲುವ ಹಾಸಿಗೆ ತಯಾರಿಸಿದ್ದು ಈತ

ಏಳು ವರ್ಷಗಳ ಸತತ ಪರಿಶ್ರಮದ ಬಳಿಕ 'ಜಂಜಾಪ್ ರುಯಿಜ್ಸೆನಾರ್ಸ್' ಎಂಬ ನೆದರ್ಲೆಂಡ್ಸ್‌ನ ವಾಸ್ತುಶಿಲ್ಪಿ ಇದನ್ನು ತಯಾರಿ ಮಾಡಿದ್ದಾರೆ. ಅವರು ಪ್ರಸ್ತುತ ರಾಯಲ್ ಇನ್ಸಿಟ್ಯೂಟ್ ಆಫ್ ಡಚ್ ಆರ್ಕಿಟೆಕ್ಟ್ಸ್‌ನಲ್ಲಿ ಬೋಧನೆ ಮಾಡುತ್ತಿದ್ದಾರೆ. ಈತನಿಗೆ 'ಅಕಾಡೆಮಿ ಆಫ್ ಆರ್ಕಿಟೆಕ್ಚರ್ ಆಮ್ಸ್ಟರ್ಡ್ಯಾಮ್' ಸೇರಿದಂತೆ ಅನೇಕ ಪ್ರಶಸ್ತಿಗಳು ಒಲಿದು ಬಂದಿವೆ.

2000ನೇ ಇಸವಿಯಲ್ಲಿ ಯೂನಿವರ್ಸ್ ಆರ್ಕಿಟೆಕ್ಚರ್ ಅನ್ನು ಸ್ಥಾಪಿಸಿದ್ದು, ಇದು ನಗರೀಕರಣ, ವಾಸ್ತುಶಿಲ್ಪ, ವಿನ್ಯಾಸ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ.

 

English summary

Innovative Floating Bed Price 1.6 Million US Dollar

This is the innovative Floating Bed. This Magnetic bed floats 1.2 feet above ground
Story first published: Saturday, March 7, 2020, 15:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X