For Quick Alerts
ALLOW NOTIFICATIONS  
For Daily Alerts

Pan Card : ಎಲ್ಲರೂ ಪ್ಯಾನ್ ಕಾರ್ಡ್ ಹೊಂದುವುದು ಕಡ್ಡಾಯವೇ?

|

ಪ್ಯಾನ್ ಕಾರ್ಡ್ ಎಂಬುವುದು ಪ್ರಮುಖ ಬಹಳ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಎಲ್ಲ ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್ ಮುಖ್ಯವಾಗಿದೆ. ನಮ್ಮ ಬ್ಯಾಂಕ್‌ನಲ್ಲಂತೂ ಪ್ಯಾನ್ ಕಡ್ಡಾಯವೇ ಹೌದು. ಬೇರೆ ದಾಖಲೆಗಳಿಗೆ ಪ್ಯಾನ್ ಕಾರ್ಡ್‌ ಅನ್ನು ಗುರುತಿನ ಪುರಾವೆಯನ್ನಾಗಿಸಲಾಗುತ್ತದೆ. ಆದರೆ ಪ್ಯಾನ್ ಅನ್ನು ಎಲ್ಲರೂ ಹೊಂದುವುದು ಕಡ್ಡಾಯವೇ ಎಂಬ ಪ್ರಶ್ನೆ ಹಲವಾರು ಮಂದಿಯಲ್ಲಿದೆ.

ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಹತ್ತು ಡಿಜಿಟ್‌ನ ಅಂಕಿ ಸಂಖ್ಯೆಯಾಗಿದೆ. ಇದನ್ನು ಆದಾಯ ತೆರಿಗೆ ಇಲಾಖೆಯು ನೀಡುತ್ತದೆ. ತೆರಿಗೆ ಪಾವತಿ, ಟಿಡಿಎಸ್/ಟಿಸಿಎಸ್ ಕ್ರೆಡಿಟ್ಸ್, ಆದಾಯ ತೆರಿಗೆ ರಿಟರ್ನ್, ಎಫ್‌ಬಿಟಿ ಮೊದಲಾದವುಗಳಿಗೆ ಪ್ಯಾನ್ ಕಾರ್ಡ್ ಅತೀ ಮುಖ್ಯವಾದ ದಾಖಲೆಯಾಗಿದೆ. ಮುಖ್ಯವಾಗಿ ಆದಾಯ ತೆರಿಗೆ ವಿಚಾರಕ್ಕೆ ಬಂದಾಗ ಪ್ಯಾನ್ ಕಾರ್ಡ್ ಅತೀ ಮುಖ್ಯವಾಗಿದೆ.

ಆಧಾರ್‌ನೊಂದಿಗೆ ಪ್ಯಾನ್ ಲಿಂಕ್‌ ಆಗಿದೆಯೇ, ಹೀಗೆ ಪರಿಶೀಲಿಸಿಆಧಾರ್‌ನೊಂದಿಗೆ ಪ್ಯಾನ್ ಲಿಂಕ್‌ ಆಗಿದೆಯೇ, ಹೀಗೆ ಪರಿಶೀಲಿಸಿ

ನಮ್ಮ ಎಲ್ಲಾ ಹಣಕಾಸು ವಹಿವಾಟುಗಳು ಪ್ಯಾನ್ ಕಾರ್ಡ್‌ನಿಂದ ನಿಯಂತ್ರಿತವಾಗಿರುತ್ತದೆ. ಪ್ಯಾನ್ ಕಾರ್ಡ್ ಮಾಡಿಸುವುದು ಕಡ್ಡಾಯವೇ?, ಕಡ್ಡಾಯ ಯಾಕೆ? ಯಾರಿಗೆ ಪ್ಯಾನ್ ಕಾರ್ಡ್ ಕಡ್ಡಾಯ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಯಾರಿಗೆ ಪ್ಯಾನ್ ಕಾರ್ಡ್ ಕಡ್ಡಾಯ?

ಯಾರಿಗೆ ಪ್ಯಾನ್ ಕಾರ್ಡ್ ಕಡ್ಡಾಯ?

ಆದಾಯ ತೆರಿಗೆ ಇಲಾಖೆಯ ಪ್ರಕಾರ ಪ್ಯಾನ್ ಕಾರ್ಡ್ ಎಂಬುವುದು ಎಲ್ಲರಿಗೂ ಕಡ್ಡಾಯವಾಗಿದೆ. ಎಲ್ಲರಿಗೂ ಎಂದರೆ ಯಾರ ಆದಾಯವು ಆದಾಯ ತೆರಿಗೆ ಮಿತಿಗಿಂತ ಅಧಿಕವಾಗಿರುತ್ತದೆಯೋ ಅವರು ಪ್ಯಾನ್ ಕಾರ್ಡ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ಇನ್ನು ಟ್ರಸ್ಟ್‌ಗಳಿಗೂ ಕೂಡಾ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಇನ್ನು ಯಾವುದೇ ವ್ಯಕ್ತಿ ವ್ಯಾಪಾರ, ಉದ್ಯಮವನ್ನು ಮಾಡುತ್ತಿದ್ದರೆ, ಕಳೆದ ವರ್ಷದಲ್ಲಿ ಐದು ಲಕ್ಷಕ್ಕಿಂತ ಅಧಿಕ ವಹಿವಾಟು ನಡೆದಿದ್ದರೆ ಪ್ಯಾನ್ ಮುಖ್ಯವಾಗಿದೆ. ಇನ್ನು ಎಲ್ಲ ಹಣಕಾಸು ವಹಿವಾಟಿಗೂ ಕೂಡಾ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಒಂದು ಹಣಕಾಸು ವರ್ಷದಲ್ಲಿ 2,50,000 ರೂಪಾಯಿಗಿಂತ ಅಧಿಕ ಆದಾಯವನ್ನು ಹೊಂದಿರುವ ಎಲ್ಲರೂ ಆದಾಯ ಕಾರ್ಡ್ ಅನ್ನು ಹೊಂದುವುದು ಕಡ್ಡಾಯವಾಗಿದೆ.

ಟಿಡಿಎಸ್ ಹೆಚ್ಚುವರಿ ತಪ್ಪಿಸಲು ಶೀಘ್ರ ಪ್ಯಾನ್-ಇಪಿಎಫ್ ಲಿಂಕ್ ಮಾಡಿಟಿಡಿಎಸ್ ಹೆಚ್ಚುವರಿ ತಪ್ಪಿಸಲು ಶೀಘ್ರ ಪ್ಯಾನ್-ಇಪಿಎಫ್ ಲಿಂಕ್ ಮಾಡಿ

 ಪ್ಯಾನ್ ಕಾರ್ಡ್ ಅನ್ನು ಹೊಂದುವುದು ಕಡ್ಡಾಯವೇಕೆ?

ಪ್ಯಾನ್ ಕಾರ್ಡ್ ಅನ್ನು ಹೊಂದುವುದು ಕಡ್ಡಾಯವೇಕೆ?

ಆದಾಯ ತೆರಿಗೆ ರಿಟರ್ನ್ ಅನ್ನು ಪಡೆಯಬೇಕಾದರೆ ಪ್ಯಾನ್ ಕಾರ್ಡ್ ಇರುವುದು ಮುಖ್ಯವಾಗಿದೆ. ಹಾಗೆಯೇ ವಹಿವಾಟಿಗೂ ಕೂಡಾ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಇನ್ನು ಐದು ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಯಾವುದೇ ಆಸ್ತಿ, ವಾಹನ ಖರೀದಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಇನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ 50 ಸಾವಿರ ರೂಪಾಯಿಗಿಂತ ಅಧಿಕ ಡೆಪಾಸಿಟ್ ಮಾಡಿದರೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಇನ್ನು ಬ್ಯಾಂಕ್ ಖಾತೆಯನ್ನು ತೆರೆಯುವುದಕ್ಕೂ ಪ್ಯಾನ್ ಕಾರ್ಡ್ ಬೇಕಾಗಿದೆ. ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ 25 ಸಾವಿರ ರೂಪಾಯಿಗಿಂತ ಅಧಿಕ ವಹಿವಾಟಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. 50 ಸಾವಿರ ರೂಪಾಯಿಗಿಂತ ಅಧಿಕ ಚೆಕ್ ಡೆಪಾಸಿಟ್‌ಗೆ ಪ್ಯಾನ್ ಬೇಕಾಗಿದೆ.

 ಆಧಾರ್-ಪ್ಯಾನ್ ಲಿಂಕ್ ಆಗಿದೆಯೇ?

ಆಧಾರ್-ಪ್ಯಾನ್ ಲಿಂಕ್ ಆಗಿದೆಯೇ?

ಪ್ರಸ್ತುತ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ಹಣಕಾಸು ವಹಿವಾಟು ನಡೆಸಲು ಸಾಧ್ಯ ಆಗುವುದಿಲ್ಲ. ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಹಾಗೂ ಆಧಾರ್ ಕಾರ್ಡ್ ಎಲ್ಲ ಹಣಕಾಸು ವಹಿವಾಟಿಗೆ ಅತೀ ಮುಖ್ಯವಾದ ದಾಖಲೆಯಾಗಿದೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಮಾಡದಿದ್ದರೆ ಹೂಡಿಕೆ, ಕಡಿತ ಹಾಗೂ ಟಿಡಿಎಸ್ ವಿಚಾರದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. 

ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ಹೀಗೆ ನೋಡಿ

ಹಂತ 1: incometaxindiaefiling.gov.in/aadhaarstatus ಗೆ ಭೇಟಿ ನೀಡಿ
ಹಂತ 2: ಪ್ಯಾನ್, ಆಧಾರ್ ಅಥವಾ ಇತರೆ ಯೂಸರ್ ಐಡಿ ಹಾಕಿ ಲಾಗಿನ್ ಆಗಿ
ಹಂತ 3: ಆಧಾರ್ ಸಂಖ್ಯೆಯನ್ನು ಉಲ್ಲೇಖ ಮಾಡಿ
ಹಂತ 4: ನಿಮ್ಮ ಪ್ಯಾನ್ ಸಂಖ್ಯೆಯನ್ನು ಉಲ್ಲೇಖ ಮಾಡಿ
ಹಂತ 5: View Link Aadhaar Status ಮೇಲೆ ಕ್ಲಿಕ್ ಮಾಡಿ
ಹಂತ 6: ನಿಮ್ಮ ಆಧಾರ್ ಪ್ಯಾನ್ ಲಿಂಕ್ ಆಗಿದೆಯೇ ಎಂಬುವುದು ಸ್ಕ್ರೀನ್ ಮೇಲೆ ತೋರಿಸಲಿದೆ

English summary

Is Having A PAN Card Compulsory, Here's Explained in Kannada

A Permanent Account Number (PAN) is a 10-digit alphanumeric number. Is Having A PAN Card Compulsory, Here's Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X