ನಿಮ್ಮ ವಾಹನಕ್ಕೆ ಇನ್ಷೂರೆನ್ಸ್ ಮಾಡಿಸಲು ಅಥವಾ ನವೀಕರಣ ಮಾಡಲು ಪಿಯುಸಿ ಪ್ರಮಾಣಪತ್ರ ಇರುವುದು ಅಗತ್ಯ. ಆದರೆ, ವಿಮೆ ಕ್ಲೇಮ್ ಮಾಡಲೂ ಪಿಯುಸಿ ಸರ್ಟಿಫಿಕೇಟ್ ಬೇಕಾ ಎಂಬ ಪ್ರಶ್ನೆ ಇದೆ. ಇಲ್ಲಿ ಪಿಯುಸಿ ಎಂದರೆ ಪ್ರೀ ಯೂನಿವರ್ಸಿಟಿ ಅಲ್ಲ, ಪೊಲ್ಯೂಷನ್ ಅಂಡರ್ ಕಂಟ್ರೋಲ್. ಮಾಲಿನ್ಯ ತಪಾಸಕ ಪರೀಕ್ಷೆಯ ಪ್ರಮಾಣಪತ್ರ, ಅಥವಾ ಪೊಲ್ಯೂಷನ್ ಸರ್ಟಿಫಿಕೇಟ್ ಇದು.
"1989ರ ಕೇಂದ್ರೀಯ ಮೋಟಾರು ವಾಹನ ನಿಯಮದ ಪ್ರಕಾರ ಎಲ್ಲಾ ವಾಹನಗಳಿಗೂ ಪಿಯುಸಿ ಸರ್ಟಿಫಿಕೇಟ್ ಅನ್ನು ಭಾರತ ಸರ್ಕಾರ ಕಡ್ಡಾಯ ಮಾಡಿದೆ" ಎಂದು ಎಡೆಲ್‌ವೀಸ್ ಜನರಲ್ ಇನ್ಷೂರೆನ್ಸ್ ಕಂಪನಿಯ ಚೀಫ್ ಟೆಕ್ನಿಕಲ್ ಆಫೀಸರ್ ನಿತಿನ್ ದೇವೋ ಹೇಳಿದ್ದಾರೆ.
ಮಾಲಿನ್ಯ ಹೇಗೆ?
ಒಂದು ವಾಹನ ಹೊರಸೂಸುವ ಹೊಗೆಯಲ್ಲಿ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ಕಾರ್ಬನ್ ಮಾನಾಕ್ಸೈಡ್ ಇದ್ದರೆ ಅದನ್ನು ಮಾಲಿನ್ಯ ಎಂದು ಪರಿಗಣಿಸಲಾಗುತ್ತದೆ. ಕಡಿಮೆ ಕಾರ್ಬಲ್ ಮಾನಾಕ್ಸೈಡ್ ಹೊರಸೂಸುವ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಕೊಡಲಾಗುತ್ತದೆ. ಮಾಲಿನ್ಯ ತಪಾಸಣಾ ಪರೀಕ್ಷೆಯನ್ನು ಬಹಳಷ್ಟು ಕಡೆ ಮಾಡಲಾಗುತ್ತದೆ. ಮಾನ್ಯತೆ ಪಡೆದ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿ ಪಿಯುಸಿ ಸರ್ಟಿಫಿಕೇಟ್ ಪಡೆಯಬೇಕು.
ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಕಡ್ಡಾಯ ಮಾಡಿರುವುದರಿಂದ ಇನ್ಷೂರೆನ್ಸ್ ಕಂಪನಿಗಳೂ ಕೂಡ ಇದನ್ನೇ ಅನುಸರಿಸುತ್ತಿವೆ. ಮಾನ್ಯತೆ ಪಡೆದ ಕೇಂದ್ರಗಳಲ್ಲಿ ವಾಹನಕ್ಕೆ ಪಿಯುಸಿ ಪ್ರಮಾಣಪತ್ರ ಪಡೆದರೆ ಮಾತ್ರ ವಿಮೆ ಮಾಡಿಸಲು ಅಥವಾ ವಿಮೆ ನವೀಕರಣ ಮಾಡಲು ಅಥವಾ ವಿಮೆ ಕ್ಲೇಮ್ ಮಾಡಲು ಅವಕಾಶ ನೀಡುವಂತೆ ಇನ್ಷೂರೆನ್ಸ್ ಕಂಪನಿಗಳಿಗೆ ಐಆರ್‌ಡಿಎಐ ಸಂಸ್ಥೆ ಸೂಚನೆ ನೀಡಿದೆ.
"ವಾಹನಕ್ಕೆ ವಿಮೆ ಮಾಡಿಸುವಾಗ ಅಥವಾ ವಿಮೆ ನವೀಕರಣ ಮಾಡುವಾಗ ಮಾಲೀಕರು ಸಿಂದುವಾದ ಪಿಯುಸಿ ಪ್ರಮಾಣಪತ್ರ ತಂದಿರಬೇಕು. ಇದು ಐಆರ್‌ಡಿಎಐನ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕಾನೂನು ಪ್ರಕಾರ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದೆಯೇ ಯಾವ ವಾಹನವೂ ರಸ್ತೆ ಇಳಿಯುವಂತಿಲ್ಲ. ಈ ನಿಯಮ ಸರಿಯಾಗಿ ಜಾರಿಯಾಗಿಲ್ಲ ಅಷ್ಟೇ. ಇನ್ಷೂರೆನ್ಸ್ ಪಾಲಿಸಿ ರಿನಿವಲ್ ಮಾಡುವಾಗ ಸರಿಯಾದ ಪಿಯುಸಿ ಸರ್ಟಿಫಿಕೇಟ್ ಇಲ್ಲದೇ ಕಾರಿನ ವಿಮೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ವಿಮಾ ಕಂಪನಿಗಳಿಗೆ ಆದೇಶಿಸಿತ್ತು. ಈ ಆರ್ಡರ್ ಆದೇಶದ ಪ್ರಕಾರ ಇನ್ಷೂರೆನ್ಸ್ ರೆಗ್ಯೂಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್‌ಡಿಎಐ) ಈ ನೋಟಿಫಿಕೇಶನ್ ಹೊರಡಿಸಿದೆ" ಎಂದು ಬಜಾಜ್ ಕ್ಯಾಪಿಟಲ್ ಸಂಸ್ಥೆಯ ಎಂಡಿ ಮತ್ತು ಜಂಟಿ ಛೇರ್ಮನ್ ಸಂಜೀವ್ ಬಜಾಜ್ ಹೇಳಿದ್ದಾರೆ.
ಕ್ಲೇಮ್ ಮಾಡಲು ಪಿಯುಸಿ ಸರ್ಟಿಫಿಕೇಟ್ ಬೇಕಿಲ್ಲ
ಟ್ರಾಫಿಕ್ ಪೊಲೀಸರು ವಾಹನ ಸವಾರರ ಬಳಿ ಕೇಳುವ ದಾಖಲೆಗಳೆಂದರೆ ಡ್ರೈವಿಂಗ್ ಲೈಸೆನ್ಸ್, ವಾಹನ ಇನ್ಷೂರೆನ್ಸ್, ಪಿಯುಸಿ (ಪೊಲ್ಯೂಷನ್ ಸರ್ಟಿಫಿಕೇಟ್), ಫಿಟ್ನೆಸ್ ಸರ್ಟಿಫಿಕೇಟ್, ಮೆಡಿಕಲ್ ಸರ್ಟಿಫಿಕೇಟ್ ಮತ್ತು ವಾಹನ ನೊಂದಣಿ.
ವಾಹನಕ್ಕೆ ವಿಮೆ ಮಾಡಿಸಲು ಪಿಯುಸಿ ಸರ್ಟಿಫಿಕೇಟ್ ಅಗತ್ಯವಾದರೂ ವಿಮೆ ಕ್ಲೇಮ್ ಮಾಡುವಾಗ ಅದು ಬೇಕೆಂದೇನೂ ಇಲ್ಲ. ಹೊಸದಾಗಿ ಅಳವಡಿಸಲಾದ ನಿಯಮದ ಪ್ರಕಾರ ಇನ್ಷೂರೆನ್ಸ್ ಹಣದ ರಿಟರ್ನ್ ಪಡೆಯಲು ಪಿಯುಸಿ ಪ್ರಮಾಣಪತ್ರ ಅಗತ್ಯ ಬೀಳುವುದಿಲ್ಲ.
ಯಾವಾಗ ಮಾಡಿಸಬೇಕು ಮಾಲಿನ್ಯ ಪರೀಕ್ಷೆ?
ನೀವು ಹೊಸದಾಗಿ ಕಾರು ಖರೀದಿಸಿದಾಗ ಪಿಯುಸಿ ಸರ್ಟಿಫಿಕೇಟ್ ಕೊಡಲಾಗುತ್ತದೆ. ಅದು ಒಂದು ವರ್ಷದವರೆಗೆ ಮಾತ್ರ ಸಿಂಧುವಾಗಿರುತ್ತದೆ. ಅದಾದ ಬಳಿಕ ನಿರ್ದಿಷ್ಟ ಅವಧಿಗೊಮ್ಮೆ ಮಾಲಿನ್ಯ ತಪಾಸಣೆ ಮಾಡಿಸಬೇಕು. ಪೆಟ್ರೋಲ್ ವಾಹನವಾದರೆ ಪಿಯುಸಿ ಪರೀಕ್ಷೆಯಲ್ಲಿ ಪ್ರತೀ 3 ತಿಂಗಳಿಗೆ ಮಾಡಿಸಬೇಕು. ಡೀಸೆಲ್ ವಾಹನವಾದರೆ ಆರು ತಿಂಗಳಿಗೊಮ್ಮೆ ಮಾಡಿಸಬೇಕು. ನೀವು ಆಗಾಗ್ಗೆ ವಾಹನ ವಾಲಿನ್ಯ ತಪಾಸಣೆ ಪರೀಕ್ಷೆ ಮಾಡಿಸುತ್ತಿರಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ವಿಫಲವಾದರೆ ವಾಹನದ ಸರ್ವಿಸಿಂಗ್ ಮಾಡಿಸುವುದು ಅಗತ್ಯವಾಗಿರುತ್ತದೆ.
ಇನ್ನು ಎಲೆಕ್ಟ್ರಿಕ್ ವಾಹನಳು ಪರಿಸರ ಸ್ನೇಹಿಗಳಾದ್ದರಿಂದ ಅವುಗಳಿಗೆ ಮಾಲಿನ್ಯ ತಪಾಸಣೆಯ ಅಗತ್ಯ ಬೀಳುವುದಿಲ್ಲ. ಉಳಿದಂತೆ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳು ಮಾಲಿನ್ಯ ಪರೀಕ್ಷೆ ಮಾಡಿಸಿ ವಾಹನಕ್ಕೆ ಪಿಯುಸಿ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications