For Quick Alerts
ALLOW NOTIFICATIONS  
For Daily Alerts

Jio 5G Recharge Plan: ಜಿಯೋ 5G ರಿಚಾರ್ಜ್ ದರ, ವ್ಯಾಲಿಡಿಟಿ ಇತರೆ ಮಾಹಿತಿ

|

ದೇಶದಲ್ಲಿ ಈಗಾಗಲೇ 5ಜಿ ಸೇವೆಯನ್ನು ಆರಂಭ ಮಾಡಲಾಗಿದೆ. ಈಗಾಗಲೇ ಏರ್‌ಟೆಲ್ ಹಾಗೂ ರಿಲಯನ್ಸ್ ಜಿಯೋದಂತಹ ಪ್ರಮುಖ ಟೆಲಿಕಾಂ ಸಂಸ್ಥೆಗಳು 5ಜಿ ಸೇವೆ ಪ್ರಾಯೋಗಿಕ ಪ್ರಯೋಗವನ್ನು ಆರಂಭಿಸಿದೆ. ಕರ್ನಾಟಕದ ಕೆಲವು ನಗರಗಳು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಲಾಗಿದೆ. ಈಗ ಜಿಯೋ ತನ್ನ 5ಜಿ ಸೇವೆಯ ರಿಚಾರ್ಜ್ ದರ, ವ್ಯಾಲಿಡಿಟಿ ಮೊದಲಾದ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಈ ಮೂಲಕ ರಿಲಯನ್ಸ್ ಜಿಯೋ ಅಧಿಕೃತವಾಗಿ ದೇಶದಲ್ಲಿ ತನ್ನ 5ಜಿ ಸೇವೆಯನ್ನು ಆರಂಭ ಮಾಡಿದೆ. 5ಜಿ ಸೇವೆ ಆರಂಭಿಸಿರುವ ಟೆಲಿಕಾಂ ಸಂಸ್ಥೆಗಳು ತಮ್ಮ ಮೊಬೈಲ್‌ನಲ್ಲಿ 5ಜಿ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆಯೇ ಎಂಬ ಬಗ್ಗೆ ಎಲ್ಲ ಗ್ರಾಹಕರಿಗೆ ಮಾಹಿತಿಯನ್ನು ನೀಡಿದೆ. ಈಗ ಜಿಯೋ ತನ್ನ 5ಜಿ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.

5G in India: ಮೈಸೂರು ಸೇರಿ 11 ನಗರಗಳಲ್ಲಿ ಜಿಯೋ ಟ್ರೂ 5ಜಿ ಆರಂಭ5G in India: ಮೈಸೂರು ಸೇರಿ 11 ನಗರಗಳಲ್ಲಿ ಜಿಯೋ ಟ್ರೂ 5ಜಿ ಆರಂಭ

ಮೈ ಜಿಯೋ ಆಪ್‌ನಲ್ಲಿ ಹೊಸ ರಿಚಾರ್ಜ್ ಪ್ಲ್ಯಾನ್ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಈ ರಿಚಾರ್ಜ್ ಮೂಲಕ ಜಿಯೋ ಸಿಮ್ ಬಳಕೆದಾರರು ಅತೀ ವೇಗದ 5ಜಿ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ಅಕ್ಟೋಬರ್ 2022ರಲ್ಲಿ ರಿಲಯನ್ಸ್ ಜಿಯೋ 5ಜಿ ಸೇವೆಯನ್ನು ಆರಂಭ ಮಾಡಲಾಗಿದೆ. ವೇಗವಾಗಿ ಬೇರೆ ಬೇರೆ ನಗರಗಳಲ್ಲಿ ಆರಂಭ ಮಾಡಲಾಗಿದೆ. ನೂತನ ರಿಚಾರ್ಜ್ ಪ್ಲ್ಯಾನ್ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಜಿಯೋ 5ಜಿ ರಿಚಾರ್ಜ್ ಪ್ಲ್ಯಾನ್ ಬಗ್ಗೆ ಮಾಹಿತಿ

ಜಿಯೋ 5ಜಿ ರಿಚಾರ್ಜ್ ಪ್ಲ್ಯಾನ್ ಬಗ್ಗೆ ಮಾಹಿತಿ

ರಿಲಯನ್ಸ್ ಸಂಸ್ಥೆಯು ತನ್ನ 5ಜಿ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಇದರಡಿಯಲ್ಲಿ 61 ರೂಪಾಯಿಯ ಪ್ಲ್ಯಾನ್ ಇದೆ. ಅದು ಈಗಿನ ಪ್ಲ್ಯಾನ್‌ನಂತೆಯೇ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೆಯೇ 6ಜಿಬಿ ಡೇಟಾವನ್ನು ಹೊಂದಿದೆ. ಈವರೆಗೆ ಜಿಯೋ ಉಚಿತ 5ಜಿ ಸೇವೆಯನ್ನು ನೀಡುತ್ತಿತ್ತು. ಆದರೆ ಈಗ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. ಇನ್ನು 61 ರೂಪಾಯಿಯ ರಿಚಾರ್ಜ್ ಡೇಟಾ ಆಡ್ ಆನ್ ಪ್ಲ್ಯಾನ್ ಆಗಿದೆ. ಆದರೆ ನೀವು 5ಜಿ ನೆಟ್‌ವರ್ಕ್ ಸೇವೆಯನ್ನು ಪಡೆಯಬೇಕಾದರೆ 239 ರೂಪಾಯಿ ಅಥವಾ ಅದಕ್ಕಿಂತ ಅಧಿಕ ಮೊತ್ತದ ರಿಚಾರ್ಜ್ ಅನ್ನು ಮಾಡಬೇಕಾಗುತ್ತದೆ. ಈ ಹಿಂದೆ ಜಿಯೋ 5ಜಿ ಸೇವೆ ಆರಂಭವಾದಾಗಿನಿಂದ ಹಲವಾರು ಮಂದಿ ಜಿಯೋ ಸಿಮ್ ಖರೀದಿ ಮಾಡಲು ಆರಂಭಿಸಿದ್ದಾರೆ. ಅದರಿಂದಾಗಿ 5ಜಿ ಬಳಕೆದಾರರ ಸಂಖ್ಯೆಯು ಹೆಚ್ಚಳವಾಗಿತ್ತು.

 ಯಾರಿಗೆ 5ಜಿ ಸೇವೆ ಪಡೆಯಲು ಸಾಧ್ಯವಿಲ್ಲ?

ಯಾರಿಗೆ 5ಜಿ ಸೇವೆ ಪಡೆಯಲು ಸಾಧ್ಯವಿಲ್ಲ?

ಈಗ ರಿಚಾರ್ಜ್ ಪ್ಲ್ಯಾನ್ ಜಾರಿಯಾದ ಕಾರಣ ಎಲ್ಲರೂ 5ಜಿ ಸೇವೆ ಉಚಿತವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. 239 ರೂಪಾಯಿಗಿಂತ ಕಡಿಮೆ ಮೊತ್ತದ ರಿಚಾರ್ಜ್ ಮಾಡಿರುವವರಿಗೆ ಅಥವಾ ಮಾಡುವವರಿಗೆ 5ಜಿ ಸೇವೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. 239 ರೂಪಾಯಿಗಿಂತ ಅಧಿಕ ರಿಚಾರ್ಜ್ ಮಾಡಿದ್ದರೆ ಮಾತ್ರ 5ಜಿ ಸೇವೆಯನ್ನು ಪಡೆಯಬಹುದು. ಅಂದರೆ 5ಜಿ ಸೇವೆಯು 119 ರೂಪಾಯಿ, 149 ರೂಪಾಯಿ, 179 ರೂಪಾಯಿ, 199 ರೂಪಾಯಿ, 209 ರೂಪಾಯಿಗಳ ರಿಚಾರ್ಜ್ ಮಾಡಿದವರಿಗೆ ಲಭ್ಯವಾಗುವುದಿಲ್ಲ. ಹಾಗೆಯೇ 5ಜಿ ಅಪ್‌ಡೇಟೆಡ್ ಸ್ಮಾರ್ಟ್‌ಫೋನ್ ಇರಬೇಕು ಮತ್ತು ಆ ನಗರದಲ್ಲಿ 5ಜಿ ಸೇವೆ ಆರಂಭವಾಗಿರಬೇಕಾಗುತ್ತದೆ. ನೀವು 239 ರೂಪಾಯಿಗಿಂತ ಕಡಿಮೆ ರಿಚಾರ್ಜ್ ಮಾಡಿದ್ದರೆ 61 ರೂಪಾಯಿಯ ಹೆಚ್ಚುವರಿ ರಿಚಾರ್ಜ್ ಮಾಡಿ 6ಜಿಬಿಯ 5ಜಿ ಸೇವೆಯನ್ನು ಪಡೆಯಬಹುದು.

 ಎಲ್ಲೆಲ್ಲಿದೆ ಜಿಯೋ 5ಜಿ ಸೇವೆ?

ಎಲ್ಲೆಲ್ಲಿದೆ ಜಿಯೋ 5ಜಿ ಸೇವೆ?

ಜಿಯೋ ತನ್ನ 5ಜಿ ಸೇವೆಯನ್ನು ಹಲವಾರು ನಗರಗಳಿಗೆ ವಿಸ್ತಾರ ಮಾಡುತ್ತಿದೆ. ಈ ಹಿಂದೆ ಮೈಸೂರು ಸೇರಿ ದೇಶದ 11 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆ ಪ್ರಾರಂಭವಾಗಿದೆ. ಮೈಸೂರು, ಲಕ್ನೋ, ತಿರುವನಂತಪುರ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಟ್ರೂ 5ಜಿ ಸೇವೆಯನ್ನು ಪಡೆಯುವ ಪ್ರಮುಖ 11 ನಗರಗಳಾಗಿದೆ. ಹಾಗೆಯೇ ರಿಲಯನ್ಸ್ ಜಿಯೋ ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿ ಪ್ರದೇಶಗಳನ್ನು ಒಳಗೊಂಡಂತೆ ತಿರುವನಂತಪುರ, ಮೈಸೂರು, ನಾಸಿಕ್, ಔರಂಗಾಬಾದ್, ಚಂಡೀಗಢ ಟ್ರೈಸಿಟಿಯಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಬೆಂಗಳೂರು, ಹೈದಾರಾಬಾದ್‌ನಲ್ಲಿಯೂ 5ಜಿ ಸೇವೆ ಲಭ್ಯವಿದೆ.

English summary

Jio 5G Upgrade recharge plan launched in India, tariff, validity other details in kannada

5G in India: Jio 5G Upgrade recharge plan launched in India, tariff, validity other details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X