For Quick Alerts
ALLOW NOTIFICATIONS  
For Daily Alerts

ಜಿಯೋ or ಏರ್‌ಟೆಲ್ ಫ್ರೀ ವೈ-ಫೈ ಕಾಲಿಂಗ್ : ನಿಮ್ಮ ಮೊಬೈಲ್‌ನಲ್ಲಿ ಸೇವೆ ಲಭ್ಯವಿದೆಯೇ ಚೆಕ್ ಮಾಡಿ

|

ದೇಶದ ಎರಡು ಬೃಹತ್ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ ಹಾಗೂ ಭಾರತಿ ಏರ್‌ಟೆಲ್ ಇತ್ತೀಚೆಗಷ್ಟೇ ತಮ್ಮ ಗ್ರಾಹಕರಿಗೆ ಉಚಿತ ವೈ-ಫೈ ಕಾಲಿಂಗ್ ಸೇವೆ ಆರಂಭಿಸಿದವು. ಜಿಯೋ ಆರಂಭಿಸಿದ ಬೆನ್ನಲ್ಲೇ ಏರ್‌ಟೆಲ್ ಕೂಡ ಈ ಉಚಿತ ಸೇವೆಯನ್ನು ನೀಡಿದೆ.

 

ಉಚಿತ ವೈ-ಫೈ ಕಾಲಿಂಗ್ ಹಾಗೂ ವಿಡಿಯೋ ಸೇವೆಯನ್ನು ಬಳಕೆದಾರರು ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಮೂಲಕ ಪಡೆಯಬಹುದು. ಇದಕ್ಕೂ ಮೊದಲು ಏರ್‌ಟೆಲ್ ತನ್ನ ಬಳಕೆದಾರರು ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಮೂಲಕ ಮಾತ್ರ ಪಡೆಯಬಹುದಾಗಿತ್ತು. ಆದರೆ ಕಳೆದ ವಾರ ಏರ್‌ಟೆಲ್ ತನ್ನ ಸೇವೆಯನ್ನು ವಿಸ್ತರಿಸಿದ್ದು ಜಿಯೋ ರೀತಿಯಲ್ಲಿ ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಮೂಲಕ ಪಡೆಬಹುದಾಗಿದೆ.

ಹಾಗಿದ್ದರೆ ಮನೆ ಅಥವಾ ಕಚೇರಿಗಳಲ್ಲಿ ನೀವು ವೈಫೈ ಬಳಸುವಾಗ ಉಚಿತ ಕರೆ ಮಾಡಬೇಕಾದರೆ ನಿಮ್ಮ ಮೊಬೈಲ್‌ನಲ್ಲಿ ಈ ಸೇವೆಯನ್ನು ಬಳಸುವುದು ಹೇಗೆ? ನಿಮ್ಮ ಮೊಬೈಲ್‌ನಲ್ಲಿ ಫ್ರೀ ವೈಫೈ ಲಭ್ಯವಿದೆಯೇ ಎಂದು ತಿಳಿದುಕೊಳ್ಳಲು ಈ ಕೆಳಗಿನ ವಿವರಣೆ ಓದಿ

ಯಾವುದೇ ಹೆಚ್ಚುವರಿ ಆ್ಯಪ್ ಅಥವಾ ಸಿಮ್ ಅವಶ್ಯಕತೆ ಇಲ್ಲ

ಯಾವುದೇ ಹೆಚ್ಚುವರಿ ಆ್ಯಪ್ ಅಥವಾ ಸಿಮ್ ಅವಶ್ಯಕತೆ ಇಲ್ಲ

ಜಿಯೋ ಮತ್ತು ಏರ್‌ಟೆಲ್ ಟೆಲಿಕಾಂ ಸಂಸ್ಥೆಗಳು ನೀಡಿರುವ ಈ ಉಚಿತ ವೈ-ಫೈ ಕಾಲಿಂಗ್ ಸೇವೆ ದೇಶೀಯ ಕರೆಗಳನ್ನು ಉಚಿತವಾಗಿ ಮಾಡಬಹುದು. ಈ ಸೇವೆಯನ್ನು ಬಳಸಲು ಯಾವುದೇ ರೀತಿಯ ಹೆಚ್ಚುವರಿ ಆ್ಯಪ್ ಆಗಲಿ ಇಲ್ಲವೆ ಸಿಮ್ ಖರೀದಿಯ ಅವಶ್ಯಕತೆಯಿಲ್ಲ. ಆದರೆ ಈ ಎರಡೂ ಸಂಸ್ಥೆಗಳು ಹೇಳಿರುವ ಪ್ರಕಾರ ಏರ್‌ಟೆಲ್ ವೈ-ಫೈ ಕಾಲಿಂಗ್ ಸೇವೆಯು ಹೆಚ್‌ಡಿ ಕಾಲಿಂಗ್ ವೈಶಿಷ್ಟತೆಯನ್ನು ಹೊಂದಿರುವ 100ಕ್ಕೂ ಹೆಚ್ಚು ಸ್ಮಾರ್ಟ್‌ ಫೋನ್‌ಗಳಲ್ಲಿ ಲಭ್ಯವಿದೆ. ಜಿಯೋ ಈ ಸೇವೆಯು 150 ಸ್ಮಾರ್ಟ್‌ ಫೋನ್‌ಗಳಲ್ಲಿ ಲಭ್ಯವಿದೆ ಎಂದು ಹೇಳಿವೆ.

ರಿಲಯನ್ಸ್ ಜಿಯೋ ವೈ-ಫೈ ಯಾವ ಮೊಬೈಲ್‌ನಲ್ಲಿ ಲಭ್ಯ?

ರಿಲಯನ್ಸ್ ಜಿಯೋ ವೈ-ಫೈ ಯಾವ ಮೊಬೈಲ್‌ನಲ್ಲಿ ಲಭ್ಯ?

ರಿಲಯನ್ಸ್ ಜಿಯೋ ಉಚಿತ ವೈ-ಫೈ ಸೇವೆಯನ್ನು ತನ್ನೆಲ್ಲಾ ಗ್ರಾಹಕರಿಗೆ ನೀಡಿದೆ. ಸ್ಮಾರ್ಟ್ ಫೋನ್‌ಗಳಾದ ಆ್ಯಪಲ್, ಸ್ಯಾಮ್‌ಸಂಗ್, ಎಕ್ಸೋಮಿ, ವಿವೋ ಸೇರಿದಂತೆ ಇತರೇ HD ವಾಯ್ಸ್ ಫೀಚರ್ ಹೊಂದಿರುವ ಮೊಬೈಲ್‌ಗಳಲ್ಲಿ ಯಾವುದೇ ತಾಂತ್ರಿಕ ಅಡಚಣೆಯಾಗದೇ ಉಚಿತ ವೈ-ಫೈ ಸೇವೆ ಸಿಗಲಿದೆ.

ಜಿಯೋ ವೈ-ಫೈ ಸೇವೆಯು ಅತ್ಯುತ್ತಮವಾಗಿ ಸಪೋರ್ಟ್ ಮಾಡುವ ಮೊಬೈಲ್‌ಗಳನ್ನು ತಿಳಿಸಲಾಗಿದ್ದು ಆ್ಯಪಲ್ ಐಫೋನ್ 6s , ಸ್ಯಾಮ್‌ಸಂಗ್ ಗ್ಯಾಲಕ್ಸಿ J6, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M30s, ಸ್ಯಾಮ್‌ಸಂಗ್‌ ಗ್ಯಾಲಕ್ಸಿ A10s, ಒನ್‌ಪ್ಲಸ್‌ 7, ಒನ್‌ಪ್ಲಸ್ 7 ಪ್ರೊ, ಒನ್‌ಪ್ಲಸ್ 7T ಮತ್ತು ಇತರೆ ಮೊಬೈಲ್‌ಗಳಲ್ಲಿ ಲಭ್ಯವಿದೆ.

 

ಏರ್‌ಟೆಲ್‌ ಉಚಿತ ವೈ-ಫೈ ಯಾವ ಮೊಬೈಲ್‌ನಲ್ಲಿದೆ?
 

ಏರ್‌ಟೆಲ್‌ ಉಚಿತ ವೈ-ಫೈ ಯಾವ ಮೊಬೈಲ್‌ನಲ್ಲಿದೆ?

ಎಲ್ಲಾ ಐಫೋನ್ ಮೊಬೈಲ್‌ಗಳಲ್ಲಿ ಏರ್‌ಟೆಲ್ ಉಚಿತ ವೈ-ಫೈ್ ಸೇವೆ ಲಭ್ಯವಿದೆ. ಜೊತೆಗೆ ಸ್ಯಾಮ್‌ಸಂಗ್ S10, S10e, M20, ಒನ್ ಪ್ಲಸ್ 6 ಮತ್ತು 6T, ಶಿಯೋಮಿ ರೆಡ್ಮಿ K20, ರೆಡ್ಮಿ K20 ಪ್ರೋ ಮತ್ತು POCO F1, ಸ್ಯಾಮ್ಸಂಗ್ J6, ಸ್ಯಾಮ್ಸಂಗ್ A10s, ಸ್ಯಾಮ್ಸಂಗ್ On6, ಸ್ಯಾಮ್ಸಂಗ್ M30s, ಒನ್ ಪ್ಲಸ್ 7, ಒನ್ ಪ್ಲಸ್ 7 ಪ್ರೋ, ಒನ್ ಪ್ಲಸ್ 7T ಮತ್ತು ಒನ್ ಪ್ಲಸ್ 7T ಪ್ರೋ ಸೇರಿದಂತೆ ನೂರು ಫೋನ್ ಗಳಲ್ಲಿ ಈ ಸೇವೆ ಲಭ್ಯ ಇದೆ.

ಉಚಿತ ವೈ-ಫೈ ಕಾಲಿಂಗ್ ಸೇವೆಯನ್ನು ಮೊಬೈಲ್‌ನಲ್ಲಿ ಹೇಗೆ ಸಕ್ರಿಯಗೊಳಿಸುವುದು?

ಉಚಿತ ವೈ-ಫೈ ಕಾಲಿಂಗ್ ಸೇವೆಯನ್ನು ಮೊಬೈಲ್‌ನಲ್ಲಿ ಹೇಗೆ ಸಕ್ರಿಯಗೊಳಿಸುವುದು?

ಈ ಮೇಲ್ಕಂಡ ಮೊಬೈಲ್ ಸೇರಿದಂತೆ ಯಾವ ಮೊಬೈಲ್‌ಗಳಲ್ಲಿ ಈ ಉಚಿತ ವೈ-ಫೈ ಸೇವೆಯನ್ನು ಬಳಸಬಹುದೋ ಆ ಮೊಬೈಲ್‌ಗಳಲ್ಲಿ ಈ ರೀತಿಯಲ್ಲಿ ಸೇವೆಯನ್ನು ಸಕ್ರಿಯಗೊಳಿಸಬಹುದು.

- ಈ ಉಚಿತ ವೈ-ಫೈ ಸೇವೆಗೆ ಸಪೋರ್ಟ್ ಮಾಡಬಲ್ಲಂತಹ ಆಪರೇಟಿಂಗ್ ಸಾಫ್ಟ್‌ವೇರ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಇದ್ದರೆ ಅಪ್‌ಗ್ರೇಡ್ ಮಾಡಿ

- ನಿಮ್ಮ ಮೊಬೈಲ್‌ನ ಸೆಟ್ಟಿಂಗ್‌ಗೆ ಹೋಗಿ

- ವೋಲ್ಟ್ (VOLTE) ಸ್ವಿಚ್ ಆನ್ ಆಗಿದೆಯೇ ಎಂದು ಪರೀಕ್ಷಿಸಿ, ಇಲ್ಲವಾದರೆ ಯಾವಾಗಲೂ ಆನ್‌ ಆಗಿರುವಂತೆ ನೋಡಿಕೊಳ್ಳಿ

- ಯಾವುದೇ ಅಡೆತಡೆ ಇಲ್ಲದೆ ಉಚಿತ ವೈ-ಫೈ ಸೇವೆಯನ್ನು ಪಡೆಯಲು ನಿಮ್ಮ ಆ್ಯಂಡ್ರಾಯ್ಡ್ ಅಥವಾ ಐಓಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಇತ್ತೀಚಿನ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಿಕೊಳ್ಳಿ

- ಹೆಚ್ಚಿನ ಮಾಹಿತಿ ಪಡೆಯಲು ಅಥವಾ ವೈ-ಫೈ ಸೇವೆಯನ್ನು ಸಕ್ರಿಯಗೊಳಿಸಲು ನಿಮಗೆ ಗೊಂದಲ ಏರ್ಪಟ್ಟರೆ ಅಧಿಕೃತ ಏರ್‌ಟೆಲ್,ಜಿಯೋ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

 

English summary

Jio Vs Airtel Free Wi-Fi Calling

check your smartphones that are compatible with the Jio or Airtel Free Wi-Fi calling facility.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X