For Quick Alerts
ALLOW NOTIFICATIONS  
For Daily Alerts

ಜಿಯೊ, ಏರ್‌ಟೆಲ್, ವೊಡಾಫೋನ್- ಐಡಿಯಾ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಯಾವುದು ಬೆಸ್ಟ್‌?

|

ಭಾರತದ ಟೆಲಿಕಾಂ ವಲಯದಲ್ಲಿ ದರ ಏರಿಕೆಯ ಬಿಸಿ ಜೋರಾಗಿದೆ. ಪ್ರಮುಖ ಟೆಲಿಕಾಂ ಕಂಪನಿಗಳಾದ ಭಾರತಿ ಏರ್‌ಟೆಲ್, ಜಿಯೊ, ವೊಡಾಫೋನ್ ಐಡಿಯಾ ಕಂಪನಿಗಳು ಶೇಕಡಾ 15 ರಿಂದ 47ರ ತನಕ ಕರೆ ಹಾಗೂ ಡೇಟಾ ದರಗಳನ್ನು ಏರಿಸಿವೆ.

ಒಂದೇ ಅವಧಿಯಲ್ಲಿ ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳು ದರ ಏರಿಕೆ ಮಾಡಿದ್ದರಿಂದ ಗ್ರಾಹಕರು ಯಾವುದು ಉತ್ತಮ ಯೋಜನೆ ಎಂದು ಹುಡುಕುವುದು ಸಾಮಾನ್ಯ. ಮೂರು ಪ್ರಮುಖ ಕಂಪನಿಗಳ ಹೊಸ ಪ್ರಿಪೇಯ್ಡ್ ಯೋಜನೆಗಳ ಹೋಲಿಕೆ ಈ ಕೆಳಗಿನಂತಿದೆ.

ಬಹುದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ರಿಲಿಯನ್ಸ್ ಜಿಯೊ ಡಿಸೆಂಬರ್ 6ರಂದು ಜಾರಿಯಾಗುವಂತೆ ಹೊಸ ಆಲ್‌ ಇನ್ ಒನ್ ಯೋಜನೆ ಘೋಷಿಸಿದೆ. ಅದರ ವಿವರಣೆ ಈ ಕೆಳಗಿದೆ.

1 ತಿಂಗಳ ಪ್ರಿಪೇಯ್ಡ್ ಯೋಜನೆಗಳು

1 ತಿಂಗಳ ಪ್ರಿಪೇಯ್ಡ್ ಯೋಜನೆಗಳು

199 ರುಪಾಯಿ : ಪ್ರತಿದಿನ 1.5 ಜಿಬಿ ಮೊಬೈಲ್ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳು ಉಚಿತ ಕರೆಗಳ ಲಭ್ಯವಿದೆ. ಇದರ ವ್ಯಾಲಿಡಿಟಿ 28 ದಿನಗಳು

249 ರುಪಾಯಿ: ಪ್ರತಿದಿನ 2 ಜಿಬಿ ಮೊಬೈಲ್ ಡೇಟಾ ಲಭ್ಯವಿರುವ 249 ರುಪಾಯಿ ಪ್ರಿಪೇಯ್ಡ್ ಯೋಜನೆಯಲ್ಲಿ ಜಿಯೋ ನಿಂದ ಜಿಯೋ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳು ಮಾತನಾಡಬಹುದು. ಇದರ ವ್ಯಾಲಿಡಿಟಿಯು 28 ದಿನಗಳಾಗಿವೆ

349 ರುಪಾಯಿ : ಈ ಯೋಜನೆಯಲ್ಲಿ ಪ್ರತಿದಿನ 3 ಜಿಬಿ ಮೊಬೈಲ್ ಡೇಟಾ ಲಭ್ಯವಿದೆ. ಇದರಲ್ಲೂ ಕೂಡ ಈ ಮೇಲಿನ ರೀಚಾರ್ಜ್‌ನಂತೆ ಜಿಯೋಗೆ ಸಂಪೂರ್ಣ ಉಚಿತ ಕರೆಗಳು, ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳು ಕರೆಗಳ ಸೌಲಭ್ಯವಿದೆ. ಜೊತೆಗೆ 28 ದಿನಗಳ ವ್ಯಾಲಿಟಿಡಿ ಒಳಗೊಂಡಿದೆ.

 

2 ತಿಂಗಳ ಪ್ರಿಪೇಯ್ಡ್ ಯೋಜನೆಗಳು

2 ತಿಂಗಳ ಪ್ರಿಪೇಯ್ಡ್ ಯೋಜನೆಗಳು

399 ರುಪಾಯಿ: ಪ್ರತಿದಿನ 1.5 ಜಿಬಿ ಮೊಬೈಲ್ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 2000 ನಿಮಿಷಗಳು ಉಚಿತ ಕರೆ ಲಭ್ಯವಿದೆ. ಇದರ ವ್ಯಾಲಿಡಿಟಿ 56 ದಿನಗಳು

444 ರುಪಾಯಿ: ಪ್ರತಿದಿನ 2 ಜಿಬಿ ಮೊಬೈಲ್ ಡೇಟಾ ಲಭ್ಯವಿರುವ 444 ರುಪಾಯಿ ಪ್ರಿಪೇಯ್ಡ್ ಯೋಜನೆಯಲ್ಲಿ ಜಿಯೋ ನಿಂದ ಜಿಯೋ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 2000 ನಿಮಿಷಗಳು ಮಾತನಾಡಬಹುದು. ಇದರ ವ್ಯಾಲಿಡಿಟಿ 56 ದಿನಗಳು

 

3 ತಿಂಗಳ ಪ್ರಿಪೇಯ್ಡ್ ಯೋಜನೆಗಳು
 

3 ತಿಂಗಳ ಪ್ರಿಪೇಯ್ಡ್ ಯೋಜನೆಗಳು

555 ರುಪಾಯಿ: ಪ್ರತಿದಿನ 1.5 ಜಿಬಿ ಮೊಬೈಲ್ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 3000 ನಿಮಿಷಗಳು ಉಚಿತ ಕರೆ ಸೌಲಭ್ಯ. ಇದರ ವ್ಯಾಲಿಡಿಟಿ 84 ದಿನಗಳು

599 ರುಪಾಯಿ: ಪ್ರತಿದಿನ 2 ಜಿಬಿ ಮೊಬೈಲ್ ಡೇಟಾ, ಜಿಯೋ ಕರೆಗಳು ಉಚಿತ, ಇತರೆ ನೆಟ್‌ವರ್ಕ್‌ಗೆ 3000 ನಿಮಿಷಗಳು ಉಚಿತ ಕರೆ ಸೌಲಭ್ಯ. ಇದರ ವ್ಯಾಲಿಡಿಟಿ 84 ದಿನಗಳು

 

ಒಂದು ವರ್ಷದ ಯೋಜನೆ

ಒಂದು ವರ್ಷದ ಯೋಜನೆ

2199 ರುಪಾಯಿ: ಪ್ರತಿದಿನ 1.5 ಜಿಬಿ ಮೊಬೈಲ್ ಡೇಟಾ, ಜಿಯೋ ಕರೆಗಳು ಉಚಿತ, ಇತರೆ ನೆಟ್‌ವರ್ಕ್‌ಗೆ 12,000 ನಿಮಿಷಗಳು ಉಚಿತ ಕರೆಗಳು. ಇದರ ವ್ಯಾಲಿಡಿಟಿ 365 ದಿನಗಳು

'ಆಲ್‌ ಇನ್ ಒನ್' ಕೈಗೆಟುವ ದರದ ಯೋಜನೆಗಳು

'ಆಲ್‌ ಇನ್ ಒನ್' ಕೈಗೆಟುವ ದರದ ಯೋಜನೆಗಳು

129 ರುಪಾಯಿ: ತಿಂಗಳಿಗೆ ಒಟ್ಟಾರೆ 2 ಜಿಬಿ ಮೊಬೈಲ್ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 1000 ನಿಮಿಷಗಳು. ಇದರ ವ್ಯಾಲಿಡಿಟಿ 28 ದಿನಗಳಾಗಿವೆ.

329 ರುಪಾಯಿ : ಒಟ್ಟಾರೆ 6 ಜಿಬಿ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 3000 ನಿಮಿಷಗಳು. ಇದರ ವ್ಯಾಲಿಡಿಟಿ 84 ದಿನಗಳು.

1299 ರುಪಾಯಿ: ಒಟ್ಟಾರೆ 24 ಜಿಬಿ ಡೇಟಾ, ಜಿಯೋ ನಿಂದ ಜಿಯೋಗೆ ಉಚಿತ ಕರೆಗಳು ಸೇರಿದಂತೆ ಇತರೆ ನೆಟ್‌ವರ್ಕ್‌ಗೆ 12,000 ನಿಮಿಷಗಳು. ಇದರ ವ್ಯಾಲಿಡಿಟಿ 365 ದಿನಗಳು.

 

ಏರ್‌ಟೆಲ್‌ 1 ತಿಂಗಳ ಹೊಸ ಪ್ರಿಪೇಯ್ಡ್ ಯೋಜನೆಗಳು

ಏರ್‌ಟೆಲ್‌ 1 ತಿಂಗಳ ಹೊಸ ಪ್ರಿಪೇಯ್ಡ್ ಯೋಜನೆಗಳು

148 ರುಪಾಯಿ : 28 ದಿನಗಳ ವ್ಯಾಲಿಡಿಟಿ ಹೊಂದಿರುವ 148 ರುಪಾಯಿ ರೀಚಾರ್ಜ್ ಯೋಜನೆಯು ಈ ಹಿಂದೆ 129 ರುಪಾಯಿಗಳಲ್ಲಿ ದೊರೆಯುತ್ತಿತ್ತು. 148 ರುಪಾಯಿ ರೀಚಾರ್ಜ್ ಮಾಡಿದರೆ ಅನ್‌ಲಿಮಿಟೆಡ್‌ ಕರೆಗಳು, ಪ್ರತಿದಿನ 2 ಜಿಬಿ ಡೇಟಾ ಹಾಗೂ 300 SMSಗಳು ಲಭ್ಯವಿದೆ. ಜೊತೆಗೆ ಎಕ್ಸ್‌ಟ್ರೀಮ್, ವಿಂಕ್ ಮತ್ತು ಹಲೋ ಟ್ಯೂನ್‌ಗಳಿಗೆ ಪ್ರವೇಶ ಸಿಗುವ ಸೌಲಭ್ಯವೂ ಇದೆ. ಈ ಹೊಸ ಯೋಜನೆಯಿಂದಾಗಿ 19 ರುಪಾಯಿ ಬೆಲೆ ಹೆಚ್ಚಳವಾಗಿದೆ.

248 ರುಪಾಯಿ : ಈ ಹಿಂದೆ ಬಳಕೆಯಲ್ಲಿದ್ದ 169 ಮತ್ತು 199 ಎರಡು ರೀಚಾರ್ಜ್ ಯೋಜನೆಗಳನ್ನು ಏರ್‌ಟೆಲ್ ವಿಲೀನಗೊಳಿಸಿದೆ. ಇದನ್ನು 248 ರುಪಾಯಿ ರೀಚಾರ್ಜ್ ಯೋಜನೆಯಾಗಿ ಪರಿಷ್ಕರಿಸಿದೆ. ಹೊಸ 248 ರುಪಾಯಿ ರೀಚಾರ್ಜ್ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 SMS ಸೌಲಭ್ಯವಿದೆ. ಜೊತೆಗೆ ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್ ಚಂದಾದಾರಿಕೆ, ಉಚಿತ ಹಲೋ ಟ್ಯೂನ್ ಮತ್ತು ಆ್ಯಂಟಿ ವೈರಸ್ ಮೊಬೈಲ್ ಪ್ರೊಟೆಕ್ಷನ್ ಕೂಡ ಲಭ್ಯವಿದೆ. ಈ ಹೊಸ ಯೋಜನೆಯಿಂದಾಗಿ 169 ರುಪಾಯಿ ಯೋಜನೆಯಲ್ಲಿ 49 ರುಪಾಯಿ ಹಾಗೂ 199 ಯೋಜನೆಯಲ್ಲಿ 79 ರುಪಾಯಿ ಏರಿಕೆಯಾಗಿದೆ.

298 ರುಪಾಯಿ : ಇದುವರೆಗೂ ಬಳಕೆಯಿದ್ದ 249 ರುಪಾಯಿ ರೀಚಾರ್ಜ್‌ ಯೋಜನೆಯನ್ನು 298ಕ್ಕೆ ಪರಿಷ್ಕರಿಸಲಾಗಿದೆ. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು, ಪ್ರತಿದಿನ 2 ಜಿಬಿ ಡೇಟಾ, ಹಾಗೂ 100 SMS ಸೌಲಭ್ಯವಿದೆ. 28 ದಿನಗಳ ಯೋಜನೆಯಲ್ಲಿ ಇದು ದುಬಾರಿಯಾಗಿದ್ದು ಪ್ರತಿ ದಿನಕ್ಕೆ 1.75 ರುಪಾಯಿ ಹೆಚ್ಚಳವಾಗಿದೆ.

 

ಏರ್‌ಟೆಲ್‌ 84 ದಿನಗಳ 4G ಯೋಜನೆ

ಏರ್‌ಟೆಲ್‌ 84 ದಿನಗಳ 4G ಯೋಜನೆ

84 ದಿನಗಳ ಅವಧಿಯಲ್ಲಿ ಏರ್‌ಟೆಲ್ ಎರಡು 4G ಯೋಜನೆಯನ್ನು ಒಳಗೊಂಡಿದ್ದು 598 ಮತ್ತು 698 ರುಪಾಯಿ ರೀಚಾರ್ಜ್ ಆಗಿದೆ. 598 ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು, 1.5 ಜಿಬಿ ಡೇಟಾ ಸೌಲಭ್ಯವಿದೆ. 698 ರುಪಾಯಿ ರೀಚಾರ್ಜ್ ಮಾಡಿಸಿದರೆ ಅನಿಲಿಮಿಟೆಡ್ ಕರೆಗಳ ಜೊತೆಗೆ ಪ್ರತಿದಿನ 2 ಜಿಬಿ ಡೇಟಾ ಸಿಗಲಿದ್ದು, ಎರಡರಲ್ಲೂ ಪ್ರತಿದಿನ 100 SMS ಸೌಲಭ್ಯವಿದೆ.

598 ರೀಚಾರ್ಜ್‌ ಯೋಜನೆಯು ಈ ಮೊದಲು 449 ರುಪಾಯಿಯಾಗಿತ್ತು. 698 ರುಪಾಯಿ ರೀಚಾರ್ಜ್ ಯೋಜನೆಯನ್ನು 499ರಿಂದ ಪರಿಷ್ಕರಿಸಲಾಗಿದೆ.

 

ವೊಡಾಫೋನ್-ಐಡಿಯಾ 1 ತಿಂಗಳ ಹೊಸ ಪ್ರಿಪೇಯ್ಡ್ ಯೋಜನೆಗಳು

ವೊಡಾಫೋನ್-ಐಡಿಯಾ 1 ತಿಂಗಳ ಹೊಸ ಪ್ರಿಪೇಯ್ಡ್ ಯೋಜನೆಗಳು

149 ರುಪಾಯಿ : 28 ದಿನಗಳ ವ್ಯಾಲಿಡಿಟಿ ಹೊಂದಿರುವ 149 ರುಪಾಯಿ ಯೋಜನೆಯು ಅನ್‌ಲಿಮಿಟೆಡ್ ಕರೆಗಳು (1000 ನಿಮಿಷಗಳು), ಒಟ್ಟಾರೆ ತಿಂಗಳಿಗೆ 2 ಜಿಬಿ ಡೇಟಾ, ಹಾಗೂ 300 ಎಸ್‌ಎಂಎಸ್‌ ಸೇವೆಯನ್ನು ಗ್ರಾಹಕರಿಗೆ ನೀಡುತ್ತದೆ.

249 ರುಪಾಯಿ : ಇದು ಕೂಡ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಯಾಗಿದ್ದು ಅನ್‌ಲಿಮಿಟೆಡ್ ಕರೆಗಳು (1000 ನಿಮಿಷಗಳು),ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌ ಸೇವೆಯನ್ನು ಹೊಂದಿದೆ.

299 ರುಪಾಯಿ :28 ದಿನಗಳ ವ್ಯಾಲಿಡಿಟಿ ಹೊಂದಿರುವ 299 ರುಪಾಯಿ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು (1000 ನಿಮಿಷಗಳು) ಜೊತೆಗೆ ಪ್ರತಿದಿನ 2 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌ ಸೇವೆಯನ್ನು ಒಳಗೊಂಡಿದೆ.

399 ರುಪಾಯಿ : ಹೆಚ್ಚು ಡೇಟಾ ಬಳಸುವವರಿಗೆ ಈ ಯೋಜನೆಯು ಸೂಕ್ತವಾಗಿದೆ. ಈ ಮೇಲಿನ ಯೋಜನೆಗಳಂತೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 399 ರುಪಾಯಿ ರೀಚಾರ್ಜ್ ಮಾಡಿಸಿದ್ದಲ್ಲಿ ಅನ್‌ಲಿಮಿಟೆಡ್ ಕರೆಗಳು (1000 ನಿಮಿಷಗಳು), ಪ್ರತಿದಿನ 3 ಜಿಬಿ ಡೇಟಾ ಸಿಗಲಿದೆ. ಹಾಗೂ 100 ಎಸ್‌ಎಂಎಸ್‌ ಕಳುಹಿಸಬಹುದು.

 

ವೊಡಾಫೋನ್-ಐಡಿಯಾ  84 ದಿನಗಳ ಯೋಜನೆಗಳು

ವೊಡಾಫೋನ್-ಐಡಿಯಾ 84 ದಿನಗಳ ಯೋಜನೆಗಳು

379 ರುಪಾಯಿ : ಅನ್‌ಲಿಮಿಟೆಡ್ ಕರೆಗಳು (3000 ನಿಮಿಷಗಳು), ತಿಂಗಳಿಗೆ 6 ಜಿಬಿ ಡೇಟಾ ಹಾಗೂ 1000 ಎಸ್‌ಎಂಎಸ್‌

599 ರುಪಾಯಿ: ಅನ್‌ಲಿಮಿಟೆಡ್ ಕರೆಗಳು (3000 ನಿಮಿಷಗಳು), ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌

699 ರುಪಾಯಿ: ಅನ್‌ಲಿಮಿಟೆಡ್ ಕರೆಗಳು (3000 ನಿಮಿಷಗಳು), ಪ್ರತಿದಿನ 2 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌

 

ವೊಡಾಫೋನ್-ಐಡಿಯಾ ವಾರ್ಷಿಕ ಯೋಜನೆಗಳು

ವೊಡಾಫೋನ್-ಐಡಿಯಾ ವಾರ್ಷಿಕ ಯೋಜನೆಗಳು

1499 ರುಪಾಯಿ : ಅನ್‌ಲಿಮಿಟೆಡ್ ಕರೆಗಳು (12,000 ನಿಮಿಷಗಳು), ವಾರ್ಷಿಕ ಎಲ್ಲಾ ತಿಂಗಳಿಗೆ ಒಟ್ಟಾರೆ 24 ಜಿಬಿ ಡೇಟಾ ಹಾಗೂ 3600 ಎಸ್‌ಎಂಎಸ್‌

2399 ರುಪಾಯಿ : ಅನ್‌ಲಿಮಿಟೆಡ್ ಕರೆಗಳು (12,000 ನಿಮಿಷಗಳು), ಪ್ರತಿದಿನ 1.5 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌ ಲಭ್ಯವಿದೆ.

 

English summary

Jio vs Airtel vs Vodafone Idea New Plans Comparison

Country Three major telecom companies Airtel, Vodafone idea and Reliance jio recently announced tariff hikes for prepaid customers. These are the new plans compared
Story first published: Thursday, December 5, 2019, 13:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X