For Quick Alerts
ALLOW NOTIFICATIONS  
For Daily Alerts

Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರ, ಅರ್ಜಿ ಪ್ರಕ್ರಿಯೆ ಮೊದಲಾದ ಮಾಹಿತಿ

|

ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯನ್ನು ಆರಂಭ ಮಾಡಿದೆ. ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿ ಮಾಡಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಈ ಯೋಜನೆಯನ್ನು 1998ರಲ್ಲಿ ಆರಂಭ ಮಾಡಿದೆ.

ಸಣ್ಣ ಅವಧಿಯ ಸಾಲ ಮತ್ತು ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಕ್ರೆಡಿಟ್ ಮಿತಿ, ಇತರೆ ವೆಚ್ಚವನ್ನು ನಿಭಾಯಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ಸಹಾಯ ಮಾಡುತ್ತದೆ. ಕೃಷಿ, ಮೀನುಗಾರಿಕೆ ಪ್ರಾಣಿ ಸಾಕಾಣಿಕೆ ಮಾಡುವ ರೈತರಿಗೆ ವೆಚ್ಚವನ್ನು ನಿಭಾಯಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಆರಂಭ ಮಾಡಲಾಗಿದೆ.

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಮೂರು ವರ್ಷಗಳ ವ್ಯಾಲಿಡಿಟಿ ಇದೆ. ಬೆಳೆಯ ಕಟಾವಿನ ಬಳಿಕ ಸಾಲದ ಮರುಪಾವತಿ ಮಾಡಬೇಕಾಗುತ್ತದೆ. ಸುಮಾರು 1.60 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ. ಕೆಸಿಸಿಯು ಸುಮಾರು 50 ಸಾವಿರದವರೆಗೆ ವಿಮೆಯನ್ನು ಹೊಂದಿದೆ. ವ್ಯಕ್ತಿಯ ಮರಣ ಅಥವಾ ಅಂಗವೂನತೆ ಉಂಟಾದರೆ ವಿಮೆ ಲಭ್ಯವಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸುವುದು, ಯಾವೆಲ್ಲ ದಾಖಲೆಗಳು ಬೇಕು, ಬಡ್ಡಿದರ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಹತೆ

ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಹತೆ

* ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಕನಿಷ್ಠ ವಯೋಮಿತಿ 18 ವರ್ಷವಾಗಿದೆ, ಗರಿಷ್ಠ ವಯೋಮಿತಿ 75 ಆಗಿದೆ.
* ಕೃಷಿ ಮಾಡುವವರೇ ಭೂಮಿಯ ಮಾಲೀಕರು, ರೈತರು ಆಗಿರಬೇಕು
* ಹಾಗೆಯೇ ಗುಂಪಿನ ಸದಸ್ಯರು ಕೂಡಾ ಆಗಿರಬೇಕಾಗುತ್ತದೆ.
* ಗುಂಪಲ್ಲಿ ಮಾಲೀಕರು ಮತ್ತು ರೈತರು ಇರಬೇಕು.
* ಸೆಲ್ಫ್ ಹೆಲ್ಪ್ ಗ್ರೂಪ್ (ಎಸ್‌ಎಚ್‌ಜಿ) ಅಥವಾ ಜಾಯಿಂಟ್ ಲಯಿಬಿಲೆಟಿ ಗ್ರೂಪ್ (ಜೆಎಲ್‌ಜಿ) ರೈತರನ್ನು ಹೊಂದಿರಬೇಕು
* ಮೀನುಗಾರಿಕೆಯಂತಹ ಕೃಷಿಯೇತರ ಕಾರ್ಯಗಳಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಲಭ್ಯವಾಗುತ್ತದೆ.

 ಬೇಕಾದ ದಾಖಲೆಗಳು ಯಾವುದು?

ಬೇಕಾದ ದಾಖಲೆಗಳು ಯಾವುದು?

* ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ಇರಬೇಕು
* ಗುರುತಿನ ಚೀಟಿಯಾದಂತಹ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ಕಾರ್ಡ್
* ವಿಳಾಸ ಪುರಾವೆಯಾಗಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ
* ಭೂಮಿಯ ದಾಖಲೆ
* ಅರ್ಜಿದಾರರ ಒಂದು ಪಾಸ್‌ಪೋರ್ಟ್‌ ಗಾತ್ರದ ಚಿತ್ರ
* ಬ್ಯಾಂಕ್ ದಾಖಲೆಯಂತಹ ಇತರೆ ದಾಖಲೆಗಳು

 ಕೆಸಿಸಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಕೆಸಿಸಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿಕೊಳ್ಳಿ
ಹಂತ 3: ಅರ್ಜಿ ಸಲ್ಲಿಸುವ ಪೇಜ್‌ಗೆ ರಿಡೈರೆಕ್ಟ್ ಆಗಲಿದೆ, ಅಲ್ಲಿ "Apply" ಆಯ್ಕೆ ಮಾಡಿ
ಹಂತ 4: ಬೇಕಾದ ದಾಖಲೆಗಳನ್ನು ಭರ್ತಿ ಮಾಡಿ, "Submit" ಕ್ಲಿಕ್ ಮಾಡಿ
ಹಂತ 5: ಅರ್ಜಿ ಸಲ್ಲಿಕೆಯಾದ ಬಳಿಕ ರೆಫೆರೆನ್ಸ್ ಸಂಖ್ಯೆಯು ನಿಮಗೆ ಲಭ್ಯವಾಗಲಿದೆ
ಹಂತ 6: ಇತರೆ ಪ್ರಕ್ರಿಯೆಗಾಗಿ ಬ್ಯಾಂಕ್ ನಿಮ್ಮನ್ನು ಸಂಪರ್ಕ ಮಾಡಲಿದೆ.

 ಕಿಸಾನ್ ಕ್ರೆಡಿಟ್ ಕಾರ್ಡ್‌ನ ಬಡ್ಡಿದರ

ಕಿಸಾನ್ ಕ್ರೆಡಿಟ್ ಕಾರ್ಡ್‌ನ ಬಡ್ಡಿದರ

ಎಸ್‌ಬಿಐ: 3 ಲಕ್ಷ ರೂಪಾಯಿವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಎಸ್‌ಬಿಐ ಬಡ್ಡಿದರ ಶೇಕಡ 7 ಆಗಿದೆ.
ಪಿಎನ್‌ಬಿ: 3 ಲಕ್ಷ ರೂಪಾಯಿವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಪಿಎನ್‌ಬಿ ಬಡ್ಡಿದರ ಶೇಕಡ 7 ಆಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್: ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರ ಶೇಕಡ 9 ಆಗಿದೆ.
ಆಕ್ಸಿಸ್ ಬ್ಯಾಂಕ್: ಆಕ್ಸಿಸ್ ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರವು ಶೇಕಡ 8.85 ಆಗಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್: 3 ಲಕ್ಷ ರೂಪಾಯಿವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಶೇಕಡ 7ರಷ್ಟು ಬಡ್ಡಿದರವಿದೆ.
ಯುಸಿಒ ಬ್ಯಾಂಕ್: ಯುಸಿಒ ಬ್ಯಾಂಕ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಬಡ್ಡಿದರ ಶೇಕಡ 7 ಆಗಿದೆ.
ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಶೇಕಡ 9ರಷ್ಟು ಬಡ್ಡಿದರ ನಿಗದಿಪಡಿಸಿದೆ.

English summary

Kisan Credit Card: Latest Interest Rates, Other Application Process Details in Kannada

Kisan Credit Card: The Kisan Credit Card (KCC) programme was created by the government. Latest Interest Rates, Application Process Other Details in Kannada.
Story first published: Thursday, January 26, 2023, 16:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X