For Quick Alerts
ALLOW NOTIFICATIONS  
For Daily Alerts

ಡಾಲರ್‌ಗೆ ಸಮವಾಗಿದ್ದ ರುಪಾಯಿ ಭಾರೀ ಕುಸಿತ ಕಂಡ ಪ್ರಮುಖ ಕಾಲಘಟ್ಟಗಳಿವು

|

ಡಾಲರ್ ಎದುರು ರೂಪಾಯಿ ಮೌಲ್ಯ ಶರವೇಗದಲ್ಲಿ ಕುಸಿಯುತ್ತಾ ಹೋಗುತ್ತಿದೆ. ಅಕ್ಟೋಬರ್ 14ರಂದು ಒಂದು ಡಾಲರ್‌ಗೆ 82.38 ರೂ ಆಗಿದೆ. ಬೇರೆ ಹಲವು ಕರೆನ್ಸಿಗಳು ಡಾಲರ್ ಎದುರು ರೂಪಾಯಿಯಂತೆ ಮಂಕಾಗಿವೆ ಎಂಬುದಷ್ಟೇ ಭಾರತಕ್ಕಿರುವ ಸಮಾಧಾನ.

 

ಅಮೆರಿಕದ ಡಾಲರ್ ಈಗ ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿ ಎನಿಸಿದೆ. ಬಹುತೇಕ ಅಂತಾರಾಷ್ಟ್ರೀಯ ವಹಿವಾಟು ನಡೆಯುವುದು ಯುಎಸ್‌ಡಿ ಕರೆನ್ಸಿ ಮೂಲಕವೇ. ಇದೇ ಕಾರಣಕ್ಕೆ ಬೇರೆಲ್ಲಾ ಕರೆನ್ಸಿಗಳಿಗಿಂತ ಡಾಲರ್ ಮೌಲ್ಯ ಹೆಚ್ಚೇ ಇರುತ್ತದೆ.

ಇನ್ನು, ರೂಪಾಯಿಗೆ ಭಾರತದಲ್ಲಿ ಪುರಾತನ ಇತಿಹಾಸ ಇದೆ. ಮೌರ್ಯ ಕಾಲದಿಂದಲೂ ಗ್ರಂಥಗಳಲ್ಲಿ ರೂಪಾಯಿ ಹೆಸರು ಕಾಣುತ್ತದೆ. 1947ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ರೂಪಾಯಿ ಭಾರತದ ಅಧಿಕೃತ ಕರೆನ್ಸಿಯಾಗಿ ಬಳಕೆಗೆ ಬಂದಿದೆ.

ಆಗ ಪೈಸೆ ಬದಲು ಆಣೆಗಳಿದ್ದವು. 1947ರಲ್ಲಿ ಒಂದು ರೂಪಾಯಿಗೆ 16 ಆಣೆಗಳಿದ್ದವು. ಎಪ್ಪತ್ತು ಎಂಬತ್ತರ ದಶಕದಲ್ಲಿ ಹುಟ್ಟಿದವರಿಗೆ ಈ ಆಣೆಗಳು ನೆನಪಿರಬಹುದು. 25 ಪೈಸೆ, 50 ಪೈಸೆ ನಾಣ್ಯಗಳನ್ನು ನಾಲ್ಕಾಣೆ, ಎಂಟಾಣೆ ಎಂದು ಕರೆಯಲಾಗುತ್ತಿತ್ತು. 1957ರಿಂದಲೇ ಒಂದು ರೂಪಾಯಿಗೆ 100 ಪೈಸೆ ಎಂದು ಮಾಡಿದರೂ ನಾಲ್ಕಾಣೆ, ಎಂಟಾಣೆ ಸಂಬೋಧನೆ ಇತ್ತೀಚಿನವರೆಗೂ ಮುಂದುವರಿದಿತ್ತು.

ಅದಿರಲಿ, 1947ರಲ್ಲಿ ರೂಪಾಯಿ ಮೌಲ್ಯ ಹೆಚ್ಚೂಕಡಿಮೆ ಡಾಲರ್ ಎದುರು ಸಮವಾಗಿತ್ತು. ಆಗ ಡಾಲರ್ ಎದುರು ಬಹುತೇಕ ಎಲ್ಲಾ ದೇಶಗಳ ಕರೆನ್ಸಿಗಳ ಮೌಲ್ಯ ಸಮವಾಗಿಯೇ ಇತ್ತು ಎಂಬುದು ಗಮನಾರ್ಹ. 1947ರಲ್ಲಿ ಒಂದು ಡಾಲರ್‌ಗೆ ಒಂದು ರೂಪಾಯಿ ಇತ್ತು ಎಂದು ಕೆಲವರು ಹೇಳುತ್ತಾರೆ. ಮತ್ತಿನ್ನು ಕೆಲವರು ಆ ವರ್ಷ ಒಂದು ಡಾಲರ್‌ಗೆ 3.30 ಅಥವಾ 4.16 ರೂ ಇತ್ತು ಎನ್ನುತ್ತಾರೆ. ಅದೇನೇ ಅಗಿದ್ದರೂ ಡಾಲರ್ ಮತ್ತು ರೂಪಾಯಿ ಕರೆನ್ಸಿ ಮೌಲ್ಯದ ಮಧ್ಯೆ ಅಷ್ಟೇನೂ ಅಂತರ ಇರಲಿಲ್ಲ ಎಂಬುದು ದಿಟ.

ಬ್ರಿಟನ್ ವುಡ್ಸ್ ಒಪ್ಪಂದ

ಬ್ರಿಟನ್ ವುಡ್ಸ್ ಒಪ್ಪಂದ

1944ರಲ್ಲಿ ಬ್ರಿಟ್ಟಾನ್ ವುಡ್ಸ್ ಎಂಬ ಒಪ್ಪಂದ ಆಯಿತು. ಅದರಲ್ಲಿ ವಿಶ್ವದ ಎಲ್ಲಾ ದೇಶಗಳ ಕರೆನ್ಸಿಯ ಮೌಲ್ಯವನ್ನು ನಿರ್ಧರಿಸಲಾಯಿತು. ಆ ಮೌಲ್ಯಕ್ಕೆ ಎಲ್ಲಾ ಕರೆನ್ಸಿಯನ್ನೂ ಹೊಂದಿಸುವ ಕಾರ್ಯಕ್ಕೆ ಒಂದಷ್ಟು ವರ್ಷಗಳು ತಗುಲಿದವು.

ಒಂದು ಲೆಕ್ಕಾಚಾರದ ಪ್ರಕಾರ 1913ರಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 0.09 ಇತ್ತೆನ್ನಲಾಗುತ್ತದೆ. ಅಂದರೆ ಬಹುತೇಕ ಸಮವಾಗಿತ್ತು. ಈ ಲೆಕ್ಕದಂತೆ 1948ರಲ್ಲಿ ಒಂದು ಡಾಲರ್‌ಗೆ 3.31 ರೂಪಾಯಿ ಆಯಿತು.

ಅಲ್ಲಿಂದಾಚೆ ರೂಪಾಯಿ ಬಹುತೇಕ ನಿರಂತರವಾಗಿ ಮೌಲ್ಯ ಕುಸಿತ ಕಾಣುತ್ತಲೇ ಬಂದಿದೆ. ಈ ಇಳಿಕೆಗೆ ಬಹು ಕಾರಣಗಳಿವೆ. ವಿವಿಧ ಹಂತಗಳಲ್ಲಿ ತಲೆದೋರಿದ ಆರ್ಥಿಕ ಬಿಕ್ಕಟ್ಟು, ಖಾಸಗೀಕರಣ, ಅಪಮೌಲ್ಯ, ವಿಶ್ವಬ್ಯಾಂಕ್ ಸಾಲ ಇತ್ಯಾದಿ ಅಂಶಗಳು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣಕರ್ತ ಎನಿಸಿವೆ.

 

ದಶಾಂಶೀಕರಣ

ದಶಾಂಶೀಕರಣ

ಆಗಲೇ ತಿಳಿಸಿದಂತೆ 1957ರವರೆಗೂ ಭಾರತದಲ್ಲಿ ಒಂದೂ ರುಪಾಯಿಗೆ 16 ಆಣೆಗಳಿದ್ದವು. ಆಗ ಪೈಸೆ ಚಾಲ್ತಿಗೆ ಬಂದಿರಲಿಲ್ಲ. 1957ರಲ್ಲಿ ಆಣೆಗಳ ಬದಲು ಪೈಸೆ ತರಲಾಯಿತು. ಒಂದು ರೂಪಾಯಿಯನ್ನು 100 ಪೈಸೆಗಳಾಗಿ ವಿಭಾಗಿಸಲಾಯಿತು. ಅದು ಚಿಲ್ಲರೆ ವಹಿವಾಟಿಗೆ ಅನುಕೂಲ ಮಾಡಿಕೊಟ್ಟಿತು. ಕರೆನ್ಸಿಯ ದಶಾಂಶೀಕರಣವೂ ಆಯಿತು.

1966ರ ಆರ್ಥಿಕ ಮುಗ್ಗಟ್ಟು
 

1966ರ ಆರ್ಥಿಕ ಮುಗ್ಗಟ್ಟು

ಸ್ವಾತಂತ್ರ್ಯ ಬಂದ ಬಳಿಕ ಭಾರತದ ಆರ್ಥಿಕತೆ ಹಂತ ಹಂತವಾಗಿ ಹಳಿಗೆ ಹೋಗತೊಡಗಿತು. ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿದ್ದ ಭಾರತ ಆ ಸಂದರ್ಭದಲ್ಲಿ ರಫ್ತಿಗಿಂತ ಆಮದು ಬಹಳ ಹೆಚ್ಚೇ ಇತ್ತು. ಆಮದು ಮತ್ತು ರಫ್ತು ಎರಡನ್ನೂ ಸರಿದೂಗಿಸಲು ಮಾಡಿದ ಸತತ ಪ್ರಯತ್ನಗಳು ವಿಫಲವಾಗುತ್ತಲೇ ಹೋದವು. ಪರಿಣಾಮವಾಗಿ ಬ್ಯಾಲೆನ್ಸ್ ಆಫ್ ಪೇಮೆಂಟ್‌ನಲ್ಲಿ ಅಂತರ ಹೆಚ್ಚುತ್ತಾ ಹೋಯಿತು. ಅದು ಸ್ವತಂತ್ರ ಭಾರತದ ಮೊದಲ ಹಣಕಾಸು ಬಿಕ್ಕಟ್ಟು. 1966ರಲ್ಲಿ ಅನಿವಾರ್ಯವಾಗಿ ರೂಪಾಯಿ ಅಪಮೌಲ್ಯ ಮಾಡಬೇಕಾಯಿತು. ಆಗ ರೂಪಾಯಿ ಮೌಲ್ಯ ಒಂದು ಡಾಲರ್‌ಗೆ 7.5 ಆಯಿತು.

1991ರ ಆರ್ಥಿಕ ಬಿಕ್ಕಟ್ಟು

1991ರ ಆರ್ಥಿಕ ಬಿಕ್ಕಟ್ಟು

ಎಪ್ಪತ್ತರ ದಶಕದಲ್ಲಿ ಔದ್ಯಮೀಕರಣಕ್ಕೆ ಒತ್ತು ಕೊಡಲು ಭಾರತ ಆಮದು ಮೇಲಿನ ನಿರ್ಬಂಧಗಳನ್ನು ಸಡಿಲಿಸತೊಡಗಿತು. ಆದರೆ, ಬ್ಯಾಲನ್ಸ್ ಆಫ್ ಪೇಮೆಂಟ್‌ನ ಸಮಸ್ಯೆ ಕಠಿಣಗೊಂಡು, ಸರಕಾರದಿಂದ ನಿಯಮಿತವಾಗಿ ಪಾವತಿ ಆಗದೇ ಹೋಗಿದ್ದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ಆಗ ರೂಪಾಯಿ ಅಪಮೌಲ್ಯ ಮಾಡಬೇಕಾಯಿತು.

1991, ಭಾರತದ ಆರ್ಥಿಕತೆ ಅಭಿವೃದ್ಧಿಯ ಒಂದು ಮೈಲಿಗಲ್ಲು. ಸಮಾಜವಾದ ಆರ್ಥಿಕತೆಯ ಹಾದಿಯಲ್ಲಿದ್ದ ಭಾರತ 1991ರಲ್ಲಿ ದಿಢೀರನೇ ಪಥ ಬದಲಿಸಿ ಜಾಗತೀಕರಣಕ್ಕೆ ತೆರೆದುಕೊಂಡಿತು. ಇದು ಭಾರತ ಕಂಡ ಅತ್ಯಂತ ಸುಧಾರಣಾ ನೀತಿ ಎಂದು ಈಗ ಬಣ್ಣಿಸುತ್ತಾರೆ.

1991ಕ್ಕೆ ಮುನ್ನ ಒಂದು ಡಾಲರ್‌ಗೆ 25 ರೂಪಾಯಿಗೆ ಮೌಲ್ಯ ಕುಸಿದಿದ್ದರೆ, ಉದಾರ ನೀತಿ ಜಾರಿಯಾದ ನಂತರ 35 ರೂಪಾಯಿಗೆ ಕುಸಿಯಿತು. ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ಫಲ ಇದು.

 

ಡೀಮಾನಿಟೈಸೇಶನ್

ಡೀಮಾನಿಟೈಸೇಶನ್

2013 ಮೇ 22ರಂದು ಡಾಲರ್‌ಗೆ 55.48 ರೂ ಇತ್ತು. 15 ದಿನದಲ್ಲಿ 57.07 ರೂಪಾಯಿಗೆ ಕುಸಿಯಿತು. ಆಗ ಡಾಲರ್‌ಗೆ ಬೇಡಿಕೆ ಹೆಚ್ಚಿ, ಭಾರತದಿಂದ ವಿದೇಶಿ ಹೂಡಿಕೆಗಳು ಹೊರಬಿದ್ದ ಫಲವಾಗಿ ರೂಪಾಯಿ ಮೌಲ್ಯ ಕಡಿಮೆ ಆಯಿತು.

ಆದರೆ, 2016ರಲ್ಲಿ ಕೇಂದ್ರ ಸರಕಾರ ಡೀಮಾನಿಟೈಸೇಶನ್ ಘೋಷಿಸಿದ್ದು ತುಸು ದೊಡ್ಡ ಕುಸತಕ್ಕೆ ಕಾರಣವಾಯಿತು. ಕೆಲ ಹಳೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿ ಹೊಸ ಕರೆನ್ಸಿಗಳನ್ನು ತರಲಾಯಿತು. ಅದರ ಪರಿಣಾಮ ಏನೇ ಆದರೂ ಡಾಲರ್ ಎದುರು ರೂಪಾಯಿ ಮೌಲ್ಯ ನಾಲ್ಕೈದು ವರ್ಷಗಳಲ್ಲಿ 67 ಇದ್ದದ್ದು 71ಕ್ಕೆ ಕುಸಿಯಿತು.

ಇದು ಬಿಟ್ಟರೆ ಕಳೆದ ಒಂದು ವರ್ಷದಿಂದ ರೂಪಾಯಿ ಪ್ರಪಾತಕ್ಕೆ ಜಿಗಿಯುವ ರೀತಿಯಲ್ಲಿ ಕುಸಿತ ಕಾಣುತ್ತಿದೆ. 2021ರಲ್ಲಿ ಡಾಲರ್ ಎದುರು 74.57 ಇದ್ದ ರೂಪಾಯಿ ಮೌಲ್ಯ ಈಗ 83ರ ಗಡಿ ಸಮೀಪ ಬಂದಿದೆ. ಏಕಾಏಕಿ ಒಂದು ವರ್ಷದಲ್ಲಿ ಇಷ್ಟೊಂದು ಕುಸಿದಿರುವುದು ಇದೇ ಮೊದಲು.

 

ಡಾಲರ್ ವರ್ಸಸ್ ರೂಪಾಯಿ

ಡಾಲರ್ ವರ್ಸಸ್ ರೂಪಾಯಿ

1950: 4.16 ರೂ
1960: 4.76 ರೂ
1970: 7.50 ರೂ
1980: 7.93 ರೂ
1990: 18.13 ರೂ
2000: 46.86
2010: 45.11
2020: 73.63

English summary

Know How Rupee Depreciated Against USD Since 1947, Here is the List

Rupee is losing its value against US Dollar ever since 1947. The 90s and 2010s are the decades with biggest fall. Know the Dollar vs Rupee history.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X