For Quick Alerts
ALLOW NOTIFICATIONS  
For Daily Alerts

ಅಕೌಂಟ್‌ನಲ್ಲಿ ಹಣ ಇಲ್ಲದಿದ್ದರೂ ಪೇಟಿಎಂ, ಜಿ ಪೇ, ಫೋನ್ ಪೇಯಲ್ಲಿ ಪೇಮೆಂಟ್ ಮಾಡುವುದು ಹೇಗೆ?

|

ಭಾರತದ ಪೇಮೆಂಟ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಯುಪಿಐ ನೆಟ್ವರ್ಕ್‌ನಿಂದಾಗಿ ಇಂದು ಜನರ ದೈನಂದಿನ ವ್ಯವಹಾರ ಹೆಚ್ಚು ಸುಗಮಗೊಂಡಿದೆ. ಮೊದಲೆಲ್ಲಾ ಹಣ ಪಾವತಿಗಾಗಿ ನಗದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅನ್ನು ಜನರು ಹೆಚ್ಚಾಗಿ ಬಳಸುತ್ತಿದ್ದರು. ಈಗಂತೂ ಕ್ರೆಡಿಟ್ ಕಾರ್ಡ್ ಬಳಕೆ ಬಹಳ ಕಡಿಮೆ ಆಗಿದೆ. ನಗದು ವಹಿವಾಟೂ ಕಡಿಮೆಗೊಂಡಿದೆ. ಹೆಚ್ಚೆಚ್ಚು ಜನರು ಹಣ ಪಾವತಿಗಾಗಿ ಯುಪಿಐ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಆದರೆ, ಅಕೌಂಟ್‌ನಲ್ಲಿ ಹಣ ಇದ್ದರಷ್ಟೇ ಯುಪಿಐ ಪೇಮೆಂಟ್ ಸಾಧ್ಯ. ಈ ಒಂದು ಕೊರತೆಯನ್ನು ನೀಗಿಸಲು ಆರ್‌ಬಿಐ ಈ ವರ್ಷದ ಜೂನ್ ತಿಂಗಳಲ್ಲಿ ಮಹತ್ವದ ಕ್ರಮ ಪ್ರಕಟಿಸಿತು. ಅದೇ ಯುಪಿಐ ಜೊತೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಅವಕಾಶ ಕೊಟ್ಟಿದ್ದು. ಸೆಪ್ಟೆಂಬರ್ ೨೦ರಂದು ಯುಪಿಐ ಪ್ಲಾಟ್‌ಫಾರ್ಮ್‌ನಲ್ಲಿ ರುಪೇ ಕ್ರೆಡಿಟ್ ಕಾರ್ಡ್‌ಗೆ ಚಾಲನೆ ಕೊಡಲಾಯಿತು.

 

NBFC or Bank for Home Loan : ಸಾಲಕ್ಕೆ ಆಯ್ಕೆಗಳು; ಬ್ಯಾಂಕ್‌ಗಿಂತ ಎನ್‌ಬಿಎಫ್‌ಸಿ ಉತ್ತಮವಾ?NBFC or Bank for Home Loan : ಸಾಲಕ್ಕೆ ಆಯ್ಕೆಗಳು; ಬ್ಯಾಂಕ್‌ಗಿಂತ ಎನ್‌ಬಿಎಫ್‌ಸಿ ಉತ್ತಮವಾ?

ಈ ಮುಂಚೆಯೂ ಫೋನ್ ಪೇ, ಪೇಟಿಎಂ ಮತ್ತು ಗೂಗಲ್ ಪೇನಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಬಳಸಲು ಸಾಧ್ಯವಿತ್ತು. ಅದರೆ ಅದು ಆ್ಪ್‌ನ ವ್ಯಾಲಟ್‌ಗೆ ಹಣ ಹಾಕಲು ಮಾತ್ರ ಬಳಕೆ ಮಾಡಬಹುದಿತ್ತು. ಆದರೆ, ನಿಮ್ಮ ಚಾಲ್ತಿ ಖಾತೆ ಮತ್ತು ಎಸ್‌ಬಿ ಖಾತೆಯನ್ನು ಡೆಬಿಟ್ ಕಾರ್ಡ್ ಮೂಲಕ ಯುಪಿಐಗೆ ಪ್ಲಾಟ್‌ಫಾರ್ಮ್‌ಗೆ ಲಿಂಕ್ ಮಾಡುವ ರೀತಿಯಲ್ಲಿ ಕ್ರೆಡಿಟ್ ಕಾರ್ಡನ್ನು ಲಿಂಕ್ ಮಾಡಲು ಆಗುತ್ತಿರಲಿಲ್ಲ. ಈಗ ಆರ್‌ಬಿಐ ಅಂಥದ್ದೊಂದು ಅವಕಾಶ ಕಲ್ಪಿಸಿದೆ. ಡೆಬಿಟ್ ಕಾರ್ಡ್ ಮೂಲಕ ನಿಮ್ಮ ಎಸ್‌ಬಿ ಅಥವಾ ಚಾಲ್ತಿ ಖಾತೆಯನ್ನು ಹೇಗೆ ಯುಪಿಐಗೆ ಲಿಂಕ್ ಮಾಡುತ್ತೀರೋ ಅದೇ ರೀತಿ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಈಗ ನಿಮ್ಮ ಬ್ಯಾಂಕ್‌ನ ಎಸ್‌ಬಿ ಖಾತೆಯಲ್ಲಿ ಬ್ಯಾಲನ್ಸ್ ಇಲ್ಲದಿದ್ದರೂ ತುರ್ತು ವೆಚ್ಚಕ್ಕೆ ಹಣ ಪಾವತಿ ಮಾಡಬಹುದು.

Electric Car Vs Petrol Car : ಪೆಟ್ರೋಲ್ ಕಾರಿಗಿಂತ ಎಲೆಕ್ಟ್ರಿಕ್ ಕಾರು ಮಿತವ್ಯಯವಾ? ನೀವೆಷ್ಟು ಹಣ ಉಳಿಸಬಲ್ಲಿರಿ?Electric Car Vs Petrol Car : ಪೆಟ್ರೋಲ್ ಕಾರಿಗಿಂತ ಎಲೆಕ್ಟ್ರಿಕ್ ಕಾರು ಮಿತವ್ಯಯವಾ? ನೀವೆಷ್ಟು ಹಣ ಉಳಿಸಬಲ್ಲಿರಿ?

ಕ್ರೆಡಿಟ್ ಕಾರ್ಡ್ ಬಳಕೆಗೆ ಪುಷ್ಟಿ

ಕ್ರೆಡಿಟ್ ಕಾರ್ಡ್ ಬಳಕೆಗೆ ಪುಷ್ಟಿ

ಕಳೆದ ತಿಂಗಳು ಆರ್‌ಬಿಐ ತೆಗೆದುಕೊಂಡ ಈ ಕ್ರಮ ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಜೀವ ಬಂದಂತಾಗಿದೆ. ಯುಪಿಐ ಪೆಮೆಂಟ್ ವ್ಯವಸ್ಥೆ ಬಂದ ಮೇಲೆ ಕ್ರೆಡಿಟ್ ಕಾರ್ಡ್ ಬಳಕೆ ಬಹಳ ಕಡಿಮೆ ಆಗಿದೆ. ದೇಶಾದ್ಯಂತ ಪಿಒಎಸ್ ಟರ್ಮಿನಲ್ (ಕಾರ್ಡ್ ಸ್ವೈಪಿಂಗ್ ಮೆಷೀನ್) ಇರುವುದೇ ೭೦ ಲಕ್ಷ ಮಾತ್ರ. ಆದರೆ, ಯುಪಿಐ ಕ್ಯೂಆರ್ ಟರ್ಮಿನಲ್ (ಕ್ಯೂಆರ್ ಕೋಡ್) ಸಂಖ್ಯೆ ಬರೋಬ್ಬರಿ ೨೧ ಕೋಟಿ. ಇದರಿಂದ ಕ್ರೆಡಿಟ್ ಕಾರ್ಡ್‌ನ ಬಳಕೆ ಬಹಳ ಹೆಚ್ಚಾಗುವ ನಿರೀಕ್ಷೆ ಇದೆ. ಕ್ರೆಡಿಟ್ ಕಾರ್ಡ್‌ಗೆ ಒಳ್ಳೆಯ ಬೇಡಿಕೆಯೂ ಸಿಗುತ್ತದೆ.

ಆದರೆ, ಕ್ರೆಡಿಟ್ ಕಾರ್ಡ್ ಬಳಕೆ ಸುಲಭವಾಗಿದೆ ಎಂದು ಮಿತಿಮೀರಿ ನಾವು ವೆಚ್ಚ ಮಾಡುವ ಅಪಾಯವಂತೂ ಇದೆ. ಹೀಗಾಗಿ, ಎಚ್ಚರದಿಂದ ಕ್ರೆಡಿಟ್ ಕಾರ್ಡ್ ಬಳಕೆ ಮಾಡಬೇಕು.

ಇಲ್ಲಿ ಅತೀ ಹೆಚ್ಚು ಬಳಕೆಯಾಗುವ ವಿವಿಧ ಯುಪಿಐ ಆ್ಯಪ್‌ಗಳಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಜೋಡಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

 

ಫೋನ್ ಪೇಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು
 

ಫೋನ್ ಪೇಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು

* ಫೋನ್ ಪೇ ಆ್ಯಪ್‌ನಲ್ಲಿ ಪ್ರೊಫೈಲ್‌ಗೆ ಹೋಗಿ ಪೇಮೆಂಟ್ ಮೆತಡ್ ಮೇಲೆ ಕ್ಲಿಕ್ ಮಾಡಿ.
* 'ಆ್ಯಡ್ ಆನ್ ನ್ಯೂ ಕಾರ್ಡ್' ಮೇಲೆ ಒತ್ತಿರಿ.
* ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನ ನಂಬರ್, ಎಕ್‌ಪಿರಿ ಡೇಟ್, ಸಿವಿವಿ, ಕಾರ್ಡ್‌ದಾರರ ಹೆಸರು, ಬಿಲಿಂಗ್ ವಿಳಾಸ ಇತ್ಯಾದಿ ವಿವರ ತುಂಬಿಸಿ, ಸೇವ್ ಮೇಲೆ ಕ್ಲಿಕ್ ಮಾಡಿ
* ಟರ್ಮ್ಸ್ ಅಂಡ್ ಕಂಡಿಷನ್ಸ್ ಒಪ್ಪಿಕೊಂಡ ಬಳಿಕ 'ಆ್ಯಕ್ಟಿವೇಟ್' ಮೇಲೆ ಕ್ಲಿಕ್ ಮಾಡಿ.
* ಕ್ರೆಡಿಟ್ ಕಾರ್ಡ್ ಸಕ್ರಿಯವಾಗಿದೆಯಾ ಎಂದು ಆಟೊಮ್ಯಾಟಿಕ್ ಆಗಿ ವೆರಿಫೈ ಮಾಡಲಾಗುತ್ತದೆ. ನಿಮ್ಮ ಖಾತೆಯಿಂದ ೧ ರೂ ಹಣವನ್ನು ಈ ವೇಳೆ ಮುರಿದುಕೊಳ್ಳಲಾಗುತ್ತದೆ.

ಗಮನಿಸಿ: ಫೋನ್ ಪೇನಲ್ಲಿ ನೀವು ಎಲ್ಲಾ ಪೇಮೆಂಟ್‌ಗೂ ಕ್ರೆಡಿಟ್ ಕಾರ್ಡ್ ಬಳಕೆ ಮಾಡಲು ಆಗುವುದಿಲ್ಲ. ಫೋನ್ ಪೇ ಆ್ಯಪ್‌ನಲ್ಲಿ ಲಭ್ಯ ಇರುವ ಉತ್ಪನ್ನ ಮತ್ತು ಸೇವೆಗಳ ಖರೀದಿಗೆ ಕ್ರೆಡಿಟ್ ಕಾರ್ಡ್ ಬಳಸಬಹುದು. ಹಾಗೆಯೇ, ಫೋನ್ ಪೇ ಕ್ಯೂಆರ್ ಕೋಡ್ ಇರುವ ವರ್ತಕರಿಗೆ ನೀವು ಪೇಮೆಂಟ್ ಮಾಡಬಹುದು. ಇನ್ನೊಂದು ಸಂಗತಿ ಎಂದರೆ ಫೋನ್ ಪೇಗೆ ನೀವು ಯಾವುದೇ ಕ್ರೆಡಿಟ್ ಕಾರ್ಡ್ ಜೋಡಿಸಬಹುದು.

 

ಪೇಟಿಎಂಗೆ ಕ್ರೆಡಿಟ್ ಕಾರ್ಡ್ ಜೋಡಿಸುವುದು ಹೇಗೆ?

ಪೇಟಿಎಂಗೆ ಕ್ರೆಡಿಟ್ ಕಾರ್ಡ್ ಜೋಡಿಸುವುದು ಹೇಗೆ?

ಫೋನ್ ಪೇನಲ್ಲಿ ಕ್ರೆಡಿಟ್ ಕಾರ್ಡ್ ಸೇರಿಸುವ ಕ್ರಮದಲ್ಲೇ ಪೇಟಿಎಂನಲ್ಲೂ ಮಾಡಬಹುದು. ಪ್ರೊಫೈಲ್‌ಗೆ ಹೋಗಿ ಪೇಮೆಂಟ್ ಮೆತಡ್‌ನಲ್ಲಿ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಆ್ಯಡ್ ಮಾಡಬಹುದು.

ಫೋನ್ ಪೇಯಂತೆ ಪೇಟಿಎಂನಲ್ಲೂ ಎಲ್ಲಾ ರೀತಿಯ ಕಾರ್ಡ್‌ಗಳನ್ನು ಜೋಡಿಸುವ ಅವಕಾಶ ಇರುತ್ತದೆ.

 

ಜಿ ಪೇನಲ್ಲಿ ಕ್ರೆಡಿಟ್ ಕಾರ್ಡ್ ಜೋಡಿಸುವ ಕ್ರಮ

ಜಿ ಪೇನಲ್ಲಿ ಕ್ರೆಡಿಟ್ ಕಾರ್ಡ್ ಜೋಡಿಸುವ ಕ್ರಮ

ಪೇಟಿಎಂ, ಫೋನ್ ಪೇ ರೀತಿಯಲ್ಲಿ ಎಲ್ಲಾ ಕಾರ್ಡ್‌ಗಳನ್ನು ಗೂಗಲ್ ಪೇಗೆ ಜೋಡಿಸಲು ಆಗುವುದಿಲ್ಲ. ವೀಸಾ ಮತ್ತು ಮಾಸ್ಟರ್‌ಕಾರ್ಡ್ ಪೇಮೆಂಟ್ ಗೇಟ್‌ವೇಗೆ ಜೋಡಿತವಾಗಿರುವ ಕೆಲ ಆಯ್ದ ಬ್ಯಾಂಕುಗಳ ಕಾರ್ಡುಗಳನ್ನು ಗೂಗಲ್ ಪೇಗೆ ಸೇರಿಸಬಹುದು.

ಎಕ್ಸಿಸ್ ಬ್ಯಾಂಕ್, ಎಸ್‌ಬಿಐ, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ, ಇಂಡಸ್‌ಇಂಡ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್, ಎಚ್‌ಎಸ್‌ಬಿಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌ನ ಕಾರ್ಡುಗಳನ್ನು ಜಿ ಪೇಗೆ ಜೋಡಿಸಲು ಅವಕಾಶ ಇರುತ್ತದೆ.

ಫೋನ್ ಪೇ, ಪೇಟಿಎಂನಲ್ಲಿರುವ ವಿಧಾನದಲ್ಲೇ ಗೂಗಲ್ ಪೇನಲ್ಲೂ ನಾವು ಕ್ರೆಡಿಟ್ ಕಾರ್ಡ್ ಸೇರಿಸಬಹುದು.
* ಮೊದಲು ಮೊಬೈಲ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಓಪನ್ ಮಾಡಿ ನಿಮ್ಮ ಪ್ರೊಫೈಲ್ ಪಿಕ್ ಮೇಲೆ ಕ್ಲಿಕ್ ಮಾಡಿ.
* ಪೇಮೆಂಟ್ ಮೆತಡ್ಸ್ ಮೇಲೆ ಕ್ಲಿಕ್ ಮಾಡಿದರೆ ಆ್ಯಪ್‌ಗೆ ಜೋಡಿತವಾಗಿರುವ ನಿಮ್ಮ ಬ್ಯಾಂಕ್ ಖಾತೆಗಳು ಕಾಣಿಸುತ್ತವೆ.
* 'ಆ್ಯಡ್ ಕ್ರೆಡಿಟ್ ಆರ್ ಡೆಬಿಟ್ ಕಾರ್ಡ್' ಮೇಲೆ ಕ್ಲಿಕ್ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ನಂಬರ್ ಇತ್ಯಾದಿ ನಮೂದಿಸಬೇಕು.

ಗೂಗಲ್ ಪೇನಲ್ಲಿ ನೀವು ಕ್ರೆಡಿಟ್ ಕಾರ್ಡ್ ಬಳಸಿ ಇನ್ನೊಬ್ಬರ ಮೊಬೈಲ್ ನಂಬರ್‌ಗೆ ಹಣ ಕಳುಹಿಸಲು ಸಾಧ್ಯವಾಗದೇ ಇರಬಹುದು. ಇದು ಶಾಪಿಂಗ್ ಮಾಡಲು ಬಳಕೆ ಮಾಡಬಹುದು.

 

English summary

Know How To Link Credit Card To UPI Apps GPay, PayTM, PhonePe, See Details in Kannada

RBI this year has allowed linking of credit cards to UPI platform. This will help UPI users to make payment using credit car. Know details of how to link cards to PayTM, Phone Pe, G Pay.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X