For Quick Alerts
ALLOW NOTIFICATIONS  
For Daily Alerts

ಹೆಚ್ಚಾಯ್ತು ಇ-ವೇ ಬಿಲ್, ಮುಂದೈತೆ ಜಿಎಸ್‌ಟಿ ಹಬ್ಬ; ಏನಿದು ಬಿಲ್?

|

ನವದೆಹಲಿ, ಅ. 14: ಭಾರತದಲ್ಲಿ ಇ-ವೇ ಬಿಲ್‌ಗಳ (E-way bill) ಸಂಖ್ಯೆ ಸೆಪ್ಟೆಂಬರ್ ತಿಂಗಳಲ್ಲಿ 8.4 ಕೋಟಿಗೆ ಏರಿದೆ. ಇದು ಹೊಸ ದಾಖಲೆ ಎನಿಸಿದೆ. ಹಬ್ಬದ ಸೀಸನ್‌ನಲ್ಲಿ ಭಾರೀ ವ್ಯಾಪಾರ ವಹಿವಾಟು ನಡೆಯುತ್ತಿರುವುದರ ಸೂಚಕವಾಗಿದೆ. ಈ ಇ-ಬಿಲ್‌ಗಳ ಹೆಚ್ಚಳವು ಈ ಅಕ್ಟೋಬರ್ ತಿಂಗಳಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹ ಏರಿಕೆಗೂ ಮುನ್ಸೂಚಕವಾಗಿದೆ.

 

ಇದೇ ಮಾರ್ಚ್ ತಿಂಗಳಲ್ಲಿ ಇ-ವೇ ಬಿಲ್ ಹೆಚ್ಚಳವಾಗಿತ್ತು. ಮರು ತಿಂಗಳು, ಅಂದರೆ ಏಪ್ರಿಲ್‌ನಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹ 1.69 ಲಕ್ಷ ಕೋಟಿ ರೂನಷ್ಟು ದಾಖಲೆ ಮಟ್ಟದಲ್ಲಿ ಆಗಿತ್ತು. ಜೂನ್ ತಿಂಗಳಲ್ಲಿ ಇ-ವೇ ಬಿಲ್‌ಗಳ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ ಆಗತೊಡಗಿದೆ. ಈಗ ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆ ಮಟ್ಟಕ್ಕೆ ಏರಿದೆ. ಅಂದರೆ ಅಕ್ಟೋಬರ್ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.

ಎಲ್ಲೆಡೆ ಇನ್‌ಫ್ಲೇಷನ್ ಕಾಟ; ಏನಿದು ಹಣದುಬ್ಬರ? ಇದರ ದುಷ್ಪರಿಣಾಮಗಳೇನು?ಎಲ್ಲೆಡೆ ಇನ್‌ಫ್ಲೇಷನ್ ಕಾಟ; ಏನಿದು ಹಣದುಬ್ಬರ? ಇದರ ದುಷ್ಪರಿಣಾಮಗಳೇನು?

ಎನಿದು ಇ-ವೇ ಬಿಲ್?

ಎನಿದು ಇ-ವೇ ಬಿಲ್?

ಇದು ಎಲೆಕ್ಟ್ರಾನಿಕ್ ವೇ ಬಿಲ್. ಅಂತರ್‌ರಾಜ್ಯ ಮತ್ತು ಆಂತರಿಕವಾಗಿ ಸರಕುಗಳನ್ನು ಸಾಗಿಸಲು ನೀಡಲಾಗುವ ಎಲೆಕ್ಟ್ರಾನಿಕ್ ಪರ್ಮಿಟ್ ವ್ಯವಸ್ಥೆ ಇದು.

ಜಿಎಸ್‌ಟಿ ನೊಂದಾಯಿತ ವ್ಯಕ್ತಿಯು 50 ಸಾವಿರ ರೂಪಾಯಿಗಿಂತ ಹೆಚ್ಚು ಮೌಲ್ಯದ ಸರಕುಗಳನ್ನು ಇ-ವೇ ಬಿಲ್ ಇಲ್ಲದೆಯೇ ವಾಹನದಲ್ಲಿ ಸಾಗಿಸಲು ಆಗುವುದಿಲ್ಲ. ಅಂದರೆ 50 ಸಾವಿರ ರೂಗಿಂತ ಹೆಚ್ಚು ಮೌಲ್ಯದ ಸರಕುಗಳ ಸಾಗಣೆಗೆ ನೀಡಲಾಗುವ ಬಿಲ್ ಇದು. ಇ-ವೇ ಬಿಲ್ ಜಿಎಸ್‌ಟಿ ವೆಬ್‌ಸೈಟ್‌ನಲ್ಲಿ ಬಿಲ್ ಜನರೇಟ್ ಮಾಡಿ ಪಡೆಯಬಹುದು. ಆಂಡ್ರಾಯ್ಡ್ ಆ್ಯಪ್ ಕೂಡ ಲಭ್ಯ ಇದೆ. ಎಸ್ಸೆಮ್ಮೆಸ್ ಮೂಲಕವೂ ಇ-ವೇ ಬಿಲ್ ಪಡೆಯಬಹುದು.

ಇ-ವೇ ಬಿಲ್ ಜನರೇಟ್ ಆದಾಗ ವಿಶೇಷ ಇ-ವೇ ಬಿಲ್ ನಂಬರ್ (ಇಬಿಎನ್) ಅನ್ನು ಒದಗಿಸಲಾಗುತ್ತದೆ. ಸರಕು ಪೂರೈಸುವವರು, ಸರಕು ಪಡೆಯುವವರು ಮತ್ತು ಸರಕು ಸಾಗಣೆ ಮಾಡುವವರು, ಈ ಮೂವರಿಗೂ ಇಬಿಎನ್ ನಂಬರ್ ಅನ್ನು ನೀಡಲಾಗುತ್ತದೆ

 

ಇ-ವೇ ಬಿಲ್‌ಗೆ ದಾಖಲೆಗಳು

ಇ-ವೇ ಬಿಲ್‌ಗೆ ದಾಖಲೆಗಳು

ಇ-ವೇ ಬಿಲ್ ಜನರೇಟ್ ಮಾಡಲು ಈ ಕೆಳಕಾಣಸಿದ ಕೆಲ ಅಗತ್ಯ ವಿವರ ಅಥವಾ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
* ಸಾಗಣೆ ಮಾಡುವ ಸರಕುಗಳ ಇನ್‌ವಾಯ್ಸ್ ಅಥವಾ ಸರಬರಾಜು ಬಿಲ್ ಅಥವಾ ಚಲನ್.
* ರಸ್ತೆ ಮೂಲಕ ಸರಕು ಸಾಗಣೆ ಮಾಡುವುದಿದ್ದರೆ ಟ್ರಾನ್ಸ್‌ಪೋರ್ಟರ್ ಐಡಿ ಅಥವಾ ವಾಹನ ಸಂಖ್ಯೆ ನಮೂದಿಸಬೇಕು
* ರೈಲು, ವಿಮಾನ ಅಥವಾ ಹಡುಗು ಮೂಲಕ ಸಾಗಣೆ ಮಾಡುತ್ತಿದ್ದರೆ ಟ್ರಾನ್ಸ್‌ಪೋರ್ಟ್ ಐಡಿ, ಟ್ರಾನ್ಸ್‌ಪೋರ್ಟ್ ಡಾಕುಮೆಂಟ್ ನಂಬರ್ ಮತ್ತು ದಿನಾಂಕವನ್ನು ನೀಡಬೇಕು.

ಜಿಎಸ್‌ಟಿಗೆ ನೊಂದಾಯಿಸದಿದ್ದರೆ?
 

ಜಿಎಸ್‌ಟಿಗೆ ನೊಂದಾಯಿಸದಿದ್ದರೆ?

50 ಸಾವಿರ ರೂಗಿಂತ ಹೆಚ್ಚು ಮೌಲ್ಯದ ಸರಕುಗಳ ಸಾಗಣೆಗೆ ಇ-ವೇ ಬಿಲ್ ಪಡೆಯುವುದು ಕಡ್ಡಾಯ. ಜಿಎಸ್‌ಟಿ ನೊಂದಾಯಿತ ವ್ಯಕ್ತಿಯೇ ಆಗಲೀ, ನೊಂದಾಯಿಸದ ವ್ಯಕ್ತಿಯೇ ಆಗಲಿ ಈ ಬಿಲ್ ಪಡೆಯಲೇಬೇಕು. ಪೂರೈಕೆದಾರ, ಸಾಗಣೆದಾರ ಮತ್ತು ಬಳಕೆದಾರ ಈ ಮೂವರಲ್ಲಿ ಜಿಎಸ್‌ಟಿ ನೊಂದಾಯಿತರಾಗಿರುವವರು ಎಲ್ಲಾ ನಿಯಮಗಳ ಪಾಲನೆ ಆಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಒಂದು ವೇಳೆ ಪೂರೈಕೆದಾರರೇನಾದರೂ ಇ-ವೇ ಬಿಲ್ ಜನರೇಟ್ ಮಾಡದೇ ಹೋದಲ್ಲಿ ಅದರ ಹೊಣೆ ಸರಕು ಸಾಗಣೆ ಮೇಲೆ ಬೀಳುತ್ತದೆ. ಒಂದು ವೇಳೆ ಸರಕು ಪಡೆಯುವವರು ಜಿಎಸ್‌ಟಿ ನೊಂದಾಯಿತರಾಗಿದ್ದರೆ ಅವರೇ ಇ-ವೇ ಬಿಲ್ ಸೃಷ್ಟಿಸಬೇಕು ಎನ್ನುತ್ತದೆ ನಿಯಮ.

50 ಸಾವಿರ ರೂಗಿಂತ ಕಡಿಮೆ ಮೌಲ್ಯದ ಕೆಲ ವಸ್ತುಗಳ ಸಾಗಣೆಗೂ ಇ-ವೇ ಬಿಲ್ ಜನರೇಟ್ ಮಾಡುವ ಅಗತ್ಯತೆ ಇದೆ.

 

ಇ-ವೇ ಬಿಲ್ ಅಗತ್ಯ ಬೀಳದ ಕೆಲ ಸಂದರ್ಭಗಳಿವು

ಇ-ವೇ ಬಿಲ್ ಅಗತ್ಯ ಬೀಳದ ಕೆಲ ಸಂದರ್ಭಗಳಿವು

* ಮೋಟಾರು ರಹಿತ ವಾಹನದಲ್ಲಿ ಸರಕು ಸಾಗಣೆ ಮಾಡಿದರೆ
* ನೇಪಾಳ ಅಥವಾ ಭೂತಾನ್‌ನಿಂದ ಬರುವ ಅಥವಾ ಇಲ್ಲಿಂದ ಅಲ್ಲಿಗೆ ಕಾರ್ಗೋ ಕನ್‌ಸೈನ್ಮೆಂಟ್‌ಗಳ (ಹಡಗಿನಲ್ಲಿ ಸಾಗಿಸುವ) ಸಾಗಣೆ
* ಖಾಲಿ ಕಂಟೈನರ್‌ಗಳ ಸಾಗಣೆ
* ಕೇಂದ್ರ ಸರಕಾರ, ರಾಜ್ಯ ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರದಿಂದ ಸರಕುಗಳನ್ನು ರೈಲಿನಲ್ಲಿ ಸಾಗಿಸುತ್ತಿದ್ದಾರೆ.

ಅಮೆರಿಕ, ಚೀನಾಗೆ ಭಾರತದ ರಫ್ತು ಇಳಿಕೆ; ಕಾರಣ ಏನು?ಅಮೆರಿಕ, ಚೀನಾಗೆ ಭಾರತದ ರಫ್ತು ಇಳಿಕೆ; ಕಾರಣ ಏನು?

English summary

Know What Is E-way Bill That Gone up Record High, Huge GST Collection Predicted

Electronic permits or e-way bills have risen to record numbers in September, that may indicate huge GST collection in coming month. Here is details of what is e-way bill and how to generate it.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X