For Quick Alerts
ALLOW NOTIFICATIONS  
For Daily Alerts

2022 Tech Layoffs: ಹಣದುಬ್ಬರ: ಉದ್ಯೋಗಿಗಳ ವಜಾ ಮಾಡುತ್ತಿರುವ 20 ಟೆಕ್ ಸಂಸ್ಥೆಗಳ ಪಟ್ಟಿ

|

ಯುಎಸ್‌, ಭಾರತ ಸೇರಿದಂತೆ ಜಾಗತಿಕವಾಗಿ ಹಣದುಬ್ಬರ ಅಧಿಕವಾಗಿದೆ. ಇದು ಪ್ರಮುಖವಾಗಿ ಟೆಕ್ ಸಂಸ್ಥೆಗಳ ಮೇಲೆ ಪರಿಣಾಮ ಉಂಟು ಮಾಡಿದೆ. ಇದರಿಂದಾಗಿ ಟ್ವಿಟ್ಟರ್, ಮೆಟಾ, ಅಮೆಜಾನ್ ಸೇರಿದಂತೆ ಹಲವಾರು ಟೆಕ್ ಸಂಸ್ಥೆಗಳು ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಹಾಗೆಯೇ ಹೊಸದಾಗಿ ಯಾವುದೇ ನೇಮಕಾತಿ ಮಾಡಿಕೊಳ್ಳುತ್ತಿಲ್ಲ.

 

ಸಾವಿರಾರು ಜನರು ಈಗಾಗಲೇ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇನ್ನೂ ಕೂಡಾ ಉದ್ಯೋಗ ಕಡಿತ ಮುಂದುವರೆಯಲಿದೆ. ಗ್ರೇ & ಕ್ರಿಸ್‌ಮಸ್ ಎಂಬ ಸಂಸ್ಥೆಯ ಪ್ರಕಾರ ಅಕ್ಟೋಬರ್‌ನಲ್ಲಿ ಸುಮಾರು 9,587ರಷ್ಟು ಮಂದಿಯನ್ನು ಪ್ರಮುಖ ಸಂಸ್ಥೆಗಳು ಕೆಲಸದಿಂದ ತೆಗೆದುಹಾಕಿದೆ. ನವೆಂಬರ್ 2020ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದಲ್ಲಿ ಉದ್ಯೋಗ ಕಡಿತ ನಡೆದಿದೆ. ಮೆಟಾ, ನೆಟ್‌ಫ್ಲಿಕ್ಸ್, ರೊಕೊ ಮೊದಲಾದ ಟೆಲಿಕಾಂ, ಎಲೆಕ್ಟ್ರಾನಿಕ್, ಹಾರ್ಡ್‌ವೇರ್ ಉತ್ಪಾದನ ಸಂಸ್ಥೆ, ಸಾಫ್ಟ್‌ವೇರ್‌ ಸಂಸ್ಥೆಗಳಲ್ಲಿ ಅಕ್ಟೋಬರ್‌ನಲ್ಲಿ ಮಾಡಲಾದ ಉದ್ಯೋಗ ಕಡಿತದ ಲೆಕ್ಕಾಚಾರ ಇದಾಗಿದೆ.

ಇನ್ನು ವಿಶ್ವದಾದ್ಯಂತ ಸುಮಾರು 853 ಟೆಕ್ ಸಂಸ್ಥೆಗಳು ಒಟ್ಟು ಸರಿಸುಮಾರು 137,492 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಪ್ರಮುಖವಾಗಿ ಆರ್ಥಿಕ ನಷ್ಟ, ಹಿಂಜರಿತಕ್ಕೆ ತಿರುಗುತ್ತಿರುವ ಹಣದುಬ್ಬರ ಸ್ಥಿತಿಯ ನಡುವೆ ಸಂಸ್ಥೆಗಳು ಈ ನಿರ್ಧಾರಕ್ಕೆ ಬಂದಿದೆ. ಇಲ್ಲಿ ನಾವು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವ, ನೇಮಕಾತಿ ಸ್ಥಗಿತಗೊಳಿಸಿರುವ ಪ್ರಮುಖ 20 ಸಂಸ್ಥೆಗಳ ಪಟ್ಟಿಯನ್ನು ಮಾಡಿದ್ದೇವೆ. ಮುಂದೆ ಓದಿ...

 ಆ್ಯಪಲ್, ಮೆಟಾ

ಆ್ಯಪಲ್, ಮೆಟಾ

ಐಫೋನ್ ಉತ್ಪಾದನೆ ಮಾಡುವ ಜನಪ್ರಿಯ ಕಂಪನಿಯಾದ ಆ್ಯಪಲ್ ತಮ್ಮ ಸಂಸ್ಥೆಯಲ್ಲಿ ಉದ್ಯೋಗಿಗಳನ್ನು ವಜಾ ಮಾಡುವ ಬದಲಾಗಿ ನೇಮಕಾತಿ ನಿಲ್ಲಿಸಿದೆ. ರಿಸರ್ಚ್, ಡೆವಲಪ್‌ಮೆಂಟ್, ಮೊದಲಾದ ಸ್ಥಾನಗಳಿಗೆ ಉದ್ಯೋಗಿಗಳ ನೇಮಕಾತಿ ಸ್ಥಗಿತಗೊಳಿಸಿದೆ. ಈ ನಡುವೆ ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ಮೆಟಾ ಸುಮಾರು 11 ಸಾವಿರ ಉದ್ಯೋಗಿಗಳನ್ನು ವಜಾ ಮಾಡಿದೆ. ಮೆಟಾ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಮಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಸುಮಾರು ಶೇಕಡ 13ರಷ್ಟು ಮಂದಿಯನ್ನು ವಜಾ ಮಾಡಲಾಗಿದೆ. ಮುಂದಿನ ತ್ರೈಮಾಸಿಕದವರೆಗೂ ಉದ್ಯೋಗ ನೇಮಕಾತಿಯನ್ನು ಸ್ಥಗಿತಗೊಳಿಸಿದೆ.

  ಸಿಸ್ಕೋ, ಸೀಗೇಟ್

ಸಿಸ್ಕೋ, ಸೀಗೇಟ್

ಸಿಸ್ಕೋ ಸಂಸ್ಥೆಯು ತಮ್ಮ ಸಂಸ್ಥೆಯನ್ನು ಸಂಪೂರ್ಣವಾಗಿ ಮರುರಚನೆ ಮಾಡಲು ನಿರ್ಧಾರ ಮಾಡಿದೆ. ಇದು ಸುಮಾರು ಶೇಕಡ 5ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ. ಸಂಸ್ಥೆಯಲ್ಲಿ ತೆರಿಗೆ ಕಡಿತವನ್ನು ಹೊರತುಪಡಿಸಿ ಸುಮಾರು 600 ಮಿಲಿಯನ್ ಡಾಲರ್ ವೆಚ್ಚವಾಗುತ್ತದೆ ಎಂದು ಸಂಸ್ಥೆ ಅಂದಾಜು ಮಾಡಿದೆ. ಇನ್ನು ಸೀಗೇಟ್ ಕಂಪ್ಯೂಟರ್‌ ಹಾರ್ಡ್ ಡ್ರೈವ್‌ ಉತ್ಪಾದನಾ ಸಂಸ್ಥೆಯಾಗಿದೆ. ಸುಮಾರು 3 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದೆ ಎಂದು ಹೇಳಿದೆ.

 ಅಪ್‌ಸ್ಟಾರ್ಟ್‌, ಡಾಪ್ಪೆರ್‌ ಲ್ಯಾಬ್ಸ್‌
 

ಅಪ್‌ಸ್ಟಾರ್ಟ್‌, ಡಾಪ್ಪೆರ್‌ ಲ್ಯಾಬ್ಸ್‌

ಅಪ್‌ಸ್ಟಾರ್ಟ್‌ ಹೋಲ್ಡಿಂಗ್ಸ್ ಆನ್‌ಲೈನ್‌ ಮೂಲಕ ಸಾಲ ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಗಂಟೆಯ ಲೆಕ್ಕಾಚಾರದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 140 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಹೇಳಿದೆ. ಆಪ್‌ ಮೂಲಕ ಸಾಲ ಪಡೆಯುವುದು ಕಡಿಮೆಯಾಗುತ್ತಿರುವ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿದ್ದು ಆದ್ದರಿಂದ ಸಂಸ್ಥೆ ಉದ್ಯೋಗ ಕಡಿತ ಮಾಡಿದೆ. ಡಾಪ್ಪೆರ್‌ ಲ್ಯಾಬ್ಸ್‌ನ ಸಂಸ್ಥಾಪಕ, ಸಿಇಒ ರೋಹಮ್ ಸಂಸ್ಥೆಯಲ್ಲಿ ಶೇಕಡ 22ರಷ್ಟು ಉದ್ಯೋಗಿಗಳನ್ನು ವಜಾ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

 ಟ್ವಿಟ್ಟರ್, ಡಿಜಿಟಲ್ ಕರೆನ್ಸಿ ಗ್ರೂಪ್

ಟ್ವಿಟ್ಟರ್, ಡಿಜಿಟಲ್ ಕರೆನ್ಸಿ ಗ್ರೂಪ್

ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ತನ್ನ ಮಾಲೀಕತ್ವಕ್ಕೆ ಪಡೆದ ಬಳಿಕ ಸಂಸ್ಥೆಯಲ್ಲಿ ಉಂಟಾದ ನಷ್ಟವನ್ನು ಸರಿದೂಗಿಸಲು ಹಲವಾರು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಇಮೇಲ್ ಮೂಲಕವೇ ಸುಮಾರು 3,700 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಇನ್ನು ಕ್ರಿಪ್ಟೊ ನಿರ್ವಹಣೆ ಮಾಡುವ ಡಿಜಿಟಲ್ ಕರೆನ್ಸಿ ಗ್ರೂಪ್‌ನಲ್ಲಿ 10 ಮಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಮುಖ್ಯ ಅಧಿಕಾರಿಯಾಗಿದ್ದ ಮಾರ್ಕ್ ಮೂರ್ಫಿಯನ್ನು ಕೂಡಾ ಕೆಲಸದಿಂದ ವಜಾ ಮಾಡಲಾಗಿದೆ.

 ಚಿಮೆ, ಎಚ್‌ಪಿ

ಚಿಮೆ, ಎಚ್‌ಪಿ

ಚಿಮೆ ಸ್ಟಾರ್ಟ್‌ಅಪ್ ಡಿಜಿಟಲ್ ಬ್ಯಾಂಕಿಂಗ್ ಸಂಸ್ಥೆಯಾಗಿದೆ. ಇದು ಸುಮಾರು 160 ಅಥವಾ ಶೇಕಡ 12ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ವಕ್ತಾರರ ಪ್ರಕಾರ ಸಂಸ್ಥೆಯು ಇನ್ನು ಕೂಡಾ ಇಂತಹ ಕ್ರಮಕೈಗೊಳ್ಳಲಿದೆ. ಎಚ್‌ಪಿ ಕಂಪ್ಯೂಟರ್‌ಗೆ ಬೇಡಿಕೆ ಕಡಿಮೆಯಾಗಿದೆ. ಈ ನಡುವೆ ಎಚ್‌ಪಿ ಮುಂದಿನ ಮೂರು ವರ್ಷದಲ್ಲಿ 6 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ನಿರ್ಧಾರ ಮಾಡಿದೆ. ಸುಮಾರು 10 ಶೇಕಡದಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಿದೆ.

ಅಮೆಜಾನ್, ಡೋರ್‌ಡ್ಯಾಷ್

ಅಮೆಜಾನ್, ಡೋರ್‌ಡ್ಯಾಷ್

ಅಮೆಜಾನ್ ಸುಮಾರು 10 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ಸಜ್ಜಾಗಿದೆ. ಮುಖ್ಯವಾಗಿ ಅಮೆಜಾನ್‌ನ ಅಲೆಕ್ಸದಲ್ಲಿ ಹಾಗೂ ರಿಟೇಲ್ ಸೆಕ್ಟರ್‌ನಲ್ಲಿ ಉದ್ಯೋಗ ಕಡಿತ ನಡೆಯಲಿದೆ. ಡೋರ್‌ಡ್ಯಾಷ್ ಸುಮಾರು 1250 ಮಂದಿಯನ್ನು ಕೆಲಸದಿಂದ ವಜಾ ಮಾಡುತ್ತಿದೆ. ಕೋವಿಡ್‌ನಿಂದಾಗಿ ಆದ ನಷ್ಟದಿಂದ ಇನ್ನು ಕೂಡಾ ಹೊರಬರಲು ಸಾಧ್ಯವಾಗದ ಕಾರಣ ಈ ನಿರ್ಧಾರಕ್ಕೆ ಸಂಸ್ಥೆ ಬಂದಿದೆ. ಸಂಸ್ಥೆಯಲ್ಲಿ ಒಟ್ಟು ಶೇಕಡ 6ರಷ್ಟು ಉದ್ಯೋಗ ಕಡಿತ ನಡೆಯಲಿದೆ.

ಇಂಟಲ್, ಲಿಫ್ಟ್

ಇಂಟಲ್, ಲಿಫ್ಟ್

ಚಿಪ್‌ ಉತ್ಪಾದನೆ ಮಾಡುವ ಸಂಸ್ಥೆಯಾದ ಇಂಟಲ್ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ ಹಾಗೂ ಹೊಸ ಸೌಲಭ್ಯ ಆರಂಭವನ್ನು ಮುಂದೂಡಿದೆ. ಪ್ರಮುಖವಾಗಿ 2019ರಲ್ಲಿಯೇ 3 ಬಿಲಿಯನ್ ಡಾಲರ್ ಅನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ಸಂಸ್ಥೆ ಈ ಕ್ರಮವನ್ನು ಕೈಗೊಂಡಿದೆ. ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ. ಇನ್ನು ಲಿಫ್ಟ್ ಸಂಸ್ಥೆಯು ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ತನ್ನ ಕಾರು ಸರ್ವಿಸ್ ವಿಭಾಗವನ್ನು ಮಾರಾಟ ಮಾಡಿದೆ. ಹಾಗೆಯೇ ಸುಮಾರು 683 ಅಥವಾ ಶೇಕಡ 13ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ. ಮುಂದಿನ ವರ್ಷದವರೆಗೆ ಯಾವುದೇ ನೇಮಕಾತಿ ನಡೆಸಲಾಗುವುದಿಲ್ಲ ಎಂದು ಈಗಾಗಲೇ ಸಂಸ್ಥೆ ಘೋಷಣೆ ಮಾಡಿದೆ.

ಪೆಲಾಟನ್, ಸೇಲ್ಸ್‌ಫೋರ್ಸ್

ಪೆಲಾಟನ್, ಸೇಲ್ಸ್‌ಫೋರ್ಸ್

ಪೆಲಾಟನ್ ಸಂಸ್ಥೆಯಲ್ಲಿ ಸುಮಾರು 500 ಉದ್ಯೋಗಿಗಳನ್ನು ಅಥವಾ ಶೇಕಡ 12ರಷ್ಟು ಜನರನ್ನು ಅಕ್ಟೋಬರ್‌ನಲ್ಲಿ ಉದ್ಯೋಗದಿಂದ ವಜಾ ಮಾಡಲಾಗಿದೆ. ಈ ಸಂಸ್ಥೆಯು ಇದು ವರ್ಷದಲ್ಲಿ ನಾಲ್ಕನೇ ಬಾರಿಗೆ ಉದ್ಯೋಗ ಕಡಿತ ಮಾಡುವುದಾಗಿದೆ. ಇನ್ನು ಸೇಲ್ಸ್‌ಫೋರ್ಸ್ ನೂರಾರು ಉದ್ಯೋಗಳನ್ನು ಕೆಲಸದಿಂದ ವಜಾ ಮಾಡಿದೆ. ಎರಡು ಸಂಸ್ಥೆಗಳು ಕೂಡಾ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಉದ್ಯೋಗ ಕಡಿತ ಕ್ರಮಕೈಗೊಂಡಿದೆ.

ಕ್ವಾಲ್‌ಕಾಮ್, ಓಪನ್‌ಡೋರ್

ಕ್ವಾಲ್‌ಕಾಮ್, ಓಪನ್‌ಡೋರ್

ಕ್ವಾಲ್‌ಕಾಮ್‌ ಸಂಸ್ಥೆಯ ಚಿಪ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುವ ಮೊಬೈಲ್‌ ಫೋನ್‌ನ ಬೇಡಿಕೆ ಕಡಿಮೆಯಾದ ಕಾರಣದಿಂದಾಗಿ ಕ್ವಾಲ್‌ಕಾಮ್‌ಗೆ ನಷ್ಟ ಉಂಟಾಗುತ್ತಿದೆ. ಅದಕ್ಕಾಗಿ ಪ್ರಸ್ತುತ ಸಂಸ್ಥೆಯು ನೇಮಕಾತಿಯನ್ನು ಸ್ಥಗಿತಗೊಳಿಸಿದೆ. ಓಪನ್‌ಡೋರ್ ಸಂಸ್ಥೆಯು ಸುಮಾರು 550ರಷ್ಟು ಅಥವಾ ಶೇಕಡ 18ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ.

 ಸ್ಟ್ರೈಪ್, ಗ್ಯಾಲಕ್ಸಿ ಡಿಜಿಟಲ್

ಸ್ಟ್ರೈಪ್, ಗ್ಯಾಲಕ್ಸಿ ಡಿಜಿಟಲ್

ಸ್ಟ್ರೈಪ್ ಸುಮಾರು 1000 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಿದೆ. ಅಂದರೆ ಶೇಕಡ 14ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಿದೆ. ಇದರಿಂದಾಗಿ ಸಂಸ್ಥೆಯಲ್ಲಿನ ಒಟ್ಟು ಉದ್ಯೋಗಿಗಳ ಸಂಖ್ಯೆ 7 ಸಾವಿರಕ್ಕೆ ಇಳಿಯಲಿದೆ. ಫೆಬ್ರವರಿಯಲ್ಲಿಯೂ ಇಷ್ಟೇ ಉದ್ಯೋಗಿಗಳಿದ್ದರು. ಕ್ರಿಪ್ಟೋಕರೆನ್ಸಿ ಸಂಸ್ಥೆಯಾದ ಗ್ಯಾಲಕ್ಸಿ ಡಿಜಿಟಲ್ ಶೇಕಡ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ.

English summary

Layoff Wagon: Twitter to Amazon, List of 20 Big Tech Companies Laying Off Employees

Layoff Wagon: Tech companies are laying off employees. Here;s List of 20 Big Tech Companies Laying Off Employees amid global recession fears.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X