For Quick Alerts
ALLOW NOTIFICATIONS  
For Daily Alerts

ಮಂಗಳೂರು ಕುಕ್ಕರ್ ಬ್ಲಾಸ್ಟ್ ಪಾಠ; ಆಧಾರ್ ಕಾರ್ಡ್ ದುರುಪಯೋಗ ತಡೆಯೋದು ಹೇಗೆ?

|

ಬೆಂಗಳೂರು, ನ. 24: ಇತ್ತೀಚೆಗೆ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬ್ಲಾಸ್ಟ್ ಪ್ರಕರಣ ಬಹಳ ಎಚ್ಚರಿಕೆ ಕರೆಗಂಟೆಗಳನ್ನು ಒತ್ತಿದೆ. ಕುಕ್ಕರ್ ಬಾಂಬ್ ಸ್ಫೋಟಿಸಿದ ವ್ಯಕ್ತಿ ನಕಲಿ ವೇಷ ಹಾಕಿದ್ದಲ್ಲದೇ ಬೇರೆಯವರ ಆಧಾರ್ ಕಾರ್ಡ್‌ಗಳನ್ನು ಬಳಸುತ್ತಿದ್ದ ವಿಚಾರ ಬಯಲಿಗೆ ಬಂದಿತ್ತು. ಆಧಾರ್ ಕಾರ್ಡ್ ಇತ್ಯಾದಿ ನಮ್ಮ ವೈಯಕ್ತಿಕ ದಾಖಲೆಗಳನ್ನು ಅಪರಾಧಿಗಳು ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳಬಹುದು ಎಂಬುದಕ್ಕೆ ಈ ಪ್ರಕರಣ ಕೈಗನ್ನಡಿಯಂತಿದೆ.

 

ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಅಲೋಕ್ ಕುಮಾರ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದು, ಆಧಾರ್ ಕಾರ್ಡ್ ದುರುಪಯೋಗ ಸೇರಿದಂತೆ ಕೆಲವಾರು ಸಲಹೆಗಳನ್ನು ಸಾರ್ವಜನಿಕರಿಗೆ ನೀಡಿದ್ದಾರೆ.

ಅಲೋಕ್ ಕುಮಾರ್ ಸಲಹೆಗಳು

ಮಂಗಳೂರು ಸ್ಫೋಟ ಪ್ರಕರಣದಿಂದ ನಾವು ಕಲಿಯಬೇಕಾದ ಪಾಠಗಳು ಯಾವುವು ಎಂದು ತಿಳಿಸಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.

* ನಿಮ್ಮ ಆಧಾರ್ ಕಾರ್ಡ್ ಕಳೆದುಹೋಗಿದ್ದರೆ ಹುಷಾರಾಗಿರಿ. ಯುಐಡಿಎಐ ಸೈಟ್‌ನಲ್ಲಿ ಲಭ್ಯ ಇರುವ ಲಾಕ್ ಮತ್ತು ಅನ್‌ಲಾಕ್ ಸೌಲಭ್ಯ ಬಳಸುವ ಮೂಲಕ ಆಧಾರ್ ಕಾರ್ಡ್ ದುರ್ಬಳಕೆ ತಪ್ಪಿಸಿ.
* ನೀವು ಬಾಡಿಗೆ ಕೊಡುವಾಗ ಆ ವ್ಯಕ್ತಿಗಳ ಹಿನ್ನೆಲೆ ಪರಿಶೀಲಿಸಿ
* ನೆರೆ ಹೊರೆಯವರು ನಿಗಾ ಇರಿಸುವಂತಹ ವ್ಯವಸ್ಥೆ ಮಾಡಿಕೊಳ್ಳಿ.

ಇವು ಎಡಿಜಿಪಿ ಅಲೋಕ್ ಕುಮಾರ್ ಮಾಡಿರುವ ಕೆಲ ಸಲಹೆಗಳು.

 

ಆಧಾರ್ ಲಾಕ್, ಅನ್‌ಲಾಕ್ ಸೌಲಭ್ಯ
 

ಆಧಾರ್ ಲಾಕ್, ಅನ್‌ಲಾಕ್ ಸೌಲಭ್ಯ

ಆಧಾರ್ ಕಾರ್ಡ್ ವಿಚಾರದಲ್ಲಿ ಸರ್ಕಾರ ಬಹಳಷ್ಟು ಮುಂದೆ ಹೋಗಿಯಾಗಿದೆ. ಅದನ್ನು ರದ್ದುಗೊಳಿಸುವ ಸಾಧ್ಯತೆ ತೀರಾ ಕಡಿಮೆ. ಆಧಾರ್ ಒಪ್ಪಿಕೊಂಡೇ ನಾವು ಮುಂದುವರಿಯುವುದು ಅನಿವಾರ್ಯ. ಈಗಂತೂ ಆಧಾರ್ ನಮ್ಮ ದೈನಂದಿನ ಜೀವನದ ಪ್ರಮುಖ ವೈಯಕ್ತಿಕ ದಾಖಲೆಯಾಗಿ ರೂಪುಗೊಂಡಿದೆ. ಮೊಬೈಲ್ ಸಿಮ್ ಪಡೆಯುವುದರಿಂದ ಹಿಡಿದು ಸರ್ಕಾರಿ ಯೋಜನೆ, ಬ್ಯಾಂಕ್ ಕೆವೈಸಿಯವರೆಗೆ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ಏಕೈಕ ಅನಿವಾರ್ಯ ದಾಖಲೆಯಾಗಲೂಬಹುದು.

ಆಧಾರ್ ಕಾರ್ಡ್‌ನಲ್ಲಿ ನಮ್ಮ ಬಯೋಮೆಟ್ರಿಕ್ ಮಾಹಿತಿ ಇರುವುದರಿಂದ ಈ ದಾಖಲೆ ಬಹಳ ಮುಖ್ಯ ಹೌದು, ಜೊತೆಗೆ ಎಚ್ಚರದಿಂದ ಇರುವುದೂ ಅಗತ್ಯ. ಆಧಾರ್ ನಂಬರ್ ಇತ್ಯಾದಿಯು ಹ್ಯಾಕರ್‌ಗಳ ಮೂಲಕ ಹೊರಗಿನವರಿಗೆ ಸೋರಿಕೆಯಾಗಿದೆ ಎಂಬಂತಹ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಆದರೆ ಆಧಾರ್ ನಿಭಾಯಿಸುವ ಯುಐಡಿಎಐ ಸಂಸ್ಥೆ, ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ ಮಾಹಿತಿ ಸುರಕ್ಷಿತವಾಗಿದೆ ಎಂದು ಸ್ಪಷ್ಟೀಕರಣವನ್ನೇನೋ ಕೊಟ್ಟಿದೆ.

ಹಾಗೆಯೇ, ಆಧಾರ್ ಕಾರ್ಡ್ ಅನ್ನು ಲಾಕ್ ಮತ್ತು ಅನ್‌ಲಾಕ್ ಮಾಡುವ ಸೌಲಭ್ಯವನ್ನೂ ಇತ್ತೀಚೆಗೆ ಕಲ್ಪಿಸಲಾಗಿದೆ. ಒಂದು ವೇಳೆ ನಿಮ್ಮ ಬಯೋಮೆಟ್ರಿಕ್ ಮಾಹಿತಿ ಕಳುವಾಗಿದೆ ಎಂದು ಅನಿಸಿದಲ್ಲಿ ನೀವು ಆಧಾರ್ ಕಾರ್ಡ್ ಲಾಕ್ ಮಾಡಬಹುದು. ಯಾರೂ ಕೂಡ ಬಯೋಮೆಟ್ರಿಕ್ ಅನ್ನು ವೆರಿಫಿಕೇಶನ್‌ಗೆ ಬಳಸಲು ಆಗುವುದಿಲ್ಲ. ನೀವು ಬಯೋಮೆಟ್ರಿಕ್ ಬಳಸಬೇಕಾದಲ್ಲಿ ಆಧಾರ್ ಅನ್‌ಲಾಕ್ ಮಾಡಬಹುದು. ಈ ಲಾಕ್ ಮತ್ತು ಅನ್‌ಲಾಕ್ ಸೌಲಭ್ಯ ಯುಐಡಿಎಐ ವೆಬ್‌ಸೈಟ್‌ನಲ್ಲೇ ಲಭ್ಯ ಇರುತ್ತದೆ.

 

ಲಾಕ್, ಅನ್‌ಲಾಕ್ ಮಾಡುವುದು ಹೇಗೆ?

ಲಾಕ್, ಅನ್‌ಲಾಕ್ ಮಾಡುವುದು ಹೇಗೆ?

ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ಸ್ ಅನ್ನು ಲಾಕ್ ಅಥವಾ ಅನ್‌ಲಾಕ್ ಮಾಡುವ ಪ್ರಕ್ರಿಯೆ ಬಹಳ ಸರಳ. ಆನ್‌ಲೈನ್‌ನಲ್ಲೇ ಇದನ್ನು ಮಾಡಬಹುದು. ಅದರ ಪ್ರಕ್ರಿಯೆ ಇಲ್ಲಿದೆ:

1) ಯುಐಡಿಎಐ ವೆಬ್‌ಸೈಟ್‌ನ ಮುಖ್ಯಪುಟಕ್ಕೆ ಹೋದರೆ "ಆಧಾರ್ ಕಾರ್ಡ್ ಸರ್ವಿಸಸ್" ಕಾಣುತ್ತದೆ. ಅದರ ಅಡಿಯಲ್ಲಿ 'ಲಾಕ್/ಅನ್‌ಲಾಕ್ ಬಯೋಮೆಟ್ರಿಕ್ಸ್' ಆಯ್ಕೆ ಸಿಗುತ್ತದೆ.
2) ಅಥವಾ ನೇರ ಲಿಂಕ್ ಇಲ್ಲಿದೆ: https://resident.uidai.gov.in/biometric-lock
3) ಅಲ್ಲಿ ನಿಮ್ಮ 12 ಅಂಕಿಗಳ ಆಧಾರ್ ನಂಬರ್ ನಮೂದಿಸಿ
4) ಅದಾದ ಬಳಿಕ ಕೆಳಗೆ ಕಾಣಿಸುವ ಸೆಕ್ಯೂರಿಟಿ ಕೋಡ್ ಅಥವಾ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಸಬ್ಮಿಟ್ ಕೊಡಿ.
5) ಬಳಿಕ ಆಧಾರ್‌ಗೆ ನೊಂದಾಯಿತವಾದ ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ.
6) ಒಟಿಪಿ ನಮೂದಿಸಿರಿ. ಬಳಿಕ ಸೆಕ್ಯೂರಿಟಿ ಕೀ ಅಥವಾ ಪಾಸ್ವರ್ಡ್ ಹಾಕಿರಿ
7) 'ಎನೇಬಲ್ ಬಯೋಮೆಟ್ರಿಕ್ ಲಾಕಿಂಗ್' ಅನ್ನು ಚೆಕ್ ಮಾಡಿ, ಬಳಿಕ 'ಎನೇಬಲ್' ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ. ಇದೇ ವೆಬ್‌ಸೈಟ್ ಮೂಲಕ ನೀವು ಬಯೋಮೆಟ್ರಿಕ್ಸ್ ಅನ್ನು ಅನ್‌ಲಾಕ್ ಕೂಡ ಮಾಡಬಹುದು.

 

ಮೊಬೈಲ್ ನಂಬರ್ ಹುಷಾರ್

ಮೊಬೈಲ್ ನಂಬರ್ ಹುಷಾರ್

ನೀವು ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿ ಸುರಕ್ಷಿತವಾಗಿಟ್ಟುಕೊಂಡಿದ್ದರೂ ಅದರೊಂದಿಗೆ ಜೋಡಿತವಾದ ಮೊಬೈಲ್ ನಂಬರ್ ಏನಾದರೂ ದುರುಳರ ಕೈಗೆ ಸಿಕ್ಕರೆ ಅನಾಹುತವಾದೀತು. ನಿಮ್ಮ ಆಧಾರ್ ನಂಬರ್‌ನ ಜುಟ್ಟು ಬಹುತೇಕ ನಿಮ್ಮ ಮೊಬೈಲ್ ನಂಬರ್ ಬಳಿ ಇರುತ್ತದೆ. ಒಟಿಪಿ ಮೂಲಕ ಆಧಾರ್ ಕಾರ್ಡ್‌ನ ದುರುಪಯೋಗ ಮಾಡಿಕೊಳ್ಳಬಹುದು.

ನಿಮ್ಮ ಆಧಾರ್ ಕಾರ್ಡ್ ಲಾಕ್ ಆಗಿದ್ದರೆ ಸರ್ವರ್‌ನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯು ಬ್ಯಾಂಕ್‌ಗೆ ಲಭ್ಯ ಇರುವುದಿಲ್ಲ. ಹೀಗಾಗಿ, ಬ್ಯಾಂಕ್‌ನಲ್ಲಿ ದೊಡ್ಡ ಮೊತ್ತದ ವಹಿವಾಟು ನಡೆಸಲು ಸಾಧ್ಯವಾಗದೇ ಹೋಗಬಹುದು.

 

English summary

Lessons From Mangalore Blast Case: Know About Aadhaar Card Lock and Unlock Facility

Aadhaar card is the most important documents for any citizen of India. Criminals can misuse your aadhaar for their profits. Here is details on how to lock your aadhaar biometrics.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X