For Quick Alerts
ALLOW NOTIFICATIONS  
For Daily Alerts

ಆಧಾರ್-ಪ್ಯಾನ್ ಕಾರ್ಡ್ ಏಪ್ರಿಲ್ 1, 2023ರ ಒಳಗೆ ಲಿಂಕ್ ಮಾಡಿ

|

ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಪ್ರಸ್ತುತ ಭಾರತದಲ್ಲಿ ಪ್ರಮುಖ ದಾಖಲೆಗಳಾಗಿವೆ. ಬಹುತೇಕ ಎಲ್ಲ ಸರ್ಕಾರಿ ಯೋಜನೆಗಳಿಗೆ ಈ ಎರಡು ದಾಖಲೆಗಳನ್ನು ನೀಡಬೇಕಾಗುತ್ತದೆ. ನೀವು ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲು ಸರ್ಕಾರ ಹಲವಾರು ಗಡುವುಗಳನ್ನು ನೀಡಿತ್ತು. ಆದರೂ ನೀವು ಲಿಂಕ್ ಮಾಡಿಲ್ಲವೇ? ಶೀಘ್ರವೇ ಮಾಡಿಬಿಡಿ..

ನೀವು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕಾದರೆ ಇನ್ಮುಂದೆ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯಬೇಕಾಗುತ್ತದೆ. ಪ್ಯಾನ್ 10 ಅಂಕೆ ಹಾಗೂ ಸಂಖ್ಯೆಯನ್ನು ಒಳಗೊಂಡ ದಾಖಲೆಯಾಗಿದೆ. ಈ ಕಾರ್ಡ್ ಪ್ರಸ್ತುತ ಬ್ಯಾಂಕ್‌ ವಹಿವಾಟಿನಿಂದ ಹಿಡಿದು ಎಲ್ಲ ಹಣಕಾಸು ವಹಿವಾಟಿಗಳಿಗೆ ಅತ್ಯಗತ್ಯವಾಗಿದೆ. ಅದಕ್ಕೂ ಮುಖ್ಯವಾಗಿ ನೀವು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬೇಕಾದರೆ ಪ್ಯಾನ್ ಕಾರ್ಡ್ ಸಲ್ಲಿಸುವುದು ಮುಖ್ಯವಾಗಿದೆ.

ಆಧಾರ್‌ನೊಂದಿಗೆ ಪ್ಯಾನ್ ಲಿಂಕ್‌ ಆಗಿದೆಯೇ, ಹೀಗೆ ಪರಿಶೀಲಿಸಿಆಧಾರ್‌ನೊಂದಿಗೆ ಪ್ಯಾನ್ ಲಿಂಕ್‌ ಆಗಿದೆಯೇ, ಹೀಗೆ ಪರಿಶೀಲಿಸಿ

ನೀವು ಸದ್ಯ ಏಪ್ರಿಲ್ 1, 2023ರವರೆಗೆ ಪ್ಯಾನ್ ಆಧಾರ್ ಲಿಂಕ್ ಮಾಡಬಹುದಾದರೂ ಅದಕ್ಕೆ ದಂಡವನ್ನು ಪಾವತಿಸಬೇಕಾಗುತ್ತದೆ. ಒಂದು ಸಾವಿರ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ನೀವು ಇನ್ನೂ ಕೂಡಾ ಪ್ಯಾನ್ ಆಧಾರ್ ಲಿಂಕ್ ಮಾಡಿಲ್ಲದಿದ್ದರೆ ಕೂಡಲೇ ಲಿಂಕ್ ಮಾಡಿಬಿಡಿ. ಇಲ್ಲವಾದರೆ ಪ್ಯಾನ್ ನಿಷ್ಕ್ರಿಯವಾಗುವ ಸಾಧ್ಯತೆಯಿದೆ.

 ಆದಾಯ ತೆರಿಗೆ ಇಲಾಖೆಯ ಟ್ವಿಟ್

ಆದಾಯ ತೆರಿಗೆ ಇಲಾಖೆಯ ಟ್ವಿಟ್

"ಆದಾಯ ತೆರಿಗೆ ಕಾಯ್ದೆ 1961 ಪ್ರಕಾರ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕ 31.3.2023 ಆಗಿದೆ. ಅದಾದ ಬಳಿಕ ಎಲ್ಲ ಲಿಂಕ್ ಆಗಿಲ್ಲದ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗಲಿದೆ," ಎಂದು ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಶೀಘ್ರವೇ ಲಿಂಕ್ ಮಾಡಿಕೊಳ್ಳಿ ಎಂದು ಮನವಿಯನ್ನು ಕೂಡಾ ಮಾಡಿದೆ.

"ಸಿಬಿಡಿಟಿ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಕೊನೆಯ ದಿನಾಂಕವನ್ನು ಮಾರ್ಚ್‌ 31, 2022ರಿಂದ ಮಾರ್ಚ್ 31, 2023ಕ್ಕೆ ವಿಸ್ತರಣೆ ಮಾಡಿದೆ. ನೀವು ಆಧಾರ್ ಪ್ಯಾನ್ ಅನ್ನು ಮಾರ್ಚ್ 31, 2023ರವರೆಗೆ ಲಿಂಕ್ ಮಾಡಬಹುದು. ಅದಕ್ಕಾಗಿ ನೀವು 30, ಜೂನ್ 2022ರವರೆಗೆ 500 ರೂಪಾಯಿ ಪಾವತಿ ಮಾಡಬೇಕಾಗಿತ್ತು. ಅದಾದ ಬಳಿಕ ಜುಲೈ 1, 2022ರಿಂದ 1 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ," ಎಂದು ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

 ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?

ತೆರಿಗೆದಾರನು ತನ್ನ ನೋಂದಾಯಿತ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕಾಗುತ್ತದೆ. ಲಾಗಿನ್ ಆದ ನಂತರ, Profile Settings ಕೆಳಗಡೆ link Aadhaar ಆಯ್ಕೆ ಲಭ್ಯವಾಗಲಿದೆ. ಆಧಾರ್ ಹಾಗೂ ಪ್ಯಾನ್ ಎರಡರಲ್ಲೂ ಇದ್ದ ಹೆಸರು, ಹುಟ್ಟಿದ ದಿನಾಂಕ ಒಂದೇ ಆಗಿದ್ದರೆ ಲಿಂಕ್ ಮಾಡಲಾಗುತ್ತದೆ.

ಎಸ್‌ಎಂಎಸ್‌ ಮೂಲಕ ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ?

ಎಸ್‌ಎಂಎಸ್‌ ಮೂಲಕ ಆಧಾರ್ ಪ್ಯಾನ್ ಲಿಂಕ್ ಮಾಡುವುದು ಹೇಗೆ?

ತಮ್ಮ ಆಧಾರ್ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು ಬಯಸುವ ತೆರಿಗೆದಾರರು ಈ ಕೆಳಗಿನಂತೆ 567678 ಅಥವಾ 56161 ಗೆ ಎಸ್‌ಎಂಎಸ್‌ ಕಳುಹಿಸಬೇಕಾಗುತ್ತದೆ. 567678 ಅಥವಾ 56161 ಗೆ ಎಸ್‌ಎಂಎಸ್‌ ಕಳುಹಿಸುವ ಉದಾಹರಣೆ: UIDPAN 111122223333 AAAPA9999Q
ತೆರಿಗೆದಾರರ ಹೆಸರು ಮತ್ತು ಹುಟ್ಟಿದ ದಿನಾಂಕವು ಆಧಾರ್ ಮತ್ತು ಪ್ಯಾನ್‌ಗೆ ಒಂದೇ ಆಗಿದ್ದರೆ ಆಧಾರ್ ಸಂಖ್ಯೆಯನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.

English summary

Link PAN with Aadhaar before April 1, 2023 to Prevent being Inoperative

Individual taxpayers with a valid PAN and Aadhaar number should link both personal identification documents doing so will enable you to file your income tax returns.
Story first published: Sunday, December 4, 2022, 13:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X