For Quick Alerts
ALLOW NOTIFICATIONS  
For Daily Alerts

ಹೊಸ ಮೋಟಾರು ವಾಹನಗಳಿಂದ ಗ್ರಾಹಕರಿಗೆ ಏನು ಲಾಭ - ವಿಮೆ ಪಾಲಿಸಿ ಏನು ಹೇಳುತ್ತದೆ

By ಶಾರ್ವರಿ
|

ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ವಾಹನಗಳ ಮೇಲಿನ ದೀರ್ಘಾವಧಿ ವಿಮಾ ಪಾಲಿಸಿಗಳನ್ನು ರದ್ದುಪಡಿಸುತ್ತಿದೆ. ಈ ನಿರ್ಧಾರದ ನಂತರ, ಹೊಸ ವಾಹನಗಳ ಬೆಲೆ ಕಡಿಮೆಯಾಗಲಿದೆ.

 

ನೀವು ವಾಹನವನ್ನು ಹೇಗೆ ಡ್ರೈವ್‌ ಮಾಡುವಿರಿ ಅನ್ನುವುದರ ಮೇಲೆ, ನಿಮಗೆ ವಿಮೆ ಸೌಲಭ್ಯಗಳು ಅನ್ವಯವಾಗುತ್ತವೆ. ಏಕೆಂದರೆ ವಾಹನ ವಿಮೆಗೂ ಮತ್ತು ಡ್ರೈವಿಂಗ್‌ಗೂ ಸಂಬಂಧ ಕಲ್ಪಿಸುವ ಯೋಜನೆಗಳನ್ನು ರೂಪಿಸಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಮುಂದಾಗಿದೆ.

 

ಒಬ್ಬ ಉತ್ತಮ ವಾಹನ ಚಾಲಕನಾಗುವುದರಿಂದ ನಿಮಗೆ ಹೇಗೆ ಸುರಕ್ಷತೆ, ಸ್ಪಷ್ಟ ಆತ್ಮಸಾಕ್ಷಿ ಹಾಗೂ ಮನಸ್ಸಿಗೆ ಶಾಂತಿ ಸುಗುತ್ತದೆ, ಹಾಗೆಯೇ ಶ್ರದ್ಧೆಯಿಂದ ಚಾಲನಾ ಅಭ್ಯಾಸವನ್ನೂ ಅನುಸರಿಸುತ್ತೀರಿ. ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಯಬಹುದು.

ಹೌದು, ಪ್ರತಿ ಜವಾಬ್ದಾರಿಯುತ ಕಾರು ಮಾಲೀಕರು ಅದರಿಂದ ಹೆಚ್ಚುವರಿಯಾಗಿ ಲಾಭಗಳನ್ನು ನಿರೀಕ್ಷಿಸುತ್ತಾರೆ. ಅಂತಹವರಿಗಾಗಿಯೇ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಉತ್ತೇಜನ ನೀಡಲು ಕಾರು ವಿಮಾ ಪಾಲಿಸಿಗಳ ಆಡ್‌ಆನ್‌ಗಳನ್ನು ಘೋಷಿಸಿದೆ.

ಹೊಸ ಮೋಟಾರು ವಾಹನ ವಿಮೆ, ಸವಾರರಿಗೆ ಏನು ಲಾಭ?

ಕಳೆದ ಒಂದೂವರೆ ದಶಕದಲ್ಲಿ ತಂತ್ರಜ್ಞಾನವು ವಿಮೆಯ ಕಾರ್ಯವನ್ನು ಮಾರ್ಪಡಿಸಿದ್ದು, ದೇಶದ ಪ್ರತಿಯೊಬ್ಬ ವಿಮೆದಾರನೂ ಈ ನಿಯಮವನ್ನು ಮುಂದುವರಿಸುತ್ತಾರೆ ಎಂಬುದನ್ನು ಸಾಬೀತುಪಡಿಸಿಕೊಂಡಿದೆ. ಅದಕ್ಕಾಗಿಯೇ ಮೂರು ಹೊಸ‌ ವಿಮಾ ಚಾಲಕರ ನಿಯಮವನ್ನು ಪರಿಚಯಿಸಲಾಗಿದೆ. ಇದು ಹೆಚ್ಚುವರಿ ಹಾನಿಗೆ ಸಂಭಾವ್ಯ ಪಡೆಯಲು ಸಹಾಯ ಮಾಡುತ್ತದೆ.

ಹಾಗಾದ್ರೆ ಈ ರೈಡರ್‌ಗಳ ಬಗ್ಗೆ ನೀವು ತಿಳಿಯಬೇಕೆ?

ಪೇ ಆ್ಯಸ್‌ ಯೂ ಡ್ರೈವ್‌ (ನೀವು ಎಷ್ಟು ಚಾಲನೆ ಮಾಡುತ್ತೀರಿ ಎಂಬಂತೆ ಪಾವತಿಸಿ)

ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ದೈನಂದಿನ ಪ್ರಯಾಣವೂ ಸಹ ಹೆಚ್ಚು ವಿಸ್ತಾರಗೊಂಡಿದೆ. ಹತ್ತಿರದ ಕಚೇರಿ ಹಾಗೂ ಸೂಪರ್‌ ಮಾರ್ಕೆಟ್‌ಗಳಿಗೆ ಹೋಗುವುದಕ್ಕೂ ಜನ ಪರ್ಯಾಯ ಮಾರ್ಗಗಳನ್ನೇ ಹುಡುಕಿಕೊಂಡಿದ್ದಾರೆ. ತಮ್ಮ ತಮ್ಮ ಕಾರುಗಳನ್ನು ನಿಯಮಿತವಾಗಿ ಓಡಿಸದ ಮಾಲೀಕರ ದೊಡ್ಡ ಗುಂಪೇ ಇದೆ. ಅಂಥವರು ವಿಮೆಯನ್ನು ಲೆಕ್ಕಿಸದೇ ವಾಹನ ಚಾಲನೆ ಮಾಡುವುದರಿಂದ ಹೆಚ್ಚಿನ ಪ್ರೀಮಿಯಂ ಗಳನ್ನು ಪಾವತಿಸಬೇಕಾಗುತ್ತದೆ.

ವಿಮೆಯ ಮೇಲೆ ಪ್ರಭಾವ ಬೀರುತ್ತದೆ ಕಾರಿನ ಮೋಡಿಫಿಕೇಶನ್!ವಿಮೆಯ ಮೇಲೆ ಪ್ರಭಾವ ಬೀರುತ್ತದೆ ಕಾರಿನ ಮೋಡಿಫಿಕೇಶನ್!

ಪೇ ಆಸ್ ಯೂ ಡ್ರೈವ್ ಆಯ್ಕೆಯನ್ನು ಬಳಸಿದರೆ, ವಿಮೆದಾರರು ಒಂದು ವರ್ಷದಲ್ಲಿ ವಾಹನವನ್ನು ಎಷ್ಟು ಬಳಸುತ್ತಾರೆ ಎನ್ನುವ ವಿವರ ನೀಡಬೇಕು. ಬಳಕೆಯ ಆಧಾರದಲ್ಲಿ ವಿಮಾ ಕಂತನ್ನು ಕಟ್ಟಲು ಅವಕಾಶ ಸಿಗಲಿದೆ. ವರ್ಷದಲ್ಲಿ ತಾವು ಡ್ರೈವ್‌ ಮಾಡಲಿರುವ ಕಿ.ಮೀ ಎಷ್ಟು ಎಂಬುದನ್ನು ಅಂದಾಜು ಮಾಡಿ, ಅದರನ್ವಯ ವಿಮೆ ಪ್ರೀಮಿಯಂ ಪಾವತಿಸಬಹುದು. ಆದರೆ, ಕ್ಲೈಮ್‌ ಮಾಡುವಾಗ ಚಾಲಕ ನಮೂದಿಸಿದಷ್ಟೇ ವಾಹನವು ಓಡಿದೆಯೇ ಎಂಬುದನ್ನು ವಿಮಾ ಕಂಪನಿ ಪರಿಶೀಲನೆ ನಡೆಸುತ್ತದೆ.

ಐಆರ್‌ಡಿಎಐ ಸೂಕ್ಷ್ಮವಾದ ವಿಧಾನಗಳನ್ನು ಪರಿಚಯಿಸಿದೆ. ಒಂದಕ್ಕಿಂತ ಹೆಚ್ಚು ದ್ವಿಚಕ್ರ ವಾಹನಗಳು ಅಥವಾ ಕಾರುಗಳನ್ನು, ಇಲ್ಲವೇ ಎರಡನ್ನೂ ಹೊಂದಿರುವವರಿಗೆ ಏಕರೂಪದ ಪ್ರೀಮಿಯಂ ಪದ್ಧತಿ ಇದಾಗಿದೆ. ವ್ಯಕ್ತಿಯೊಬ್ಬ ಒಂದು ಕಾರು ಹೊಂದಿದ್ದರೆ ಅವನು ಎರಡೂ ವಾಹನಗಳಿಗೆ ಒಂದೇ ವಿಮೆ ಮಾಡಿಸಲು ಸಾಧ್ಯವಾಗಲಿದೆ. ಇದರಿಂದ ವಿಮೆ ಹಣ ಉಳಿಸಬಹುದು.

ಹೊಸ ಮೋಟಾರು ವಾಹನ ವಿಮೆ, ಸವಾರರಿಗೆ ಏನು ಲಾಭ?

ಪೇ ಹೌ ಯು ಡ್ರೈವ್ (ನೀವು ಹೇಗೆ ಚಾಲನೆ ಮಾಡುತ್ತೀರಿ ಎಂಬ ಆಧಾರದ ಮೇಲೆ ಪಾವತಿಸಿ):
ನೀವು ವಾಹನದ ವೇಗಕ್ಕೆ ತಕ್ಕಷ್ಟು ಪ್ರೀಮಿಯಂ ಪಾವತಿಸಬೇಕು. ವೇಗವಾಗಿ ಚಲಾಯಿಸಿದರೆ ಹೆಚ್ಚಿನ ಪ್ರೀಮಿಯಂ ತೆರಬೇಕು. ನಿಯಮಿತ ವೇಗದಲ್ಲಿ ಚಲಿಸುವವರಿಗೆ ಇದು ಸಹಕಾರಿ. ಪ್ರೀಮಿಯಂ ಪಾವತಿಸುವಾಗ, "ನಾನು ನಿಧಾನವಾಗಿ ವಾಹನ ಚಲಾಯಿಸುತ್ತೇನೆ," ಎಂದು ಘೋಷಿಸಿದರಷ್ಟೇ ಸಾಕಾಗುವುದಿಲ್ಲ. ಅದನ್ನು ಸಾಬೀತು ಪಡಿಸುವ ಸಾಧನವನ್ನು ವಾಹನದಲ್ಲಿ ಅಳವಡಿಸಿರಬೇಕು. ಏಕೆಂದರೆ ಜವಾಬ್ದಾರಿಯುತ ಚಾಲಕ ಕಡಿಮೆ ಅಪಘಾತಗಳನ್ನು ಹೊಂದಿರುತ್ತಾನೆ. ಇಲ್ಲದೇ ಹೋದರೆ, ಕ್ಲೈಮ್‌ಗಳು ನಿರಾಕರಣೆಯಾಗಬಹುದು.

ಖಾಸಗಿ ವಿಮಾ ಸಂಸ್ಥೆಗಳಿಗೆ 26,364 ಕೋಟಿ ರೂಪಾಯಿ ನಷ್ಟ!ಖಾಸಗಿ ವಿಮಾ ಸಂಸ್ಥೆಗಳಿಗೆ 26,364 ಕೋಟಿ ರೂಪಾಯಿ ನಷ್ಟ!

ಈ ತಂತ್ರಜ್ಞಾನಗಳಿಂದಾಗಿ ಪಾಲಿಸಿ ದಾರ ಅಥವಾ ವಾಹನ ಮಾಲೀಕನ ಚಾಲನೆಯ ಅಭ್ಯಾಸವನ್ನು ನಿಖರವಾಗಿ ಪತ್ತೆ ಮಾಡಬಹುದು. ಈ ನಿಯಮಗಳನ್ನು ಅನುಸರಿಸುವ ಟ್ರ್ಯಾಕ್ ರೆಕಾರ್ಡ್ ಅಂದರೆ ಸೂಕ್ತ ದಾಖಲೆಗಳನ್ನು ಹೊಂದಿರುವವನು ಕಡಿಮೆ ಪ್ರೀಮಿಯಂ ಪಾವತಿಸುವ ಪ್ರಯೋಜನ ಪಡೆಯುತ್ತಾರೆ. ಟ್ರಾಫಿಕ್ ಸಿಗ್ನಲ್‌ಗಳನ್ನು ಗೌರವಿಸುವುದು, ನಿಗದಿತ ವೇಗದಲ್ಲಿ ವಾಹನ ಚಾಲನೆ ಮಾಡುವುದು ಇವೆಲ್ಲವೂ ನಿಮಗೆ ಪ್ರಯೋಜನ ನೀಡುತ್ತವೆ. ಇವೆಲ್ಲವನ್ನೂ ನಿಮ್ಮ ವಾಹನದಲ್ಲಿನ ಜಿಪಿಎಸ್ ಟ್ರ್ಯಾಕರ್ ಬಳಸಿ ಅಂದಾಜು ಮಾಡಲಾಗುತ್ತದೆ.

ಒಂದು ವೇಳೆ ನಿಮಗೆ ಪ್ರತಿ ವಾಹನಕ್ಕೂ ಒಂದೊಂದು ವಿಮೆ ಹೊಂದುವುದರಿಂದ ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಇದು ಬೇಸರದ ಸಮನಗತಿಯಾದರೆ 'ಫ್ಲೋಟರ್' ನಿಯಮವನ್ನು ಅನುಸರಿಸಬಹುದು. ಇದು ಬಹು ವಾಹನಗಳಿಗೆ ಒಂದು ಸಂಯೋಜಿತ ಪಾಲಿಸಿ ಖರೀದಿಸಲು ಅನುವು ಮಾಡಿಕೊಡುತ್ತದೆ.

ಇದು ಪ್ರೀಮಿಯಂ ಪಾವತಿಸಲು ಹಾಗೂ ಬಹು ವಾಹನಗಳಿಗೆ ಪಾಲಿಸಿ ಪ್ರಯೋಜನಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಒಬ್ಬರ ಉತ್ತಮ ಚಾಲನಾ ನಡವಳಿಕೆಯ ಪ್ರಯೋಜನಗಳನ್ನು ಒಂದು ವಾಹನದಿಂದ ಇನ್ನೊಂದಕ್ಕೆ ಸರಳವಾಗಿ ಸಾಗಿಸಬಹುದು, ಪಾಲಿಸಿದಾರರಿಗೆ ಸಮಯ ಮತ್ತು ಶ್ರಮ ಎರಡೂ ಉಳಿತಾಯವಾಗುತ್ತದೆ.

ಒಟ್ಟಾರೆಯಾಗಿ ಐಆರ್‌ಡಿಎಐ ನ ಇತ್ತೀಚಿನ ನಿಯಮಗಳು ಭಾರತದಲ್ಲಿ ಮೋಟಾರು ವಿಮೆಗೆ ಬಹಳ ಆಸಕ್ತಿದಾಯಕ ಮಾರ್ಗವನ್ನು ರೂಪಿಸುತ್ತವೆ. ಗ್ರಾಹಕರ ಅಗತ್ಯತೆಗಳ ಸೂಕ್ಷ್ಮ ವಿವರಗಳನ್ನು ಅಳವಡಿಸಿಕೊಳ್ಳಲು ಮತ್ತು ಪಾಲಿಸಿದಾರರಿಗೆ ಉತ್ತಮವಾದ ವ್ಯವಹಾರವನ್ನು ನೀಡುವ ಉತ್ಪನ್ನಗಳನ್ನು ನೀಡಲು ತಂತ್ರಜ್ಞಾನವು ವಿಮಾ ಉದ್ಯಮಕ್ಕೆ ಅವಕಾಶ ಮಾಡಿಕೊಟ್ಟಿದೆ.

English summary

Motor insurance riders: All you need to know for a smooth ride

The Insurance Regulatory and Development Authority of India (IRDAI) has announced some very exciting add-ons to car insurance policies. Motor insurance riders: All you need to know for a smooth ride
Story first published: Monday, August 15, 2022, 16:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X