For Quick Alerts
ALLOW NOTIFICATIONS  
For Daily Alerts

ಮಿಸ್ಡ್ ಕಾಲ್ ಮೂಲಕ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡುವುದು ಹೇಗೆ?

|

ಎಲ್ ಪಿಜಿ ಸಿಲಿಂಡರ್ ಗಳ ರೀಫಿಲ್ಲಿಂಗ್ ಗಾಗಿ ಕೇಂದ್ರ ಸರ್ಕಾರದಿಂದ ಜನವರಿ 1ನೇ ತಾರೀಕಿನಿಂದ (ಶುಕ್ರವಾರ) ಮಿಸ್ಡ್ ಕಾಲ್ ವ್ಯವಸ್ಥೆ ಆರಂಭಿಸಲಾಗಿದೆ. ಈ ಮೂಲಕ ಎಲ್ ಪಿಜಿ ಸಿಲಿಂಡರ್ ಗಳ ಬುಕ್ಕಿಂಗ್ ಇನ್ನಷ್ಟು ಸಲೀಸಾಗಲಿದೆ ಎಂಬ ನಿರೀಕ್ಷೆ ಇದೆ. ಭುವನೇಶ್ವರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೊಸ ವ್ಯವಸ್ಥೆಗೆ ಚಾಲನೆ ನೀಡಿದರು.

ಇಂಡಿಯನ್ ಆಯಿಲ್ ಎಲ್ ಪಿಜಿ ಗ್ರಾಹಕರು ಈಗ ರೀಫಿಲ್ ಬುಕ್ಕಿಂಗ್ ಸಲುವಾಗಿ 8454955555 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದರೆ ಸಾಕು.

ನಾನ್ ಸಬ್ಸಿಡೈಸ್ಡ್ ಎಲ್ ಪಿಜಿ ಸಿಲಿಂಡರ್ ಬೆಲೆ ನಿಮ್ಮ ನಗರದಲ್ಲಿ ಎಷ್ಟಿದೆ?ನಾನ್ ಸಬ್ಸಿಡೈಸ್ಡ್ ಎಲ್ ಪಿಜಿ ಸಿಲಿಂಡರ್ ಬೆಲೆ ನಿಮ್ಮ ನಗರದಲ್ಲಿ ಎಷ್ಟಿದೆ?

ಮಿಸ್ಡ್ ಕಾಲ್ ಮೂಲಕ ಇಂಡೇನ್ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡುವುದು ಹೇಗೆ?
ಮಿಸ್ಡ್ ಕಾಲ್ ವ್ಯವಸ್ಥೆಗೆ ಕೇವಲ ಒಂದು ಹಂತ ಸಾಕು: ಅದೇನೆಂದರೆ, ರೀಫಿಲ್ ಬುಕ್ಕಿಂಗ್ ಗಾಗಿ ಈಗಾಗಲೇ ನೋಂದಾಯಿಸಿದ ಮೊಬೈಲ್ ಸಂಖ್ಯೆಯಿಂದ 8454955555ಗೆ ಮಿಸ್ಡ್ ಕಾಲ್ ನೀಡಬೇಕು.

ಹೀಗೆ ಮಾಡಿದ ನಂತರ ಗ್ರಾಹಕರಿಗೆ- ಎಲ್ ಪಿಜಿ ರೀಫಿಲ್ ಕನೆಕ್ಷನ್ ಬುಕ್ಕಿಂಗ್ ಯಶಸ್ವಿಯಾಗಿದೆ ಎಂಬ ಎಸ್ಸೆಮ್ಮೆಸ್ ಬರುತ್ತದೆ.

ಮಿಸ್ಡ್ ಕಾಲ್ ಮೂಲಕ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡುವುದು ಹೇಗೆ?

ಐವಿಆರ್ ಎಸ್ ವ್ಯವಸ್ಥೆಗೆ ಹೋಲಿಸಿದಲ್ಲಿ ಮಿಸ್ಡ್ ಕಾಲ್ ಮೂಲಕ ಬಹಳ ಬೇಗ ಗ್ರಾಹಕರು ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಬಹುದು. ತುಂಬ ಸಮಯ ಕರೆಯಲ್ಲಿ ಕಾಯಬೇಕಾದ ಪ್ರಮೇಯ ಇರುವುದಿಲ್ಲ.

ಇನ್ನು ಐವಿಆರ್ ಎಸ್ ಮೂಲಕ ಬುಕ್ಕಿಂಗ್ ಮಾಡುವ ಕರೆಗಳಿಗೆ ಸಾಮಾನ್ಯ ದರಗಳು ಅನ್ವಯ ಆಗುತ್ತವೆ. ಅದಕ್ಕೆ ಹೋಲಿಸಿದಲ್ಲಿ ಮಿಸ್ಡ್ ಕಾಲ್ ಮೂಲಕ ಸಿಲಿಂಡರ್ ಬುಕ್ ಮಾಡುವುದಕ್ಕೆ ಯಾವ ಶುಲ್ಕವೂ ತಗುಲುವುದಿಲ್ಲ.

ಐವಿಆರ್ ಎಸ್ ಕ್ಲಿಷ್ಟಕರ ಅಂದುಕೊಳ್ಳುವವರಿಗೆ ಮತ್ತು ಅದರ ಬಳಕೆಯಲ್ಲಿ ಸಮಸ್ಯೆ ಎದುರಿಸುತ್ತಿರುವವರಿಗೆ ಮಿಸ್ಡ್ ಕಾಲ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡುವುದು ಉತ್ತಮ ಆಯ್ಕೆ.

ಇನ್ನು ಪೇಟಿಎಂ ಅಥವಾ ಗೂಗಲ್ ಪೇ ಮೂಲಕ ಬುಕ್ಕಿಂಗ್ ಮಾಡುವುದಕ್ಕೆ ಇಂಟರ್ ನೆಟ್ ಸಂಪರ್ಕ ಇಲ್ಲ ಎಂಬ ಸಂದರ್ಭದಲ್ಲಿ ಹೊಸ ವ್ಯವಸ್ಥೆ ಬಲು ಪ್ರಯೋಜನಕಾರಿ.

English summary

New Missed Call Facility For LPG Gas Cylinders Booking Launched By Government

Government launched missed call facility for LPG cylinders booking on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X