For Quick Alerts
ALLOW NOTIFICATIONS  
For Daily Alerts

New NPS rules: ರಿಲೀಫ್ ನೀಡಿದ ಎನ್‌ಪಿಎಸ್ ಹೊಸ ನಿಯಮ!

|

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹಲವಾರು ಮಂದಿ ಹೂಡಿಕೆ ಮಾಡಿದ್ದಾರೆ, ಹೂಡಿಕೆ ಮಾಡುವ ಯೋಜನೆಯನ್ನು ಕೂಡಾ ಮಾಡಿಕೊಂಡಿರುವವರು ಇದ್ದಾರೆ. ಆದರೆ ಹೆಚ್ಚಿನ ಜನರಿಗೆ ಎನ್‌ಪಿಎಸ್ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡುವ ದೀರ್ಘ ಪ್ರಕ್ರಿಯೆಯು ತಲೆನೋವಾಗಿದೆ. ಆದರೆ ಈ ತಲೆನೋವಿಗೆ ಈಗ ಬ್ರೇಕ್ ಸಿಕ್ಕಿದೆ. ಹೌದು, ರಾಷ್ಟ್ರೀಯ ಪಿಂಚಣಿ ಯೋಜನೆಯ ಹೊಸ ನಿಯಮ ಎನ್‌ಪಿಎಸ್ ಖಾತೆ ಹೊಂದಿರುವವರಿಗೆ ರಿಲೀಫ್ ನೀಡಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಹಾಗೂ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ನಡುವಿನ ಒಪ್ಪಂದದ ಕಾರಣದಿಂದಾಗಿ ಈಗ ಎನ್‌ಪಿಎಸ್ ಮೊತ್ತವನ್ನು ವಿತ್‌ಡ್ರಾ ಮಾಡುವ ಪ್ರಕ್ರಿಯೆ ಸರಳವಾಗಿದೆ. ಈಗ ವಿತ್‌ಡ್ರಾ ಫಾರ್ಮ್ ಅನ್ನು ಮಾತ್ರ ಬಳಸಿಕೊಂಡು ಚಂದಾದಾರರು ತಮ್ಮ ಹೂಡಿಕೆ ಮೊತ್ತವನ್ನು ವಿತ್‌ಡ್ರಾ ಮಾಡಬಹುದು. ಅದಕ್ಕಾಗಿ ಪ್ರತ್ಯೇಕ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ.

ಎನ್‌ಪಿಎಸ್ ಖಾತೆ: ಹಣ ವಿತ್‌ಡ್ರಾ, ಪ್ರಯೋಜನ, ಸಂಪೂರ್ಣ ಮಾಹಿತಿಎನ್‌ಪಿಎಸ್ ಖಾತೆ: ಹಣ ವಿತ್‌ಡ್ರಾ, ಪ್ರಯೋಜನ, ಸಂಪೂರ್ಣ ಮಾಹಿತಿ

ಈ ಹಿಂದೆ ಎನ್‌ಪಿಎಸ್ ಚಂದಾದಾರರು ವಿತ್‌ಡ್ರಾ ಫಾರ್ಮ್ ಜೊತೆ ಪ್ರತ್ಯೇಕವಾಗಿ ಅನ್ಯೂಟಿ ಪ್ರಪೋಸಲ್ ಫಾರ್ಮ್ ಅನ್ನು ಕೂಡಾ ಭರ್ತಿ ಮಾಡಬೇಕಾಗಿತ್ತು. ಆದರೆ ಇನ್ನು ಮುಂದೆ ಎನ್‌ಪಿಎಸ್‌ ಮೊತ್ತ ವಿತ್‌ಡ್ರಾ ಮಾಡಲು ಬಯಸುವವರು ಕೇವಲ ವಿತ್‌ಡ್ರಾ ಫಾರ್ಮ್ ಅನ್ನು ಮಾತ್ರ ಸಲ್ಲಿಸಿದರೆ ಸಾಕಾಗುತ್ತದೆ. ಈ ಹೊಸ ನಿಯಮದ ಸುತ್ತೋಲೆಯನ್ನು ಸೆಪ್ಟೆಂಬರ್ 13, 2022ರಂದು ಹೊರಡಿಸಲಾಗಿದೆ. ಈ ಹೊಸ ನಿಯಮದ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 ಫಾರ್ಮ್ ಭರ್ತಿ ಮಾಡುವಾಗ ಜಾಗರೂಕರಾಗಿರಿ

ಫಾರ್ಮ್ ಭರ್ತಿ ಮಾಡುವಾಗ ಜಾಗರೂಕರಾಗಿರಿ

ನಾವು ಎನ್‌ಪಿಎಸ್‌ ಹೂಡಿಕೆ ಮೊತ್ತವನ್ನು ವಿತ್‌ಡ್ರಾ ಮಾಡಲು ಬಯಸಿದರೆ ಆನ್‌ಲೈನ್‌ನಲ್ಲಿಯೂ ಫಾರ್ಮ್ ಅನ್ನು ಭರ್ತಿ ಮಾಡಬಹುದು. ನಮ್ಮ ಯೋಜನೆ ಬಗ್ಗೆ ಮಾಹಿತಿ ಹಾಗೂ ವಿತ್‌ಡ್ರಾ ಮೊತ್ತದ ಮಾಹಿತಿ ಜೊತೆಗೆ ಸಂಪೂರ್ಣವಾಗಿ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವುದು ಅತೀ ಮುಖ್ಯವಾಗಿದೆ. ಯಾವುದೇ ಮಾಹಿತಿ ತಪ್ಪಾದರೂ ಅಥವಾ ಉಲ್ಲೇಖ ಮಾಡದಿದ್ದರೂ ನಿಮಗೆ ಎನ್‌ಪಿಎಸ್ ಮೊತ್ತ ಲಭ್ಯವಾಗದೆ ಇರಬಹುದು.

 ಪ್ರಸ್ತುತ ವಿತ್‌ಡ್ರಾ ಪ್ರಕ್ರಿಯೆ ಹೇಗಿದೆ?

ಪ್ರಸ್ತುತ ವಿತ್‌ಡ್ರಾ ಪ್ರಕ್ರಿಯೆ ಹೇಗಿದೆ?

ಪ್ರಸ್ತುತ ಎನ್‌ಪಿಎಸ್‌ ಮೊತ್ತವನ್ನು ವಿತ್‌ಡ್ರಾ ಮಾಡಲು ಬಯಸುವವರು ಫಾರ್ಮ್ ಅನ್ನು ನೋಡಲ್ ಅಧಿಕಾರಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಸಲ್ಲಿಕೆ ಮಾಡಬಹುದು. ವಿತ್‌ಡ್ರಾ ಮೊತ್ತ, ಒಟ್ಟು ಮೊತ್ತ ಸೇರಿದಂತೆ ಎಲ್ಲ ಮಾಹಿತಿ ಈ ಫಾರ್ಮ್‌ನಲ್ಲಿ ವಿವರವಾಗಿ ನಮೂದಿಸಿರಬೇಕಾಗುತ್ತದೆ. ಈ ಫಾರ್ಮ್‌ ಅನ್ನು ವಿಮಾ ಸಂಸ್ಥೆಯಿಂದ ಪಡೆದು ಭರ್ತಿ ಮಾಡಬೇಕು.

 ಎನ್‌ಪಿಎಸ್ ಚಂದಾದಾರರಿಗೆ ಹಲವು ಪ್ರಯೋಜನ

ಎನ್‌ಪಿಎಸ್ ಚಂದಾದಾರರಿಗೆ ಹಲವು ಪ್ರಯೋಜನ

ಇನ್ನು ಐಆರ್‌ಡಿಎಐ ಹಾಗೂ ಪಿಎಫ್‌ಆರ್‌ಡಿಎ ಒಪ್ಪಂದದಿಂದಾಗಿ ಎನ್‌ಪಿಎಸ್ ಚಂದಾದಾರರಿಗೆ ಹಲವಾರು ಪ್ರಯೋಜನಗಳು ಇದೆ ಎಂದು ನವೆಂಬರ್ 14, 2022ರಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಹೊರಡಿಸಿದ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಎನ್‌ಪಿಎಸ್ ಚಂದಾದಾರರಿಗೆ ಹಲವಾರು ಆಯ್ಕೆಗಳು ಕೂಡಾ ಲಭ್ಯವಾಗಲಿದೆ ಎಂದು ಹೇಳಿದೆ.

 ಎನ್‌ಪಿಎಸ್ ಚಂದಾದಾರರಿಗೆ ಏನು ಪ್ರಯೋಜನ

ಎನ್‌ಪಿಎಸ್ ಚಂದಾದಾರರಿಗೆ ಏನು ಪ್ರಯೋಜನ

* ಪ್ರಸ್ತುತ ವರ್ಷಾಶನವನ್ನು ಪಡೆಯುವುದು ಅತೀ ಸರಳವಾಗಿದೆ ಹಾಗೂ ಅತೀ ಶೀಘ್ರವಾಗಿ ಪ್ರಕ್ರಿಯೆ ಸಂಪೂರ್ಣವಾಗಲಿದೆ.
* ವರ್ಷಾಶನ ಹಾಗೂ ಒಟ್ಟು ಮೊತ್ತ ಪಾವತಿ ಪ್ರಕ್ರಿಯೆ ಪಾರದರ್ಶಕವಾಗಿರಲಿದೆ.
* ಮೊತ್ತವು ನಿಮಗೆ ಮಾಸಿಕ ಪಿಂಚಣಿ ರೂಪದಲ್ಲಿ ಲಭ್ಯವಾಗಲಿದೆ ಮತ್ತು ಚಂದಾದಾರಿಕೆ ಕೊನೆಯಾದಾಗ ನಿವೃತ್ತಿ ನಿಧಿ ಲಭ್ಯವಾಗಲಿದೆ.

English summary

New NPS rules: What NPS New Rules Says, Explained in Kannada

NPS Account: The NPS subscriber will not be needed to complete a separate annuity proposal form for NPS withdrawal, per the circular issued on September 13, 2022, explained in kannada.
Story first published: Monday, November 21, 2022, 15:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X