For Quick Alerts
ALLOW NOTIFICATIONS  
For Daily Alerts

ಝೂಮ್, ಗೂಗಲ್ ಮೀಟ್ ರೀತಿ ವಾಟ್ಸಾಪ್ ಕಾಲ್; ಬಳಸೋದು ಹೇಗೆ?

|

ಗೂಗಲ್ ಮೀಟ್, ಝೂಮ್ ರೀತಿ ಆಡಿಯೋ ಮತ್ತು ವಿಡಿಯೋ ಸಭೆಗಳನ್ನು ಈಗ ವಾಟ್ಸಾಪ್‌ನಲ್ಲೂ ನಡೆಸಬಹುದು. ಮೀಟಿಂಗ್‌ಗೆ ಕಾಲ್ ಲಿಂಕ್‌ಗಳನ್ನು ರಚಿಸುವ ಹೊಸ ಫೀಚರ್ ಅನ್ನು ವಾಟ್ಸಾಪ್ ಅಪ್‌ಡೇಟ್ ಮಾಡಿದೆ. ಆಂಡ್ರಾಯ್ಡ್ ಮತ್ತು ಐಫೋನ್ ಎರಡೂ ರೀತಿಯ ಸ್ಮಾರ್ಟ್‌ಫೋನ್‌ಗಳಲ್ಲೂ ವಾಟ್ಸಾಪ್‌ನ ಹೊಸ ಫೀಚರ್ ಕೆಲಸ ಮಾಡುತ್ತದೆ.

ನಿಮ್ಮ ವಾಟ್ಸಾಪ್‌ನಲ್ಲಿ ಈ ಫೀಚರ್ ಲಭ್ಯ ಇಲ್ಲದಿದ್ದರೆ ಪ್ಲೇ ಸ್ಟೋರ್‌ಗೆ ಹೊಸ ಹೊಸ ವರ್ಷನ್‌ಗೆ ಅಪ್‌ಡೇಟ್ ಕೊಡಿ. ಈ ಹೊಸ ಆವೃತ್ತಿಯ ವಾಟ್ಸಾಪ್ ಆ್ಯಪ್‌ನಲ್ಲಿ ಕಾಲ್ ಲಿಂಕ್ ಫೀಚರ್ ಲಭ್ಯ ಇದೆ.

MICR Code of bank: ಎಂಐಸಿಆರ್ ಕೋಡ್ ಎಂದರೇನು, ಅದನ್ನು ಪತ್ತೆಹಚ್ಚುವುದು ಹೇಗೆ?MICR Code of bank: ಎಂಐಸಿಆರ್ ಕೋಡ್ ಎಂದರೇನು, ಅದನ್ನು ಪತ್ತೆಹಚ್ಚುವುದು ಹೇಗೆ?

ವಾಟ್ಸಾಪ್‌ನಲ್ಲಿ ಈಗಾಗಲೇ ಆಡಿಯೋ ಮತ್ತು ವಿಡಿಯೋ ಕಾಲ್‌ ಸೌಲಭ್ಯಗಳಿವೆ. ವಾಟ್ಸಾಪ್ ಆಡಿಯೋ ಕಾಲ್‌ನಲ್ಲಿ 32 ಮಂದಿ ಮಾತನಾಡಬಹುದಿತ್ತು. ವಿಡಿಯೋ ಗ್ರೂಪ್ ಕಾಲ್‌ನಲ್ಲಿ 8 ಮಂದಿಗೆ ಮಾತ್ರ ಅವಕಾಶ ಇತ್ತು. ಆದರೆ, ಹೊಸ ವಾಟ್ಸಾಪ್ ಫೀಚರ್‌ನಲ್ಲಿ ೩೨ ಜನರು ವಿಡಿಯೋ ಸಭೆಯಲ್ಲಿ ಪಾಲ್ಗೊಳ್ಳಬಹುದು.

ಝೂಮ್, ಗೂಗಲ್ ಮೀಟ್ ರೀತಿ ವಾಟ್ಸಾಪ್ ಕಾಲ್; ಬಳಸೋದು ಹೇಗೆ?

ಈ ವಾಟ್ಸಾಪ್ ಫೀಚರ್ ಅನ್ನು ಹೇಗೆ ಬಳಸುವುದು ಎಂಬ ವಿವರ ಇಲ್ಲಿದೆ.

ಕಾಲ್ ಲಿಂಕ್ ಫೀಚರ್:
* ವಾಟ್ಸಾಪ್ ಅಪ್ಲಿಕೇಶನ್ ತೆರೆದರೆ ಮೇಲ್ಭಾಗದಲ್ಲಿ ಚಾಟ್ಸ್, ಸ್ಟೇಟಸ್ ಮತ್ತು ಕಾಲ್ಸ್ ಈ ಮೂರು ಕಾಣುತ್ತದೆ. ಇಲ್ಲಿ ಕಾಲ್ ಲಿಂಕ್ ಫೀಚರ್ ಸಿಗುತ್ತದೆ.
* "ಕ್ರಿಯೇಟ್ ಕಾಲ್ ಲಿಂಕ್ - ಶೇರ್ ಎ ಲಿಂಕ್ ಫಾರ್ ಯುವರ್ ವಾಟ್ಸಾಪ್ ಕಾಲ್" ಎಂದು ಬರೆದಿರುವುದನ್ನು ಗಮನಿಸಬಹುದು.
* 'ಕ್ರಿಯೇಟ್ ಕಾಲ್ ಲಿಂಕ್' ಮೇಲೆ ಬೆರಳೊತ್ತಿದರೆ ಇನ್ನೊಂದು ಇಂಟರ್‌ಫೇಸ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಲಿಂಕ್ ಜನರೇಟ್ ಆಗಿರುವುದು ಕಾಣಿಸಬಹುದು.
* ಆ ಲಿಂಕ್ ಅನ್ನು ಏನು ಮಾಡಬೇಕು ಎಂದು ನಾಲ್ಕು ಆಯ್ಕೆಗಳು ಅಲ್ಲಿಯೇ ಸಿಗುತ್ತವೆ. ಕಾಲ್ ಟೈಪ್, ಸೆಂಡ್ ಲಿಂಕ್ ವಯಾ ವಾಟ್ಸಾಪ್, ಕಾಪಿ ಲಿಂಕ್ ಮತ್ತು ಶೇರ್ ಲಿಂಕ್ ಎಂದಿರುವುದನ್ನು ನೋಡಬಹುದು.
* ಕಾಲ್ ಟೈಪ್ ಡೀಫಾಲ್ಟ್ ಆಗಿ ವಿಡಿಯೋ ಇರುತ್ತದೆ. ಅದರ ಮೇಲೆ ಒತ್ತಿದರೆ ವಿಡಿಯೋ ಅಥವಾ ಆಡಿಯೋ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಆಡಿಯೋ ಆಯ್ದುಕೊಂಡರೆ ಕೇವಲ ಧ್ವನಿ ಸಂವಾದ ಮಾತ್ರ ನಡೆಸಬಹುದು.
* 'ಶೇರ್ ಲಿಂಕ್ ವಯಾ ವಾಟ್ಸಾಪ್' ಮೂಲಕ ವಾಟ್ಸಾಪ್‌ನಲ್ಲಿ ಲಿಂಕ್ ಶೇರ್ ಮಾಡಬಹುದು.
* ಇದೇ ಲಿಂಕ್ ಅನ್ನು ಕಾಪಿ ಮಾಡಲು 'ಕಾಪಿ ಲಿಂಕ್' ಬಳಸಬಹುದು.
* ಇನ್ನು, 'ಶೇರ್ ಲಿಂಕ್' ಬಳಸಿ ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳಿಗೆ ಲಿಂಕ್ ಕಳುಹಿಸಬಹುದು.

ಎಚ್ಚರ: ಹಬ್ಬದ ಸಂದೇಶ ನೆಪದಲ್ಲಿ ಬ್ಯಾಂಕಿಂಗ್ ಮಾಹಿತಿ ಕದಿಯುತ್ತೆ ಚೀನಾ ವೆಬ್‌ಸೈಟ್!ಎಚ್ಚರ: ಹಬ್ಬದ ಸಂದೇಶ ನೆಪದಲ್ಲಿ ಬ್ಯಾಂಕಿಂಗ್ ಮಾಹಿತಿ ಕದಿಯುತ್ತೆ ಚೀನಾ ವೆಬ್‌ಸೈಟ್!

English summary

New Whatsapp Call Link Feature like Google Meet, Know How To Use

WhatsApp has rolled out the feature to create call links for joining audio or video calls just like Zoom or Google meet.
Story first published: Friday, October 21, 2022, 17:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X