For Quick Alerts
ALLOW NOTIFICATIONS  
For Daily Alerts

ಈ ಕ್ರೆಡಿಟ್ ಕಾರ್ಡ್‌ಗಿಲ್ಲ ಯುಪಿಐ ವಹಿವಾಟು ಶುಲ್ಕ!

|

ದೇಶದಲ್ಲಿ ಪ್ರಸ್ತುತ ಯುಪಿಐ ವಹಿವಾಟು ಹೆಚ್ಚಾಗಿ ನಡೆಯುತ್ತಿದೆ. ಜನರು ಈ ಸರಳ ವಿಧಾನದಲ್ಲಿಯೇ ಎಲ್ಲ ಹಣಕಾಸು ವಹಿವಾಟನ್ನು ನಡೆಸಲು ಆರಂಭಿಸಿದ್ದಾರೆ. ಆದರೆ ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ವಹಿವಾಟು ನಡೆಸಿದರೆ ಅದಕ್ಕೆ ಶುಲ್ಕ ವಿಧಿಸಲಾಗುತ್ತದೆ. ಈ ನಡುವೆ ಈ ಒಂದು ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ವಹಿವಾಟು ನಡೆಸಿದರೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ ಅದಕ್ಕೂ ಕೆಲವು ಮಿತಿ ಇದೆ, ಷರತ್ತುಗಳು ಇದೆ.

 

ಹೌದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ನಡೆಸಿದರೆ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ತಿಳಿಸಿದೆ. ಆದರೆ ಎರಡು ಸಾವಿರ ರೂಪಾಯಿಗಿಂತ ಕಡಿಮೆ ವಹಿವಾಟು ನಡೆಸಿದರೆ ಮಾತ್ರ ಯಾವುದೇ ಶುಲ್ಕ ಇರುವುದಿಲ್ಲ. ಅದಕ್ಕಿಂತ ಅಧಿಕ ಮೊತ್ತದ ವಹಿವಾಟಿಗೆ ಎಂದಿನಂತೆ ಶುಲ್ಕ ಇರಲಿದೆ. ಎಲ್ಲ ಪ್ರಮುಖ ಬ್ಯಾಂಕುಗಳು ರುಪೇ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿದೆ. ಕಳೆದ ನಾಲ್ಕು ವರ್ಷದಿಂದ ರುಪೇ ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿದೆ.

ತಪ್ಪಾಗಿ ಬೇರೆ ಯುಪಿಐ ಅಡ್ರೆಸ್‌ಗೆ ಹಣ ಕಳಿಸಿದ್ರೆ, ವಾಪಸ್ ಪಡೆಯೋದು ಹೇಗೆ?ತಪ್ಪಾಗಿ ಬೇರೆ ಯುಪಿಐ ಅಡ್ರೆಸ್‌ಗೆ ಹಣ ಕಳಿಸಿದ್ರೆ, ವಾಪಸ್ ಪಡೆಯೋದು ಹೇಗೆ?

ಪ್ರಸ್ತುತ ಎಲ್ಲ ಅಂಗಡಿ ಮುಗ್ಗಟ್ಟುಗಳಲ್ಲಿ ಸಣ್ಣ ವಹಿವಾಟಿಗಾಗಿ ಯುಪಿಐ ವಹಿವಾಟನ್ನು ಮಾಡಲಾಗುತ್ತದೆ. ಡಿಜಿಟಲ್ ಪೇಮೆಂಟ್‌ಗೆ ಸರ್ಕಾರ ಆದ್ಯತೆ ನೀಡಿದ ಬೆನ್ನಲ್ಲೇ ಪ್ರಸ್ತುತ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆಯಾಗುತ್ತಿದೆ. ಈಗ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ ಮೂಲಕ ಯುಪಿಐ ವಹಿವಾಟನ್ನು ನಡೆಸಲಾಗುತ್ತದೆ. ಅದಕ್ಕಾಗಿ ಆಫರ್‌ಗಳನ್ನು ಕೂಡಾ ನೀಡಲಾಗುತ್ತದೆ. ಇತ್ತೀಚಿನ ಮಾಹಿತಿ ಪ್ರಕಾರ ರುಪೇ ಕ್ರೆಡಿಟ್ ಕಾರ್ಡ್‌ನಲ್ಲಿ 2 ಸಾವಿರ ರೂಪಾಯಿವರೆಗಿನ ವಹಿವಾಟಿನ ಯಾವುದೇ ಶುಲ್ಕವಿಲ್ಲ. ಫೋನ್‌ಪೇ, ಗೂಗಲ್‌ಪೇ, ಪೇಟಿಎಂಗೆ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ ಎಂದು ಇಲ್ಲಿದೆ ವಿವರ ಮುಂದೆ ಓದಿ...

 ಫೋನ್‌ಪೇಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಫೋನ್‌ಪೇಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಹಂತ 1: ಫೋನ್‌ಪೇ ಅನ್ನು ತೆರೆಯಿರಿ
ಹಂತ 2: ಪ್ರೊಫೈಲ್ ಫೋಟೋವನ್ನು ಆಯ್ಕೆ ಮಾಡಿ
ಹಂತ 3: View All Payment Methods ಆಯ್ಕೆ ಮಾಡಿ
ಹಂತ 4: ಡೆಬಿಟ್/ಕ್ರೆಡಿಟ್ ಕಾರ್ಡ್ ಮೆನುವಲಲ್ಲಿ ADD CARD ಮೇಲೆ ಕ್ಲಿಕ್ ಮಾಡಿ
ಹಂತ 5: ಕಾರ್ಡ್ ಮಾಹಿತಿಯನ್ನು ಹಾಕಿ Add ಆಯ್ಕೆ ಮಾಡಿ
ಹಂತ 6: ಒಟಿಪಿಯನ್ನು ಹಾಕಿ submit ಮಾಡಿದರೆ ಪ್ರಕ್ರಿಯೆ ಪೂರ್ಣ

 ಗೂಗಲ್‌ಪೇಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಗೂಗಲ್‌ಪೇಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಹಂತ 1: ಗೂಗಲ್‌ಪೇ ತೆರೆದು ನಿಮ್ಮ ಪ್ರೊಫೈಲ್ ತೆರೆಯಿರಿ
ಹಂತ 2: ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಲು Pay Businesses ಮೇಲೆ ಕ್ಲಿಕ್ ಮಾಡಿ
ಹಂತ 3: ನೀವು ನಿಮ್ಮ ಕಾರ್ಡ್ ಅನ್ನು ಸ್ಕ್ಯಾನ್ ಮಾಡಬೇಕು. ನೀವಾಗಿಯೇ ಕಾರ್ಡ್ ಮಾಹಿತಿಯನ್ನು ಹಾಕಬಹುದು
ಹಂತ 4: ಸಿಸಿವಿಯನ್ನು ಹಾಕಿ, ಕೊನೆಯ ದಿನ ಹಾಕಿ ಸೇವ್ ಮಾಡಿ
ಹಂತ 5: More ಮೇಲೆ ಕ್ಲಿಕ್ ಮಾಡಿ, ನಿಯಮವನ್ನು ಓದಿ Accept & Continue ಮೇಲೆ ಕ್ಲಿಕ್ ಮಾಡಿ
ಹಂತ 6: ಮೊಬೈಲ್‌ಗೆ ಬಂದ ಒಟಿಪಿಯನ್ನು ಹಾಕಿ submit ಮಾಡಿದರೆ ಪ್ರಕ್ರಿಯೆ ಪೂರ್ಣ

 ಪೇಟಿಎಂಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
 

ಪೇಟಿಎಂಗೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಹಂತ 1: ಪೇಟಿಎಂ ಆಪ್ ತೆರೆದು ಪ್ರೊಫೈಲ್ ಫೋಟೋ ಆಯ್ಕೆ ಮಾಡಿ
ಹಂತ 2: Payment Settings ಕಾರ್ಡ್‌ ಆಯ್ಕೆಯನ್ನು ಮಾಡಿ, Add New Card ಕ್ಲಿಕ್ ಮಾಡಿ
ಹಂತ 3: ಕಾರ್ಡ್‌ನ ಮಾಹಿತಿಯನ್ನು ಕೇಳಲಾಗುತ್ತದೆ.
ಹಂತ 4: ಒಟಿಪಿಯನ್ನು ಹಾಕಿ ಎಲ್ಲ ಪ್ರಕ್ರಿಯೆಯನ್ನು ಪೂರ್ಣ ಮಾಡಲಿದೆ

ರುಪೇ ಕ್ರೆಡಿಟ್ ಕಾರ್ಡ್‌ ಮೂಲಕ ಯುಪಿಐ ಪಾವತಿಗೆ ಗ್ರೀನ್‌ ಸಿಗ್ನಲ್: ಇಲ್ಲಿದೆ ವಿವರರುಪೇ ಕ್ರೆಡಿಟ್ ಕಾರ್ಡ್‌ ಮೂಲಕ ಯುಪಿಐ ಪಾವತಿಗೆ ಗ್ರೀನ್‌ ಸಿಗ್ನಲ್: ಇಲ್ಲಿದೆ ವಿವರ

English summary

No UPI Transaction Fee on RuPay Credit Card, Here's Details

No UPI Transaction Fee on This Credit Card, Here's steps how to link credit cards with PhonePe, Paytm, Google Pay, read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X