For Quick Alerts
ALLOW NOTIFICATIONS  
For Daily Alerts

ಎನ್‌ಪಿಎಸ್ ಖಾತೆ: ಹಣ ವಿತ್‌ಡ್ರಾ, ಪ್ರಯೋಜನ, ಸಂಪೂರ್ಣ ಮಾಹಿತಿ

|

ನಾವು ಮಾಡುವ ಹೂಡಿಕೆಯಿಂದ ತೆರಿಗೆ ಉಳಿತಾಯ ಮಾಡಲು ಸಾಧ್ಯವಾಗುತ್ತದೆ ಎಂದಾದರೆ ಅಂತಹ ಹೂಡಿಕೆಯಿಂದ ಹಿಂದೆ ಸರಿಯಲು ಮನಸ್ಸು ಬರುತ್ತದೆಯೇ?. ಹೆಚ್ಚಾಗಿ ಜನರು ಎಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಉಳಿತಾಯ ಮಾಡಲು ಸಾಧ್ಯವಾಗುತ್ತದೆ ಎಂದು ನೋಡುತ್ತಾರೆ. ಅಂತಹ ಜನರಿಗೆ ಈ ಹೂಡಿಕೆ ಉತ್ತಮ ಆಯ್ಕೆಯಾಗಿದೆ.

ನಮಗೆ ಬ್ಯಾಂಕ್ ಎಫ್‌ಡಿ, ಪಿಪಿಎಫ್, ಎನ್‌ಎಸ್‌ಸಿ, ಎನ್‌ಪಿಎಸ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿತಾಯವನ್ನು ಮಾಡಲು ಸಾಧ್ಯವಿದೆ. ಈ ನಡುವೆ 18-60 ವಯಸ್ಸಿನ ಮಿತಿಯೊಳಗೆ ಭಾರತದ ನಾಗರಿಕರಿಗೆ ಎನ್‌ಪಿಎಸ್‌ ತೆರಿಗೆ ಉಳಿತಾಯ ಮಾಡಲು ಉತ್ತಮ ಆಯ್ಕೆಯಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ನಿವೃತ್ತಿ ಸಂದರ್ಭದಲ್ಲಿ ಸಹಾಯಕವಾಗುವ ಯೋಜನೆಯಾಗಿದೆ.

ತಿಂಗಳಿಗೆ 5000 ಹೂಡಿಕೆ ಮಾಡಿ ಮಾಸಿಕ 1.6 ಲಕ್ಷ ರೂ. ಪಿಂಚಣಿ ಪಡೆಯುವುದು ಹೇಗೆ?ತಿಂಗಳಿಗೆ 5000 ಹೂಡಿಕೆ ಮಾಡಿ ಮಾಸಿಕ 1.6 ಲಕ್ಷ ರೂ. ಪಿಂಚಣಿ ಪಡೆಯುವುದು ಹೇಗೆ?

ಈ ಖಾತೆಯನ್ನು ತೆರೆದಿರುವವರು ತಮ್ಮ ಖಾತೆಗೆ ಹೂಡಿಕೆಯನ್ನು ಮಾಡಿಕೊಂಡು ಅದನ್ನು ಉಳಿತಾಯ ಮಾಡಿಕೊಳ್ಳಬಹುದು ಹಾಗೂ ಭವಿಷ್ಯದಲ್ಲಿ ಆ ಹಣವನ್ನು ಬಳಕೆ ಮಾಡಬಹುದು. ನಿವೃತ್ತಿಯ ನಂತರ ಸುಂದರ ಜೀವನಕ್ಕಾಗಿ ಈ ಹೂಡಿಕೆಯನ್ನು ಬಳಕೆ ಮಾಡಬಹುದು. ನಾವು ಎನ್‌ಪಿಎಸ್ ಖಾತೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿಯೂ ತೆರೆಯಬಹುದು. ಈ ಯೋಜನೆಯ ಮುಖ್ಯ ಲಾಭವೇನು, ಆನ್‌ಲೈನ್ ಮೂಲಕ ಹೇಗೆ ಖಾತೆ ತೆರೆಯುವುದು ಎಂಬ ಮೊದಲಾದ ಮಾಹಿತಿಯನ್ನು ನಾವು ತಿಳಿಯೋಣ ಮುಂದೆ ಓದಿ...

 ಎನ್‌ಪಿಎಸ್‌ ಪ್ರಮುಖ ವಿಚಾರಗಳು

ಎನ್‌ಪಿಎಸ್‌ ಪ್ರಮುಖ ವಿಚಾರಗಳು

* ನಾವು ಎನ್‌ಪಿಎಸ್ ಖಾತೆಯನ್ನು ಆನ್‌ಲೈನ್ ಮೂಲಕ 20 ನಿಮಿಷದಲ್ಲೇ ತೆರೆಯಲು ಸಾಧ್ಯವಿದೆ
* ನಾವು ಬರೀ ಸಾವಿರ ರೂಪಾಯಿ ಹೂಡಿಕೆ ಮಾಡುವ ಮೂಲಕ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತದೆ.
* ಎನ್‌ಪಿಎಸ್‌ನಲ್ಲಿ ಹೂಡಿಕೆ ಅತೀ ಕಡಿಮೆಯಾಗಿದೆ
* ದೀರ್ಘಾವಧಿ (60 ವರ್ಷ) ಹೂಡಿಕೆ ಮಾಡಿದರೆ ನಮಗೆ ಹೆಚ್ಚಿನ ಲಾಭ ಲಭ್ಯವಾಗಲಿದೆ

 

 

 ಎನ್‌ಪಿಎಸ್‌ನ ಪ್ರಯೋಜನಗಳು ಏನು?

ಎನ್‌ಪಿಎಸ್‌ನ ಪ್ರಯೋಜನಗಳು ಏನು?

* ಒಂದು ಹಣಕಾಸು ವರ್ಷದಲ್ಲಿ ಹೂಡಿಕೆದಾರರು ಯಾವ ಸಂದರ್ಭದಲ್ಲಿ ಬೇಕಾದರೂ ಹೂಡಿಕೆ ಮಾಡಬಹುದು. ಅದು ಖಾತೆಯನ್ನು ಹೊಂದಿರುವವರಿಗೆ ಬಿಟ್ಟ ವಿಚಾರ. ತಮಗೆ ಅನುಕೂಲವಾದಾಗ ಹೂಡಿಕೆಯನ್ನು ಮಾಡಬಹುದು.
* ಪ್ರತಿ ವರ್ಷ ನಿಗದಿತ ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು ಎಂಬುವುದನ್ನು ಕೂಡಾ ಹೂಡಿಕೆದಾರರೇ ನಿರ್ಧಾರ ಮಾಡಬಹುದು
* ಎನ್‌ಪಿಎಸ್ ಅನ್ನು ಎಲ್ಲಿಂದ ಬೇಕಾದರೂ ನಾವು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ನಾವು ಉದ್ಯೋಗ ಬದಲಾವಣೆ ಮಾಡಿದರೂ ಯಾವುದೇ ತೊಂದರೆ ಉಂಟಾಗದು.
* ಎನ್‌ಪಿಎಸ್ ಖಾತೆಯನ್ನು ಯಾರದೇ ಪಿಪಿಒ ಅತವಾ ಇಎನ್‌ಪಿಎಸ್ ಮೂಲಕ ತೆರೆಯಬಹುದು

 

 

 ಎನ್‌ಪಿಎಸ್ ಖಾತೆಯನ್ನು ಆನ್‌ಲೈನ್‌ನಲ್ಲಿ ತೆರೆಯುವುದು ಹೇಗೆ?

ಎನ್‌ಪಿಎಸ್ ಖಾತೆಯನ್ನು ಆನ್‌ಲೈನ್‌ನಲ್ಲಿ ತೆರೆಯುವುದು ಹೇಗೆ?

* https://enps.nsdl.com/eNPS/NationalPensionSystem.html ಎನ್‌ಪಿಎಸ್‌ ವೆಬ್‌ಸೈಟ್‌ಗೆ ಭೇಟಿ ನೀಡಿ
* NEW ರಿಜಿಸ್ಟ್ರೇಷನ್ ಆಯ್ಕೆ ಮಾಡಿ, ಆಧಾರ್-ಪ್ಯಾನ್ ಅನ್ನು ತೆರೆಯಿರಿ
* ನಿಮ್ಮ ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ
* ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿ, ಫೋಟೋ, ಸಿಗ್ನಿಚರ್ ಅನ್ನು ಸ್ಕ್ಯಾನ್ ಮಾಡಿ
* ಫಾರ್ಮ್ ಅನ್ನು ಸಬ್‌ಮಿಟ್ ಮಾಡಿ
* ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನೀವು ಎನ್‌ಪಿಎಸ್ ಖಾತೆ ನಿರ್ವಹಣೆ ಮಾಡಬಹುದಾದ ಪ್ಯಾನ್ ಲಭ್ಯವಾಗಲಿದೆ.

 

 

 ಎನ್‌ಪಿಎಸ್ ಖಾತೆ ಆಫ್‌ಲೈನ್‌ನಲ್ಲಿ ತೆರೆಯುವುದು ಹೇಗೆ?

ಎನ್‌ಪಿಎಸ್ ಖಾತೆ ಆಫ್‌ಲೈನ್‌ನಲ್ಲಿ ತೆರೆಯುವುದು ಹೇಗೆ?

* 18-65 ವಯಸ್ಸಿನ ನಡುವಿನ ಚಂದಾದಾರರು PRAN ಅರ್ಜಿ ನಮೂನೆಯನ್ನು ಯಾವುದೇ ಪಿಪಿಒ-ಸೇವಾ ಪೂರೈಕೆದಾರರಿಂದ (POP-SP) ಪಡೆಯಬಹುದು.
* PRAN ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಸಹಿ, ಛಾಯಾಚಿತ್ರ ಯೋಜನೆಯ ಆದ್ಯತೆಯೊಂದಿಗೆ ಭರ್ತಿ ಮಾಡಬೇಕು. ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯೊಂದಿಗೆ ಕೆವೈಸಿ ಸಲ್ಲಿಕೆ ಮಾಡಿ
* ಹತ್ತಿರದ ಪಾಯಿಂಟ್ ಆಫ್ ಪ್ರೆಸೆನ್ಸ್-ಸೇವಾ ಪೂರೈಕೆದಾರರಿಗೆ ಅರ್ಜಿ ನಮೂನೆಯನ್ನು ಸಲ್ಲಿಸಿ.
* https://cra-nsdl.com/CRA/pranCardStatusInput.do ಮೂಲಕ ರಸೀದಿ ಸಂಖ್ಯೆಯೊಂದಿಗೆ ನಿಮ್ಮ PRAN ಅಪ್ಲಿಕೇಶನ್ ಸ್ಟೇಟಸ್ ನೋಡಬಹುದು
* ಮೊದಲ ಕೊಡುಗೆಯಾಗಿ ಕನಿಷ್ಠ 500 ರೂಪಾಯಿಯನ್ನು ಪಾವತಿ ಮಾಡಬೇಕು.

 ಎನ್‌ಪಿಎಸ್ ಖಾತೆಯಿಂದ ಹಣ ಹಿಂಪಡೆಯುವುದು  ಹೇಗೆ?

ಎನ್‌ಪಿಎಸ್ ಖಾತೆಯಿಂದ ಹಣ ಹಿಂಪಡೆಯುವುದು ಹೇಗೆ?

ಮೆಚ್ಯೂರಿಟಿ: ಮುಕ್ತಾಯದ ಸಮಯದಲ್ಲಿ (60 ವರ್ಷಗಳು) ಶೇಕಡ 60ರಷ್ಟು ತೆರಿಗೆ ಮುಕ್ತವಾಗಿ ಪಡೆಯಬಹುದು. ಶೇಕಡ 40ರಷ್ಟು ವರ್ಷಾಶನದಲ್ಲಿ ಹೂಡಿಕೆ ಮಾಡಲಾಗುತ್ತದೆ. 5 ಲಕ್ಷ ರೂಪಾಯಿವರೆಗಿನ ಕಾರ್ಪಸ್ ಅನ್ನು ಸಂಪೂರ್ಣವಾಗಿ ಹಿಂಪಡೆಯಬಹುದು.
ಅಕಾಲಿಕ ಖಾತೆ ಮುಚ್ಚುವಿಕೆ: 5 ವರ್ಷಗಳ ನಂತರ ಖಾತೆಯನ್ನು ಮುಚ್ಚಲು ಅನುಮತಿ ಇದೆ. ಶೇಕಡ 20ರಷ್ಟು ತೆರಿಗೆ ಮುಕ್ತವಾಗಿದೆ. ಉಳಿದ ಶೇಕಡ 80ರಷ್ಟು ಪಿಂಚಣಿಗಾಗಿ ವರ್ಷಾಶನದಲ್ಲಿ ಹೂಡಿಕೆ ಮಾಡಬೇಕು. ಮೊತ್ತ 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿದ್ದರೆ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು.
ಮರಣ: ಮರಣದ ಸಂದರ್ಭದಲ್ಲಿ ಶೇಕಡ 100ರಷ್ಟು ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ
ಅಕಾಲಿಕ ವಾಪಸಾತಿ: ಅಕಾಲಿಕವಾಗಿ ಹಣ ಹಿಂಪಡೆಯುವಾಗ ಶೇಕಡ 25ರಷ್ಟು ಮೊತ್ತವನ್ನು ಹಿಂದಕ್ಕೆ ಪಡೆಯಬಹುದು. ಜೀವನದಲ್ಲಿ 3 ಬಾರಿ ಹಣವನ್ನು ಹಿಂದಕ್ಕೆ ಪಡೆಯಬಹುದು. ಮೊದಲನೆಯದಾಗಿ ಎನ್‌ಪಿಎಸ್ ಖಾತೆ ತೆರೆದು ತಿಂಗಳುಗಳ ಪೂರ್ಣಗೊಂಡ ಬಳಿಕ ಹಣ ಹಿಂಪಡೆಯಬಹುದು. ಎರಡನೇ ಹಾಗೂ ಮೂರನೇ ಬಾರಿ ಯಾವುದೇ ಸಂದರ್ಭದಲ್ಲಿಯೂ ಹಣವನ್ನು ಹಿಂಪಡೆಯಬಹುದು.

ಇಪಿಎಫ್ ಅಥವಾ ಎನ್‌ಪಿಎಸ್ ಎರಡರಲ್ಲಿ ಯಾವುದು ಅನುಕೂಲ?ಇಪಿಎಫ್ ಅಥವಾ ಎನ್‌ಪಿಎಸ್ ಎರಡರಲ್ಲಿ ಯಾವುದು ಅನುಕೂಲ?

English summary

Opening and Withdrawal of NPS Account, Explained in Kannada

NPS Account: Opening and Withdrawal of NPS Account, What is an NPS Account?, features, advantage, etc explained in kannada.
Story first published: Saturday, October 22, 2022, 19:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X