For Quick Alerts
ALLOW NOTIFICATIONS  
For Daily Alerts

Pele Net Worth: ಕೊನೆಯುಸಿರೆಳೆಯುವುದಕ್ಕೂ ಮುನ್ನ ಪೀಲೆ ನಿವ್ವಳ ಆದಾಯ ಎಷ್ಟಿತ್ತು?

|

ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಬ್ರೆಜಿಲ್‌ನ ಪೀಲೆ ಇಹಲೋಕ ತ್ಯಜಿಸಿದ್ದಾರೆ. ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ ಪೀಲೆ ತಮ್ಮ 82ನೇ ವಯಸ್ಸಿನಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅವರ ಪುತ್ರಿ ಖಚಿತಪಡಿಸಿದ್ದಾರೆ. ಈ ನಡುವೆ ಪೀಲೆ ನಿಧನಕ್ಕೂ ಮುನ್ನ ಅವರ ನಿವ್ವಳ ಆದಾಯ ಎಷ್ಟಿತ್ತು, ಅವರ ಬಳಿ ಎಷ್ಟು ಆಸ್ತಿ ಇತ್ತು ಎಂದು ತಿಳಿಯೋಣ..

ಪೀಲೆ ಫುಟ್‌ಬಾಲ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಅತೀ ಅಧಿಕ ಸಂಭಾವನೆಯನ್ನು ಪಡೆಯುವ ಅಥ್ಲೆಟ್‌ ಆಗಿದ್ದರು. ಪೀಲೆ ನಿವೃತ್ತಿಯ ಬಳಿಕವು ಅವರ ನಿವ್ವಳ ಆದಾಯ ಮಿಲಿಯನ್‌ಗಟ್ಟಲೆ ಡಾಲರ್‌ಗಳು ಆಗಿದ್ದವು. ಆದರೆ ಕೊನೆಯುಸಿರೆಳೆಯುವುದಕ್ಕೂ ಮುನ್ನ ಪೀಲೆ ದೊಡ್ಡ ಕರುಳಿನ ಕ್ಯಾನ್ಸರ್‌ ವಿರುದ್ಧ ಹೋರಾಡಬೇಕಾಯಿತು.

ರಜೆಯಲ್ಲಿರುವ ಸಹೋದ್ಯೋಗಿಗೆ ಕೆಲಸ ವಿಚಾರದಲ್ಲಿ ತೊಂದರೆ ಕೊಟ್ಟರೆ 1 ಲಕ್ಷ ದಂಡ!ರಜೆಯಲ್ಲಿರುವ ಸಹೋದ್ಯೋಗಿಗೆ ಕೆಲಸ ವಿಚಾರದಲ್ಲಿ ತೊಂದರೆ ಕೊಟ್ಟರೆ 1 ಲಕ್ಷ ದಂಡ!

ಪೀಲೆ ಎಂದ ಖ್ಯಾತಿಯಾದ ಎಡ್ಸನ್​ ಅರಾಂಟೆಸ್​ ಡು ನಸಿಮೆಂಟೊ ಅಕ್ಟೋಬರ್ 13, 1940ರಲ್ಲಿ ಬ್ರೆಜಿಲ್‌ನಲ್ಲಿ ಜನಿಸಿದ್ದಾರೆ. ಪೀಲೆ ತಮ್ಮ 16ನೇ ವಯಸ್ಸಿನಲ್ಲಿಯೇ ಬ್ರೆಜಿಲ್ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. 1958, 1962 ಹಾಗೂ 1970ರಲ್ಲಿ ಬ್ರೆಜಿಲ್ ವಿಶ್ವಕಪ್ ಚಾಂಪಿಯನ್ ಪಡೆಯುವಲ್ಲಿ ಪೀಲೆ ಪಾತ್ರ ಅಮೋಘ. ತನ್ನ ಬಾಲ್ಯದಲ್ಲಿ ಅತೀ ಬಡವರಾಗಿದ್ದ ಪೀಲೆ ಶೂ ಅನ್ನು ಕೂಡಾ ಹೊಂದಿರಲಿಲ್ಲ. ಆದರೆ ಈಗ ಅವರ ಆದಾಯ ನಿಮ್ಮ ಹುಬ್ಬೆರಿಸುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಪೀಲೆ ನಿವ್ವಳ ಆದಾಯ ಎಷ್ಟಿತ್ತು?

ಪೀಲೆ ನಿವ್ವಳ ಆದಾಯ ಎಷ್ಟಿತ್ತು?

ಸೆಲೆಬ್ರೆಟಿಗಳ ನಿವ್ವಳ ಆದಾಯದ ಲೆಕ್ಕಾಚಾರದ ಪ್ರಕಾರ ಕೊನೆಯುಸಿರೆಳೆಯುವುದಕ್ಕೂ ಮುನ್ನ ಪೀಲೆ ನಿವ್ವಳ ಆದಾಯ ಸರಿಸುಮಾರು 100 ಮಿಲಿಯನ್ ಡಾಲರ್ ಆಗಿದೆ. ತನ್ನ 15ನೇ ವಯಸ್ಸಿನಲ್ಲಿಯೇ ಪೀಲೆ ವೃತ್ತಿಪರ ಜೀವನಕ್ಕೆ ಕಾಲಿರಿಸಿದ್ದಾರೆ. ತನ್ನ ಮೊದಲ ಪಂದ್ಯದಲ್ಲೇ ಅಧಿಕ ಅಂಕವನ್ನು ಗಳಿಸಿದ್ದಾರೆ. ಆ ಬಳಿಕ ಬ್ರೆಜಿಲ್‌ನಲ್ಲಿ ಟಾಪ್ ಸ್ಕೋರರ್ ಆಗಿ ಉಳಿದಿದ್ದರು. ಬ್ರೆಜಿಲ್ ಫಿಫಾ ವರ್ಲ್ಡ್ ಕಪ್ ಪಡೆಯುವಾಗ 1958ರಲ್ಲಿ ಪೀಲೆ ಕೂಡಾ ತಂಡದಲ್ಲಿದ್ದರು. ಆಗ ಪೀಲೆ ವಯಸ್ಸು 17 ಆಗಿತ್ತು. ತಂಡದಲ್ಲಿದ್ದ ಅತೀ ಕಿರಿಯ ಆಟಗಾರ ಅವರಾಗಿದ್ದರು.

ಪೂಮಾದಿಂದ 120,000 ಡಾಲರ್ ಪಾವತಿ

ಪೂಮಾದಿಂದ 120,000 ಡಾಲರ್ ಪಾವತಿ

60ರ ದಶಕದಲ್ಲಿ ಪೀಲೆ ಅಡಿದಾಸ್ ಮತ್ತು ಪೂಮಾ ಕ್ರೀಡಾ ಬ್ರಾಂಡ್‌ಗಳ ನಡುವಿನ ಸ್ಪರ್ಧೆಯು ತುಂಬಾ ತೀವ್ರವಾಗಿತ್ತು. ಆಗ "ಪೀಲೆ ಒಪ್ಪಂದ" ಎಂಬ ಯಾರಿಗೂ ತಿಳಿಯದ ಒಪ್ಪಂದ ನಡೆದಿತ್ತು. ಎರಡೂ ಕಂಪನಿಗಳು ಪೀಲೆಗೆ ಪ್ರಾಯೋಜಕತ್ವ ಕೊಡದಿರಲು ಮಾತನಾಡಿದ್ದರು. ಯಾಕೆಂದರೆ ಪೀಲೆ ಮೇಲೆ ಬಿಡ್ಡಿಂಗ್ ಮಾಡಿದರೆ ಅತೀ ಅಧಿಕ ಖರ್ಚಾಗುತ್ತದೆ ಎಂಬುವುದು ಈ ಎರಡು ಸಂಸ್ಥೆಗಳಿಗೆ ತಿಳಿದಿತ್ತು. ಆದರೆ 1970 ರಲ್ಲಿ ಇಟಲಿ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ, ಪೀಲೆ ತನ್ನ ಶೂ ಮೂಲಕವೇ ಎಲ್ಲರ ಚಿತ್ತವನ್ನು ಸೆಳೆದಿದ್ದರು. ಅದು ಪೂಮಾ ಶೂಗಳು ಆಗಿದ್ದವು. ಮಾಹಿತಿ ಪ್ರಕಾರ ಪೀಲೆ ತನ್ನ ಪೂಮಾ ಶೂ ಲೇಸ್‌ಗಳನ್ನು ಕೆಲವೇ ಸೆಕೆಂಡುಗಳ ಕಾಲ ಆಟದ ನಡುವೆ ಕಟ್ಟಿಕೊಳ್ಳಲು ಪೂಮಾ ಸಂಸ್ಥೆಯು 120,000 ಡಾಲರ್ ಪಾವತಿಸಿತ್ತು.

ಯುಎಸ್‌ ವರ್ಸಸ್ 4 ಮಿಲಿಯನ್ ಡಾಲರ್

ಯುಎಸ್‌ ವರ್ಸಸ್ 4 ಮಿಲಿಯನ್ ಡಾಲರ್

ಈ ಆಧುನಿಕ ಯುಗಕ್ಕೂ ಮೊದಲು ಫುಟ್‌ಬಾಲ್‌ ಆಟಗಾರರಿಗೆ ಅಧಿಕ ಪಾವತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪೇಲೆಗೆ ವಾರ್ಷಿಕವಾಗಿ ಸುಮಾರು 2.8 ಮಿಲಿಯನ್ ಡಾಲರ್ ಪಾವತಿ ಮಾಡಲಾಗುತ್ತಿತ್ತು. ಅದು ಕೂಡಾ ಸತತ ಮೂರು ವರ್ಷಗಳ ಕಾಲ ಇಷ್ಟು ಮೊತ್ತ ಪಾವತಿಸಾಗಿದೆ. ಹಾಗೆಯೇ ವಿಶ್ವದಲ್ಲೇ ಅತೀ ಅಧಿಕ ಸಂಭಾವನೆಯನ್ನು ಪಡೆಯುವ ಅಥ್ಲೆಟ್ ಪೀಲೆ ಆಗಿದ್ದರು. ಇನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಫುಟ್‌ಬಾಲ್ ಬರೀ ಆರಂಭವಾಗಿತ್ತು. ಆ ಸಂದರ್ಭದಲ್ಲಿ ಯುಎಸ್ ಬ್ರೆಜಿಲ್ ಆಟಗಾರ ಪೀಲೆಯನ್ನು 4 ಮಿಲಿಯನ್‌ ಡಾಲರ್ ನೀಡಿ ಆಟಕ್ಕೆ ಆಹ್ವಾನಿಸಲು ಮುಂದಾಗಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬ್ರೆಜಿಲ್‌ನ ವ್ಯಕ್ತಿಗೆ ನಾವು 4 ಮಿಲಿಯನ್ ಡಾಲರ್ ನೀಡಬೇಕಾಗಿಲ್ಲ. ನಮ್ಮಲ್ಲಿಯೇ ಹಲವಾರು ಉತ್ತಮ ಆಟಗಾರರು ಇದ್ದಾರೆ ಎಂದು ವಾದ ವಿವಾದ ನಡೆದಿತ್ತು.

English summary

Pele Net Worth : What's his net worth after passing away

Even after his retirement, Pelé’s net worth included millions of dollars in endorsements (including a huge paycheck to tie his shoes, more on that later) at the time of his death, age 82 after a short battle with colon cancer.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X