For Quick Alerts
ALLOW NOTIFICATIONS  
For Daily Alerts

23 ಕೋಟಿಗೂ ಅಧಿಕ ಖಾತೆಗಳಿಗೆ ಪಿಎಫ್‌ ಬಡ್ಡಿದರ ಜಮೆ: ಹೀಗೆ ಪರಿಶೀಲಿಸಿ..

|

ನೌಕರರ ಭವಿಷ್ಯ ನಿಧಿ (ಇಪಿಎಫ್‌) ಖಾತೆ ಹೊಂದಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಪಿಎಫ್‌ ಬಡ್ಡಿದರ ಶೇಕಡಾ 8.50 ಜಮೆ ಆಗಿದೆ. ಹೌದು 2020-21 ರ ಹಣಕಾಸು ವರ್ಷದ ಪಿಎಫ್‌ ಬಡ್ಡಿದರವು ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಜಮೆ ಮಾಡಲಾಗಿದೆ. ಈ ಬಗ್ಗೆ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. "23.34 ಕೋಟಿ ಖಾತೆಗಳಿಗೆ ಪಿಎಫ್‌ ಬಡ್ಡಿದರವನ್ನು ಜಮೆ ಮಾಡಲಾಗಿದೆ," ಎಂದು ತಿಳಿಸಿದೆ.

 

ಇಪಿಎಫ್‌ಗೆ ನಾಮಿನಿ ಸೇರಿಸುವುದು ಹೇಗೆ?: ಇಲ್ಲಿದೆ ಮಾಹಿತಿ ಇಪಿಎಫ್‌ಗೆ ನಾಮಿನಿ ಸೇರಿಸುವುದು ಹೇಗೆ?: ಇಲ್ಲಿದೆ ಮಾಹಿತಿ

ಈ ಬಗ್ಗೆ ಟ್ವೀಟ್‌ ಮಾಡಿರುವ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) "ಸುಮಾರು 23.34 ಕೋಟಿ ಪಿಎಫ್‌ ಖಾತೆಗೆ ಶೇಕಡ 8.50 ರಷ್ಟು ಬಡ್ಡಿ ದರವನ್ನು ಜಮೆ ಮಾಡಲಾಗಿದೆ. ಇದು ಹಣಕಾಸು ವರ್ಷ 2020-21 ರ ಬಡ್ಡಿ ದರವಾಗಿದೆ," ಎಂದು ತಿಳಿಸಿದೆ. ಹಾಗಾದರೆ ನಮ್ಮ ಪಿಎಫ್‌ ಖಾತೆಗೂ ಬಡ್ಡಿ ದರ ಜಮೆ ಆಗಿದೆಯೇ ಎಂದು ನಾವು ತಿಳಿಯುವುದು ಹೇಗೆ? ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ.....

ಹೇಗೆಲ್ಲಾ ಪರಿಶೀಲನೆ ಮಾಡಬಹುದು?

ಹೇಗೆಲ್ಲಾ ಪರಿಶೀಲನೆ ಮಾಡಬಹುದು?

ನೀವು ನಿಮ್ಮ ಇಪಿಎಫ್‌ ಖಾತೆಯಲ್ಲಿ ಬಡ್ಡಿ ದರವು ಜಮೆ ಆಗಿದೆಯೇ ಎಂದು ತಿಳಿಯಲು ಇಪಿಎಫ್‌ ಖಾತೆಯ ಬ್ಯಾಲೆನ್ಸ್‌ ಅನ್ನು ಪರಿಶೀಲನೆ ಮಾಡುವುದು ಅತೀ ಮುಖ್ಯವಾಗಿದೆ. ಇಪಿಎಫ್‌ ಖಾತೆಯ ಬ್ಯಾಲೆನ್ಸ್‌ ಅನ್ನು ನಾವು ಹಲವಾರು ರೀತಿಗಳಲ್ಲಿ, ವಿವಿಧ ಮೂಲಗಳಿಂದ ಪರಿಶೀಲನೆ ಮಾಡಬಹುದು. ನೀವು ನಿಮ್ಮ ಇಪಿಎಫ್‌ ಖಾತೆಯ ಬ್ಯಾಲೆನ್ಸ್‌ ಅನ್ನು ಎಸ್‌ಎಂಎಸ್‌, ಮಿಸ್ಡ್‌ ಕಾಲ್‌, ಆನ್‌ಲೈನ್‌ ಮೂಲಕ ಪರಿಶೀಲನೆ ಮಾಡಬಹುದಾಗಿದೆ. ಹಾಗೆಯೇ ಉಮಾಂಗ್‌ ಆಪ್‌ ಮೂಲಕವೂ ನೀವು ಬ್ಯಾಲೆನ್ಸ್‌ ಅನ್ನು ಪರಿಶೀಲನೆ ಮಾಡಬಹುದು. ನೀವು ಎಸ್‌ಎಂಎಸ್‌, ಉಮಾಂಗ್‌ ಆಪ್‌ ಮೊದಲಾದವುಗಳಲ್ಲಿ ಪಿಎಫ್‌ ಬ್ಯಾಲೆನ್ಸ್‌ ಅನ್ನು ಚೆಕ್‌ ಮಾಡುವುದು ಹೇಗೆ ಎಂದು ಈ ಕೆಳಗೆ ವಿವರಿಸಲಾಗಿದೆ. ಮುಂದೆ ಓದಿ..

ಎಸ್‌ಎಂಎಸ್‌ ಮೂಲಕ ಪಿಎಫ್‌ ಬ್ಯಾಲೆನ್ಸ್‌ ಪರಿಶೀಲನೆ

ಎಸ್‌ಎಂಎಸ್‌ ಮೂಲಕ ಪಿಎಫ್‌ ಬ್ಯಾಲೆನ್ಸ್‌ ಪರಿಶೀಲನೆ

ಎಸ್‌ಎಂಎಸ್‌ ಮೂಲಕ ಪಿಎಫ್‌ ಬ್ಯಾಲೆನ್ಸ್‌ ಪರಿಶೀಲನೆ ಮಾಡಲು ಮೊದಲು ನಿಮ್ಮ ಪಿಎಫ್‌ ಖಾತೆಯೊಂದಿಗೆ ರಿಜಿಸ್ಟರ್‌ ಆಗಿರುವ ಮೊಬೈಲ್‌ ಸಂಖ್ಯೆಯಿಂದ "EPFOHO UAN LAN" ಎಂದು 7738299899 ಸಂಖ್ಯೆಗೆ ಕಳುಹಿಸಬೇಕು. ಆ ಬಳಿಕ ನಿಮ್ಮ ಬ್ಯಾಲೆನ್ಸ್‌ ನಿಮಗೆ ತಿಳಿಯಲಿದೆ. ಇದರಲ್ಲಿ LAN ಎಂಬುವುದು ನಿಮ್ಮ ಆದ್ಯತೆಯ ಭಾಷೆಯ ಮೊದಲ ಮೂರು ಅಕ್ಷರಗಳು ಆಗಿದೆ. ನಿಮ್ಮ ಭಾಷೆ ಕನ್ನಡ ಎಂದಾದರೆ LAN ಜಾಗದಲ್ಲಿ KAN ಸೇರಿಸಿ. ಹಿಂದಿಯಾದರೆ HIN, ತಮಿಳು ಆದರೆ TAM.

ಮಿಸ್ಡ್‌ ಕಾಲ್‌ ಮೂಲಕ ಪಿಎಫ್‌ ಖಾತೆ ಪರಿಶೀಲನೆ
 

ಮಿಸ್ಡ್‌ ಕಾಲ್‌ ಮೂಲಕ ಪಿಎಫ್‌ ಖಾತೆ ಪರಿಶೀಲನೆ

ಮಿಸ್ಡ್‌ ಕಾಲ್‌ ಮೂಲಕ ಪಿಎಫ್‌ ಖಾತೆ ಪರಿಶೀಲನೆ ಮಾಡಲು ನಿಮ್ಮ ರಿಜಿಸ್ಟರ್‍ಡ್‌ ಮೊಬೈಲ್‌ ಸಂಖ್ಯೆಯಿಂದ 011 -22901406 ಗೆ ಮಿಸ್ಡ್‌ ಕಾಲ್‌ ನೀಡಿ, ಬಳಿಕ ನಿಮಗೆ ಪಿಎಫ್‌ ಖಾತೆಯ ವಿವರ ತಿಳಿಯಲಿದೆ. ನಿಮ್ಮ ಖಾತೆಗೆ ಬಡ್ಡಿ ದರ ಜಮೆ ಆಗಿದೆಯೇ ಎಂದು ಖಾತೆಯ ಬ್ಯಾಲೆನ್ಸ್‌ ಪರಿಶೀಲನೆ ವೇಳೆ ತಿಳಿಯಲಿದೆ.

ಆನ್‌ಲೈನ್‌ ಮೂಲಕ ಪಿಎಫ್‌ ಬ್ಯಾಲೆನ್ಸ್‌ ಪರಿಶೀಲನೆ

ಆನ್‌ಲೈನ್‌ ಮೂಲಕ ಪಿಎಫ್‌ ಬ್ಯಾಲೆನ್ಸ್‌ ಪರಿಶೀಲನೆ

ಆನ್‌ಲೈನ್‌ ಮೂಲಕ ಪಿಎಫ್‌ ಬ್ಯಾಲೆನ್ಸ್‌ ಪರಿಶೀಲನೆ ಮಾಡಲು ನೀವು ಅದಕ್ಕಾಗಿ ಮೊದಲು EPF Passbook Portal ಗೆ ಭೇಟಿ ನೀಡಿ ನಿಮ್ಮ ಯುಎಎನ್‌ ಸಂಖ್ಯೆ ಪಾಸ್‌ವರ್ಡ್ ಬಳಸಿ ಲಾಗಿನ್‌ ಆಗಬೇಕು. ಅಲ್ಲಿ Download/View Passbook ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಖಾತೆಯ ವಿವರ ದೊರೆಯಲಿದೆ. EPF Passbook Portal - https://passbook.epfindia.gov.in/MemberPassBook/Login

ಉಮಾಂಗ್‌ ಮೂಲಕ ಪಿಎಫ್‌ ಖಾತೆ ಪರಿಶೀಲನೆ ಹೇಗೆ?

ಉಮಾಂಗ್‌ ಮೂಲಕ ಪಿಎಫ್‌ ಖಾತೆ ಪರಿಶೀಲನೆ ಹೇಗೆ?

ನೀವು ಎಸ್‌ಎಂಎಸ್‌, ಮಿಸ್ಡ್‌ ಕಾಲ್‌, ಆನ್‌ಲೈನ್‌ ಮೂಲಕ ಮಾತ್ರವಲ್ಲದೆ ಉಮಾಂಗ್‌ ಆಪ್‌ ಮೂಲಕವು ನಿಮ್ಮ ಪಿಎಫ್‌ ಖಾತೆಯ ಬ್ಯಾಲೆನ್ಸ್‌ ಅನ್ನು ಪರಿಶೀಲನೆ ಮಾಡಲು ಸಾಧ್ಯವಿದೆ. ಉಮಾಂಗ್‌ ಆಪ್‌ ಮೂಲಕ ಪಿಎಫ್‌ ಬ್ಯಾಲೆನ್ಸ್‌ ಪರಿಶೀಲನೆ ಮಾಡಲು ನೀವು ಮೊದಲು ಉಮಾಂಗ್‌ ಆಪ್‌ ಅನ್ನು ತೆರಿಯಿರಿ, ಅಲ್ಲಿ EPFO ಗೆ ಹೋಗಿ Employee Centric Services ಮೇಲೆ ಕ್ಲಿಕ್‌ ಮಾಡಿ, ಬಳಿಕ View Passbook ಮೇಲೆ ಕ್ಲಿಕ್‌ ಮಾಡಿ, ನಿಮ್ಮ ಯುಎಎನ್‌ ಸಂಖ್ಯೆ, ಪಾಸ್‌ವರ್ಡ್ ಮೂಲಕ ಲಾಗಿನ್‌ ಆಗಿ. ಈ ವೇಳೆ ನಿಮಗೆ ಖಾತೆಯ ಬಗ್ಗೆ ಮಾಹಿತಿ ಲಭಿಸಲಿದೆ.

English summary

PF Interest Credited to Over 23 Crore Accounts: Here's How to Check EPF Balance

PF Interest Credited to Over 23 Crore Accounts: Here's How to Check EPF Balance.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X