For Quick Alerts
ALLOW NOTIFICATIONS  
For Daily Alerts

PM Matsya Sampada Yojana : ಪಿಎಂ ಮತ್ಸ್ಯ ಸಂಪದದಡಿ ಹೊಸ ಯೋಜನೆ ಜಾರಿ, ಸಂಪೂರ್ಣ ಮಾಹಿತಿ

|

ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಹೊಂದಿದ್ದು ಹಲವಾರು ಯೋಜನೆಗಳನ್ನು ವಿಸ್ತರಣೆ ಮಾಡಿದೆ. ಹಾಗೆಯೇ ಇತ್ತೀಚೆಗೆ ಬಜೆಟ್ ವೇಳೆ ಈ ಯೋಜನೆಯಡಿಯಲ್ಲಿ ಉಪ ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-24 ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಸಂದರ್ಭದಲ್ಲೇ ಹಲವಾರು ಯೋಜನೆಗಳ ವಿಸ್ತರಣೆ ಮತ್ತು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

 

ಈ ಹೊಸ ಯೋಜನೆಗಳ ಪೈಕಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಜಾರಿ ಮಾಡಲಾದ ಉಪ ಯೋಜನೆ ಕೂಡಾ ಒಂದಾಗಿದೆ. ಹೌದು ಕೇಂದ್ರ ಸರ್ಕಾರವು ಮೀನುಗಾರರಿಗೆ ಸಹಾಯಕವಾಗುವಂತೆ ಈ ಹಿಂದೆಯೇ ಜಾರಿ ಮಾಡಲಾಗಿರುವ ಯೋಜನೆಯಡಿಯಲ್ಲಿ ಉಪ ಯೋಜನೆಯನ್ನು ಜಾರಿ ಮಾಡಿದ್ದಾರೆ.

PM Pranam Scheme: ಏನಿದು ಪಿಎಂ ಪ್ರಣಾಮ ಯೋಜನೆ, ಇತರೆ ಮಾಹಿತಿ ಇಲ್ಲಿದೆPM Pranam Scheme: ಏನಿದು ಪಿಎಂ ಪ್ರಣಾಮ ಯೋಜನೆ, ಇತರೆ ಮಾಹಿತಿ ಇಲ್ಲಿದೆ

ಈ ಯೋಜನೆಯು ಸಮುದ್ರಾಹಾರ (ಮೀನು) ಇಂಡಸ್ಟ್ರಿಯಲ್ಲಿ 6,000 ಕೋಟಿ ಹೂಡಿಕೆ ಗುರಿಯನ್ನು ಹೊಂದಿರುವ ಯೋಜನೆ ಇದಾಗಿದೆ. ಹಾಗೆಯೇ ಮೀನುಗಾರಿಕೆ ಬಳಿಕ ನಿರ್ವಹಣೆ, ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಮೀನುಗಾರರು, ಮೀನು ಮಾರಾಟಗಾರರು, ಸ್ಥಳೀಯ ಮೀನು ಮಾರಾಟಗಾರರಿಗೆ ಮಾರುಕಟ್ಟೆಯನ್ನು ವಿಸ್ತರಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಪಿಎಂ ಮತ್ಸ್ಯ ಸಂಪದ ಯೋಜನೆ ಎಂದರೇನು?

ಪಿಎಂ ಮತ್ಸ್ಯ ಸಂಪದ ಯೋಜನೆ ಎಂದರೇನು?

ಮೀನುಗಾರಿಕಾ ವಲಯದಲ್ಲಿ ಸ್ಥಿರ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯನ್ನು ತಂದು ಭಾರತದಲ್ಲಿ ನೀಲಿ ಕ್ರಾಂತಿಯನ್ನು (ನೀಲಿ ನೀರಿನ ಪ್ರತೀಕ) ಮಾಡುವುದು ಈ ಯೋಜನೆಯ ಪ್ರಮುಖ ಉದ್ಧೇಶವಾಗಿದೆ. ಮೀನುಗಾರರ ಕಲ್ಯಾಣ ರಕ್ಷಣೆ ಸೇರಿದಂತೆ ಮೀನುಗಾರಿಕಾ ವಲಯದ ಅಭಿವೃದ್ದಿಗಾಗಿ ಈ ಯೋಜನೆಯಡಿಯಲ್ಲಿ 20050 ಕೋಟಿ ರೂಪಾಯಿ ಹೂಡಿಕೆಯ ಅಂದಾಜು ಮಾಡಲಾಗಿದೆ. ಮೀನುಗಾರಿಕೆಯಲ್ಲಿರುವ ಅಂತರ, ಮೀನು ಉತ್ಪಾದನೆ, ಉತ್ಪಾದಕತೆ, ಗುಣಮಟ್ಟ, ತಂತ್ರಜ್ಞಾನ ಬಳಕೆ, ಮೀನುಗಾರಿಕೆ ಮಾಡಿದ ಬಳಿಕ ಬೇಕಾದ ಸೌಕರ್ಯ, ಮಾರುಕಟ್ಟೆ ಇತರವುಗಳನ್ನು ನಿರ್ವಹಣೆ ಮಾಡುವ ಯೋಜನೆ ಇದಾಗಿದೆ. ಮೀನುಗಾರಿಕೆ ವಿಧಾನದಲ್ಲಿ ಆಧುನಿಕಯತೆ, ನಿರ್ವಹಣೆ ವಿಧಾನದಲ್ಲಿ ಆಧುನಿಕತೆಯನ್ನು ಒಳಗೂಡಿಸುವುದು ಕೂಡಾ ಉದ್ದೇಶವಾಗಿದೆ.

ಪಿಎಂಎಂಎಸ್‌ವೈ ಬಗ್ಗೆ ಮಾಹಿತಿ

ಪಿಎಂಎಂಎಸ್‌ವೈ ಬಗ್ಗೆ ಮಾಹಿತಿ

* ಮೀನುಗಾರಿಕಾ ವಲಯದ ಪ್ರಯೋಜನವನ್ನು ಸ್ಥಿರ, ಜವಾಬ್ದಾರಿಯುತವಾಗಿ, ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವುದು.
* ವಿಸ್ತರಣೆ, ಹೆಚ್ಚಳ, ವೈವಿಧ್ಯತೆ, ಭೂಮಿ ಮತ್ತು ನೀರಿನ ಸದ್ಬಳಕೆ ಮಾಡಿಕೊಂಡು ಮೀನು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು
* ಮೀನುಗಾರಿಕೆ ಬಳಿಕದ ನಿರ್ವಹಣೆ ಸೇರಿದಂತೆ ಗುಣಮಟ್ಟ ಹೆಚ್ಚಿಸುವುದು ಮತ್ತು ಆಧುನಿಕತೆಗೆ ಒಡ್ಡಿಕೊಳ್ಳುವುದು
* ಮೀನುಗಾರರು ಮತ್ತು ಮೀನು ಉತ್ಪಾದನೆ ಮಾಡುವ ರೈತರ ಆದಾಯವನ್ನು ಹೆಚ್ಚಿಸುವ ಕ್ರಮ, ಜೊತೆಯೇ ಉದ್ಯೋಗ ಸೃಷ್ಟಿಗೆ ಒತ್ತು
* ಕೃಷಿಗೆ ಮತ್ತು ರಫ್ತಿಗೆ ಮೀನುಗಾರಿಕಾ ವಲಯದ ಕೊಡುಗೆಯನ್ನು ಹೆಚ್ಚಿಸುವುದು
* ಮೀನುಗಾರರು ಮತ್ತು ಮೀನು ಕೃಷಿಕರ ಸಾಮಾಜಿಕ, ದೈಹಿಕ, ಆರ್ಥಿಕ ರಕ್ಷಣೆ ಮಾಡುವುದು, ಈ ಮೂಲಕ ಉತ್ತಮ ಮೀನುಗಾರಿಕಾ ನಿರ್ವಹಣೆಯನ್ನು ಸೃಷ್ಟಿಸುವುದು.

ಪ್ರಮುಖ ಗುರಿ ಯಾವುದು?
 

ಪ್ರಮುಖ ಗುರಿ ಯಾವುದು?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂಪಾಯಿಗೆ ಏರಿಸಲಾಗುವುದು ಎಂದು ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿದ್ದಾರೆ. ಪ್ರಾಣಿ ಸಾಕಾಣಿಕೆ, ಹಾಲಿನ ಡೈರಿ, ಮೀನುಗಾರಿಕೆಯ ಮೇಲೆ ಗಮನವಿಟ್ಟು ಈ ಬದಲಾವಣೆ ಮಾಡಲಾಗುತ್ತಿದೆ ಎಂದಿದ್ದಾರೆ. ಈ ಯೋಜನೆಯು ಮೀನುಗಾರಿಕಾ ಇಂಡಸ್ಟ್ರಿಯಲ್ಲಿ 6,000 ಕೋಟಿ ಹೂಡಿಕೆ ಗುರಿಯನ್ನು ಹೊಂದಿರುವ ಯೋಜನೆ ಇದಾಗಿದೆ. ಹಾಗೆಯೇ ಮೀನುಗಾರಿಕೆ ಬಳಿಕ ನಿರ್ವಹಣೆ, ಮಾರುಕಟ್ಟೆ ವಿಸ್ತರಣೆ, ಅಭಿವೃದ್ಧಿ, ಮೀನುಗಾರಿಕೆಯ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.

English summary

PM Matsya Sampada Yojana: Objectives, Benefits Other Details in Kannada

Union Budget 2023: PM Matsya Sampada Yojana: Objectives, Benefits Other Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X