For Quick Alerts
ALLOW NOTIFICATIONS  
For Daily Alerts

5ಜಿಗೆ ಪ್ರಧಾನಿ ಚಾಲನೆ: ಎಲ್ಲ ಸ್ಮಾರ್ಟ್‌ಫೋನ್‌ನಲ್ಲಿ ಸೇವೆ ಲಭ್ಯವೇ?

|

ದೆಹಲಿಯಲ್ಲಿ ನಡೆದ ಟೆಲಿಕಾಂ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ 5ಜಿ ಸೇವೆಗೆ ಚಾಲನೆ ನೀಡಿದರು. ಈ ಸೇವೆಯು ಮುಂದಿನ ಒಂದೆರಡು ವರ್ಷಗಳಲ್ಲಿ ಇಡೀ ದೇಶದಲ್ಲಿ ಇರಲಿದೆ. ಪ್ರದರ್ಶನ ಉದ್ಘಾಟನೆ ಮಾಡಿದ ಬಳಿಕ ಪ್ರಧಾನಿ ಮೋದಿ ಟೆಲಿಕಾಂ ಆಪರೇಟರ್‌ಗಳು ಮತ್ತು ತಂತ್ರಜ್ಞಾನ ಪೂರೈಕೆದಾರರು ಸ್ಥಾಪಿಸಿದ ಡೆಮೋಗಳನ್ನು ನೋಡಿದರು.

 

5ಜಿ ಅಲ್ಟ್ರಾ ಸ್ಪೀಡ್ ಇಂಟರ್‌ನೆಟ್ ಆಗಿದ್ದು, ಈ ಸೇವೆ ಆರಂಭದ ಬಳಿಕ ಮೊಬೈಲ್ ಫೋನ್‌ನಲ್ಲಿ ಇಂಟರ್‌ನೆಟ್ ಬಳಕೆ ಸ್ಪೀಡ್ ಅಧಿಕವಾಗಲಿದೆ. ಪ್ರಥಮವಾಗಿ ಈ ಸೇವೆಯನ್ನು 13 ನಗರಗಳಲ್ಲಿ ಆರಂಭ ಮಾಡಲಾಗಿದೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಚಂಡೀಗಢ, ಗುರುಗ್ರಾಮ, ಹೈದಾರಾಬಾದ್, ಲಕ್ನೋ, ಪುಣೆ, ಗಾಂಧಿನಗರ, ಅಹಮದಾಬಾದ್, ಜಮ್ನನಗರ್‌ನಲ್ಲಿ ಸೇವೆಯು ಆರಂಭವಾಗಲಿದೆ.

ಇನ್ನು ನಾಲ್ಕು ದಿನಗಳ ಕಾಲ ನಡೆಯುವ ಭಾರತ ಮೊಬೈಲ್ ಕಾಂಗ್ರೆಸ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಇದರಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಪ್ರಮುಖ ಟೆಲಿಕಾಂ ಪೂರೈಕೆದಾರರು ತಮ್ಮ 5G ಯೋಜನೆಗಳನ್ನು ಪ್ರಸ್ತುತಪಡಿಸಲಿವೆ. ಇನ್ನು ಈಗಾಗಲೇ ಈ ಹಿಂದೆ ಆಗಸ್ಟ್‌ನಲ್ಲಿ 5ಜಿ ಸೇವೆಯನ್ನು ಆರಂಭ ಮಾಡಲಾಗುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

 5ಜಿ ಎಂದರೇನು?

5ಜಿ ಎಂದರೇನು?

ದೇಶದಲ್ಲಿ 5ಜಿ ಸ್ಪೆಕ್ಟ್ರಮ್ ಹರಾಜು ನಡೆದಿದ್ದು, ಜಿಯೋ ಅತಿ ಹೆಚ್ಚು ಬಿಡ್‌ ಮಾಡಿದೆ. ಏರ್‌ಟೆಲ್ ಮತ್ತು ವೊಡಾಫೋನ್ ನಂತರದ ಸ್ಥಾನದಲ್ಲಿವೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ 5ಜಿ ಸ್ಪೆಕ್ಟ್ರಮ್‌ನ ಹರಾಜಿನಲ್ಲಿ ಭಾಗಿಯಾಗಿದೆ. 100MHz ಅತೀ ಕಡಿಮೆ ಬ್ಯಾಂಡ್ ಆಗಿದ್ದು, 2.3GHz ಮಧ್ಯಮ ಬ್ಯಾಂಡ್ ಆಗಿದೆ. ಅದಕ್ಕಿಂತ ಅಧಿಕ ಬ್ಯಾಂಡ್‌ಗಳು ಕೂಡಾ ಇದೆ. ಮಧ್ಯಮ ಬ್ಯಾಂಡ್‌ನಲ್ಲಿಯೇ ಉತ್ತಮ ನೆಟ್‌ವರ್ಕ್ ಲಭ್ಯವಾಗಲಿದೆ. 5ಜಿ ನೆಟ್‌ವರ್ಕ್ 4ಜಿ ನೆಟ್‌ವರ್ಕ್‌ಗಿಂತಲೂ ಸ್ಪೀಡ್ ಆಗಿರುತ್ತದೆ. ನೀವು ಯಾವುದೇ ಸಿನಿಮಾ, ವಿಡಿಯೋ, ಆಪ್ ಡೌನ್‌ಲೋಡ್ ಅನ್ನು ಶೀಘ್ರವಾಗಿ ಮಾಡಲು ಸಾಧ್ಯವಾಗಲಿದೆ. ಇದು ಪ್ರತಿ ಸೆಕೆಂಡಿಗೆ 10 ಜಿಬಿ (gigabyte) ವೇಗದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಭಾರತದಲ್ಲಿ ಪ್ರಸ್ತುತವಿರುವ 4ಜಿ ಡೌನ್‌ಲೋಡ್‌ ಸ್ಪೀಡ್‌ಗಿಂತ ನೂರು ಪಟ್ಟು ಅಧಿಕ ವೇಗವನ್ನು 5ಜಿ ನೆಟ್‌ವರ್ಕ್ ಹೊಂದಿರಲಿದೆ. ಪ್ರಸ್ತುತ 4ಜಿಯಲ್ಲಿ 21 Mbps (megabits per second) ವೇಗವಿದೆ ಎಂದು ಭಾರತದ ಟೆಲಿಕಾಂ ರೆಗ್ಯೂಲೇಟರ್ ಅಥಾರಿಟಿ ಹೇಳಿದೆ.

 ಭಾರತದಲ್ಲಿ 5ಜಿ ಆರಂಭಿಸುವುದು ಯಾರು?
 

ಭಾರತದಲ್ಲಿ 5ಜಿ ಆರಂಭಿಸುವುದು ಯಾರು?

ಭಾರತದಲ್ಲಿ ಪ್ರಮುಖವಾಗಿ ಮೂರು ಟೆಲಿಕಾಂ ಅಪರೇಟರ್‌ಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಹಾಗೂ ವೊಡಾಫೋನ್ 5ಜಿ ಸೇವೆಯನ್ನು ಆರಂಭ ಮಾಡುತ್ತದೆ. ಏರ್‌ಟೆಲ್ ಪ್ರಮುಖವಾಗಿ ಎಂಟು ನಗರಗಳಲ್ಲಿ 5ಜಿ ಸೇವೆಯನ್ನು ಅಕ್ಟೋಬರ್ 1ರಿಂದ ಆರಂಭ ಮಾಡುತ್ತದೆ. ಇದರಲ್ಲಿ 4 ಮೆಟ್ರೋ ಸಿಟಿಗಳು ಆಗಿದೆ. ಮಾರ್ಚ್ 2024ರ ಒಳಗೆ ದೇಶದ ಎಲ್ಲ ನಗರಗಳಲ್ಲಿ 5ಜಿ ಸೇವೆ ಆರಂಭ ಮಾಡಲಾಗುತ್ತದೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ. ಇನ್ನು 5ಜಿ ಚಾಲನೆ ಸಮಾರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮಾತನಾಡಿ ಡಿಸೆಂಬರ್ 2023ರ ಒಳಗೆ ಅಗ್ಗ ದರದಲ್ಲಿ 5ಜಿ ಸೇವೆಯನ್ನು ಆರಂಭ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

 ರಿಚಾರ್ಜ್ ದರ ಎಷ್ಟಾಗಬಹುದು?

ರಿಚಾರ್ಜ್ ದರ ಎಷ್ಟಾಗಬಹುದು?

3ಜಿಗಿಂತ ಅಪ್‌ಡೇಟ್ ನೆಟ್‌ವರ್ಕ್ 4ಜಿ ಆರಂಭವಾದಾಗ ನಾವು 3ಜಿ ರಿಚಾರ್ಜ್‌ಗೆ ಮಾಡುತ್ತಿದ್ದ ವೆಚ್ಚಕ್ಕಿಂತ ಅಧಿಕ ವೆಚ್ಚವನ್ನು 4ಜಿಗೆ ಮಾಡಬೇಕಾಗಿ ಬಂದಿದೆ. ಆದರೆ ನೆಟ್‌ವರ್ಕ್ ಸ್ಪೀಡ್ ಅಧಿಕವಾಗಿದೆ. ಇನ್ನು 5ಜಿ ಸೇವೆಗೆ ಎಷ್ಟು ರಿಚಾರ್ಜ್ ಮೊತ್ತ ನಿಗದಿ ಮಾಡಲಾಗುವುದು ಎಂಬ ಬಗ್ಗೆ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್, ಮೊದಲಾದ ಸಂಸ್ಥೆಗಳು ಬಹಿರಂಗಪಡಿಸಿಲ್ಲ. ಆದರೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ ದೇಶದಲ್ಲಿ ಆರಂಭವಾಗುವ 5ಜಿ ಸೇವೆಯ ರಿಚಾರ್ಜ್ ಮೊತ್ತ 4ಜಿಗೆ ಸಮನಾಗಿಯೇ ಇರಲಿದೆ. ಇನ್ನು 5ಜಿ ಅಗ್ಗವಾಗಿಯೇ ಇರಲಿದೆ ಎಂದು ಇಂದು ಮಾತನಾಡುತ್ತಾ ಮುಕೇಶ್ ಅಂಬಾನಿ ಹೇಳಿದ್ದಾರೆ.

 ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ 5ಜಿ ಸೇವೆ ಲಭ್ಯವೇ?

ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ 5ಜಿ ಸೇವೆ ಲಭ್ಯವೇ?

5ಜಿ ಸೇವೆಯನ್ನು ಬಳಕೆ ಮಾಡಲು ಅಪ್‌ಡೇಟ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು 5ಜಿ ನೆಟ್‌ವರ್ಕ್ ಅನ್ನು ಸುಲಭವಾಗಿ ಬಳಕೆ ಮಾಡಲು ಸಾಧ್ಯವಾಗಲಿದೆ. ಆಪಲ್, ಸ್ಯಾಮ್‌ಸಂಗ್, ಓಪೊ, ವಿವೋ, ರಿಯಲ್‌ಮಿ ಸೇರಿದಂತೆ ಎಲ್ಲ ಸ್ಮಾರ್ಟ್‌ಫೋನ್‌ ಸಂಸ್ಥೆಗಳು 5ಜಿ ಸೆಟ್ ಅನ್ನು ಮಾರಾಟ ಮಾಡುತ್ತಿದೆ. ಈಗಾಗಲೇ ಹಲವಾರು ಮಂದಿ ಈ ಅಪ್‌ಡೇಟೆಡ್ ವರ್ಜನ್‌ ಅನ್ನೇ ಬಳಕೆ ಮಾಡುತ್ತಿದ್ದಾರೆ.

English summary

PM Modi Launches 5G In India, Will All The Smartphones Support 5G Service

prime minister narendra modi Launches 5G In India, What is 5g, Will All The Smartphones Support 5G Service, what mukesh ambani said, explained in kannada.
Story first published: Saturday, October 1, 2022, 16:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X