For Quick Alerts
ALLOW NOTIFICATIONS  
For Daily Alerts

ಭವಿಷ್ಯ ನಿಧಿ: ಶೀಘ್ರವೇ ಖಾತೆಗೆ ಬಡ್ಡಿ ಕ್ರೆಡಿಟ್, ಚೆಕ್ ಮಾಡೋದು ಹೇಗೆ?

|

ಕಾರ್ಮಿಕ ಸಚಿವಾಲಯ ಕಳೆದ ತಿಂಗಳು ಹೊರಡಿಸಿದ ಪ್ರಕಟಣೆಯಂತೆ ಭವಿಷ್ಯನಿಧಿ ಸಂಘಟನೆ(EPFO) ಶೀಘ್ರವೇ ಖಾತೆಗಳಿಗೆ ಬಡ್ಡಿ ಹಣವನ್ನು ರವಾನೆ ಮಾಡುವ ಸುದ್ದಿ ಬಂದಿದೆ. ವರ್ಷಾರಂಭದಲ್ಲೇ ಬಡ್ಡಿಮೊತ್ತ ಕ್ರೆಡಿಟ್ ಆಗುವ ಬಗ್ಗೆ ಮಾಹಿತಿ ಬಂದಿತ್ತು. ಫೆಬ್ರವರಿ ತಿಂಗಳಲ್ಲಿ ಸುಮಾರು 14.12 ಲಕ್ಷ ನಿವ್ವಳ ಚಂದಾದಾರರನ್ನು ಇಪಿಎಫ್ಒ ಪಡೆದುಕೊಂಡಿದೆ.

ದೇಶದ ಎಲ್ಲಾ ಉದ್ಯೋಗಿಗಳು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಖಾತೆಯನ್ನು ಹೊಂದಬೇಕಾದ್ದು ಅನಿವಾರ್ಯ. ನಿವೃತ್ತಿಯ ನಂತರ ಆದಾಯದ ಮೂಲವಾಗಿ ಭವಿಷ್ಯ ನಿಧಿ ಕಾರ್ಯನಿರ್ವಹಿಸುತ್ತದೆ. ಪ್ರತಿ ತಿಂಗಳು, ಉದ್ಯೋಗಿಯ ಸಂಬಳದಿಂದ ನಿರ್ದಿಷ್ಟ ಮೊತ್ತದ ಹಣವನ್ನು ಕಡಿತಗೊಳಿಸಲಾಗುತ್ತಿದೆ ಮತ್ತು ಅದು ಅವರ ಖಾತೆಗೆ ಜಮೆಯಾಗುತ್ತದೆ.

EPFO Alert: ಬಡ್ಡಿದರ ಶೇ.8.5ರಿಂದ 8.1ಕ್ಕೆ ಇಳಿಕೆEPFO Alert: ಬಡ್ಡಿದರ ಶೇ.8.5ರಿಂದ 8.1ಕ್ಕೆ ಇಳಿಕೆ

ಭವಿಷ್ಯ ನಿಧಿ ಖಾತೆದಾರರಿಗೆ ವಾರ್ಷಿಕ ಶೇ 8.5 ರಷ್ಟು ಬಡ್ಡಿದರವನ್ನು ಒದಗಿಸುತ್ತದೆ ಎಂದು EPFO ಪ್ರಕಟಿಸಿದೆ. ಈ ಬಾರಿ, ಬಡ್ಡಿಮೊತ್ತ ಖಾತೆಗೆ ಜಮೆಯಾಗುವುದನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಆದ್ದರಿಂದ, ಪಿಎಫ್ ಖಾತೆದಾರರು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಅವರು ಅದನ್ನು ಹಲವು ವಿಧಗಳಲ್ಲಿ ಪರಿಶೀಲಿಸಬಹುದು.

ಭವಿಷ್ಯ ನಿಧಿ: ಶೀಘ್ರವೇ ಖಾತೆಗೆ ಬಡ್ಡಿ ಕ್ರೆಡಿಟ್, ಚೆಕ್ ಮಾಡೋದು ಹೇಗೆ

ಉಮಂಗ್ ಅಪ್ಲಿಕೇಷನ್, ಎಸ್ಎಂಎಸ್, ಮಿಸ್ಡ್ ಕಾಲ್ಡ್ ಹಾಗೂ ಆನ್ ಲೈನ್ ಮೂಲಕ ಖಾತೆ ಪರೀಕ್ಷಿಸಿಕೊಳ್ಳಬಹುದು.

ಉಮಂಗ್(UMANG) ಆಪ್‌ನಲ್ಲಿ ಬ್ಯಾಲೆನ್ಸ್ ಚೆಕ್ ಹೇಗೆ?

* Unified Mobile Application for New-age Governance(UMANG) ಅಪ್ಲಿಕೇಷನ್ ಓಪನ್ ಮಾಡಿ EPFO ಕ್ಲಿಕ್ ಮಾಡಿ
* ಹೊಸ ಪುಟದಲ್ಲಿ employee centric services ಕ್ಲಿಕ್ ಮಾಡಿ
* ನಂತರ ಪಾಸ್ ಬುಕ್ ಓಪನ್ ಮಾಡಿ, ನಿಮ್ಮ UAN ಸಂಖ್ಯೆ ಹಾಗೂ ಪಾಸ್ ವರ್ಡ್ ನಮೂದಿಸಿ
* ನಿಮ್ಮ ನೋಂದಾಯಿತ ಮೊಬೈಲ್ ಫೋನ್‌ಗೆ ಒಟಿಪಿ ಬರಲಿದೆ. ಅಗತ್ಯ ಬಿದ್ದಾಗ ಒಟಿಪಿ ಹಾಕಿ, ಬ್ಯಾಲೆನ್ಸ್ ಚೆಕ್ ಮಾಡಿ.\
ವೆಬ್ ತಾಣದ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಹೇಗೆ?

ಇಪಿಎಫ್ ಅಧಿಕೃತ ವೆಬ್ ತಾಣ www.epfindia.gov.in ಕ್ಕೆ ಲಾಗಿನ್ ಆಗಿ
Our Services ಅಡಿಯಲ್ಲಿರುವ 'For Employees' ಆಯ್ಕೆ ಮಾಡಿಕೊಳ್ಳಿ
Services ಆಯ್ಕೆ ಮಾಡಿಕೊಂಡು Member Passbook ಓಪನ್ ಮಾಡಿ ಅಲ್ಲಿ UAN ಸಂಖ್ಯೆ ಹಾಗೂ ಪಾಸ್ ವರ್ಡ್ ಹಾಕಿ.

ಈ ಸೌಲಭ್ಯ ಬಳಸಲು ನಿಮ್ಮ UAN ನಂಬರ್ ಸಕ್ರಿಯವಾಗಿರಬೇಕು. ನಿಮ್ಮ ಉದ್ಯೋಗದಾತರು ನಿಮ್ಮ ಖಾತೆಗೆ UAN ಜೋಡಣೆ ಮಾಡಿರಬೇಕು.

ಪಿಎಫ್ ಖಾತೆ ನಂಬರ್, ಹೆಸರು ಹಾಗೂ ನೋಂದಾಯಿತ ಸೆಲ್ ಫೋನ್ ನಂಬರ್ ನಮೂದಿಸಿ, ನಿಮ್ಮ ಪಿಎಫ್ ಖಾತೆ ಬ್ಯಾಲೆನ್ಸ್ ತಿಳಿಯಲಿದೆ.

ನಿಮ್ಮ ನೋಂದಾಯಿತ ಮೊಬೈಲ್ ಫೋನ್ ನಿಂದ 011-22901406 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಇದಕ್ಕೂ ಮುನ್ನ ಯುಎಎನ್ ಹಾಗೂ ಪ್ಯಾನ್ ಜೋಡಣೆ ಆಗಿರುಬೇಕು.

English summary

Provident Fund Alert: EPFO Likely to Credit Interest Rate Soon: Here’s How To Check PF Balance

The Employees Provident Fund Organisation had in February this year added over 14 lakh members which were 4 per cent more than 12.37 lakh enrolled in the same month a year ago.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X