For Quick Alerts
ALLOW NOTIFICATIONS  
For Daily Alerts

ರೆಪೋ ದರ ಏರಿಕೆ ಬಳಿಕ ಎಸ್‌ಬಿಐ, ಪಿಎನ್‌ಬಿ, ಬಿಒಬಿ ಎಫ್‌ಡಿ ಬಡ್ಡಿದರ ಎಷ್ಟಿದೆ?

|

ಫಿಕ್ಸಿಡ್ ಡೆಪಾಸಿಟ್ ಅಥವಾ ಎಫ್‌ಡಿ ಅತೀ ಸುರಕ್ಷಿತವಾದ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಇದು ಅತೀ ಹೆಚ್ಚು ಜನಪ್ರಿಯ ಹೂಡಿಕೆ ಆಯ್ಕೆ ಕೂಡಾ ಹೌದು. ಇನ್ನು ಹೆಚ್ಚಾಗಿ ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಅತೀ ಉತ್ತಮ ಆಯ್ಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಸಾಮಾನ್ಯ ಜನರಿಗಿಂತ ಎಫ್‌ಡಿ ಮೇಲೆ ಅಧಿಕ ಬಡ್ಡಿದರ ಹಿರಿಯ ನಾಗರಿಕರಿಗೆ ಲಭ್ಯವಾಗುತ್ತದೆ.

ಆದರೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರೆಪೋ ದರದ ಮೇಲೆ ಅವಲಂಬಿತವಾಗಿರುತ್ತದೆ. ಆರ್‌ಬಿಐ ಇತ್ತೀಚೆಗೆ ಮತ್ತೆ ರೆಪೋ ದರವನ್ನು ಏರಿಕೆ ಮಾಡಿದೆ. ಸಾಮಾನ್ಯವಾಗಿ ಆರ್‌ಬಿಐ ರೆಪೋ ದರದಲ್ಲಿ ಮಾಡುವ ಬದಲಾವಣೆಯು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರದ ಮೇಲೆ ಪರಿಣಾಮ ಬೀರುತ್ತದೆ. ರೆಪೋ ದರ ಏರಿಕೆಯಾದರೆ ಎಫ್‌ಡಿ ಬಡ್ಡಿದರ ಹೆಚ್ಚಾಗುತ್ತದೆ, ರೆಪೋ ದರ ಇಳಿಕೆಯಾದರೆ ಎಫ್‌ಡಿ ಬಡ್ಡಿದರವೂ ಇಳಿಕೆಯಾಗುತ್ತದೆ.

ಪಿಎನ್‌ಬಿ ಎಫ್‌ಡಿ ಬಡ್ಡಿದರ ಹೆಚ್ಚಳ: ಇಲ್ಲಿದೆ ನೂತನ ದರ ಪಟ್ಟಿಪಿಎನ್‌ಬಿ ಎಫ್‌ಡಿ ಬಡ್ಡಿದರ ಹೆಚ್ಚಳ: ಇಲ್ಲಿದೆ ನೂತನ ದರ ಪಟ್ಟಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ರೆಪೋ ದರವನ್ನು ಮತ್ತೆ ಏರಿಕೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ಈ ರೆಪೋ ದರ ಏರಿಕೆಯ ಬೆನ್ನಲ್ಲೇ ಪ್ರಮುಖ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿದರ ಎಷ್ಟಿದೆ, ಯಾವುದು ಉತ್ತಮ ಎಂಬುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...

 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 211 ದಿನದಿಂದ 1 ವರ್ಷದ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 4.60ರಷ್ಟು ಇದೆ. ಹಿರಿಯ ನಾಗರಿಕರಿಗೆ ಶೇಕಡ 4.60ರಷ್ಟು ಬಡ್ಡಿದರವಿದೆ. 1 ವರ್ಷದಿಂದ ಎರಡು ವರ್ಷದ ಅವಧಿಗೆ ಸಾಮಾನ್ಯ ನಾಗರಿಕರುಗೆ ಶೇಕಡ 5.30ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 5.80ರಷ್ಟು ಬಡ್ಡಿದರವಿದೆ. 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 5.35ರಷ್ಟು ಬಡ್ಡಿದರ ಹಾಗೂ ಹಿರಿಯ ನಾಗರಿಕರಿಗೆ ಶೇಕಡ 5.85ರಷ್ಟು ಬಡ್ಡಿದರವಿದೆ. ಮೂರು ವರ್ಷದಿಂದ ಐದು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 5.45ರಷ್ಟು ಹಿರಿಯ ನಾಗರಿಕರಿಗೆ ಶೇಕಡ 5.95ರಷ್ಟು ಬಡ್ಡಿದರ. 5 ವರ್ಷದಿಂದ 10 ವರ್ಷದವರೆಗಿನ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 5.50ರಷ್ಟು ಹಿರಿಯ ನಾಗರಿಕರಿಗೆ ಶೇಕಡ 6.30ರಷ್ಟು ಬಡ್ಡಿದರವಿದೆ. ಎರಡು ಕೋಟಿಗಿಂತ ಕಡಿಮೆ ಮೊತ್ತದ ಡೊಮೆಸ್ಟಿಕ್ ಟರ್ಮ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಈ ಹಿಂದೆ ಪರಿಷ್ಕರಣೆ ಮಾಡಲಾಗಿದೆ.

ಎಫ್‌ಡಿ ಬಡ್ಡಿದರ ಏರಿಕೆ ಮಾಡಿದ ಇಂಡಿಯನ್ ಬ್ಯಾಂಕ್ಎಫ್‌ಡಿ ಬಡ್ಡಿದರ ಏರಿಕೆ ಮಾಡಿದ ಇಂಡಿಯನ್ ಬ್ಯಾಂಕ್

 ಪಂಜಾಬ್ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್

1 ವರ್ಷ 2 ವರ್ಷದ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 5.45ರಷ್ಟು ಬಡ್ಡಿದರ, ಹಿರಿಯ ನಾಗರಿಕರಿಗೆ 5.95ರಷ್ಟು ಇದೆ. 2 ವರ್ಷದಿಂದ 3 ವರ್ಷದವರೆಗಿನ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 5.50ರಷ್ಟು ಹಾಗೂ ಹಿರಿಯ ನಾಗರಿಕರಿಗೆ 6.00ರಷ್ಟು ಬಡ್ಡಿದರವಿದೆ. 3 ವರ್ಷದಿಂದ 5 ವರ್ಷದವರೆಗಿನ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 5.75ರಷ್ಟು ಬಡ್ಡಿದರ ಹಾಗೂ ಹಿರಿಯ ನಾಗರಿಕರಿಗೆ ಶೇಕಡ 6.25ರಷ್ಟು ಬಡ್ಡಿದರವಿದೆ. 5 ವರ್ಷದಿಂದ 10 ವರ್ಷದವರೆಗಿನ ಎಫ್‌ಡಿ ಮೇಲೆ ಶೇಕಡ 5.60ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 6.10ರಷ್ಟು ಬಡ್ಡಿದರವಿದೆ. 271 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 4.50ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 5.00ರಷ್ಟು ಬಡ್ಡಿದರವಿದೆ.

 ಬ್ಯಾಂಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಬರೋಡಾ

1 ವರ್ಷದ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 5.30ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇಕಡ 5.80ರಷ್ಟು ಬಡ್ಡಿದರವಿದೆ. 1 ವರ್ಷದಿಂದ 400 ದಿನಗಳ ಎಫ್‌ಡಿ ಮೇಲೆ ಶೇಕಡ 5.45ರಷ್ಟು, ಹಿರಿಯ ನಾಗರಿಕರಿಗೆ ಶೇಕಡ 5.95ರಷ್ಟ ಬಡ್ಡಿದರವಿದೆ. 400 ದಿನದಿಂದ 2 ವರ್ಷದವರೆಗಿನ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇಕಡ 5.45 ಹಿರಿಯ ನಾಗರಿಕರಿಗೆ ಶೇಕಡ 5.95ರಷ್ಟ ಬಡ್ಡಿದರವಿದೆ. 2 ವರ್ಷದಿಂದ 3 ವರ್ಷದವರೆಗಿನ ಎಫ್‌ಡಿ ಮೇಲೆ ಶೇಕಡ 5.50ರಷ್ಟು, ಹಿರಿಯ ನಾಗರಿಕರಿಗೆ ಶೇಕಡ 6.00ರಷ್ಟು ಬಡ್ಡಿದರವಿದೆ. 3 ವರ್ಷದಿಂದ 5 ವರ್ಷದವರೆಗಿನ ಎಫ್‌ಡಿ ಮೇಲೆ ಶೇಕಡ 5.50ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇಕಡ 6.15ರಷ್ಟು ಬಡ್ಡಿದರವಿದೆ. 5 ವರ್ಷದಿಂದ 10 ವರ್ಷದವರೆಗಿನ ಎಫ್‌ಡಿ ಮೇಲೆ ಶೇಕಡ 5.50ರಷ್ಟು, ಹಿರಿಯ ನಾಗರಿಕರಿಗೆ ಶೇಕಡ 6.50ರಷ್ಟು ಬಡ್ಡಿದರವಿದೆ.

 ಎಫ್‌ಡಿ ಬಡ್ಡಿದರ ಹೋಲಿಕೆ

ಎಫ್‌ಡಿ ಬಡ್ಡಿದರ ಹೋಲಿಕೆ

ಈ ಮೇಲೆ ಉಲ್ಲೇಖ ಮಾಡಲಾದ ಬ್ಯಾಂಕ್ ಟಾಪ್ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಆಗಿದೆ. ನಾವಿಲ್ಲಿ ಅಧಿಕ ಅವಧಿಯ ಹೂಡಿಕೆ ಮೇಲಿನ ಬಡ್ಡಿದರದ ಬಗ್ಗೆ ಮಾಹಿತಿ ನೀಡಿದ್ದೇವೆ. ಎಫ್‌ಡಿ ಬಡ್ಡಿದರವು ಎಂದಿಗೂ ಆರ್‌ಬಿಐ ಬಡ್ಡಿದರದ ಮೇಲೆ ಅವಲಂಭಿತವಾಗಿರುತ್ತದೆ. ಆದ್ದರಿಂದಾಗಿ ಹೂಡಿಕೆದಾರರು ಅಧಿಕ ಎಚ್ಚರವಾಗಿರುವುದು ಮುಖ್ಯವಾಗಿದೆ. ನಾವು ಎಂದಿಗೂ ಕಡಿಮೆ ಅವಧಿಯ ಎಫ್‌ಡಿ ಮೇಲೆ ಹೂಡಿಕೆ ಮಾಡುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಪ್ರಸ್ತುತ ಹಣದುಬ್ಬರವು ದೇಶದಲ್ಲಿ ತೀವ್ರ ಅಧಿಕವಾಗಿದೆ. ಆದ್ದರಿಂದಾಗಿ ಹೂಡಿಕೆದಾರರು ಪರಿಸ್ಥಿತಿಯನ್ನು ಅವಲೋಕಿಸಿ ಹೂಡಿಕೆ ಮಾಡುವುದು ಉತ್ತಮ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 5-10 ವರ್ಷ, ಸಾಮಾನ್ಯ ಜನರಿಗೆ ಶೇಕಡ 5.50, ಹಿರಿಯ ನಾಗರಿಕರಿಗೆ ಶೇಕಡ 6.30
ಪಂಜಾಬ್ ನ್ಯಾಷನಲ್ ಬ್ಯಾಂಕ್: 3-5 ವರ್ಷ, ಸಾಮಾನ್ಯ ಜನರಿಗೆ ಶೇಕಡ 5.75, ಹಿರಿಯ ನಾಗರಿಕರಿಗೆ ಶೇಕಡ 6.25
ಬ್ಯಾಂಕ್ ಆಫ್ ಬರೋಡಾ: 3-5 ವರ್ಷ, ಸಾಮಾನ್ಯ ಜನರಿಗೆ ಶೇಕಡ 5.50, ಹಿರಿಯ ನಾಗರಿಕರಿಗೆ ಶೇಕಡ 6.15

English summary

RBI Repo Rate Hike: Comparing SBI, PNB, & BOB Fixed Deposit (FD) Interest Rates

Comparing SBI, PNB, & Bank Of Baroda Fixed Deposit (FD) Interest Rates Post RBI Repo Rate Hike, Read on.
Story first published: Wednesday, August 10, 2022, 16:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X