For Quick Alerts
ALLOW NOTIFICATIONS  
For Daily Alerts

ಜಿಯೋ V/S ಏರ್‌ಟೆಲ್ V/S ವೊಡಾಫೋನ್ ಐಡಿಯಾ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್‌?

|

ಇತ್ತೀಚೆಗಷ್ಟೇ ರಿಲಯನ್ಸ್ ಜಿಯೋ ತನ್ನ ವಾರ್ಷಿಕ ಪ್ಲಾನ್‌ಗಳಲ್ಲಿ ಬದಲಾವಣೆ ತಂದಿದೆ. ಭಾರತದ ಅಗ್ರಮಾನ್ಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆ ನೀಡಿದ್ದು, ವಾರ್ಷಿಕವಾಗಿ ಹೊಸ ಪ್ಲಾನ್ ಜಾರಿ ಮಾಡಿದೆ.

 

ಕಳೆದ ವರ್ಷ ಪ್ರತಿನಿತ್ಯ 1.5ಜಿಬಿ ಡೇಟಾ ನೀಡುವ ವಾರ್ಷಿಕ ಪ್ಲಾನ್‌ಗೆ 2,020 ರುಪಾಯಿ ದರವಿತ್ತು. ಆದರೆ ಈಗ ಜಿಯೋ ಈ ಪ್ಲಾನ್‌ ದರ ಬದಲಿಸಿದ್ದು 101 ರುಪಾಯಿ ಏರಿಸಿ 2,121 ರುಪಾಯಿ ದರ ವಿಧಿಸಿದೆ.

ರಿಲಯನ್ಸ್ ಜಿಯೋನ ಪ್ರತಿಸ್ಪರ್ಧಿಗಳಾದ ವೊಡಾಫೋನ್-ಐಡಿಯಾ ಮತ್ತು ಏರ್‌ಟೆಲ್ ಸಹ ಇದೇ ರೀತಿಯ ಪ್ಯಾಕೇಜ್‌ಗಳನ್ನು ನೀಡುತ್ತವೆ. ಆದರೆ ಪ್ರತಿಯೊಂದು ಕಂಪನಿಗಳು ತಮ್ಮದೇ ಆದ ಯುಎಸ್‌ಪಿ ಹೊಂದಿದೆ. ಹಾಗಿದ್ದರೆ ಈ ಮೂರು ನೆಟ್‌ವರ್ಕ್‌ನ ವಾರ್ಷಿಕ ಯೋಜನೆಗಳಲ್ಲಿ ಯಾವುದು ಬೆಸ್ಟ್‌ ಎಂಬುದರ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಪ್ರತಿ ಪೂರೈಕೆದಾರರು ಒಂದೇ ಅವಧಿಗೆ ಎರಡು ಡೇಟಾ ಯೋಜನೆಗಳನ್ನು ಹೊಂದಿದ್ದಾರೆ.

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ

ವೋಡಾಫೋನ್ ಐಡಿಯಾ ವಾರ್ಷಿಕವಾಗಿ 2 ಪ್ಲಾನ್‌ಗಳನ್ನು ಹೊಂದಿದ್ದು 2,399 ರುಪಾಯಿ ಮತ್ತು 1,499 ರುಪಾಯಿಯನ್ನು ಒಳಗೊಂಡಿದೆ. 2,399 ರುಪಾಯಿ ಪ್ಲಾನ್‌ ಬಳಕೆದಾರರಿಗೆ ಹೆಚ್ಚಿನ ಡೇಟಾ ಒದಗಿಸಿದರೆ, 1,499 ರುಪಾಯಿ ಪ್ಲಾನ್‌ ನಿಗಿದಿತ ಡೇಟಾವನ್ನು ಹೊಂದಿದೆ.

2,399 ರುಪಾಯಿ ಯೋಜನೆಯಲ್ಲಿ 365 ದಿನಗಳೂ 1.5 ಜಿಬಿ ಡೇಟಾ ಸಿಗಲಿದೆ. ಹಾಗೂ ಪ್ರತಿದಿನ 100 SMS ಸೇವೆ ಹೊಂದಿದೆ. ಆದರೆ ಮತ್ತೊಂದು ಯೋಜನೆಯು 365 ದಿನಗಳಿಗೆ 24 ಜಿಬಿ ಡೇಟಾ ಹಾಗೂ ವಾರ್ಷಿಕವಾಗಿ 3600 SMS ಸೇವೆ ನೀಡುತ್ತದೆ.

ಈ ಎರಡು ವ್ಯತ್ಯಾಸಗಳ ಹೊರತಾಗಿ, ಎರಡು ಡೇಟಾ ಯೋಜನೆಗಳು ಒಂದೇ ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಈ ಯೋಜನೆಗಳನ್ನು ಹೊಂದಿರುವ ವೊಡಾಫೋನ್ ಚಂದಾದಾರರಿಗೆ 499 ಮೌಲ್ಯದ ವೊಡಾಫೋನ್ ಪ್ಲೇ ಮತ್ತು 999 ಮೌಲ್ಯದ ಜೀ5 ಚಂದಾದಾರಿಕೆಯನ್ನು ನೀಡಲಾಗುವುದು. ಯಾವುದೇ ನೆಟ್‌ವರ್ಕ್‌ನಲ್ಲಿ ಬಳಕೆದಾರರು ಅನಿಯಮಿತ ಸ್ಥಳೀಯ ಮತ್ತು ರಾಷ್ಟ್ರೀಯ ಕರೆಗಳನ್ನು ಸಹ ಪಡೆಯುತ್ತಾರೆ.

 

ಏರ್‌ಟೆಲ್ ವಾರ್ಷಿಕ ಯೋಜನೆ

ಏರ್‌ಟೆಲ್ ವಾರ್ಷಿಕ ಯೋಜನೆ

ಏರ್‌ಟೆಲ್ ವಾರ್ಷಿಕ ಯೋಜನೆಗಳು ವೊಡಾಫೋನ್‌ನ ಎರಡು ಡೇಟಾ ಯೋಜನೆಗಳಿಗಿಂತ ಹೆಚ್ಚು ವ್ಯತ್ಯಾಸವಿಲ್ಲ. 1,498 ಮತ್ತು 2,398 ರುಪಾಯಿ ಯೋಜನೆಗಳನ್ನು ಒಳಗೊಂಡಿದೆ. 1,498 ಪ್ಲಾನ್‌ನಲ್ಲಿ 365 ದಿನಗಳಿಗೆ 24 ಜಿಬಿ ಡೇಟಾ ಹಾಗೂ ವಾರ್ಷಿಕವಾಗಿ 3600 SMS ಸೌಲಭ್ಯವಿದೆ.

2,398 ರುಪಾಯಿ ಪ್ಲಾನ್‌ನಲ್ಲಿ ವಾರ್ಷಿಕವಾಗಿ ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ. ಹಾಗೂ ಪ್ರತಿದಿನ 100 SMS ಸೇವೆ ಹೊಂದಿದೆ.

ಏರ್‌ಟೆಲ್‌ ವಾರ್ಷಿಕ ಯೋಜನೆಯಲ್ಲಿ ವಿವಿಧ ಚಂದಾದಾರಿಕೆಯ ಲಾಭ
 

ಏರ್‌ಟೆಲ್‌ ವಾರ್ಷಿಕ ಯೋಜನೆಯಲ್ಲಿ ವಿವಿಧ ಚಂದಾದಾರಿಕೆಯ ಲಾಭ

ಏರ್‌ಟೆಲ್ ವಾರ್ಷಿಕ ಎರಡೂ ಪ್ಯಾಕೇಜ್‌ಗಳೊಂದಿಗೆ ವ್ಯಾಪಕ ಶ್ರೇಣಿಯ ಆ್ಯಡ್-ಆನ್‌ಗಳನ್ನು ಹೊಂದಿದೆ. ಬಳಕೆದಾರರಿಗೆ 5 ಜೀ5 ಪ್ರೀಮಿಯಂ ಚಂದಾದಾರಿಕೆ, ಶಾ ಅಕಾಡೆಮಿಯಲ್ಲಿ 1 ವರ್ಷದ ಉಚಿತ ಕೋರ್ಸ್‌ಗಳು, ಅನಿಯಮಿತ ಬದಲಾವಣೆಗಳೊಂದಿಗೆ ಉಚಿತ ಹೆಲೊಟೂನ್‌ಗಳು, ವಿಂಕ್ ಪ್ರೀಮಿಯಂ ಚಂದಾದಾರಿಕೆ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಪ್ರೀಮಿಯಂ, ಎಲ್ಲಾ ಏರ್‌ಟೆಲ್ ಮಳಿಗೆಗಳು ಮತ್ತು ಗ್ರಾಹಕ ಆರೈಕೆ ಕೇಂದ್ರಗಳಲ್ಲಿ ಆದ್ಯತೆಯ ಸೇವೆ, ರುಪಾಯಿಯ ಫೋನ್‌ನಲ್ಲಿ ನಿಮ್ಮ ಫೋನ್‌ಗಾಗಿ ಆ್ಯಂಟಿ ವೈರಸ್ ಮತ್ತು ಫಾಸ್ಟ್‌ಟ್ಯಾಗ್ 150 ಕ್ಯಾಶ್‌ಬ್ಯಾಕ್.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ ವಾರ್ಷಿಕವಾಗಿ 1,299 ಮತ್ತು 2,121 ಪ್ಲಾನ್‌ಗಳನ್ನು ಹೊಂದಿದೆ. ಏರ್‌ಟೆಲ್, ವೊಡಾಫೋನ್ ಐಡಿಯಾಗಿಂತ ಕಡಿಮೆ ಅವಧಿಯನ್ನು ಹೊಂದಿದೆ. ಅಂದರೆ 365 ದಿನಗಳ ಬದಲು 336 ದಿನಗಳ ಯೋಜನೆ ಇದಾಗಿದೆ.

1,299 ರುಪಾಯಿ ಪ್ಲಾನ್‌ನಲ್ಲಿ 365 ದಿನಗಳಿಗೆ 24 ಜಿಬಿ ಡೇಟಾ ಹಾಗೂ ವಾರ್ಷಿಕವಾಗಿ 3600 SMS ಸೌಲಭ್ಯವಿದೆ. 2,121 ಪ್ಲಾನ್‌ನಲ್ಲಿ ವಾರ್ಷಿಕವಾಗಿ ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ. ಹಾಗೂ ಪ್ರತಿದಿನ 100 SMS ಸೇವೆ ಹೊಂದಿದೆ.

ಡೇಟಾ ಖಾಲಿಯಾದ ನಂತರ, ವೇಗವು 64 ಕೆಬಿಪಿಎಸ್‌ಗೆ ಬದಲಾಗುತ್ತದೆ. ಜಿಯೋ ಟು ಜಿಯೋ ಕರೆಗಳು ಅನ್‌ಲಿಮಿಟೆಡ್‌ ಇದ್ದು, ಜಿಯೋ ಅಲ್ಲದ ಸಂಖ್ಯೆಗಳಿಗೆ ಕರೆಗಳು ಎರಡೂ ಯೋಜನೆಗಳಲ್ಲಿ 12,000 ನಿಮಿಷಗಳಿಗೆ ಸೀಮಿತವಾಗಿರುತ್ತದೆ.

 

English summary

Reliance Jio,Airtel,Vodafone Idea Yearly Plans Comparision

In this article compared Reliance Jio,Airtel,Vodafone Idea Yearly Plans
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X