For Quick Alerts
ALLOW NOTIFICATIONS  
For Daily Alerts

ಜಿಯೋ ಗ್ರಾಹಕರಿಗೆ ಉಚಿತ ನೆಟ್‌ಫ್ಲಿಕ್ಸ್ ಆಫರ್: ಇಲ್ಲಿದೆ ವಿವರ

|

ನೀವು ನೆಟ್‌ಫ್ಲಿಕ್ಸ್‌ನಲ್ಲಿ ಬರುವ ಒಂದು ಹೊಸ ಸಿನಿಮಾವನ್ನು ನೋಡಲು ನಮ್ಮ ಸ್ನೇಹಿತರಲ್ಲಿ ನೆಟ್‌ಫ್ಲಿಕ್ಸ್ ಐಡಿ, ಪಾಸ್‌ವರ್ಡ್ ಕೇಳುತ್ತಾ ಇರಬಹುದು. ಆದರೆ ಪಾಸ್‌ವರ್ಡ್ ಮಾತ್ರ ಸಿಗದೆ ಬೇಸರಗೊಂಡಿದ್ದೀರಾ?, ಇಲ್ಲಿದೆ ನಿಮಗೆ ಉಚಿತ ನೆಟ್‌ಫ್ಲಿಕ್ಸ್ ಪಡೆಯುವ ಆಫರ್.

 

ನೀವು ಈಗಲೂ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್ ಹೊಂದದೆ ಇರಬಹುದು. ಅಷ್ಟು ಹಣ ಕಟ್ಟಿ ಯಾರಪ್ಪ ಚಂದಾದಾರಿಕೆ (Subscription) ಮಾಡಿಕೊಳ್ಳುತ್ತಾರೆ ಎಂದು ಕೊಂಡಿರಬಹುದು. ಹಾಗಿದ್ದರೆ ಇಲ್ಲಿದೆ ಬೆಸ್ಟ್ ಆಫರ್. ಈಗ ರಿಲಾಯನ್ಸ್ ಜಿಯೋ ಗ್ರಾಹಕರು ಉಚಿತ ನೆಟ್‌ಫ್ಲಿಕ್ಸ್ ಅನ್ನು ಪಡೆಯುವ ಆಫರ್ ಹೊಂದಿದ್ದಾರೆ. ಆದರೆ ನೀವು ಪೋಸ್ಟ್‌ಪೇಡ್ ಗ್ರಾಹಕರು ಆಗಿರಬೇಕಾಗಿದೆ.

 Breaking news: ಮುಕೇಶ್ ರಾಜೀನಾಮೆ, ರಿಲಯನ್ಸ್ ಜಿಯೋ ನೂತನ ‍ಮುಖ್ಯಸ್ಥ ಆಕಾಶ್ ಅಂಬಾನಿ Breaking news: ಮುಕೇಶ್ ರಾಜೀನಾಮೆ, ರಿಲಯನ್ಸ್ ಜಿಯೋ ನೂತನ ‍ಮುಖ್ಯಸ್ಥ ಆಕಾಶ್ ಅಂಬಾನಿ

ರಿಲಯನ್ಸ್ ಜಿಯೋ ಐದು ಪ್ಲ್ಯಾನ್‌ಗಳಲ್ಲಿ ಈ ಆಫರ್ ಅನ್ನು ನೀಡುತ್ತಿದೆ. ರೂಪಾಯಿ 399, ರೂಪಾಯಿ 599, ರೂಪಾಯಿ 799, ರೂಪಾಯಿ 999 ಮತ್ತು ರೂಪಾಯಿ 1499ರಲ್ಲಿ ಈ ಆಫರ್ ಲಭ್ಯವಾಗಲಿದೆ. ಹಾಗಾದರೆ ಈ ಆಫರ್ ಹೇಗೆ ಕ್ಲೈಮ್ ಮಾಡುವುದು ಎಂದು ತಿಳಿಯಲು ಮುಂದೆ ಓದಿ....

ಹೊಸ ಜಿಯೋಫೋನ್ 2021 ಆಫರ್‌: 2 ವರ್ಷಗಳ ಅನ್‌ಲಿಮಿಟೆಡ್ ಸೇವೆಹೊಸ ಜಿಯೋಫೋನ್ 2021 ಆಫರ್‌: 2 ವರ್ಷಗಳ ಅನ್‌ಲಿಮಿಟೆಡ್ ಸೇವೆ

 ರೂಪಾಯಿ 399 ಪ್ಲ್ಯಾನ್

ರೂಪಾಯಿ 399 ಪ್ಲ್ಯಾನ್

ಈ ಯೋಜನೆಯು 75 ಜಿಬಿ ಡೇಟಾವನ್ನು ನೀಡುತ್ತದೆ. ಡೇಟಾ ಮಿತಿ ಮುಗಿದ ನಂತರ ಒಂದು ಜಿಬಿಗೆ ರೂಪಾಯಿ 10 ವಿಧಿಸಲಾಗುತ್ತದೆ. ನೀವು 200 ಜಿಬಿವರೆಗಿನ ಡೇಟಾ ರೋಲ್‌ಓವರ್, ಅನ್‌ಲಿಮಿಟೆಡ್ ಕರೆ, ದಿನಕ್ಕೆ ನೂರು ಎಸ್‌ಎಂಎಸ್, JioTV ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಪ್ರಯೋಜನ ಪಡೆಯಬಹುದು. ಹಾಗೆಯೇ ನೀವು ಉಚಿತ ನೆಟ್‌ಫ್ಲಿಕ್ಸ್, ಡಿಸ್ನಿ, ಹಾಟ್‌ಸ್ಟಾರ್ ಹಾಗೂ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಕೂಡಾ ಪಡೆಯಬಹುದು.

 ರೂಪಾಯಿ 499 ಪ್ಲ್ಯಾನ್

ರೂಪಾಯಿ 499 ಪ್ಲ್ಯಾನ್

ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ನೀವು 100 ಜಿಬಿ ಡೇಟಾವನ್ನು ಪಡೆಯಬಹುದು. ಡೇಟಾ ಮಿತಿ ಮುಗಿದ ನಂತರ ಒಂದು ಜಿಬಿಗೆ ರೂಪಾಯಿ 10 ವಿಧಿಸಲಾಗುತ್ತದೆ. ನೀವು 200 ಜಿಬಿವರೆಗಿನ ಡೇಟಾ ರೋಲ್‌ಓವರ್, ಅನ್‌ಲಿಮಿಟೆಡ್ ಕರೆ, ದಿನಕ್ಕೆ ನೂರು ಎಸ್‌ಎಂಎಸ್, JioTV ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಪ್ರಯೋಜನ ಪಡೆಯಬಹುದು. ಹೆಚ್ಚುವರಿ ಸಿಮ್ ಕಾರ್ಡ್ ಅನ್ನು ಕೂಡಾ ಪಡೆಯುವ ಅವಕಾಶವಿದೆ. ಹಾಗೆಯೇ ನೀವು ಉಚಿತ ನೆಟ್‌ಫ್ಲಿಕ್ಸ್, ಡಿಸ್ನಿ, ಹಾಟ್‌ಸ್ಟಾರ್ ಹಾಗೂ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಕೂಡಾ ಪಡೆಯಬಹುದು.

 ರೂಪಾಯಿ 799 ಪ್ಲ್ಯಾನ್
 

ರೂಪಾಯಿ 799 ಪ್ಲ್ಯಾನ್

ಈ ಪೋಸ್ಟ್‌ಪೇಯ್ಡ್ ಯೋಜನೆಯು 150GB ಡೇಟಾವನ್ನು ನೀಡುತ್ತದೆ. ಡೇಟಾ ಮಿತಿ ಮುಗಿದ ನಂತರ ಒಂದು ಜಿಬಿಗೆ ರೂಪಾಯಿ 10 ವಿಧಿಸಲಾಗುತ್ತದೆ. ನೀವು 200 ಜಿಬಿವರೆಗಿನ ಡೇಟಾ ರೋಲ್‌ಓವರ್, ಅನ್‌ಲಿಮಿಟೆಡ್ ಕರೆಗಳು, ದಿನಕ್ಕೆ 100 ಎಸ್‌ಎಂಎಸ್, JioTV ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಪ್ರಯೋಜನ ಪಡೆಯಬಹುದು. ಹೆಚ್ಚುವರಿ ಸಿಮ್ ಕಾರ್ಡ್ ಅನ್ನು ಕೂಡಾ ಪಡೆಯುವ ಅವಕಾಶವಿದೆ. ಉಚಿತ ನೆಟ್‌ಫ್ಲಿಕ್ಸ್, ಡಿಸ್ನಿ, ಹಾಟ್‌ಸ್ಟಾರ್ ಹಾಗೂ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಕೂಡಾ ಪಡೆಯಬಹುದು.

 ರೂಪಾಯಿ 999 ಪ್ಲ್ಯಾನ್

ರೂಪಾಯಿ 999 ಪ್ಲ್ಯಾನ್

ಈ ಯೋಜನೆಯು 200 ಜಿಬಿ ಡೇಟಾ ಹೊಂದಿದೆ. ಡೇಟಾ ಮಿತಿ ಮುಗಿದ ನಂತರ ಪ್ರತಿ ಜಿಬಿಗೆ ರೂಪಾಯಿ 10 ವಿಧಿಸಲಾಗುತ್ತದೆ. ನೀವು 200 ಜಿಬಿವರೆಗಿನ ಡೇಟಾ ರೋಲ್‌ಓವರ್ ಪಡೆಯಬಹುದು. ಅನ್‌ಲಿಮಿಟೆಡ್ ಕರೆಗಳು, ದಿನಕ್ಕೆ 100 ಎಸ್‌ಎಂಎಸ್, JioTV ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಪ್ರಯೋಜನ ಪಡೆಯಬಹುದು. ಒಂದು ಅಧಿಕ ಸಿಮ್ ಕೂಡಾ ಪಡೆಯಬಹುದು. ಉಚಿತ ನೆಟ್‌ಫ್ಲಿಕ್ಸ್, ಡಿಸ್ನಿ, ಹಾಟ್‌ಸ್ಟಾರ್ ಹಾಗೂ ಅಮೆಜಾನ್ ಪ್ರೈಮ್ ಚಂದಾದಾರಿಕೆ ಲಭ್ಯವಾಗಲಿದೆ.

 ರೂಪಾಯಿ 1499 ಪ್ಲ್ಯಾನ್

ರೂಪಾಯಿ 1499 ಪ್ಲ್ಯಾನ್

ಈ ಪೋಸ್ಟ್‌ಪೇಯ್ಡ್ ಯೋಜನೆಯು 300 ಜಿಬಿ ಡೇಟಾವನ್ನು ನೀಡುತ್ತದೆ. ಡೇಟಾ ಮಿತಿ ಮುಗಿದ ನಂತರ ಪ್ರತಿ ಜಿಬಿಗೆ ರೂಪಾಯಿ 10 ವಿಧಿಸಲಾಗುತ್ತದೆ. ನೀವು 500 ಜಿಬಿವರೆಗಿನ ಡೇಟಾ ರೋಲ್‌ಓವರ್ ಪಡೆಯಬಹುದು. ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್, JioTV ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ. ಹೆಚ್ಚುವರಿ ಸಿಮ್ ಕಾರ್ಡ್ ಅನ್ನು ಕೂಡಾ ಪಡೆಯಬಹುದು. ಉಚಿತ ನೆಟ್‌ಫ್ಲಿಕ್ಸ್, ಡಿಸ್ನಿ, ಹಾಟ್‌ಸ್ಟಾರ್ ಹಾಗೂ ಅಮೆಜಾನ್ ಪ್ರೈಮ್ ಚಂದಾದಾರಿಕೆ ಲಭ್ಯವಾಗಲಿದೆ.

English summary

Reliance Jio Users Can Get Free Netflix Subscription, Here’s How to Avail the Offer

Reliance Jio users can get free Netflix subscription, Here’s a quick look at some of the Jio plans that offers free Netflix subscription and how to avail the offer.
Story first published: Thursday, July 7, 2022, 12:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X