For Quick Alerts
ALLOW NOTIFICATIONS  
For Daily Alerts

ಸುರಕ್ಷಿತವಾಗಿ ಮೊಬೈಲ್‌ನಲ್ಲಿ ಹಣ ಪಾವತಿಸುವುದು ಹೇಗೆ?

|

ಇತ್ತೀಚೆಗೆ ಡಿಜಿಟಲ್ ಪಾವತಿಗೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ. ಮೊಬೈಲ್‌ ಬ್ಯಾಂಕಿಂಗ್‌ ಜೊತೆಗೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಮುಂತಾದ ಹಣ ಪಾವತಿ ಆ್ಯಪ್‌ಗಳನ್ನು ಬಳಸುವವರು ಹೆಚ್ಚಾಗಿದ್ದಾರೆ. ಚಿಕ್ಕ ಅಂಗಡಿಯಿಂದ ಹಿಡಿದು ದೊಡ್ಡ ಮಳಿಗೆವರೆಗೂ ಬಹುತೇಕ ಜನರು ಮೊಬೈಲ್ ಮೂಲಕವೇ ಹಣ ಪಾವತಿಗೆ ಮುಂದಾಗುತ್ತಿದ್ದಾರೆ.

ಪ್ರತಿ ಬ್ಯಾಂಕ್‌ಗೂ ಸಂಬಂಧಪಟ್ಟ ಬ್ಯಾಂಕಿಂಗ್ ಆ್ಯಪ್‌ಗಳಿವೆ. ಇದರ ಜೊತೆಗೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ ರೀತಿಯ ಆ್ಯಪ್‌ಗಳನ್ನು ಹೆಚ್ಚು ಜನರು ಬಳಸುತ್ತಿದ್ದಾರೆ. ಆದರೆ ಈ ಆ್ಯಪ್ ಮೂಲಕ ಬಿಲ್ ಪಾವತಿ, ಹಣ ವರ್ಗಾವಣೆ ಮಾಡುವ ಮುನ್ನ ಸ್ವಲ್ಪ ಎಚ್ಚರ ವಹಿಸಬೇಕಾಗಿದೆ. ಏಕೆಂದರೆ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ನಿಮ್ಮ ಅಕೌಂಟ್‌ನಲ್ಲಿರುವ ಹಣವನ್ನು ಹ್ಯಾಕರ್ಸ್ ದೋಚಬಹುದು. ಹಾಗಿದ್ದರೆ ಸುರಕ್ಷಿತ ಮೊಬೈಲ್‌ ಪಾವತಿ ಹೇಗೆ ಎಂಬುದಕ್ಕೆ ಈ ಕೆಳಗಿನ ವಿವರಣೆ ಓದಿ.

ಅಧಿಕೃತ ಆ್ಯಪ್‌ಗಳನ್ನೇ ಬಳಸಿ

ಅಧಿಕೃತ ಆ್ಯಪ್‌ಗಳನ್ನೇ ಬಳಸಿ

ಇತ್ತೀಚೆಗೆ ಹಣ ಪಾವತಿಗೆ ಹಲವಾರು ಆ್ಯಪ್‌ಗಳಿವೆ. ಆದರೆ ಬಿಲ್ ಪಾವತಿ ಅಥವಾ ಹಣ ವರ್ಗಾವಣೆಗೆ ಬ್ಯಾಂಕುಗಳು ನೀಡುವ ಆ್ಯಪ್‌ಗಳನ್ನೇ ಬಳಸುವುದು ಒಳಿತು. ಇಲ್ಲವೆ ಪೇಟಿಯಂ, ಗೂಗಲ್ ಪೇನಂತಹ ಅಧಿಕೃತ ಕಂಪನಿಗಳ ಆ್ಯಪ್ ಬಳಸುವುದು ಸೂಕ್ತ. ಅಷ್ಟಾಗಿ ಹೆಚ್ಚು ಗೊತ್ತಿರದ, ಹೆಚ್ಚು ಪ್ರಚಾರ ಪಡೆದಿರದ ಆ್ಯಪ್‌ಗಳನ್ನು ಬಳಸದೇ ಇರುವುದು ಉತ್ತಮ.

ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಬಳಸಬೇಡಿ

ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಬಳಸಬೇಡಿ

ನಿಮ್ಮ ಮೊಬೈಲ್‌ನಲ್ಲಿ ಹಣ ಪಾವತಿ ಇಲ್ಲವೇ ಹಣ ವರ್ಗಾವಣೆ ಮಾಡುವಾಗ ನಿಮ್ಮ ಮೊಬೈಲ್ ಡೇಟಾವನ್ನೇ ಬಳಸುವುದು ಉತ್ತಮ. ಸಾರ್ವಜನಿಕ ಸ್ಥಳಗಳಲ್ಲಿನ ವೈ-ಫೈ ಬಳಸುವ ವೇಳೆ ಹಣ ಪಾವತಿ ಇಲ್ಲವೇ ವರ್ಗಾವಣೆ ಮಾಡದೇ ಇರುವುದು ಸೂಕ್ತ.

ಏಕೆಂದರೆ ಇಂತಹ ಕಡೆಗಳಲ್ಲಿ ನಿಮ್ಮ ಮೊಬೈಲ್‌ನಲ್ಲಿರುವ ದಾಖಲೆಗಳು ಮಾಹಿತಿಗೆ ಹೆಚ್ಚಿನ ಸುರಕ್ಷತೆ ಖಾತರಿ ಇರುವುದಿಲ್ಲ. ಹೀಗಾಗಿ ನಿಮ್ಮ ಮೊಬೈಲ್ ಡೇಟಾ ಅಥವಾ ಮನೆಯಲ್ಲಿನ ವೈ-ಫೈ ಬಳಸುವುದು ಅತ್ಯಂತ ಸುರಕ್ಷಿತವಾಗಿದೆ.

ಆ್ಯಪ್ ಅಪ್‌ಡೇಟ್ ಮಾಡುತ್ತಿರಿ

ಆ್ಯಪ್ ಅಪ್‌ಡೇಟ್ ಮಾಡುತ್ತಿರಿ

ಹೆಚ್ಚಾಗಿ ಬಳಸುವ ಯಾವುದೇ ಆ್ಯಪ್‌ಗಳನ್ನಾದರೂ ಅಪ್‌ಡೇಟ್ ಮಾಡುತ್ತಿರಬೇಕು. ಅದರಲ್ಲೂ ಬ್ಯಾಂಕಿಂಗ್, ಹಣ ಪಾವತಿಸುವ ಆ್ಯಪ್‌ಗಳನ್ನು 15 ದಿನಗಳಿಗೆ ಒಮ್ಮೆಯಾದರೂ ಅಪ್‌ಡೇಟ್ ಮಾಡಬೇಕು. ಇದರಿಂದ ಸೈಬರ್ ಕ್ರೈಂಗೆ ಒಳಗಾಗುವ ಪ್ರಮಾಣವನ್ನು ಕಡಿಮೆ ಮಾಡಬಹುದು.

ಯಾವುದಾದರು SMS, ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರ

ಯಾವುದಾದರು SMS, ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರ

ಮೊಬೈಲ್‌ಗೆ ಅನಾಮಧೇಯ SMSಗಳು ಬರುವುದು ಸಾಮಾನ್ಯ. ಹಾಗೆಯೇ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಎಂಬ ರೀತಿಯ SMSಗಳು, ನೋಟಿಫಿಕೇಶನ್ ಬರುತ್ತಿರುತ್ತದೆ. ಈ ರೀತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಮೋಸದ ಜಾಲಕ್ಕೆ ಬೀಳುವ ಸಾಧ್ಯತೆ ಹೆಚ್ಚು. ಹೀಗಾಗಿ ಆ ರೀತಿಯ SMS, ಲಿಂಕ್‌ಗಳಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಬೇಡಿ. ನಿಮ್ಮ ಇ-ಮೇಲ್‌ಗೂ ಇದೇ ರೀತಿಯ ಲಿಂಕ್‌ಗಳು ಬಂದರೆ ನಿರ್ಲಕ್ಷಿಸಿ.

ಮೊಬೈಲ್ ಸ್ಕ್ರಿನ್ ಲಾಕ್ ಬಳಸಿ

ಮೊಬೈಲ್ ಸ್ಕ್ರಿನ್ ಲಾಕ್ ಬಳಸಿ

ಪ್ರತಿಯೊಬ್ಬರು ಮೊಬೈಲ್ ಸ್ಕ್ರೀನ್ ಲಾಕ್ ಬಳಸುವುದು ಉತ್ತಮ. ಅದರಲ್ಲೂ ಮೊಬೈಲ್ ಮೂಲಕ ಹಣಕಾಸಿನ ವ್ಯವಹಾರ ನಡೆಸುವವರು ಸುರಕ್ಷತೆಗೆ ಒತ್ತು ನೀಡಿ. ನೆನಪಿನಲ್ಲಿಟ್ಟುಕೊಳ್ಳಬಹುದಾದ ಕ್ಲಿಷ್ಟಕರವಾದ ಪಿನ್ ಅಥವಾ ಪಾಸ್‌ವರ್ಡ್ ಬಳಸಿ. ಜೊತೆಗೆ ನಿಮ್ಮ ಬ್ಯಾಂಕಿಂಗ್ ಆ್ಯಪ್‌ಗೂ ಲಾಕ್ ಮಾಡುವಂತೆ ಆಯ್ಕೆ ಮಾಡಿಕೊಳ್ಳಿ. ಯಾರು ಬೇಕಾದರೂ ಮೊಬೈಲ್ ಸ್ಕ್ರಿನ್ ಅನ್‌ಲಾಕ್‌ ಮಾಡುವ ರೀತಿಯಲ್ಲಿ ಮೊಬೈಲ್ ಲಾಕ್ ಇಟ್ಟುಕೊಳ್ಳದಿರಿ.

ಪಾಸ್‌ವರ್ಡ್ ಬದಲಿಸುತ್ತಿರಿ

ಪಾಸ್‌ವರ್ಡ್ ಬದಲಿಸುತ್ತಿರಿ

ನಿಮ್ಮ ATM ಕಾರ್ಡ್‌ನ ಪಿನ್ ನಂಬರ್ ಆಗಿರಲಿ, ಅಥವಾ ನಿಮ್ಮ ಮೊಬೈಲ್ ಬ್ಯಾಕಿಂಗ್‌ನಲ್ಲಿ ವಹಿವಾಟು ನಡೆಸಲು ಬಳಸುತ್ತಿರುವ ಪಾಸ್‌ವರ್ಡ್ ಆಗಿರಲಿ ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಬದಲಿಸಿದರೆ ಉತ್ತಮ. ಜೊತೆಗೆ ನಿಮ್ಮ ಪಾಸವರ್ಡ್ Auto Save ಆಯ್ಕೆ ಮಾಡಿಕೊಳ್ಳದೇ ಇರುವುದು ಸೂಕ್ತವಾಗಿದೆ.

English summary

Safety Of Mobile Paymens

These days people are using more digital payment through banking apps or other apps for bill payment or cash transaction.Follow these safest payment steps
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X