For Quick Alerts
ALLOW NOTIFICATIONS  
For Daily Alerts

ಎಸ್‌ಬಿಐನ ಎಟಿಎಂ ಫ್ರಾಂಚೈಸಿ- ಕೇವಲ 5 ಲಕ್ಷ ರೂ ಬಂಡವಾಳ- ಲಾಭ ಗಳಿಕೆ ಹೇಗೆ?

|

ಭರ್ಜರಿ ಆದಾಯ ಕೊಡುವ ಸ್ವಂತ ವ್ಯಾಪಾರ ವ್ಯವಹಾರ ನಡೆಸುವುದು ಎಲ್ಲರ ಕನಸು. ಆದರೆ, ವ್ಯವಹಾರ ಆರಂಭಿಸುವುದು ಮತ್ತು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಬಹಳ ಪರಿಶ್ರಮ, ಬಂಡವಾಳ, ತ್ಯಾಗ ಎಲ್ಲವೂ ಬೇಕು. ಆದರೆ, ಕಡಿಮೆ ಬಂಡವಾಳದಲ್ಲಿ ಹೆಚ್ಚು ಹಣ ಗಳಿಸುವುದು ಹೇಗೆ? ಹಲವು ಬಿಸಿನೆಸ್ ಐಡಿಯಾಗಳಿವೆ? ಇದರಲ್ಲಿ ಎಸ್‌ಬಿಐನ ಎಟಿಎಂ ಫ್ರಾಂಚೈಸಿ ಪಡೆಯುವುದೂ ಒಂದು.

 

ನೀವೂ ಕೂಡ ಎಸ್‌ಬಿಐ ಎಟಿಎಂ ಫ್ರಾಂಚೈಸಿ ಪಡೆಯಬಹುದು. ಬಂಡವಾಳ ಕೇವಲ 5 ಲಕ್ಷ ರೂ ಸಾಕು. ಒಂದಷ್ಟು ಜಾಗ ಇರಬೇಕು. ತಿಂಗಳಿಗೆ 60ರಿಂದ 70 ಸಾವಿರ ರೂ ಗಳಿಸಬಹುದು. ಅದು ಹೇಗೆ?

ಬೈಜೂಸ್‌ಗೆ ವಿಶ್ವಖ್ಯಾತ ಫುಟ್ಬಾಲ್ ತಾರೆ ಮೆಸ್ಸಿ ಬ್ರ್ಯಾಂಡ್ ಅಂಬಾಸಡರ್ಬೈಜೂಸ್‌ಗೆ ವಿಶ್ವಖ್ಯಾತ ಫುಟ್ಬಾಲ್ ತಾರೆ ಮೆಸ್ಸಿ ಬ್ರ್ಯಾಂಡ್ ಅಂಬಾಸಡರ್

ಎಟಿಎಂ ಫ್ರಾಂಚೈಸಿ ಪಡೆಯುವುದು ಹೇಗೆ?

ಎಟಿಎಂ ಫ್ರಾಂಚೈಸಿ ಪಡೆಯುವುದು ಹೇಗೆ?

ಎಟಿಎಂಗಳನ್ನು ಬ್ಯಾಂಕ್‌ನವರು ನಿರ್ಮಿಸುತ್ತಾರೆ ಎಂದೇ ಬಹಳ ಮಂದಿ ಭಾವಿಸಿರುತ್ತಾರೆ. ಹಾಗಿರುವುದಿಲ್ಲ. ಎಟಿಎಂಗಳನ್ನು ನಿರ್ಮಿಸಲು ಬ್ಯಾಂಕ್‌ನವರು ಗುತ್ತಿಗೆ ನೀಡುತ್ತಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗಳನ್ನು ನಿರ್ಮಿಸುವ ಗುತ್ತಿಗೆ ಟಾಟಾ ಇಂಡಿಕ್ಯಾಷ್, ಮುತ್ತೂಟ್ ಎಟಿಎಂ, ಇಂಡಿಯಾ ಒನ್ ಎಟಿಎಂ ಸಂಸ್ಥೆಗಳಿಗೆ ಸಿಕ್ಕಿದೆ.

ಈಗ ನೀವು ಎಸ್‌ಬಿಐನ ಎಟಿಎಂನ ಫ್ರಾಂಚೈಸಿ ಪಡೆಯಬೇಕೆಂದರೆ ಈ ಗುತ್ತಿಗೆದಾರ ಕಂಪನಿಗಳ ಮೂಲಕ ಸಾಧ್ಯ. ಕೆಲ ಮಧ್ಯವರ್ತಿಗಳು ಫ್ರಾಂಚೈಸಿ ಕೊಡಿಸುವ ಪ್ರಲೋಬನೆ ಮಾಡಿ ವಂಚಿಸುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ನೀವು ಈ ಗುತ್ತಿಗೆದಾರ ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗೆ ಹೋದರೆ ಅಲ್ಲಿ ಫ್ರಾಂಚೈಸಿ ಪಡೆಯುವ ಅವಕಾಶ ಇರುತ್ತದೆ.

 

ಇವುಗಳನ್ನು ಗಮನಿಸಿ

ಇವುಗಳನ್ನು ಗಮನಿಸಿ

ಎಟಿಎಂ ಫ್ರಾಂಚೈಸಿ ಪಡೆಯಲು ಕೆಲ ನಿಯಮಗಳಿವೆ.
* ಎಟಿಎಂ ಕ್ಯಾಬಿನ್ ನಿರ್ಮಿಸಲು ನಿಮಗೆ ಸೇರಿದ 50-80 ಚದರಡಿ ಸ್ಥಳ ಇರಬೇಕು.
* ಬೇರೆ ಎಟಿಎಂಗಳಿರುವ ಸ್ಥಳದಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು.
* ಎಟಿಎಂ ಕ್ಯಾಬಿನ್ ಜನರ ಕಣ್ಣಿಗೆ ಸುಲಭವಾಗಿ ಬೀಳುವ ಜಾಗದಲ್ಲಿರಬೇಕು.
* ಕನಿಷ್ಠ 1 ಕಿ.ವ್ಯಾಟ್ ಎಲೆಕ್ಟ್ರಿಸಿಟಿ ಕನೆಕ್ಷನ್ ಇರುವುದು ಕಡ್ಡಾಯ. 24 ಗಂಟೆ ವಿದ್ಯುತ್ ಸರಬರಾಜು ಇರುವಂತೆ ನೋಡಿಕೊಳ್ಳಬೇಕು.
* ಎಟಿಎಂ ಕ್ಯಾಬಿನ್‌ನ ಗೋಡೆಗಳು ಭದ್ರವಾಗಿರುವಂತೆ ಗುಣಮಟ್ಟದಲ್ಲಿ ಕಟ್ಟಿರಬೇಕು. ಕಾಂಕ್ರೀಟ್ ಚಾವಣಿ ಇರಬೇಕು.
* ಒಂದು ಅಪಾರ್ಟ್ಮೆಂಟ್ ಅಥವಾ ಹೌಸಿಂಗ್ ಸೊಸೈಟಿಯಲ್ಲಿ ಸ್ಥಳ ಇದ್ದರೆ ಅಲ್ಲಿ ವಿ-ಸ್ಯಾಟ್ ಸ್ಥಾಪಿಸಲು ಅಲ್ಲಿನ ನಿರ್ವಾಹಕರಿಂದ ಎನ್‌ಒಸಿ ಪತ್ರ ಪಡೆದುಕೊಳ್ಳಬೇಕು.

ಈ ದಾಖಲೆಗಳು ಬೇಕು
 

ಈ ದಾಖಲೆಗಳು ಬೇಕು

* ಐಡಿ ಪ್ರೂಫ್: ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಕಾರ್ಡ್
* ವಿಳಾಸಕ್ಕೆ: ರೇಷನ್ ಕಾರ್ಡ್, ವಿದ್ಯುತ್ ಬಿಲ್
* ಬ್ಯಾಂಕ್ ಖಾತೆ ಮತ್ತು ಪಾಸ್ಬುಕ್
* ಫೋಟೋಗಳು, ಇಮೇಲ್ ಐಡಿ ಮತ್ತು ಫೋನ್ ನಂಬರ್
* ಜಿಎಸ್‌ಟಿ ನಂಬರ್
* ಗುತ್ತಿಗೆದಾರ ಕಂಪನಿ ಕೇಳುವ ಹಣಕಾಸು ದಾಖಲೆ ಅಥವಾ ಇತರ ದಾಖಲೆಗಳನ್ನು ನೀಡಬೇಕು

 

 

ಗಳಿಕೆ ಹೇಗೆ?

ಗಳಿಕೆ ಹೇಗೆ?

ನೀವು ಎಸ್‌ಬಿಐನ ಎಟಿಎಂ ಫ್ರಾಂಚೈಸಿಗೆ ಸಲ್ಲಿಸಿದ ಅರ್ಜಿಗೆ ಅನುಮೋದನೆ ಪಡೆದ ಬಳಿಕ 2 ಲಕ್ಷ ರೂ ಹಣವನ್ನು ಸೆಕ್ಯೂರಿಟಿ ಡೆಪಾಸಿಟ್ ಆಗಿ ಸಲ್ಲಿಸಬೇಕಾಗುತ್ತದೆ. ನಂತರ 3 ಲಕ್ಷ ರೂ ಹಣವನ್ನು ನಿರ್ವಹಣಾ ವೆಚ್ಚಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ. ಒಟ್ಟು ಸುಮಾರು 5 ಲಕ್ಷ ರೂ ಹಣವನ್ನು ವಿನಿಯೋಗಿಸಬೇಕಾಗುತ್ತದೆ.

ಬೇರೆ ಬೇರೆ ಗುತ್ತಿಗೆದಾರ ಕಂಪನಿಗಳು ಕೇಳುವ ಠೇವಣಿ ಹಣ ಬೇರೆ ಬೇರೆಯದ್ದಾಗಿರಬಹುದು. ಎಟಿಎಂ ಮೆಷೀನ್ ಸ್ಥಾಪನೆಯಾಗಿ ಜನರು ಅಲ್ಲಿ ವಹಿವಾಟು ನಡೆಸಿದಷ್ಟೂ ನಿಮಗೆ ಆದಾಯ ಬರತೊಡಗುತ್ತದೆ.

ಒಬ್ಬ ವ್ಯಕ್ತಿ ಎಟಿಎಂ ಮೆಷೀನ್‌ನಲ್ಲಿ ಒಮ್ಮೆ ಕ್ಯಾಷ್ ಡ್ರಾ ಮಾಡಿಕೊಂಡರೆ ನಿಮಗೆ 8 ರೂಪಾಯಿ ಹಣ ಸಿಗುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆ, ಫಂಡ್ ಟ್ರಾನ್ಸ್‌ಫರ್ ಇತ್ಯಾದಿ ಪ್ರತಿಯೊಂದು ನಗದುರಹಿತ ವಹಿವಾಟಿಗೂ 2 ರೂಪಾಯಿ ಸಿಗುತ್ತದೆ.

 

ವಾಟ್ಸಾಪ್‌ಗೆ ಹೊಸ ಕಮ್ಯೂನಿಟೀಸ್ ಫೀಚರ್; ವಾಟ್ಸಾಪ್ ಗ್ರೂಪ್‌ಗಿಂತ ಇದು ಹೇಗೆ ಭಿನ್ನ?ವಾಟ್ಸಾಪ್‌ಗೆ ಹೊಸ ಕಮ್ಯೂನಿಟೀಸ್ ಫೀಚರ್; ವಾಟ್ಸಾಪ್ ಗ್ರೂಪ್‌ಗಿಂತ ಇದು ಹೇಗೆ ಭಿನ್ನ?

English summary

SBI ATM Business With One-time Investment of Rs 5 Lakh, Know Details in Kannada

There are many business schemes that don't require much investment. SBI ATM franchise too is one among them. You need just Rs 5 lakh investment and place for ATM cabin.
Story first published: Friday, November 4, 2022, 19:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X